ಸ್ತ್ರೀಯರ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುತ್ತೆ ಚಿಟಿಕೆ ಅರಿಶಿನ

ಪ್ರತಿ ಭಾರತೀಯ ಅಡುಗೆ ಮನೆಯಲ್ಲಿಯೂ ತುಂಬಾ ಸುಲಭವಾಗಿ ಲಭ್ಯವಿರುವ ಮಸಾಲೆ ಎಂದರೆ ಅರಿಶಿನ. ಅರಿಶಿನವು ಆಹಾರದ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲ, ಹಲವು ಖಾಯಿಲೆಗಳಿಂದಲೂ ನಮ್ಮನ್ನು ದೂರ ಉಳಿಯುವಂತೆ ಮಾಡುತ್ತದೆ. ಅದರಲ್ಲೂ ಅರಿಶಿನವು ಮಹಿಳೆಯರ ಹಲವು ಸಮಸ್ಯೆಗಳಿಗೆ ರಾಮಬಾಣವೆಂದೇ ಹೇಳಬಹುದು.

Written by - Yashaswini V | Last Updated : Feb 13, 2023, 08:19 AM IST
  • ಅರಿಶಿನವು ನಮ್ಮ ಆರೋಗ್ಯಕ್ಕೆ ಮಾತ್ರ ಪ್ರಯೋಜನಕಾರಿಯಲ್ಲ, ಆದರೆ ಇದು ಅನೇಕ ರೀತಿಯ ನೋವನ್ನು ನಿವಾರಿಸುತ್ತದೆ.
  • ರಾತ್ರಿ ಮಲಗುವ ಮುನ್ನ ಒಂದು ಲೋಟ ಉಗುರುಬೆಚ್ಚಗಿನ ಹಾಲನ್ನು ಅರಿಶಿನದೊಂದಿಗೆ ಬೆರೆಸಿ ಕುಡಿಯುವುದರಿಂದ ದೇಹದಲ್ಲಿನ ಹಲವಾರು ರೀತಿಯ ನೋವು ನಿವಾರಣೆಯಾಗುತ್ತದೆ
  • ಇಷ್ಟೇ ಅಲ್ಲ, ಅರಿಶಿನವನ್ನು ಹೊಕ್ಕಳಿಗೆ ಹಚ್ಚುವುದರಿಂದ ಹಲವಾರು ಪ್ರಯೋಜನಗಳನ್ನು ನೀಡುತ್ತದೆ.
ಸ್ತ್ರೀಯರ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುತ್ತೆ ಚಿಟಿಕೆ ಅರಿಶಿನ  title=
Turmeric for women health

ಬೆಂಗಳೂರು: ಆಯುರ್ವೇದದ ಪ್ರಕಾರ, ಭಾರತೀಯ ಅಡುಗೆಮನೆಯಲ್ಲಿ ಕಂಡು ಬರುವ ಮಸಾಲೆ ಪದಾರ್ಥಗಳು ಯಾವುದೇ ಔಷಧಿಗಳಿಗಿಂತ ಕಡಿಮೆಯಿಲ್ಲ. ಅಂತಹ ಮಸಾಲೆಗಳಲ್ಲಿ ಅರಿಶಿನವೂ ಒಂದು. ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿಫಂಗಲ್ ಗುಣಲಕ್ಷಣಗಳಿಂದ ಸಮೃದ್ಧವಾಗಿರುವ ಅರಿಶಿನವು ನಮ್ಮನ್ನು ಹಲವು ಕಾಯಿಲೆಗಳಿಂದ ದೂರ ಇರಿಸಬಲ್ಲದು. ಅದರಲ್ಲೂ, ಸ್ತ್ರೀಯರ ಹಲವು ಸಾಮಾನ್ಯ ಸಮಸ್ಯೆಗಳಿಗೆ ಅರಿಶಿನವನ್ನು ದಿವ್ಯೌಷಧ ಎಂದು ಬಣ್ಣಿಸಲಾಗಿದೆ. ಹಾಗಿದ್ದರೆ ಅರಿಶಿನವನ್ನು ಹೇಗೆ ಬಳಸಬೇಕು. ಇದರಿಂದ ಸ್ತ್ರೀಯರಿಗೆ ಏನೆಲ್ಲಾ ಪ್ರಯೋಜನಗಳು ಲಭ್ಯವಿವೆ ಎಂದು ತಿಳಿಯೋಣ...

ಆಯುರ್ವೇದದ ಪ್ರಕಾರ, ಅರಿಶಿನವು ಅನಾರೋಗ್ಯ ಸಮಸ್ಯೆಗಳನ್ನು ನಿವಾರಿಸುವುದು ಮಾತ್ರವಲ್ಲ, ಹಲವು ರೀತಿಯ ನೋವುಗಳಲ್ಲಿಯೂ ಪರಿಹಾರ ನೀಡಬಲ್ಲ ಶಕ್ತಿಯನ್ನು ಹೊಂದಿದೆ. ಇದಕ್ಕಾಗಿಯೇ ನಮ್ಮಲ್ಲಿ ಕೆಲವರು ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲಿಗೆ ಚಿಟಿಕೆ ಅರಿಶಿನವನ್ನು ಬೆರೆಸಿ ಕುಡಿಯುತ್ತಾರೆ. ಇದಲ್ಲದೆ, ಅರಿಶಿನವನ್ನು  ಹೊಕ್ಕಳಿಗೆ ಹಚ್ಚುವುದರಿಂದ ಹಲವಾರು ಪ್ರಯೋಜನಗಳಿವೆ ಎಂದು ಹೇಳಲಾಗುತ್ತದೆ. ಸ್ತ್ರೀಯರು ಚಿಟಿಕೆ ಅರಿಶಿನವನ್ನು ಹೊಕ್ಕಳಿಗೆ ಹಚ್ಚುವುದರಿಂದ ಏನೆಲ್ಲಾ ಪ್ರಯೋಜನಗಳು ಲಭ್ಯವಾಗಲಿವೆ ತಿಳಿಯಿರಿ.

ಇದನ್ನೂ ಓದಿ- ನೀವೂ ಕೂಡ ಕೇವಲ ಟೇಸ್ಟ್ ನೋಡಿ ಟೂತ್‌ಪೇಸ್ಟ್ ಖರೀದಿಸುತ್ತೀರಾ?

ರಾತ್ರಿ ಮಲಗುವ ಮುನ್ನ ಚಿಟಿಕೆ ಅರಿಶಿನ ಬಳಸಿದರೆ ಸ್ತ್ರೀಯರ ಈ ಸಮಸ್ಯೆಗಳಿಗೆ ಸಿಗುತ್ತೆ ಸುಲಭ ಪರಿಹಾರ:
ಪಿರಿಯಡ್ಸ್ ನೋವಿಗೆ ಪರಿಹಾರ:

ನಮ್ಮಲ್ಲಿ ಹಲವು ಮಹಿಳೆಯರಿಗೆ ಋತುಚಕ್ರ ಎಂದರೆ ಪಿರಿಯಡ್ಸ್ ಸಮಯದಲ್ಲಿ ಅಸಹನೀಯ ನೋವಿನ ಸಮಸ್ಯೆ ಕಾಡುತ್ತದೆ. ಇಂತಹ ಸಮಯದಲ್ಲಿ ಹೊಕ್ಕಳಿಗೆ ಚಿಟಿಕೆ ಅರಿಶಿನವನ್ನು ಲೇಪಿಸುವುದರಿಂದ ಪರಿಹಾರ ದೊರೆಯುತ್ತದೆ ಎನ್ನಲಾಗುತ್ತದೆ.

ಅಜೀರ್ಣ ಅಥವಾ ಮಲಬದ್ಧತೆ:
ಸ್ತ್ರೀಯರು ಮಾತ್ರವಲ್ಲ ಪುರುಷರಲ್ಲೂ ಸಹ ಅಜೀರ್ಣ ಅಥವಾ ಮಲಬದ್ಧತೆ ಸಮಸ್ಯೆಗಳು ಸಾಮಾನ್ಯವಾಗಿ ಕಂಡು ಬರುತ್ತವೆ. ಹಲವು ವೇಳೆ ಹೊಟ್ಟೆ ಉಬ್ಬರದಂತಹ ಸಮಸ್ಯೆಗಳು ಕೂಡ ಬಾಧಿಸುತ್ತವೆ. ಇಂತಹ ಸಂದರ್ಭದಲ್ಲಿ ಚಿಟಿಕೆ ಅರಿಶಿನದೊಂದಿಗೆ ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ಬೆರೆಸಿ ಹಚ್ಚುವುದು ತುಂಬಾ ಪ್ರಯೋಜನಕಾರಿ ಆಗಿದೆ.

ಇದನ್ನೂ ಓದಿ- Weight loss tips : ನಿಮ್ಮ ತೂಕ ಇಳಿಕೆಗೆ ತಪ್ಪದೆ ಸೇವಿಸಿ ಬೆಲ್ಲ ಮತ್ತು ಒಣ ಶುಂಠಿ!

ಜೀರ್ಣಕ್ರಿಯೆಗೆ ಉತ್ತಮ ಪರಿಹಾರ:
ಅರಿಶಿನವು ಫೈಬರ್‌ನ ಸಮೃದ್ಧ ಮೂಲ. ಇದು ಆಹಾರವನ್ನು ಸರಿಯಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದನ್ನು ಹೊಕ್ಕುಳಲ್ಲಿ ಹಚ್ಚುವುದರಿಂದ ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಕೆಲಸ ಮಾಡುತ್ತದೆ. ಇದರಿಂದಾಗಿ, ಆಗಾಗ್ಗೆ ಕಾಣಿಸಿಕೊಳ್ಳುವ ಹೊಟ್ಟೆ ನೋವು, ಅಜೀರ್ಣದಂತಹ ಸಮಸ್ಯೆಗಳಿಂದಲೂ ಸುಲಭ ಪರಿಹಾರ ಪಡೆಯಬಹುದು. 

ಹೊಕ್ಕಳಿಗೆ ಅರಿಶಿನವನ್ನು ಹಚ್ಚಲು ಸರಿಯಾದ ಸಮಯ ಯಾವುದು?
ನೀವು ಹೊಕ್ಕಳಿಗೆ ಅರಿಶಿನ ಹಚ್ಚಿದ ನಂತರ ಒಂದೆರಡು ಗಂಟೆಗಳ ಕಾಲ ವಿಶ್ರಾಂತಿ ಪಡೆಯುವುದರಿಂದ ಹೆಚ್ಚಿನ ಪರಿಹಾರ ದೊರೆಯಲಿದೆ. ಆದಾಗ್ಯೂ, ರಾತ್ರಿ ಮಲಗುವ ಮುನ್ನ ಈ ಪರಿಹಾರ ಕೈಗೊಳ್ಳುವುದು ಹೆಚ್ಚು ಸೂಕ್ತ ಎನ್ನಲಾಗುತ್ತದೆ. ರಾತ್ರಿ ಮಲಗುವ ಮುನ್ನ ಹೊಕ್ಕಳಿಗೆ ಅರಿಶಿನ ಹಚ್ಚುವುದರಿಂದ ದೇಹವು ಹೊಕ್ಕುಳದ ಮೂಲಕ ಅರಿಶಿನದ ಗುಣಗಳನ್ನು ಹೀರಿಕೊಳ್ಳುತ್ತದೆ.  ಇದು ನಿಮ್ಮ ಹಲವು ಸಮಸ್ಯೆಗಳನ್ನು ಪರಿಹರಿಸುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಿರಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News