ನಿತ್ಯ ದೇಹದ ಈ 3 ಅಂಗಗಳಿಗೆ ಒಂದು ಹನಿ ಕೊಬ್ಬರಿ ಎಣ್ಣೆ ಹಾಕಿದ್ರೆ, ರೋಗಗಳು ಹತ್ತಿರವೂ ಸುಳಿಯಲ್ಲ: ವಾಚ್ ವಿಡಿಯೋ

Coconut oil: ಸಾಮಾನ್ಯವಾಗಿ ಹೊಟ್ಟೆ ನೋವು ಅಂದ್ರೆ ಅಮ್ಮ ಮಕ್ಕಳಿಗೆ ಹೊಕ್ಕಳಿಗೆ ಹರಳೆಣ್ಣೆ ಹಚ್ಚುತ್ತಾರೆ. ಆದರೆ, ಹರಳೆಣ್ಣೆ ಅಷ್ಟೇ ಅಲ್ಲ ಕೊಬ್ಬರಿ ಎಣ್ಣೆಯೂ ಕೂಡ ಸರ್ವ ರೋಗಕ್ಕೂ ಮದ್ದು. 

Written by - Yashaswini V | Last Updated : Sep 19, 2024, 12:26 PM IST
  • ಹರಳೆಣ್ಣೆಯಂತೆ ಕೊಬ್ಬರಿ ಎಣ್ಣೆಯೂ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ
  • ಕೇವಲ ಕೂದಲಿನ ಆರೋಗ್ಯಕ್ಕಷ್ಟೇ ಅಲ್ಲದೆ ಒಟ್ಟಾರೆ ಆರೋಗ್ಯಕ್ಕೂ ಕೊಬ್ಬರಿ ಎಣ್ಣೆ ಕೊಡುಗೆ ನೀಡುತ್ತದೆ.
  • ಉತ್ತಮ ಆರೋಗ್ಯಕ್ಕಾಗಿ ಒಂದೆರಡು ಹನಿ ಕೊಬ್ಬರಿ ಎಣ್ಣೆಯನ್ನು ಹೇಗೆ ಬಳಸಬೇಕು ತಿಳಿಯಿರಿ.
ನಿತ್ಯ ದೇಹದ ಈ 3 ಅಂಗಗಳಿಗೆ ಒಂದು ಹನಿ ಕೊಬ್ಬರಿ ಎಣ್ಣೆ ಹಾಕಿದ್ರೆ, ರೋಗಗಳು ಹತ್ತಿರವೂ ಸುಳಿಯಲ್ಲ: ವಾಚ್ ವಿಡಿಯೋ  title=
Coconut Oil Benefits

Coconut Oil Benefits: ನಮ್ಮ ಹಿರಿಯರು ಏನೇ ನಿಯಮ ಪಾಲಿಸಿಕೊಂಡು ಬಂದಿದ್ದರೂ ಅದರ ಹಿಂದೆ ವೈಜ್ಞಾನಿಕ ಕಾರಣವೂ ಅಡಕವಾಗಿರುತ್ತದೆ. ಹಾಗಾಗಿಯೇ, ವಿಜ್ಞಾನ ಎಷ್ಟೇ ಮುಂದುವರೆದಿದ್ದರೂ, ಪ್ರಾಚೀನ ಕಾಲದಿಂದಲೂ ಪಾಲಿಸಿಕೊಂಡು ಬಂದಿರುವ ಕೆಲವು ಆಯುರ್ವೇದ ಸಲಹೆಗಳು ಇಂದಿಗೂ ಪ್ರಸ್ತುತ. 

ಆಟವಾಡುವಾಗ ಮಗು ಬಿದ್ದು ಗಾಯ ಮಾಡಿಕೊಂಡರೆ ಅರಿಶಿನ ಹಚ್ಚುವುದು, ತುಂಬೆ ಸಸಿಯ ರಸ ಹಾಕುವುದು, ಹೊಟ್ಟೆ ನೋವು ಅಂದ್ರೆ ಅಮ್ಮ ಬಂದು ಹೊಕ್ಕಳಿಗೆ ಎಣ್ಣೆ ಹಚ್ಚುವುದು ಎಲ್ಲವೂ ನಮ್ಮ ಹಿರಿಯರು ರೂಢಿಸಿಕೊಂಡು ಬಂದ ಅಭ್ಯಾಸ. ಅಷ್ಟೇ ಅಲ್ಲ, ಇದು ನಮ್ಮ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮವನ್ನೂ ಉಂಟು ಮಾಡುತ್ತದೆ ಎಂಬುದರಲ್ಲಿ ಅನುಮಾನವೇ ಇಲ್ಲ. 

ಇದನ್ನೂ ಓದಿ- ಬೇಗ ಏಳುವ ಅಭ್ಯಾಸ ಶಾಸ್ತ್ರಗಳಿಗೋಸ್ಕರ ಅಷ್ಟೇ ಅಲ್ಲ, ನಿಮ್ಮ ಆರೋಗ್ಯದ ದೃಷ್ಟಿಯಿಂದಲೂ ಲಾಭದಾಯಕ 

ದೇಹಕ್ಕೆ ಹರಳೆಣ್ಣೆಯಂತೆ ಶುದ್ಧ ಕೊಬ್ಬರಿಎಣ್ಣೆಯೂ ತುಂಬಾ ಪ್ರಯೋಜನಕಾರಿ ಆಗಿದೆ. ಯೋಗ ಶಿಕ್ಷಕಿಯೊಬ್ಬರು ಈ ಕುರಿತಂತೆ ವಿಡಿಯೋವೊಂದನ್ನು ಹಂಚಿಕೊಂಡಿದ್ದು ಇದರಲ್ಲಿ ನಿತ್ಯ ದೇಹದ ಈ 3 ಭಾಗಕ್ಕೆ ಹನಿ ಕೊಬ್ಬರಿ ಎಣ್ಣೆ ಹಾಕುವುದರಿಂದ ಹಲವು ರೋಗಗಳಿಂದ ದೂರ ಉಳಿಯಬಹುದು ಎಂದು ಸಲಹೆ ನೀಡಿದ್ದಾರೆ. 

ಇದನ್ನೂ ಓದಿ- ಅತಿಯಾಗಿ ಯೋಚನೆ ಮಾಡುವುದನ್ನು ಬಿಡಲು ಸಿಂಪಲ್ ಆದ ಈ ಟ್ರಿಕ್ಸ್ ಅಳವಡಿಸಿಕೊಳ್ಳಿ… 

ಪ್ರತಿದಿನ ದೇಹದ ಈ 3 ಭಾಗಕ್ಕೆ ಹನಿ ಕೊಬ್ಬರಿ ಎಣ್ಣೆ ಹಾಕಿ, ರೋಗಗಳಿಂದ ದೂರವಿರಿ! 
ಯೋಗ ಶಿಕ್ಷಕಿ  ಅಪೇಕ್ಷಾ ಪಾಲಿ ಅವರ ಪ್ರಕಾರ, ನಿತ್ಯ ಹೊಕ್ಕಳು, ಮೂಗಿನ ಹೊಳ್ಳೆಗಳಿಗೆ, ಬೆರಳುಗಳ ತುದಿಗಳಿಗೆ ಒಂದೆರಡು ಹನಿ ಕೊಬ್ಬರಿ ಎಣ್ಣೆ ಹಾಕುವುದರಿಂದ ಹಾಗೂ ಬೆರಳಿನ ತುದಿಗೆ ಎಣ್ಣೆ ಹಾಕಿ ಲಘುವಾಗಿ ಮಸಾಜ್ ಮಾಡುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ರೋಗಗಳು ಅಷ್ಟು ಸುಲಭವಾಗಿ ಹತ್ತಿರ ಸುಳಿಯುವುದಿಲ್ಲ ಎಂದು ಸಲಹೆ ನೀಡಿದ್ದಾರೆ. 

ವಿಡಿಯೋವನ್ನು ಇಲ್ಲಿ ವೀಕ್ಷಿಸಿ... 

ಕೊಬ್ಬರಿ ಎಣ್ಣೆಯನ್ನು ಯಾವ ಸಮಯದಲ್ಲಿ ಹಾಕಬೇಕು? 
ಪ್ರತಿ ದಿನ ರಾತ್ರಿ ಮಲಗುವ ಮೊದಲು  ಹೊಕ್ಕಳು, ಮೂಗಿನ ಹೊಳ್ಳೆಗಳಿಗೆ, ಬೆರಳುಗಳ ತುದಿಗಳಿಗೆ ಕೊಬ್ಬರಿ ಎಣ್ಣೆ ಹಾಕಿ ರಾತ್ರಿಯಿಡೀ ಹಾಗೆ ಬಿಡುವುದರಿಂದ ಇದು ಹೆಚ್ಚು ಪರಿಣಾಮಕಾರಿ ಎಂದು ಸಾಬೀತುಪಡಿಸುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News