Ayurveda Tips: ನುಗ್ಗೆಕಾಯಿಯನ್ನು ಆಯುರ್ವೇದದಲ್ಲಿ ತುಂಬಾ ಗುಣಕಾರಿ ಎಂದು ಪರಿಗಣಿಸಲಾಗುತ್ತದೆ, ಕಾರಣ ಇಲ್ಲಿದೆ

Moringa Benefits - ಆಯುರ್ವೇದ ಪ್ರಕಾರ ನುಗ್ಗೆಕಾಯಿಯನ್ನು ಹಲವು ಕಾಯಿಲೆಗಳ ಚಿಕಿತ್ಸೆಗೆ ಗುಣಕಾರಿ ಮದ್ದು ಎಂದು ಪರಿಗಣಿಸಲಾಗುತ್ತದೆ. ಈ ಮರದ ಎಲೆಗಳು, ಹೂವುಗಳು, ತೊಗಟೆ, ಕಾಂಡ ಇತ್ಯಾದಿಗಳನ್ನು ಔಷಧ ತಯಾರಿಕೆಗೆ ಬಳಸಲಾಗುತ್ತದೆ. ನುಗ್ಗೆ ಸೊಪ್ಪಿನಲ್ಲಿ ಕಿತ್ತಳೆ ಹಣ್ಣಿಗಿಂತ ಏಳು ಪಟ್ಟು ಹೆಚ್ಚು ವಿಟಮಿನ್ ಸಿ ಇರುತ್ತದೆ ಎಂದು ಭಾವಿಸಲಾಗುತ್ತದೆ. ಇದರ ಇನ್ನೂ ಹೆಚ್ಚಿನ ಲಾಭಗಳ ಕುರಿತು ತಿಳಿದುಕೊಳ್ಳೋಣ ಬನ್ನಿ,  

Written by - Nitin Tabib | Last Updated : Jun 14, 2022, 11:04 PM IST
  • ನುಗ್ಗೆಕಾಯಿಯನ್ನು ಆಯುರ್ವೇದದಲ್ಲಿ ತುಂಬಾ ಗುಣಕಾರಿ ಎಂದು ಪರಿಗಣಿಸಲಾಗುತ್ತದೆ
  • ಈ ಮರದ ಎಲೆಗಳು, ಹೂವುಗಳು, ತೊಗಟೆ, ಕಾಂಡ ಇತ್ಯಾದಿಗಳನ್ನು ಔಷಧ ತಯಾರಿಕೆಗೆ ಬಳಸಲಾಗುತ್ತದೆ.
  • ನುಗ್ಗೆ ಸೊಪ್ಪಿನಲ್ಲಿ ಕಿತ್ತಳೆ ಹಣ್ಣಿಗಿಂತ ಏಳು ಪಟ್ಟು ಹೆಚ್ಚು ವಿಟಮಿನ್ ಸಿ ಇರುತ್ತದೆ ಎಂದು ಭಾವಿಸಲಾಗುತ್ತದೆ.
Ayurveda Tips: ನುಗ್ಗೆಕಾಯಿಯನ್ನು ಆಯುರ್ವೇದದಲ್ಲಿ ತುಂಬಾ ಗುಣಕಾರಿ ಎಂದು ಪರಿಗಣಿಸಲಾಗುತ್ತದೆ, ಕಾರಣ ಇಲ್ಲಿದೆ title=
Drumstick Tree Benefits

Benefits Of Drumsticks: ಸಾಕಷ್ಟು ಜಂಜಾಟಗಳಿಂದ ಕೂಡಿದ ಇಂದಿನ ಜೀವನಶೈಲಿಯಿಂದಾಗಿ ಜನರು ತಮ್ಮ ಆರೋಗ್ಯದ ಬಗ್ಗೆ ತುಂಬಾ ನಿರ್ಲಕ್ಷ ಧೋರಣೆಯನ್ನು ಹೊಂದಿದ್ದಾರೆ.. ಆದಾಗ್ಯೂ, ಕರೋನಾ ಅವಧಿಯ ನಂತರ ಎಲ್ಲೋ ಪರಿಸ್ಥಿತಿಗಳು ಸ್ವಲ್ಪ ಮಟ್ಟಿಗೆ ಬದಲಾಗಿವೆ ಮತ್ತು ಜನರು ತಮ್ಮ ಆರೋಗ್ಯದ ಬಗ್ಗೆ ಸ್ವಲ್ಪ ಗಂಭೀರತೆಯನ್ನು ಅರಿಯಲಾರಂಭಿಸಿದ್ದಾರೆ. ಇದೀಗ ಮತ್ತೊಮ್ಮೆ ನಾವು ಭಾರತೀಯರು ಆಯುರ್ವೇದ ಔಷಧಗಳು ಮತ್ತು ಪರಿಹಾರಗಳನ್ನು ನಂಬಿ ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದರೆ ತಪ್ಪಾಗಲಾರದು

ಇಂತಹ ಪರಿಸ್ಥಿತಿಯಲ್ಲಿ ಇಂದು ನಾವು ನಿಮಗಾಗಿ ನುಗ್ಗೆಕಾಯಿಯ ಔಷಧೀಯ ಗುಣಗಳ ಪಟ್ಟಿಯನ್ನು ತಂದಿದ್ದೇವೆ. ಇದನ್ನು ಆಂಗ್ಲ ಭಾಷೆಯಲ್ಲಿ ಮೊರಿಂಗಾ ಎಂದೂ ಕೂಡ ಕರೆಯಲಾಗುತ್ತದೆ. ಇದನ್ನು ಬಳಸುವುದರಿಂದ ನೀವು ಹಲವು ರೀತಿಯ ರೋಗಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬಹುದು. ಇದರ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ,

ಆಯುರ್ವೇದದಲ್ಲಿ ಡ್ರಮ್ ಸ್ಟಿಕ್ ಅನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ
ಇದನ್ನು ಆಯುರ್ವೇದದಲ್ಲಿ ಹಲವು ವರ್ಷಗಳಿಂದ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತಿದೆ. ಇದು ಎಲೆಗಳು, ಕಾಂಡ, ಹೂವುಗಳು, ಕಾಯಿಗಳು ಇತ್ಯಾದಿ ಭಾಗಗಳನ್ನು ವಿವಿಧ ಔಷಧಿಗಳ ತಯಾರಿಕೆಗೆ ಬಳಸಲಾಗುತ್ತದೆ. ನುಗ್ಗೆಸೊಪ್ಪಿನಲ್ಲಿ  ಕಿತ್ತಳೆಗಿಂತ 7 ಪಟ್ಟು ಹೆಚ್ಚು ವಿಟಮಿನ್ ಸಿ ಮತ್ತು ಬಾಳೆಹಣ್ಣಿಗಿಂತ 15 ಪಟ್ಟು ಹೆಚ್ಚು ಪೊಟ್ಯಾಸಿಯಮ್ ಇದೆ ಎಂದು ಭಾವಿಸಲಾಗಿದೆ.

ಮಾಹಿತಿಯ ಪ್ರಕಾರ, ಆಯುರ್ವೇದದಲ್ಲಿ ಒಟ್ಟು 300 ರೋಗಗಳಿಗೆ ಚಿಕಿತ್ಸೆ ನೀಡಲು ನುಗ್ಗೆಕಾಯಿಯನ್ನು ಬಳಸಲಾಗುತ್ತದೆ. ಇದೆ ಕಾರಣದಿಂದ ಇದನ್ನು ಒಂದು ಅದ್ಭುತ ಮರವೆಂದು ಪರಿಗಣಿಸಲಾಗಿದೆ. ಕೂದಲು ಉದುರುವಿಕೆಯ ಚಿಕಿತ್ಸೆಯಿಂದ ಹಿಡಿದು ಈ ಮರವು ಅಸ್ತಮಾ ಮತ್ತು ಸಂಧಿವಾತ ಕಾಯಿಲೆಗಳಲ್ಲಿ  ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ.

ಡ್ರಮ್ ಸ್ಟಿಕ್ ಈ ಪೋಷಕಾಂಶಗಳ ಆಗರವಾಗಿದೆ
ಆಯುರ್ವೇದ ವೈದ್ಯರ ಪ್ರಕಾರ, ಇಡೀ ನುಗ್ಗೆಕಾಯಿ ನೀಡುವ ಮರವೇ ಒಂದು ಗಿಡಮೂಲಿಕೆಯಾಗಿದೆ. ಈ ಮರವು ಪ್ರತಿಜೀವಕ, ನೋವು ನಿವಾರಕ, ಉತ್ಕರ್ಷಣ ನಿರೋಧಕ, ಉರಿಯೂತದ, ಆಂಟಿಕಾನ್ಸರ್, ಆಂಟಿಡಯಾಬಿಟಿಕ್, ಆಂಟಿವೈರಲ್, ಆಂಟಿಫಂಗಲ್ ಮತ್ತು ಆಂಟಿಏಜಿಂಗ್ ಆಗಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ವಿಟಮಿನ್ ಎ, ವಿಟಮಿನ್ ಬಿ1 (ಥಯಾಮಿನ್), ಬಿ2 (ರೈಬೋಫ್ಲಾವಿನ್), ಬಿ3 (ನಿಯಾಸಿನ್), ಬಿ6, ಫೋಲೇಟ್, ಆಸ್ಕೋರ್ಬಿಕ್ ಆಸಿಡ್ (ವಿಟಮಿನ್ ಸಿ), ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಕಬ್ಬಿಣ, ಮೆಗ್ನೀಸಿಯಮ್, ರಂಜಕ ಮತ್ತು ಸತುವು ಮುಂತಾದ ಪೋಷಕಾಂಶಗಳು ಹೇರಳ ಪ್ರಮಾಣದಲ್ಲಿ ಕಂಡುಬರುತ್ತವೆ.

ನುಗ್ಗೆ ಸೊಪ್ಪು ತುಂಬಾ ಪ್ರಯೋಜನಕಾರಿ
ಹಾಗೆ ನೋಡಿದರೆ ನುಗ್ಗೆ ಮರದ ಎಲ್ಲಾ ಭಾಗಗಳು ಪ್ರಯೋಜನಕಾರಿಯಾಗಿವೆ, ಆದರೆ ಅದರ ಎಲೆಗಳು ಹೆಚ್ಚು ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ನಿಮ್ಮ ಆಹಾರದಲ್ಲಿ ನೀವು ನುಗ್ಗೆಸೊಪ್ಪನ್ನು ಬಳಸಬಹುದು. ನೀವು ಅದರ ಒಣಗಿದ ಎಲೆಗಳ ಪುಡಿಯನ್ನು ಸಹ ಬಳಸಬಹುದು.

ನುಗ್ಗೆ ಬೀಜಗಳ ಪ್ರಯೋಜನಗಳು
ನುಗ್ಗೆಕಾಯಿಯ ಬೀಜಗಳು ಕೇವಲ ಸೇವಿಸಲು ರುಚಿಯಾಗಿರುವುದಲ್ಲದೆ ಸಾಕಷ್ಟು ಪ್ರಯೋಜನಕಾರಿಯಾಗಿವೆ. ಸೂಪ್‌ಗಳು, ಮೇಲೋಗರಗಳು ಮತ್ತು ತರಕಾರಿಗಳ ಪರಿಮಳವನ್ನು ಹೆಚ್ಚಿಸಲು ಹಾಗೂ ಆಹಾರವನ್ನು ಆರೋಗ್ಯಕರವಾಗಿಸಲು ನೀವು ಅದರ ಬೀಜಗಳನ್ನು  ಬಳಸಬಹುದು. ಇದರ ಕಾಳುಗಳನ್ನು ಕುದಿಸಿ ಅದರ ಸೂಪ್ ಕುಡಿಯುವುದರಿಂದ ಸಂಧಿವಾತದ ನೋವಿನಿಂದ ಪರಿಹಾರ ಸಿಗುತ್ತದೆ.

ನುಗ್ಗೆಸೊಪ್ಪಿನ ಪುಡಿ ಪುಡಿ ಪ್ರಯೋಜನಗಳು
ನೀವು ಮೋರಿಂಗವನ್ನು ಅಂದರೆ ಡ್ರಮ್ ಸ್ಟಿಕ್ ಎಲೆಗಳ ಪುಡಿಯನ್ನು ಹಲವು ವಿಧಗಳಲ್ಲಿ ಬಳಸಬಹುದು. ನೀವು ಇದನ್ನು ನಿಮ್ಮ ರೊಟ್ಟಿ, ಚೀಲ್, ಪ್ಯಾನ್‌ಕೇಕ್, ಸ್ಮೂಥಿ, ಎನರ್ಜಿ ಡ್ರಿಂಕ್, ದಾಲ್ ಮತ್ತು ತರಕಾರಿಗಳಿಗೆ ಸೇರಿಸಬಹುದು. ನೀವು ದಿನಕ್ಕೆ 1 ಟೀಸ್ಪೂನ್ ಪುಡಿಯನ್ನು ಬಳಸಬಹುದು.

ಇದನ್ನೂ ಓದಿ-Health Tips: ಒಣದ್ರಾಕ್ಷಿ-ಜೇನುತುಪ್ಪ ಸೇವನೆಯಿಂದ ಲೆಕ್ಕವಿಲ್ಲದಷ್ಟು ಆರೋಗ್ಯ ಪ್ರಯೋಜನ

ಡ್ರಮ್ ಸ್ಟಿಕ್ ಅನ್ನು ಬಳಸುವುದರಿಂದ ಆಗುವ ಕೆಲ ಪ್ರಯೋಜನಗಳು
1. ನುಗ್ಗೆಕಾಯಿ ನಿಮ್ಮ ಹಿಮೋಗ್ಲೋಬಿನ್ ಮಟ್ಟವನ್ನು ಸುಧಾರಿಸುತ್ತದೆ.
2.ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ.
3. ಹಾಲುಣಿಸುವ ತಾಯಂದಿರರಲ್ಲಿ ಹಾಲಿನ ಉತ್ಪಾದನೆಯನ್ನು ಹೆಚ್ಚಿಸುತ್ತದೆ.
4. ಡ್ರಮ್ ಸ್ಟಿಕ್ ಅನ್ನು ಬಳಸುವುದರಿಂದ, ದೇಹದ ಥೈರಾಯ್ಡ್ ಸ್ರವಿಕೆಯ ಕಾರ್ಯವು ಸುಧಾರಣೆಯಾಗುತ್ತದೆ.
5. ಡ್ರಮ್ ಸ್ಟಿಕ್ ನಿಮ್ಮ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.
6. ಯಕೃತ್ತು ಮತ್ತು ಮೂತ್ರಪಿಂಡವನ್ನು ಇದು ನಿರ್ವಿಷಗೊಳಿಸುತ್ತದೆ.
7. ಡ್ರಮ್ ಸ್ಟಿಕ್ ಬಳಕೆಯಿಂದ ಒತ್ತಡ ಮತ್ತು ಆತಂಕ ಕಡಿಮೆಯಾಗುತ್ತದೆ.
8. ದೇಹದಲ್ಲಿರುವ ರಕ್ತವನ್ನು ಶುದ್ಧೀಕರಿಸುತ್ತದೆ.
9. ದೇಹದಲ್ಲಿ ಉಂಟಾಗುವ ಚರ್ಮ ರೋಗಗಳನ್ನು ಹೋಗಲಾಡಿಸುತ್ತದೆ.
10. ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಲು ಇದು ತುಂಬಾ ಸಹಾಯಕವಾಗಿದೆ.

ಇದನ್ನೂ ಓದಿ-ಈ ರೀತಿ ಅಜ್ವೈನ್ ಬಳಸಿ ಚಿಟಿಕೆ ಹೊಡೆಯೋದ್ರಲ್ಲಿ ನಿಮ್ಮ ಈ ಸಮಸ್ಯೆಗೆ ಗುಡ್ ಬೈ ಹೇಳಿ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀದಯಾಲಾಗಿರುವ ಮಾಹಿತಿಯ ನಿಖರತೆ, ಸಮಯೋಚಿತತೆ ಮತ್ತು ನೈಜತೆಯನ್ನು ಖಚಿತಪಡಿಸಿಕೊಳ್ಳುವ ಎಲ್ಲಾ ಪ್ರಯತ್ನಗಳನ್ನು ನಡೆಸಲಾಗಿದೆ. ಆದರೆ ಜೀ ಕನ್ನಡ ನ್ಯೂಸ್ ಈ ಮಾಹಿತಿಯ ನೈತಿಕ ಹೊನೆಗಾರಿಗೆಯನ್ನು ವಹಿಸುವುದಿಲ್ಲ. ಯಾವುದೇ ಉಪಾಯವನ್ನು ಅನುಸರಿಸುವ ಮುನ್ನ ನಿಮ್ಮ ವೈದ್ಯರನ್ನು ಸಂಪರ್ಕಿಸಲು ನಾವು ವಿನಂತಿಸುತ್ತೇವೆ. ನಿಮಗೆ ಕೇವಲ ಮಾಹಿತಿಯನ್ನು ಒದಗಿಸುವುದು ಮಾತ್ರ ಇದರ ಇಂದಿನ ನಮ್ಮ ಉದ್ದೇಶ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News