Coronavirus: ನಾಳೆ ಬೆಳಗ್ಗೆ 11 ಗಂಟೆಗೆ ಸಂಪುಟ ಸಭೆ ಕರೆದ ಪ್ರಧಾನಿ ಮೋದಿ, ಮಹತ್ವದ ನಿರ್ಣಯ ಸಾಧ್ಯತೆ

Coronavirus: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಕೇಂದ್ರ ಸಚಿವ ಸಂಪುಟ ಸಭೆ ಕರೆದಿದ್ದಾರೆ. ಈ ಸಭೆ ಬೆಳಗ್ಗೆ 11 ರಿಂದ ನಡೆಯಲಿದೆ. ಈ ಸಭೆಯಲ್ಲಿ ಪ್ರಧಾನಿ ಮೋದಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Written by - Nitin Tabib | Last Updated : Apr 29, 2021, 06:36 PM IST
  • ಶುಕ್ರವಾರ ಸಚಿವ ಸಂಪುಟ ಸಭೆ ಕರೆದ ಪ್ರಧಾನಿ ನರೇಂದ್ರ ಮೋದಿ.
  • ನಾಳೆ ಬಳಗ್ಗೆ 11 ಗಂಟೆಗೆ ಈ ಸಭೆ ನಡೆಯಲಿದೆ.
  • ಈ ಸಚಿವ ಸಂಪುಟ ಸಭೆಯ ಬಳಿಕ ಪ್ರಧಾನಿ ಮೋದಿಯಿಂದ ಮಹತ್ವದ ಘೋಷಣೆ ಸಾಧ್ಯತೆ.
Coronavirus: ನಾಳೆ ಬೆಳಗ್ಗೆ 11 ಗಂಟೆಗೆ ಸಂಪುಟ ಸಭೆ ಕರೆದ ಪ್ರಧಾನಿ ಮೋದಿ, ಮಹತ್ವದ ನಿರ್ಣಯ ಸಾಧ್ಯತೆ  title=
Coronavirus (File Photo - PM Narendra Modi)

ನವದೆಹಲಿ: Coronavirus - ಕೊರೊನಾ (Coronavirus) ಪಿಡುಗಿನ ಭೀಷಣ ಸಂಕಷ್ಟದ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಕೇಂದ್ರ ಸಚಿವ ಸಂಪುಟ (Cabinet Meet) ಸಭೆ ಕರೆದಿದ್ದಾರೆ. ಈ ಸಭೆ ಬೆಳಗ್ಗೆ 11 ಗಂಟೆಗೆ ಆರಂಭವಾಗಲಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಈ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡು ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಸಭೆ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ನಡೆಯಲಿದೆ. ಕೊರೊನಾ ಮಹಾಮಾರಿಯ ವಿರುದ್ಧ ಸಮರೋಪಾದಿಯಲ್ಲಿ ರಚಿಸಲಾಗಿರುವ ಕಾರ್ಯತಂತ್ರದ ಕುರಿತು ಪ್ರಧಾನಿಗಳು ಘೋಷಣೆ ಮಾಡುವ ಸಾಧ್ಯತೆ ಇದೆ.

ಸೇನಾ ಮುಖ್ಯಸ್ಥರ ಜೊತೆಗೂ ಸಭೆ ನಡೆಸಿದ್ದಾರೆ ಪ್ರಧಾನಿ
ಗುರುವಾರ ಸೇನಾ ಮುಖ್ಯಸ್ಥರಾಗಿರುವ ಎಂ. ಎಂ. ನರವಣೆ (General MM Naravane) ಜೊತೆಗೆ ಕೊವಿಡ್-19 (Covid-19)ನಿರ್ವಹಣೆಯ ಕುರಿತು ಪ್ರಧಾನಿ ಮೋದಿ ಈಗಾಗಲೇ ಮಾತುಕತೆ ನಡೆಸಿದ್ದಾರೆ. ಈ ವೇಳೆ ಅವರು ಸೇನೆಯ ವತಿಯಿಂದ ತೆಗೆದುಕೊಳ್ಳಲಾಗುತ್ತಿರುವ ಕ್ರಮಗಳು ಹಾಗೂ ಸಿದ್ಧತೆಗಳ ಕುರಿತು ಸಮಾಲೋಚನೆ ನಡೆಸಿದ್ದಾರೆ. ಈ ವೇಳೆ ಭಾರತೀಯ ಸೇನೆ ತನ್ನ ಆರೋಗ್ಯ ಸಿಬ್ಬಂಧಿಯನ್ನು ರಾಜ್ಯಸರ್ಕಾರಗಳ ಸೇವೆಗೆ ನಿಯೋಜಿಸಿದೆ ಎಂದು ಜನರಲ್ ನರವಣೆ ಪ್ರಧಾನಿಗಳಿಗೆ ಮಾಹಿತಿ ನೀಡಿದ್ದಾರೆ. ಜೊತೆಗೆ ದೇಶದ ವಿಭಿನ್ನ ಭಾಗಗಳಲ್ಲಿ ಭಾರತೀಯ ಸೇನೆ ತಾತ್ಕಾಲಿಕ ಆಸ್ಪತ್ರೆಗಳನ್ನೂ ಕೂಡ ತೆರೆಯುತ್ತಿದೆ ಎಂದು ಅವರು ಹೇಳಿದ್ದಾರೆ. ಸಭೆಯ ಬಳಿಕ ಟ್ವೀಟ್ ಮೂಲಕ ಮಾಹಿತಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ, 'ಕೊವಿಡ್-19 ವಿರುದ್ಧದ ಹೋರಾಟದಲ್ಲಿ ಭಾರತೀಯ ಸೇನೆ ಮೂಲಕ ನಡೆಸಿರುವ ಯತ್ನಗಳ ಕುರಿತು ಸಮೀಕ್ಷೆ ನಡೆಸಲಾಗಿದೆ' ಎಂದು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ-ಇಂತಹ ಜನರು ಕೊರೊನಾ ಲಸಿಕೆ ಹಾಕಿಸಿಕೊಳ್ಳಬಾರದು! ಕಾರಣ ಇಲ್ಲಿದೆ

ಹೇಳಿಕೆ ಬಿಡುಗಡೆ ಮಾಡಿದ PMO
ಪ್ರಧಾನಿ ನರೇಂದ್ರ ಮೋದಿ ಹಾಗೂ ಜನರಲ್ ನರವಣೆ ಸಭೆಯ ಬಳಿಕ ಹೇಳಿಕೆ ಬಿಡುಗಡೆ ಮಾಡಿರುವ ಪ್ರಧಾನಿ ಕಾರ್ಯಾಲಯ (PMO), ಜನರಲ್ ನರವಣೆ ಅವರು ಪ್ರಧಾನ ಮಂತ್ರಿಯನ್ನು ಭೇಟಿಯಾಗಿ ಕೋವಿಡ್ ನಿರ್ವಹಣೆಗಾಗಿ ಸೈನ್ಯದ ಸಿದ್ಧತೆಗಳು ಮತ್ತು ಉಪಕ್ರಮಗಳ ಬಗ್ಗೆ ವಿವರಿಸಿದ್ದಾರೆ ಮತ್ತು ದೇಶದ ವಿವಿಧ ಭಾಗಗಳಲ್ಲಿ ನಿರ್ಮಿಸಲಾಗುತ್ತಿರುವ  ಸೈನ್ಯದ ತಾತ್ಕಾಲಿಕ ಆಸ್ಪತ್ರೆಗಳ ಕುರಿತು ಕೂಡ ಮಾಹಿತಿ ನೀಡಿದ್ದಾರೆ. ಸೈನ್ಯದ ಆಸ್ಪತ್ರೆಗಳನ್ನು ಸಾರ್ವಜನಿಕರ ಸೇವೆಯಲ್ಲಿ ಸಾಧ್ಯವಾದಷ್ಟು ಬಳಸಲಾಗುತ್ತಿದೆ ಮತ್ತು ಇದಕ್ಕಾಗಿ ಸಾಮಾನ್ಯ ನಾಗರಿಕರು ಬಯಸಿದಲ್ಲಿ ಹತ್ತಿರದ ಸೇನಾ ಆಸ್ಪತ್ರೆಯನ್ನು ಸಂಪರ್ಕಿಸಬಹುದು ಎಂದು ನರ್ವಾನೆ ಪ್ರಧಾನ ಮಂತ್ರಿಗೆ ತಿಳಿಸಿದ್ದಾರೆ. ಆಮದು ಮಾಡಿದ ಆಮ್ಲಜನಕ ಟ್ಯಾಂಕರ್‌ಗಳು ಮತ್ತು ವಾಹನಗಳ ನಿರ್ವಹಣೆಯಲ್ಲಿ ತಜ್ಞರ ಕೌಶಲ್ಯಗಳು ಅಗತ್ಯವಿದ್ದಲ್ಲಿ, ಸೇನಾ ಕಾರ್ಯಪಡೆಯಿಂದ ಸಹಾಯ ನೀಡಲಾಗುತ್ತಿದೆ ಎಂದು ಸೇನಾ ಮುಖ್ಯಸ್ಥರು ಪ್ರಧಾನಿಗೆ ಮಾಹಿತಿ ನೀಡಿದ್ದಾರೆ' ಎಂದು ಹೇಳಿದೆ.

ಇದನ್ನೂ ಓದಿ- ದೇಶದಲ್ಲಿ ಕರೋನಾ ಸೋಂಕಿನ ಸುನಾಮಿ 24 ಗಂಟೆಗಳಲ್ಲಿ 3.79 ಲಕ್ಷ ಪ್ರಕರಣ, ಸಾವಿನ ಸಂಖ್ಯೆಯಲ್ಲೂ ದಾಖಲೆ

ದಾಖಲೆಯ ಮಟ್ಟದಲ್ಲಿ ಹೆಚ್ಚಾಗುತ್ತಿದೆ ಸೋಂಕಿತರ ಸಂಖ್ಯೆ
ದೇಶದಲ್ಲಿ ಇದುವರೆಗೆ ಒಂದೇ ದಿನದಲ್ಲಿ ದಾಖಲೆಯ 3,79,257 ಹೊಸ ಕರೋನಾ ವೈರಸ್ ಸೋಂಕಿನ ಪ್ರಕರಣಗಳು ವರದಿಯಾಗಿವೆ.  ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,83,76,524 ಕ್ಕೆ ಏರಿದೆ. ಮಾಹಿತಿಯ ಪ್ರಕಾರ, ಬೆಳಗ್ಗೆ ಎಂಟು ಗಂಟೆಯವರೆಗೆ, ಒಂದೇ ದಿನದಲ್ಲಿ 3,645 ಜನರು ಸಾವನ್ನಪಿದ ನಂತರ, ಈ ಮಾರಕ ಕಾಯಿಲೆಯಿಂದ ಒಟ್ಟು ಬಲಿಯಾದವರ ಸಂಖ್ಯೆ 2,04,832 ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ- ಕರೋನಾ ಲಸಿಕೆ ಹಾಕಿಸಿಕೊಳ್ಳುವ ವೇಳೆ ಈ ವಿಚಾರಗಳ ಬಗ್ಗೆ ಎಚ್ಚರವಿರಲಿ..

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News