Benefits Of Apple Peel: ಸೇಬು ಹಣ್ಣು ತಿಂದು ನೀವೂ ಅದರ ಸಿಪ್ಪೆ ಎಸೆಯುತ್ತೀರಾ? ಹಾಗಾದ್ರೆ ಲೇಖನ ತಪ್ಪದೆ ಓದಿ!

Health Benefits Of Apple Peel: ನಿತ್ಯ ಒಂದು ಸೇಬು ತಿನ್ನುವುದರಿಂದ ವೈದ್ಯರ ಬಳಿ ಹೋಗುವ ಅವಶ್ಯಕತೆ ಬೀಳುವುದಿಲ್ಲ ಎಂದು ಸಾಮಾನ್ಯವಾಗಿ ಜನರು ಹೇಳುವುದನ್ನು ನೀವು ಕೇಳಿರಬಹುದು. ಏಕೆಂದರೆ, ಸೇಬು ತಿನ್ನುವುದರಿಂದ ಹಲವು ರೋಗಗಳ ಅಪಾಯಗಳು ದೂರಾಗುತ್ತವೆ. ಆದರೆ, ಹಲವು ಜನರು ಈ ಅದ್ಭುತ ಹಣ್ಣನ್ನು ಸೇವಿಸುವ ಮೊದಲು ಅದರ ಸಿಪ್ಪೆ ಸುಲಿಯುತ್ತಾರೆ. (Health News In Kannada)

Written by - Nitin Tabib | Last Updated : Mar 12, 2024, 11:00 PM IST
  • ಮಧ್ಯಮ ಗಾತ್ರದ ಸೇಬು ಸುಮಾರು 4.5 ಗ್ರಾಂ ಫೈಬರ್ ಅನ್ನು ಹೊಂದಿರುತ್ತದೆ,
  • ಆದರೆ ಈ ಸೇಬಿನ ಸಿಪ್ಪೆಯನ್ನು ತೆಗೆದಾಗ, ಈ ಹಣ್ಣಿನಲ್ಲಿರುವ ಫೈಬರ್ ಪ್ರಮಾಣವು ಕೇವಲ 2 ಗ್ರಾಂ ಮಾತ್ರ ಉಳಿಯುತ್ತದೆ.
  • ಅಂದರೆ ಸೇಬಿನ ಸಿಪ್ಪೆಯಲ್ಲಿ ತಿರುಳಿಗಿಂತ ಹೆಚ್ಚು ನಾರಿನಂಶವಿದೆ, ಇದು ಆರೋಗ್ಯಕ್ಕೆ ಅತ್ಯಗತ್ಯವಾಗಿದೆ.
Benefits Of Apple Peel: ಸೇಬು ಹಣ್ಣು ತಿಂದು ನೀವೂ ಅದರ ಸಿಪ್ಪೆ ಎಸೆಯುತ್ತೀರಾ? ಹಾಗಾದ್ರೆ ಲೇಖನ ತಪ್ಪದೆ ಓದಿ! title=

Health Benefits Of Apple Peel: ನಿತ್ಯ ಒಂದು ಸೇಬು ತಿನ್ನುವುದರಿಂದ ವೈದ್ಯರ ಬಳಿ ಹೋಗುವ ಅವಶ್ಯಕತೆ ಬೀಳುವುದಿಲ್ಲ ಎಂದು ಸಾಮಾನ್ಯವಾಗಿ ಜನರು ಹೇಳುವುದನ್ನು ನೀವು ಕೇಳಿರಬಹುದು. ಏಕೆಂದರೆ, ಸೇಬು ತಿನ್ನುವುದರಿಂದ ಹಲವು ರೋಗಗಳ ಅಪಾಯಗಳು ದೂರಾಗುತ್ತವೆ. ಆದರೆ, ಹಲವು ಜನರು ಈ ಅದ್ಭುತ ಹಣ್ಣನ್ನು ಸೇವಿಸುವ ಮೊದಲು ಅದರ ಸಿಪ್ಪೆ ಸುಲಿಯುತ್ತಾರೆ. ಏಕೆಂದರೆ ಸೇಬು ಹಣ್ಣಿನ (Apple Peel Has Many Health Benefits ) ಸಿಪ್ಪೆಯಲ್ಲಿರುವ ಹಲವಾರು ಪ್ರಯೋಜನಗಳಿಂದ ನೀವು ವಂಚಿತರಾಗುವಿರಿ. (Health News In Kannada)
ತೂಕ ಇಳಿಕೆಗೆ ಕಾರಣವಾಗುವ ಹಣ್ಣುಗಳಲ್ಲಿ ಸೇಬುಹಣ್ಣು ಕೂಡ ಒಂದು. ಸೇಬು ಹಣ್ಣಿನ ಸಿಪ್ಪೆ ಯುರ್ಸೋಲಿಕ್ ಆಸಿಡ್ ನ ಆಗರವಾಗಿದೆ. ಇದು ಹೊಟ್ಟೆ ಭಾಗದಲ್ಲಿರುವ ಫ್ಯಾಟ್ ಇಳಿಕೆಗೆ ಕಾರಣವಾಗುತ್ತದೆ ಮತ್ತು ಇದರಿಂದ ಬೇಗ ತೂಕ ಇಳಿಕೆಯಾಗುತ್ತದೆ.(Apple peel benefits for weight loss)

ಉಸಿರಾಟದ ತೊಂದರೆ ಇರುವವರು ಸೇಬು ಹಣ್ಣನ್ನು ಸಿಪ್ಪೆ ಸಮೇತ ಸೇವಿಸಬೇಕು. ಏಕೆಂದರೆ, ಸೇಬು ಹಣ್ಣಿನ ಸಿಪ್ಪೆಯಲ್ಲಿ ಕ್ಯೋರ್ಸೆಟಿನ್ ಹೆಸರಿನ ತತ್ವ ಕಂಡುಬರುತ್ತದೆ. ಇದು ಉಸಿರಾಟದ ಸಮಸ್ಯೆ ನಿವಾರಣೆಗೆ ಸಹಕಾರಿಯಾಗಿದೆ.

ವೈದ್ಯರೂ ಕೂಡ ಸೇಬನ್ನು ಸಿಪ್ಪೆ ಸಮೇತ ಸೇವಿಸಬೇಕು ಎಂದು ಸಲಹೆ ನೀಡುತ್ತಾರೆ. ಏಕೆಂದರೆ, ಒಂದು ಸಂಪೂರ್ಣ ಸೇಬಿನಲ್ಲಿ 8.6 ಮಿ.ಗ್ರಾಂ.ವಿಟಮಿನ್ ಸಿ ಹಾಗೂ 98 ಇಂಟರ್ನ್ಯಾಷನಲ್ ಯುನಿಟ್ ಗಳಷ್ಟು ವಿಟಮಿನ್ ಎ ಇರುತ್ತದೆ. ಸಿಪ್ಪೆ ತೆಗೆದುಹಾಕಿದರೆ ಅವುಗಳ ಪ್ರಮಾಣ 6.5 ಮಿ.ಗ್ರಾಂ ಹಾಗೂ 60 ಐ.ಯುಗೆ ಬಂದು ನಿಲ್ಲುತ್ತದೆ.(Apple peel benefits for the skin)

ಮಧ್ಯಮ ಗಾತ್ರದ ಸೇಬು ಸುಮಾರು 4.5 ಗ್ರಾಂ ಫೈಬರ್ ಅನ್ನು ಹೊಂದಿರುತ್ತದೆ, ಆದರೆ ಈ ಸೇಬಿನ ಸಿಪ್ಪೆಯನ್ನು ತೆಗೆದಾಗ, ಈ ಹಣ್ಣಿನಲ್ಲಿರುವ ಫೈಬರ್ ಪ್ರಮಾಣವು ಕೇವಲ 2 ಗ್ರಾಂ ಮಾತ್ರ ಉಳಿಯುತ್ತದೆ. ಅಂದರೆ ಸೇಬಿನ ಸಿಪ್ಪೆಯಲ್ಲಿ ತಿರುಳಿಗಿಂತ ಹೆಚ್ಚು ನಾರಿನಂಶವಿದೆ, ಇದು ಆರೋಗ್ಯಕ್ಕೆ ಅತ್ಯಗತ್ಯವಾಗಿದೆ.

ಇದನ್ನೂ ಓದಿ-Green Papaya Benefits: ತೂಕ ಇಳಿಕೆ ಸೇರಿದಂತೆ ಹಲವು ಆರೋಗ್ಯ ಲಾಭಗಳನ್ನು ನೀಡುತ್ತೇ ಹಸಿರು ಪಪ್ಪಾಯಿ ಸೇವನೆ!

ಅಮೆರಿಕದ ಕಾರ್ನೆಲ್ ವಿಶ್ವವಿದ್ಯಾನಿಲಯದ ಸಂಶೋಧನೆಯಲ್ಲಿ, ಸಿಪ್ಪೆಯೊಂದಿಗೆ ಸೇಬುಗಳನ್ನು ತಿನ್ನುವುದು ಹೊಟ್ಟೆ, ಯಕೃತ್ತು ಮತ್ತು ಸ್ತನ ಕ್ಯಾನ್ಸರ್ ಕೋಶಗಳನ್ನು ಉತ್ಪಾದಿಸುವ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಸಾಬೀತಾಗಿದೆ.

ಇದನ್ನೂ ಓದಿ-White Hair Remedy: ಕೇವಲ 30 ನಿಮಿಷಗಳಲ್ಲಿ ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸುತ್ತೆ ಈ ಹೇಯರ್ ಮಾಸ್ಕ್!

(Disclaimer- ಆತ್ಮೀಯ ಓದುಗರೇ, ನಮ್ಮ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮ್ಮಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಾತ್ರ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನೀವು ಎಲ್ಲಾದರು ಓದಿದ್ದರೆ, ಅದನ್ನು ಅನುಸರಿಸುವ ಮುನ್ನ ವೈದ್ಯರನ್ನು ಅಥವಾ ವಿಷಯ ತಜ್ನರನ್ನು ಸಂಪರ್ಕಿಸಿ.)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News