ಡಯಾಬಿಟೀಸ್ ಮತ್ತು ಹೃದ್ರೋಗಿಗಳು ತಿನ್ನಲೇ ಬೇಕು ಈ ಹಣ್ಣು ..!

ಕಪ್ಪು ದ್ರಾಕ್ಷಿಯನ್ನು ತಿನ್ನುವುದರಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ. ಇದನ್ನು ತಿನ್ನುವುದರಿಂದ ಶುಗರ್ ಕೂಡ ನಿಯಂತ್ರಣದಲ್ಲಿರುತ್ತದೆ.   

Written by - Ranjitha R K | Last Updated : Jul 13, 2022, 01:50 PM IST
  • ದೇಹದ ಬೆಳವಣಿಗೆಗೆ ಹಣ್ಣುಗಳು ಬಹಳ ಮುಖ್ಯ.
  • ಕಪ್ಪು ದ್ರಾಕ್ಷಿ ಸೇವನೆಯಿಂದ ಅದ್ಭುತ ಪ್ರಯೋಜನ ಸಿಗುತ್ತದೆ.
  • ಹೃದ್ರೋಗಿಗಳು ಮತ್ತು ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿ
ಡಯಾಬಿಟೀಸ್ ಮತ್ತು ಹೃದ್ರೋಗಿಗಳು ತಿನ್ನಲೇ ಬೇಕು ಈ ಹಣ್ಣು ..!   title=
black grapse benefits for diabetec patient (file photo)

ಬೆಂಗಳೂರು : ದೇಹದ ಬೆಳವಣಿಗೆಗೆ ಹಣ್ಣುಗಳು ಬಹಳ ಮುಖ್ಯ.   ಅದರಲ್ಲೂ ಕಪ್ಪು ದ್ರಾಕ್ಷಿ ಸೇವನೆಯಿಂದ ಆರೋಗ್ಯಕ್ಕೆ ಅದ್ಭುತ ಪ್ರಯೋಜನ ಸಿಗುತ್ತದೆ.  ಇದನ್ನು ತಿನ್ನುವುದರಿಂದ  ಹಲವಾರು ಪ್ರಯೋಜನಗಳಿವೆ. ಕಪ್ಪು ದ್ರಾಕ್ಷಿಯು ಹೃದ್ರೋಗಿಗಳು ಮತ್ತು ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಕಪ್ಪು ದ್ರಾಕ್ಷಿಯಲ್ಲಿ ಕೆಲವು ಉತ್ಕರ್ಷಣ ನಿರೋಧಕಗಳಿವೆ. ಇದು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಕಪ್ಪು ದ್ರಾಕ್ಷಿಯಲ್ಲಿ ಕಂಡುಬರುವ ರೆಸ್ವೆರಾಟ್ರೊಲ್ ಮತ್ತು ಕ್ವೆರ್ಸೆಟಿನ್ ಹೃದಯದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. 

ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ : 
ಮೊದಲೇ ಹೇಳಿದಂತೆ ಕಪ್ಪು ದ್ರಾಕ್ಷಿಯನ್ನು ತಿನ್ನುವುದರಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ. ಇದನ್ನು ತಿನ್ನುವುದರಿಂದ ಶುಗರ್ ಕೂಡ ನಿಯಂತ್ರಣದಲ್ಲಿರುತ್ತದೆ. ಕಪ್ಪು ದ್ರಾಕ್ಷಿಯು ಉತ್ತಮ ಪ್ರಮಾಣದ ಫೈಬರ್ ಅನ್ನು ಹೊಂದಿದ್ದು ಅದು ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದಲ್ಲದೆ, ಇದರಲ್ಲಿರುವ ಫೈಬರ್ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದರಿಂದಾಗಿ ದೇಹವು ಸಕ್ಕರೆಯನ್ನು ಜೀರ್ಣಿಸಿಕೊಳ್ಳಲು ಪ್ರಾರಂಭಿಸುತ್ತದೆ . ಹೀಗಾಗಿ ರಕ್ತದಲ್ಲಿನ ಸಕ್ಕರೆ ನಿಯಂತ್ರಣದಲ್ಲಿರುತ್ತದೆ.

ಇದನ್ನೂ ಓದಿ : Ragi Flour For Diabetes: ಡಯಾಬಿಟೀಸ್ ರೋಗಿಗಳಿಗೆ ಅಮೃತವೇ ಸರಿ ಈ ಹಿಟ್ಟು ..!

ಮಧುಮೇಹ ರೋಗಿಗಳ ದೃಷ್ಟಿ  ಸುಧಾರಿಸುತ್ತದೆ : 
ಕಪ್ಪು ದ್ರಾಕ್ಷಿಯು ಮಧುಮೇಹ ರೋಗಿಗಳಲ್ಲಿ ಕಣ್ಣುಗಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ವರದಿಗಳ ಪ್ರಕಾರ, ಕಪ್ಪು ದ್ರಾಕ್ಷಿಯಲ್ಲಿ ಲುಟೀನ್ ಮತ್ತು ಜಿಯಾಕ್ಸಾಂಥಿನ್ ಎಂಬ ಕ್ಯಾರೊಟಿನಾಯ್ಡ್‌ಗಳಿವೆ. ಇದು ರೆಟಿನಾವನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಇದರ ಉತ್ಕರ್ಷಣ ನಿರೋಧಕವು ಕಣ್ಣುಗಳನ್ನು ಒಳಗಿನಿಂದ ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ ಮತ್ತು ದೃಷ್ಟಿಯನ್ನು ಹೆಚ್ಚಿಸುತ್ತದೆ.

ಆದರೆ ಇದನ್ನು ಅತಿಯಾಗಿ ಸೇವಿಸಬಾರದು ಎನ್ನುವುದು ಕೂಡಾ ನೆನಪಿರಲಿ. ಅತಿಯಾದರೆ ಅಮೃತವೂ ವಿಷ ಎನ್ನುವಂತೆ ಇದರಲ್ಲಿರುವ ಸಕ್ಕರೆ ಅಂಶವು ರಕ್ತದಲ್ಲಿನ ಸಕ್ಕರೆ  ಪ್ರಮಾಣ ಹೆಚ್ಚಿಸಬಹುದು. 

ಇದನ್ನೂ ಓದಿ : Women's Health Tips: ಈ ಕಾರಣಗಳಿಂದ ಖಾಸಗಿ ಭಾಗಗಳಲ್ಲಿ ತುರಿಕೆ ಉಂಟಾಗುತ್ತದೆ, ಮಹಿಳೆಯರು ಈ ರೀತಿ ಕಾಳಜಿ ವಹಿಸಬೇಕು

 

(  ಸೂಚನೆ : ಈ ಲೇಖನವು ಸಾಮಾನ್ಯ ಮಾಹಿತಿಗಾಗಿ ಮಾತ್ರ. ಇದು ಯಾವುದೇ ಔಷಧಿ ಅಥವಾ ಚಿಕಿತ್ಸೆಗೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿರಲು ಸಾಧ್ಯವಿಲ್ಲ. ಹೆಚ್ಚಿನ ವಿವರಗಳಿಗಾಗಿ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
 

Trending News