Night Shower Benefits: ಸ್ನಾನದ ನಂತರ ಪ್ರತಿಯೊಬ್ಬರೂ ಫ್ರೆಶ್ ಫೀಲ್ ಮಾಡುತ್ತಾರೆ. ಬೇಸಿಗೆ ಕಾಲದಲ್ಲಿ ಎಷ್ಟು ಬಾರಿ ಸ್ನಾನ ಮಾಡಿರಬೇಕು ಎಂದು ಗೊತ್ತಿಲ್ಲ. ಆದರೆ ಹಗಲು ಹೊತ್ತು ಸ್ನಾನ ಮಾಡುವ ಬದಲು ರಾತ್ರಿ ಸ್ನಾನ ಮಾಡಿದರೆ ಎಷ್ಟೆಲ್ಲಾ ಲಾಭಗಳು ಸಿಗುತ್ತವೆ ಗೊತ್ತಾ. ಹೀಗೆ ಮಾಡುವುದರಿಂದ ಅನೇಕ ರೋಗಗಳಿಂದ ದೂರವಿರಬಹುದು. ರಕ್ತದೊತ್ತಡವನ್ನು ನಿಯಂತ್ರಿಸುವುದರಿಂದ ಹಿಡಿದು ಚರ್ಮವನ್ನು ಸುಂದರಗೊಳಿಸುವವರೆಗೆ ರಾತ್ರಿಯ ಹೊತ್ತು ಸ್ನಾನ ಮಾಡುವುದು ಉಪಯುಕ್ತವಾಗಿದೆ. ಹಾಗಾದರೆ ಇದರ ಹೊರತಾಗಿ ಇನ್ನೇನು ಪ್ರಯೋಜನಗಳಿವೆ ಎಂಬುದನ್ನು ತಿಳಿಯೋಣ.
ದೇಹ ಮತ್ತು ಮನಸ್ಸು ಶಾಂತವಾಗಿರುತ್ತದೆ: ರಾತ್ರಿಯ ಸ್ನಾನವು ನಿಮ್ಮ ಮನಸ್ಸು ಮತ್ತು ದೇಹವನ್ನು ಶಾಂತಗೊಳಿಸುತ್ತದೆ. ನಿಮ್ಮ ಚಿತ್ತವನ್ನು ಉಲ್ಲಾಸಗೊಳಿಸುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: Amatekai Benefits: ಅಮಟೆಕಾಯಿ ಬರೀ ಉಪ್ಪಿನಕಾಯಿಗೆ ಮಾತ್ರವಲ್ಲ.. ಉತ್ತಮ ಆರೋಗ್ಯಕ್ಕೂ ಸಹಕಾರಿ..!
ಒಳ್ಳೆಯ ನಿದ್ರೆ : ಚೆನ್ನಾಗಿ ನಿದ್ದೆ ಬಾರದಿದ್ದರೆ, ರಾತ್ರಿ ಹೊತ್ತು ಸ್ನಾನ ಮಾಡಿ ನೋಡಿ. ಇದು ಉತ್ತಮ ನಿದ್ದೆಗೆ ಸಹಾಯ ಮಾಡುತ್ತದೆ. ಏಕೆಂದರೆ ರಾತ್ರಿ ಹೊತ್ತು ಸ್ನಾನ ಮಾಡುವುದರಿಂದ ಒತ್ತಡದಿಂದ ಮುಕ್ತರಾಗುತ್ತೀರಿ. ಇದರಿಂದ ನೀವು ಉತ್ತಮ ನಿದ್ರೆ ಮಾಡಬಹುದು.
ತೂಕ ನಿಯಂತ್ರಣ : ರಾತ್ರಿ ಸ್ನಾನ ಮಾಡುವುದರಿಂದ ತೂಕ ಇಳಿಸಬಹುದು. ಅಷ್ಟೇ ಅಲ್ಲ, ಮೈಗ್ರೇನ್, ಮೈ ಕೈ ನೋವು ಮತ್ತು ಕೀಲು ನೋವುಗಳನ್ನು ಸಹ ಕಡಿಮೆ ಮಾಡಬಹುದು.
ಆಯಾಸವೂ ದೂರವಾಗುತ್ತದೆ : ದಿನವಿಡಿ ಕೆಲಸ ಮಾಡಿ ನೀವು ತುಂಬಾ ಸುಸ್ತಾಗಿದ್ದರೆ, ರಾತ್ರಿ ಮಲಗುವ ಮೊದಲು ತಪ್ಪದೇ ಸ್ನಾನ ಮಾಡಿ. ಇದು ನಿಮ್ಮ ಆಯಾಸವನ್ನು ಹೋಗಲಾಡಿಸುತ್ತದೆ ಮತ್ತು ನಿಮ್ಮ ಆಯಾಸ ಕಡಿಮೆ ಆಗುತ್ತದೆ.
ಇದನ್ನೂ ಓದಿ: ರಾತ್ರಿ ನೀರು ಕುಡಿಯುವುದು ಒಳ್ಳೆಯದೋ, ಕೆಟ್ಟದ್ದೋ! ಆರೋಗ್ಯ ತಜ್ಞರು ಹೇಳುವುದೇನು?
ರಕ್ತದೊತ್ತಡ ನಿಯಂತ್ರಣ : ಅಧಿಕ ರಕ್ತದೊತ್ತಡ ಹೊಂದಿರುವ ಜನರು ರಾತ್ರಿ ಸ್ನಾನ ಮಾಡಬೇಕು. ಇದರಿಂದ ಬಿಪಿಕಂಟ್ರೋಲ್ ಮಾಡಬಹುದು. ಸ್ನಾನದ ನಂತರ ನೀವು ಆಯಾಸದಿಂದ ಮುಕ್ತರಾಗುವಿರಿ. ಹೀಗಾಗಿ ನಿಮ್ಮ ಬಿಪಿ ನಿಯಂತ್ರಣದಲ್ಲಿರುತ್ತದೆ.
ಕಣ್ಣುಗಳಿಗೆ ಪ್ರಯೋಜನಕಾರಿ : ರಾತ್ರಿಯ ಹೊತ್ತು ಸ್ನಾನ ಮಾಡುವುದು ಕಣ್ಣುಗಳಿಗೆ ತುಂಬಾ ಪ್ರಯೋಜನಕಾರಿ. ರಾತ್ರಿ ಸ್ನಾನ ಮಾಡುವಾಗ ನಿಮ್ಮ ಕಣ್ಣುಗಳ ಮೇಲೆ ನೀರು ಬಿದ್ದಾಗ ಅವು ಫ್ರೆಶ್ ಫೀಲ್ ಮಾಡುತ್ತವೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.