ಆಲದ ಮರ ಗೊತ್ತು.! ಅದರ ಔಷಧೀಯ ಗುಣ ನಿಮಗೆ ಎಷ್ಟು ಗೊತ್ತು..?

ಆಲದ ಮರ ಹಲವು ಔಷಧೀಯ ಗುಣಗಳನ್ನು ಹೊಂದಿದೆ.ಇದರಲ್ಲಿ ಅಂಥೋಸಯಾನಿಡಿನ್, ಕಿಟೋನ್, ಫಿನಲ್, ಟ್ಯಾನಿನ್, ಸ್ಟೆರಾಲ್, ಫ್ಲೆವನಾಯ್ಡ್ ವಿಶೇಷವಾಗಿ ಕಂಡು ಬರುತ್ತವೆ. ಆಲದ ಎಲೆಗಳಲ್ಲಿ ಪ್ರೊಟೀನ್ (Protein), ಫೈಬರ್, ಕ್ಯಾಲ್ಸಿಯಂ ಮತ್ತು ರಂಜಕದ ಅಂಶಗಳು ವಿಶೇಷವಾಗಿ ಕಂಡು ಬರುತ್ತವೆ.

Written by - Ranjitha R K | Last Updated : May 16, 2021, 02:48 PM IST
  • ಆಲದಮರ ಅಥವ ವಟ ವೃಕ್ಷ ಎಲ್ಲರಿಗೂ ಗೊತ್ತು.!
  • ಆಲದ ಮರ ಔಷಧೀಯ ಗುಣಗಳ ಬಹುದೊಡ್ಡ ಆಲಯ
  • ವಟವೃಕ್ಷದ ಔಷಧೀಯ ಮಹತ್ವದ ಬಗ್ಗೆ ಇಲ್ಲಿ ಹೇಳಿದ್ದೇವೆ.
ಆಲದ ಮರ ಗೊತ್ತು.! ಅದರ ಔಷಧೀಯ ಗುಣ ನಿಮಗೆ ಎಷ್ಟು ಗೊತ್ತು..? title=
ಆಲದ ಮರ ಔಷಧೀಯ ಗುಣಗಳ ಬಹುದೊಡ್ಡ ಆಲಯ (file photo)

ನವದೆಹಲಿ : ಆಲದ ಮರ (Banyan tree) ಎಲ್ಲರಿಗೂ ಗೊತ್ತು. ವಟವೃಕ್ಷ ಯಾರಿಗೆ ತಿಳಿದಿಲ್ಲ ಹೇಳಿ. ಹಿಂದುಗಳಿಗಿದು ಪೂಜನೀಯ ಮರ. ಇದು ರಾಷ್ಟ್ರೀಯ ವೃಕ್ಷವೂ ಹೌದು. ಭಾರತೀಯರ ಸಂಸ್ಕೃತಿ, ಜನ ಜೀವನ, ಕಥೆ, ಮಹಾಕಥೆಗಳು ಈ ವಟವೃಕ್ಷದೊಳಗೆ ಸೇರಿಕೊಂಡಿವೆ. ಮಹಾ ವಟವೃಕ್ಷ ಮಕ್ಕಳ ಪಾಲಿಗೆ ಅಚ್ಚರಿಯೂ ಹೌದು.

ಆಲದ ಮರ ಔಷಧಿಗಳ ಆಗರ :
ನಿಮಗೆ ಗೊತ್ತಾ..? ಆಲದ ಮರ (Banyan tree ) ಹಲವು ಔಷಧೀಯ ಗುಣಗಳನ್ನು ಹೊಂದಿದೆ.ಇದರಲ್ಲಿ ಅಂಥೋಸಯಾನಿಡಿನ್, ಕಿಟೋನ್, ಫಿನಲ್, ಟ್ಯಾನಿನ್, ಸ್ಟೆರಾಲ್, ಫ್ಲೆವನಾಯ್ಡ್ ವಿಶೇಷವಾಗಿ ಕಂಡು ಬರುತ್ತವೆ. ಆಲದ ಎಲೆಗಳಲ್ಲಿ ಪ್ರೊಟೀನ್ (Protein), ಫೈಬರ್, ಕ್ಯಾಲ್ಸಿಯಂ ಮತ್ತು ರಂಜಕದ ಅಂಶಗಳು ವಿಶೇಷವಾಗಿ ಕಂಡು ಬರುತ್ತವೆ. ಆಲದ ಮರದ ಔಷಧೀಯ  ಪ್ರಯೋಜನಗಳ ಬಗ್ಗೆ ನೋಡೋಣ

ಇದನ್ನೂ ಓದಿ : Benefits of Milk-Dates : ಪುರುಷರೆ ಹಾಲಿನೊಂದಿಗೆ ಸೇವಿಸಿ ಖರ್ಜೂರ : ಇಲ್ಲಿದೆ ಅದರ ಅದ್ಬುತ ಪ್ರಯೋಜನಗಳು!

1. ಹಲ್ಲು ಮತ್ತು ಒಸಡುಗಳ ರಕ್ಷಕ :
ಆಲದ ಬೇರನ್ನು ಜಜ್ಜಿ ಅದರಿಂದ ಹಲ್ಲುಜ್ಜಬಹುದು. ಹೀಗೆ ಮಾಡಿದರೆ ಹಲ್ಲು ನೋವು (tooth pain) , ಒಸಡುನೋವು ಸಮಸ್ಯೆ ದೂರವಾಗುತ್ತದೆ. ಯಾಕೆಂದರೆ ಇದರಲ್ಲಿ ಆಂಟಿ ಆಕ್ಸಿಡೆಂಟ್ (anti oxidant), ಆಂಟಿ ಮೈಕ್ರೋಬಿಯಲ್ ಗುಣ ಇರುತ್ತೆ. ಇವು ಹಲ್ಲು ಮತ್ತು ಒಸಡುಗಳ ಸಮಸ್ಯೆಯನ್ನು ದೂರಮಾಡುತ್ತದೆ.

2. ಚರ್ಮದ ಗುಳ್ಳೆಗಳಿಗೆ ರಾಮಬಾಣ:
ಚರ್ಮದಲ್ಲಿ ಉರಿ ಗುಳ್ಳೆಗಳು ಏಳುತ್ತಿದ್ದರೆ, ಅದಕ್ಕೆ ರಾಮಬಾಣ ಆಲದ ಎಲೆ. ಆಲದ ಎಲೆಯನ್ನು ಜಜ್ಜಿ ಅದರ ರಸ ತೆಗೆದು ಉರಿಗುಳ್ಳೆಗಳು ಎದ್ದಿರುವ ಜಾಗಕ್ಕೆ  ಮೆಲ್ಲಗೆ ಮಾಲಿಶ್ ಮಾಡುತ್ತಿದ್ದರೆ, ಉರಿಗುಳ್ಳೆಗಳು ಮಂಗಮಾಯ. ಆಲದ ಬೇರನ್ನು ಜಜ್ಜಿ ಲೇಪ ಮಾಡಿಯೂ ಚರ್ಮಕ್ಕೆ ಹಚ್ಚಬಹುದು. ಇದರಿಂದಲೂ ಚರ್ಮಾರೋಗ್ಯ (Skin care) ಹೆಚ್ಚುತ್ತದೆ. ಆಲದ ಮರದಲ್ಲಿ ಆಂಟಿ ಮೈಕ್ರೋಬಿಯಲ್, ಬ್ಯಾಕ್ಟೀರಿಯ (Bacteria) ವಿನಾಶಕ ಗುಣಗಳಿರುತ್ತವೆ. ಇದರಲ್ಲಿ ಆಂಟಿ ಇನ್‍ಫ್ಲೇಮಟರಿ ಗುಣ ಇರುವುದರಿಂದ ಇವು ನೋವು ಶಮನ ಮಾಡುತ್ತದೆ. 

ಇದನ್ನೂ ಓದಿ : Flax Seeds Benefits : BP ಸಮಸ್ಯೆ ಇರುವವರು ತಪ್ಪದೆ ಸೇವಿಸಿ ಅಗಸೆ ಬೀಜ! ಇಲ್ಲಿದೆ ಅದರ ಪ್ರಯೋಜನಗಳು!

3. ಗಂಟು ನೋವು ನಿವಾರಕ :
ವಟವೃಕ್ಷದ ಎಲೆಯಲ್ಲಿ ಗಂಟು ನೋವು (Joint pain) ನಿವಾರಿಸುವ ಕ್ಷಮತೆ ಇದೆ. ಆಲದ ಮರದ ಎಲೆಯನ್ನು ಜಜ್ಜಿ ಅದರ ರಸ ತೆಗೆದು ನೋವು, ಬಾವು ಇರುವ ಜಾಗಕ್ಕೆ ಹಚ್ಚಿ, ಮೆಲ್ಲಗೆ ಮಾಲಿಶ್ ಮಾಡಬೇಕು. ನೋವು ಮತ್ತು ಬಾವು ಉಪಶಮನವಾಗುತ್ತದೆ. ಇದರಲ್ಲಿ ಆಂಟಿ ಇನ್ ಫ್ಲೇಮಟರಿ (anti inflammatory) ಗುಣ ಇದೆ. ಇದು ನೋವು ಮತ್ತು ಬಾವು  ಎರಡನ್ನೂ ಕಡಿಮೆ ಮಾಡುತ್ತದೆ.

4. ತುರಿಕೆ ನಿವಾರಕ :
ಚರ್ಮದಲ್ಲಿ ತುರಿಕೆ (itching) ಮುಂತಾದ ಸಮಸ್ಯೆ ಇದ್ದರೆ ಆಲದ ಮರದ ಎಲೆ ಅದಕ್ಕೆ ಉಪಶಮನ ನೀಡುತ್ತದೆ. ಆಲದ ಎಲೆ ಅಥವಾ ತೊಗಟೆ ತೆಗೆದು ಅದನ್ನು ಚೆನ್ನಾಗಿ ಜಜ್ಜಿ ರಸ ತೆಗೆದು ತುರಿಕೆಯ ಜಾಗಕ್ಕೆ ಹಚ್ಚಿದರೆ ತುರಿಕೆ ಕಡಿಮೆಯಾಗುತ್ತದೆ. ವಟವೃಕ್ಷದಲ್ಲಿ ಆಂಟಿ ಮೈಕ್ರೋಬಿಯಲ್ ಗುಣ ಇರುತ್ತದೆ. ಇದು ತುರಿಕೆ ನಿವಾರಿಸುತ್ತದೆ.

ಇದನ್ನೂ ಓದಿ : Protein Intake During Covid-19 Infection: ಕೊರೊನಾದಿಂದ ಚೇತರಿಸಿಕೊಳ್ಳಲು ಅತ್ಯಾವಶ್ಯಕ Protein, ಶಾಕಾಹಾರಿಗಳು ಈ ಆಹಾರಗಳನ್ನು ಸೇವಿಸಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News