Coconut Water Benefits In Covid Era: ಕರೋನಾ ಯುಗದಲ್ಲಿ ಎಳನೀರಿನ ಪ್ರಯೋಜನ

ಕರೋನಾದ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳವಾದ ನಂತರ, ತೆಂಗಿನ ನೀರಿನ ಬೇಡಿಕೆಯೂ ಹೆಚ್ಚಾಗಿದೆ.

Written by - Yashaswini V | Last Updated : Apr 29, 2021, 03:23 PM IST
  • ಎಳನೀರು ದೇಹಕ್ಕೆ ತುಂಬಾ ಪ್ರಯೋಜನಕಾರಿ
  • ಎಳನೀರು ಅಧಿಕ ಪ್ರಮಾಣದ ಎಲೆಕ್ಟ್ರೋಲೈಟ್ಸ್ ಅನ್ನು ಹೊಂದಿದೆ
  • ಇದು ದೇಹದ ದೌರ್ಬಲ್ಯ ಮತ್ತು ಆಯಾಸವನ್ನು ನಿವಾರಿಸಲು ಸಹಾಯ ಮಾಡುತ್ತದೆ
Coconut Water Benefits In Covid Era: ಕರೋನಾ ಯುಗದಲ್ಲಿ ಎಳನೀರಿನ ಪ್ರಯೋಜನ title=
Benefits of Coconut Water

ಬೆಂಗಳೂರು: ಕರೋನಾದ ಎರಡನೇ ತರಂಗ ಪ್ರಾರಂಭವಾದ ನಂತರ ಎಳನೀರಿನ ಬೇಡಿಕೆ  ಇದ್ದಕ್ಕಿದ್ದಂತೆ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಎಳನೀರಿನ ಬೆಲೆಯೂ ಆಕಾಶವನ್ನು ಮುಟ್ಟುತ್ತಿದೆ. ಹತ್ತು ದಿನಗಳ ಹಿಂದೆ 30 ರಿಂದ 40 ರೂಪಾಯಿಗೆ ದೊರೆಯುತ್ತಿದ್ದ ಎಳನೀರು ಈಗ 70 ರಿಂದ 80 ರೂಪಾಯಿಗಳವರೆಗೆ ಮಾರಾಟವಾಗುತ್ತಿದೆ.

ವಾಸ್ತವವಾಗಿ ದೇಶದಲ್ಲಿ ಕರೋನಾ ಸೋಂಕಿತರ ಸಂಖ್ಯೆ ಹೆಚ್ಚಾದಂತೆ ಎಳನೀರಿನ (Coconut Water) ಬೇಡಿಕೆಯೂ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಎಲ್ಲರಿಗೂ ತಿಳಿದಿರುವಂತೆ ಕರೋನಾ ರೋಗಿಗಳಿಗಾಗಲೀ ಅಥವಾ ಇತರ ಯಾವುದೇ ರೋಗದಿಂದ ಬಳಲುತ್ತಿರುವವರಿಗಾಗಲಿ ಆಸ್ಪತ್ರೆಗಳಲ್ಲಿ ಸ್ಥಳವೇ ಇಲ್ಲದಂತಾಗಿದೆ. ಈ ಹಿನ್ನಲೆಯಲ್ಲಿ ಕರೋನಾ ಸೋಂಕಿಗೆ ಒಳಗಾಗಿರುವವರನ್ನೂ ಕೂಡ ಸಮಸ್ಯೆ ಇಲ್ಲದಿದ್ದರೆ ಹೋಂ ಕ್ವಾರೆಂಟೈನ್‌ನಲ್ಲಿ ಚಿಕಿತ್ಸೆ ಪಡೆಯುವಂತೆ ಸೂಚಿಸಲಾಗುತ್ತಿದೆ. ಈ ಮಧ್ಯೆ ಕರೋನಾ ಸೋಂಕಿತರ ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಎಳನೀರು ಕೂಡ ಬಹಳ ಪ್ರಯೋಜನಕಾರಿಯಾಗಿದೆ.ಇದು ರೋಗಗಳ ವಿರುದ್ಧ ಹೋರಾಡುವ ದೇಹದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ, ಅಂದರೆ, ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಸಾಂಕ್ರಾಮಿಕ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ.  ಹಾಗಾಗಿಯೇ ಎಳನೀರಿನ ಬೇಡಿಕೆ ಮೊದಲಿಗಿಂತ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ - ಕರೋನಾ ಎರಡನೇ ಅಲೆಯಿಂದ ಬಚಾವಾಗಲು ಏನು ತಿನ್ನಬೇಕು ಏನು ತಿನ್ನಬಾರದು? ಏನು ಹೇಳುತ್ತೆ WHO

ಗಾಜಿಯಾಬಾದ್‌ನಲ್ಲಿ ಎಳನೀರಿನ ಮಾರಾಟಗಾರರು ಈ ಬಗ್ಗೆ ಪ್ರತಿಕ್ರಿಯಿಸಿದ್ದು,  ಕರೋನಾದ ಎರಡನೇ ತರಂಗದಲ್ಲಿ (Corona Second Wave) ಎಳನೀರಿನ ಮಾರಾಟವು ಇದ್ದಕ್ಕಿದ್ದಂತೆ ದ್ವಿಗುಣಗೊಂಡಿದೆ ಎಂದು ಹೇಳಿದರು. ಸೋಂಕಿನ ಎರಡನೇ ತರಂಗದಲ್ಲಿ, ಜನರು ಮೊದಲಿಗೆ ಒಂದೆರಡು ಎಳನೀರನ್ನು ಮಾತ್ರ ಕೊಳ್ಳುತ್ತಿದ್ದರು. ಆದರೆ ಈಗ 5 ರಿಂದ 6 ತೆಂಗಿನಕಾಯಿಗಳನ್ನು ಕೊಂಡೊಯ್ಯುತ್ತಿದ್ದಾರೆ ಎಂದವರು ತಿಳಿಸಿದರು.

ಇನ್ನೋರ್ವ ಎಳನೀರಿನ ವ್ಯಾಪಾರಿ ಮಾತನಾಡಿ, ನಾವು ಮಂಡಿಯಿಂದ 75 ರೂಪಾಯಿಗೆ ಎಳನೀರನ್ನು ಖರೀದಿಸುತ್ತಿದ್ದು, 80 ರೂಪಾಯಿಗೆ ಮಾರಾಟ ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ - Who Should Not Take Vaccine: ಇಂತಹ ಜನರು ಕೊರೊನಾ ಲಸಿಕೆ ಹಾಕಿಸಿಕೊಳ್ಳಬಾರದು! ಕಾರಣ ಇಲ್ಲಿದೆ

ಕರೋನಾ ಯುಗದಲ್ಲಿ ಎಳನೀರಿನ ಪ್ರಯೋಜನಗಳಿವು:
>> ಎಳನೀರು ದೇಹಕ್ಕೆ ತುಂಬಾ ಪ್ರಯೋಜನಕಾರಿ. 
>> ಇದು ಅಧಿಕ ಪ್ರಮಾಣದ ಎಲೆಕ್ಟ್ರೋಲೈಟ್ಸ್ ಅನ್ನು ಹೊಂದಿದೆ.
>> ಇದು ದೇಹದ ದೌರ್ಬಲ್ಯ ಮತ್ತು ಆಯಾಸವನ್ನು ನಿವಾರಿಸಲು ಸಹಾಯ ಮಾಡುತ್ತದೆ.
>> ಎಳನೀರು ಸುಮಾರು 600 ಮಿಲಿಗ್ರಾಂ ಪೊಟ್ಯಾಸಿಯಮ್ ಅನ್ನು ಹೊಂದಿರುತ್ತದೆ, ಇದು ದೇಹದ ಪ್ರತಿರಕ್ಷೆಯನ್ನು ಹೆಚ್ಚಿಸುತ್ತದೆ, ಅಂದರೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. 
>> ತಜ್ಞರ ಪ್ರಕಾರ, ನಾವು ಎಳನೀರನ್ನು ಆಹಾರದೊಂದಿಗೆ ಕುಡಿಯಬೇಕು. 
>> ಎಳನೀರು ರಕ್ತದೊತ್ತಡವನ್ನು ಸಾಮಾನ್ಯವಾಗಿಸಲು ಸಹಾಯ ಮಾಡುತ್ತದೆ. ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವ ಜನರು ಎಳನೀರನ್ನು ತೆಗೆದುಕೊಳ್ಳಬೇಕು, ಆದರೆ ಅತಿಯಾದ ಸೇವನೆ ಲೋ ಬಿಪಿ ಸಮಸ್ಯೆಗೆ ಕಾರಣವಾಗಬಹುದು ಎಂಬುದನ್ನು ನೆನಪಿನಲ್ಲಿಡಿ. ಆದ್ದರಿಂದ ನೀವು ಅದನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸುವುದು ಬಹಳ ಮುಖ್ಯ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News