ಕೂದಲು ಮೊಣಗಂಟಿನವರೆಗೆ ಬೆಳೆಯುವಂತೆ ಮಾಡಲು ಬೆಸ್ಟ್ ಮನೆ ಮದ್ದುಗಳಿವು !

ಆರೋಗ್ಯಕರ ಜೀವನಶೈಲಿಯೊಂದಿಗೆ, ಸರಿಯಾದ ಆಹಾರ ಸೇವಿಸುವ ಮೂಲಕ  ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಕೆಲವು ನೈಸರ್ಗಿಕ ಗಿಡಮೂಲಿಕೆಗಳನ್ನು ಹಚ್ಚುವ ಮೂಲಕ ಕೂದಲನ್ನು ಬಲಪಡಿಸಬಹುದು.

Written by - Ranjitha R K | Last Updated : Dec 21, 2023, 01:46 PM IST
  • ಕೂದಲು ಬೆಳವಣಿಗೆಗೆ ಗಿಡಮೂಲಿಕೆಗಳು
  • ಈ ಮೂಲಕ ಕೂದಲಿನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಬಹುದು.
  • ಇದಕ್ಕೆ ತಗಲುವ ಖರ್ಚು ಕೂಡಾ ತೀರಾ ಕಡಿಮೆ
ಕೂದಲು ಮೊಣಗಂಟಿನವರೆಗೆ ಬೆಳೆಯುವಂತೆ ಮಾಡಲು ಬೆಸ್ಟ್ ಮನೆ ಮದ್ದುಗಳಿವು !  title=

ಬೆಂಗಳೂರು : ಕೂದಲು ತುಂಬಾ ಉದುರುತ್ತಿದೆ, ಕೂದಲು ಉದ್ದ ಬೆಳೆಯುತ್ತಿಲ್ಲ, ಏನು ಮಾಡಿದರೂ ತಲೆಹೊಟ್ಟು ಸಮಸ್ಯೆಗೆ ಕೊನೆಯೇ ಇಲ್ಲ ಎಂದು ನಮ್ಮಲ್ಲಿ ಬಹುತೇಕ ಮಂದಿ ಹೇಳುತ್ತಿರುವುದನ್ನು ನಾವು ಕೇಳುತ್ತೇವೆ. ಪ್ರತಿಯೊಬ್ಬರೂ ಹೊಳೆಯುವ, ಕಾಂತಿಯುತವಾದ, ಉದ್ದನೆಯ, ಆರೋಗ್ಯಕರ ಕಪ್ಪು ಕೂದಲನ್ನು ಹೊಂದಲು ಬಯಸುತ್ತಾರೆ. ಆದರೆ ಆರೋಗ್ಯಕರ ಜೀವನಶೈಲಿಯೊಂದಿಗೆ, ಸರಿಯಾದ ಆಹಾರ ಕ್ರಮವನ್ನು ಅನುಸರಿಸುತ್ತಾ ಬಂದರೆ ನಿಮ್ಮ ಮನಸ್ಸು ಬಯಸುವ ರೀತಿಯ ಕೂದಲನ್ನು ಹೊಂದುವುದು ಸಾಧ್ಯವಾಗುತ್ತದೆ. ಇದರೊಂದಿಗೆ, ಕೆಲವು ನೈಸರ್ಗಿಕ ಗಿಡಮೂಲಿಕೆಗಳನ್ನು  ಹಚ್ಚುವ ಮೂಲಕ ಕೂದಲಿನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಬಹುದು. ವಿಶೇಷವೆಂದರೆ ಈ ರಾಸಾಯನಿಕ ಮುಕ್ತ ಗಿಡಮೂಲಿಕೆಗಳು ಕೂದಲಿನ ಮೇಲೆ ಯಾವುದೇ ಅಡ್ಡ ಪರಿಣಾಮಗಳನ್ನು ಬೀರುವುದಿಲ್ಲ. ಬಳಸಲು ತುಂಬಾ ಸುಲಭವಾಗಿದ್ದು, ಇದಕ್ಕೆ ತಗಲುವ ಖರ್ಚು ಕೂಡಾ ತೀರಾ ಕಡಿಮೆ. 

ಕೂದಲು ಬೆಳವಣಿಗೆಗೆ ಗಿಡಮೂಲಿಕೆಗಳು : 
ನೆಲ್ಲಿಕಾಯಿ : 

ನೆಲ್ಲಿಕಾಯಿ  ಒಂದು ಸೂಪರ್‌ಫುಡ್ ಆಗಿದೆ. ಆಯುರ್ವೇದದಲ್ಲಿ ಇದನ್ನು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಕರೆಯಲಾಗುತ್ತದೆ. ಇದು ನಿಮ್ಮ ಕೂದಲನ್ನು ಮತ್ತು ಉಗುರುಗಳನ್ನು ಪೋಷಿಸುವ ಶಕ್ತಿ ಹೊಂದಿದೆ. ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ನೆಲ್ಲಿಕಾಯಿಯನ್ನು  ನಿಯಮಿತವಾಗಿ ತಿಂದರೆ ಕೂದಲು ಸದೃಢವಾಗುತ್ತದೆ. ಅಷ್ಟೇ ಅಲ್ಲ ಕೂದಲಿನ ಬೆಳವಣಿಗೆಯನ್ನೂ ಹೆಚ್ಚಿಸುತ್ತದೆ. ನಿಮ್ಮ ಕೂದಲು  ಕಿರಿ ವಯಸ್ಸಿನಲ್ಲಿಯೇ ಬಿಳಿ ಬಣ್ಣಕ್ಕೆ ತಿರುಗುತ್ತಿದ್ದರೆ ಆ ಸಮಸ್ಯೆಯನ್ನು  ಪರಿಹರಿಸುತ್ತದೆ.  

ಇದನ್ನೂ ಓದಿ ಚಳಿಗಾಲದಲ್ಲಿ ಬೀಟ್ರೂಟ್ ಜ್ಯೂಸ್ ನೀಡುತ್ತೆ ಆರೋಗ್ಯಕ್ಕೆ ಬೂಸ್ಟ್‌..!

ಭೃಂಗರಾಜ್ ತುಂಬಾ ಪ್ರಯೋಜನಕಾರಿ : 
ಭೃಂಗರಾಜ್ ಕೂದಲಿಗೆ ಅದ್ಭುತವಾದ ಗಿಡಮೂಲಿಕೆಗಳಲ್ಲಿ ಒಂದಾಗಿದೆ. ಭೃಂಗರಾಜ ಎಣ್ಣೆಯನ್ನು ಕೂದಲಿಗೆ ನಿಯಮಿತವಾಗಿ ಹಚ್ಚುವುದರಿಂದ ಕೂದಲು  ಬೇರಿನಿಂದಲೇ ಗಟ್ಟಿಯಾಗುತ್ತದೆ. ಇದರೊಂದಿಗೆ ಇದರ ಪೌಡರ್ ಸುಲಭವಾಗಿ ಲಭ್ಯವಿದ್ದು, ಇದರ ಪ್ಯಾಕ್ ಅನ್ನು ನಿಮ್ಮ ಕೂದಲಿಗೆ ಹಚ್ಚಿಕೊಳ್ಳಬಹುದು. ಇದು ಕೂದಲಿನ ಬೇರುಗಳನ್ನು ಬಲಪಡಿಸುತ್ತದೆ ಮತ್ತು ನೆತ್ತಿಯ ರಕ್ತ ಪರಿಚಲನೆ ಸುಧಾರಿಸಿ, ಕೂದಲನ್ನು ಆರೋಗ್ಯಕರವಾಗಿರಿಸುತ್ತದೆ.  ವಾರಕ್ಕೆ ಎರಡರಿಂದ ಮೂರು ಬಾರಿ ಭೃಂಗರಾಜ್ ಅನ್ನು ಕೂದಲಿಗೆ ಹಚ್ಚಿದರೆ ಬೋಳು ತಲೆಯ ಸಮಸ್ಯೆಯೂ ದೂರವಾಗುತ್ತದೆ.

ನೈಸರ್ಗಿಕ ಕಂಡಿಷನರ್ ಅಲೋವೆರಾ : 
ಅಲೋವೆರಾ ಚರ್ಮಕ್ಕೆ ಮಾತ್ರವಲ್ಲದೆ ಕೂದಲಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ನೆತ್ತಿಯ ಪಿಹೆಚ್ ಮಟ್ಟವನ್ನು ಸಮತೋಲನಗೊಳಿಸುತ್ತದೆ. ನೈಸರ್ಗಿಕ ಕಂಡೀಶನರ್ ಆಗಿಯೂ ಕೆಲಸ ಮಾಡುತ್ತದೆ. ಇದು ಕೂದಲಿನ ಶುಷ್ಕತೆಯನ್ನು ಹೋಗಲಾಡಿಸುತ್ತದೆ ಮತ್ತು ಸೀಳು ತುದಿಗಳ ಸಮಸ್ಯೆಯನ್ನು ನಿವಾರಿಸುತ್ತದೆ. 

ಇದನ್ನೂ ಓದಿ : Covid-19: ತಲ್ಲಣ ಸೃಷ್ಟಿಸಿದ ಕೋವಿಡ್ ಜೆಎನ್.1 ರೂಪಾಂತರ- ಅಗತ್ಯವಿದೆಯೇ ಬೂಸ್ಟರ್ ಡೋಸ್!

ಮೆಂತ್ಯೆ : 
ಮೆಂತ್ಯೆ ನಿಮ್ಮ ಕೂದಲನ್ನು ಬಲಪಡಿಸುತ್ತದೆ.  ಇದು ಉರಿಯೂತ ನಿವಾರಕ, ಉತ್ಕರ್ಷಣ ನಿರೋಧಕ ಮತ್ತು ಶಿಲೀಂಧ್ರ ವಿರೋಧಿ ಗುಣಗಳನ್ನು ಹೊಂದಿದೆ. ಇದರೊಂದಿಗೆ, ಇದು ಪ್ರೋಟೀನ್ ಮತ್ತು ನಿಕೋಟಿನಿಕ್ ಆಮ್ಲವನ್ನು ಹೊಂದಿರುತ್ತದೆ. ಈ ಕಾರಣಕ್ಕಾಗಿಯೇ ಈ ಸಣ್ಣ ಧಾನ್ಯಗಳು ಕೂದಲಿನ ಪ್ರಮುಖ ಸಮಸ್ಯೆಗಳನ್ನು ಪರಿಹರಿಸಲು ಸಮರ್ಥವಾಗಿವೆ. ಇವು ಕೂದಲನ್ನು ಬಲಪಡಿಸುತ್ತದೆ, ತಲೆಹೊಟ್ಟು ನಿವಾರಿಸುತ್ತದೆ, ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಮತ್ತು ಅವುಗಳಿಗೆ ಹೊಳಪನ್ನು ನೀಡುತ್ತದೆ. ಮೆಂತ್ಯೆಯನ್ನು ರಾತ್ರಿಯಿಡೀ ನೆನೆಸಿ, ಬೆಳಿಗ್ಗೆ ಅದನ್ನು ಪೇಸ್ಟ್ ಮಾಡಿ ಮತ್ತು ನಿಮ್ಮ ಕೂದಲಿಗೆ ಹಚ್ಚಿ. ಈ ಪೇಸ್ಟ್‌ಗೆ ಎರಡು ಚಮಚ ಮೊಸರನ್ನು ಸೇರಿಸಬಹುದು. ಮೆಂತ್ಯೆ  ಪೇಸ್ಟ್ ಅನ್ನು ಕೂದಲಿಗೆ ಹಚ್ಚುವುದು ಸಾಧ್ಯವಾಗದಿದ್ದರೆ, ರಾತ್ರಿ ಪೂರ್ತಿ ನೀರಿನಲ್ಲಿ ನೆನೆಸಿಟ್ಟ ಮೆಂತ್ಯೆ ಬೀಜಗಳನ್ನು ಎರಡು ಕಪ್ ನೀರಿನಲ್ಲಿ ಕುದಿಸಿ, ನಂತರ ಈ ನೀರಿನಿಂದ ನಿಮ್ಮ ಕೂದಲನ್ನು ತೊಳೆಯಿರಿ. ಹೀಗೆ ಮಾಡಿದರೂ  ಕೂದಲಿಗೆ ನೈಸರ್ಗಿಕ ಹೊಳಪು ಸಿಗುತ್ತದೆ. 

ತಲೆಹೊಟ್ಟು ನಿವಾರಣೆಗೆ ಬೇವು : 
ಕೆಲವೊಮ್ಮೆ ನೆತ್ತಿಯ ಸೋಂಕು ಮತ್ತು ತಲೆಹೊಟ್ಟಿನ ಕಾರಣ ಕೂದಲು ಉದುರಲು ಆರಂಭವಾಗುತ್ತದೆ. ಬೇವಿನ ಎಲೆಗಳು ಶಕ್ತಿಯುತವಾದ ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿಫಂಗಲ್ ಗುಣಗಳನ್ನು ಹೊಂದಿವೆ. ಇದರಿಂದಾಗಿ ನಿಮ್ಮ ತಲೆ ಮತ್ತು ಕೂದಲನ್ನು ಚೆನ್ನಾಗಿ ಸ್ವಚ್ಛವಾಗುತ್ತದೆ. ಇದು  ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಕೂದಲಿಗೆ ಬೇವಿನ ಪೇಸ್ಟ್ ಅಥವಾ  ಬೇವಿನ ಎಣ್ಣೆಯನ್ನು ಹಚ್ಚಬಹುದು.  

 

 ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News