ಎಳನೀರಿನ ಜೊತೆ ತುಳಸಿ ಬೀಜ ಬೆರೆಸಿ ಕುಡಿದರೆ ಶಾಶ್ವತವಾಗಿ ದೂರವಾಗುವುದು ಈ ಆರೋಗ್ಯ ಸಮಸ್ಯೆಗಳು

Tulsi Seed Health Benefits: ತುಳಸಿ ಗಿಡ, ತುಳಸಿ ಬೀಜಗಳು ಮತ್ತು ತುಳಸಿ ಎಲೆಗಳು ಸಹ ಅನೇಕ ರೋಗಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ತುಳಸಿ ಸಸ್ಯದ ಜಾತಿಯಿಂದ ಸಬ್ಜಾ ಬೀಜಗಳನ್ನು ಪಡೆಯಲಾಗುತ್ತದೆ. ಇದನ್ನು ಸಬ್ಜಾ ಬೀಜ ಎಂದು ಕರೆಯಲಾಗುತ್ತದೆ.

Written by - Bhavishya Shetty | Last Updated : Dec 18, 2023, 10:54 PM IST
    • ತುಳಸಿ ಎಲೆಗಳು ಸಹ ಅನೇಕ ರೋಗಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ
    • ತುಳಸಿ ಬೀಜಗಳಲ್ಲಿ ಪ್ರೋಟೀನ್ ಸಮೃದ್ಧವಾಗಿ ಕಂಡುಬರುತ್ತದೆ
    • ತೂಕ ಇಳಿಕೆಯಲ್ಲೂ ತುಳಸಿ ಬೀಜಗಳು ನಿಮಗೆ ಪ್ರಯೋಜನಕಾರಿಯಾಗಿದೆ
ಎಳನೀರಿನ ಜೊತೆ ತುಳಸಿ ಬೀಜ ಬೆರೆಸಿ ಕುಡಿದರೆ ಶಾಶ್ವತವಾಗಿ ದೂರವಾಗುವುದು ಈ ಆರೋಗ್ಯ ಸಮಸ್ಯೆಗಳು title=
Coconut water basil seed

Tulsi Seed Health Benefits: ತುಳಸಿ ಸಾಮಾನ್ಯವಾಗಿ ಭಾರತೀಯ ಮನೆಗಳಲ್ಲಿ ಕಂಡುಬರುವ ಪವಿತ್ರ ಸಸ್ಯವಾಗಿದೆ. ಹಿಂದೂ ಧರ್ಮದವರ ಮನೆಯಲ್ಲಿ ತುಳಸಿ ಗಿಡವನ್ನು ನೆಟ್ಟು ಪ್ರತೀದಿನ ಪೂಜೆ ಮಾಡಲಾಗುತ್ತದೆ. ಇನ್ನು ತುಳಸಿ ತನ್ನೊಳಗೆ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ.

ಇದನ್ನೂ ಓದಿ: ಭಾರತಕ್ಕೆ ಮೋಸ್ಟ್ ವಾಂಟೆಂಡ್ ಉಗ್ರ ದಾವೂದ್ ಇಬ್ರಾಹಿಂ ನಿಜವಾದ ವಯಸ್ಸೆಷ್ಟು?

ತುಳಸಿ ಗಿಡ, ತುಳಸಿ ಬೀಜಗಳು ಮತ್ತು ತುಳಸಿ ಎಲೆಗಳು ಸಹ ಅನೇಕ ರೋಗಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ತುಳಸಿ ಸಸ್ಯದ ಜಾತಿಯಿಂದ ಸಬ್ಜಾ ಬೀಜಗಳನ್ನು ಪಡೆಯಲಾಗುತ್ತದೆ. ಇದನ್ನು ಸಬ್ಜಾ ಬೀಜ ಎಂದು ಕರೆಯಲಾಗುತ್ತದೆ.

ತುಳಸಿ ಎಲೆಗಳನ್ನು ಅನೇಕ ರೋಗಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಆದರೆ ತುಳಸಿ ಬೀಜಗಳ ಪ್ರಯೋಜನದ ಬಗ್ಗೆ ನಿಮಗೆ ತಿಳಿದಿದೆಯೇ?

ತುಳಸಿ ಬೀಜಗಳಲ್ಲಿ ಪ್ರೋಟೀನ್, ವಿಟಮಿನ್‌, ಫೈಬರ್, ಒಮೆಗಾ ಮತ್ತು ಕೊಬ್ಬಿನಾಮ್ಲಗಳು ಸಮೃದ್ಧವಾಗಿ ಕಂಡುಬರುತ್ತದೆ.  ಇವು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಇದನ್ನು ಎಳನೀರಿನ ಜೊತೆ ಬೆರೆಸಿ ಕುಡಿದರೆ ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಕೆಲಸ ಮಾಡುತ್ತವೆ.

ಇನ್ನು ತೂಕ ಇಳಿಕೆಯಲ್ಲೂ ತುಳಸಿ ಬೀಜಗಳು ನಿಮಗೆ ಪ್ರಯೋಜನಕಾರಿಯಾಗಿದೆ. ಸ್ಥೂಲಕಾಯತೆ ಅಥವಾ ಹಠಮಾರಿ ದೇಹದ ಕೊಬ್ಬನ್ನು ಇಳಿಸಲು ಎಳನೀರಿಗೆ ತುಳಸಿ ಬೀಜಗಳನ್ನು ಬೆರೆಸಿ ಕುಡಿಯಬಹುದು.

ತುಳಸಿ ಬೀಜಗಳಲ್ಲಿ ದೇಹವನ್ನು ತಂಪಾಗಿಸುವ ಶಕ್ತಿಯಿದೆ. ಹೊಟ್ಟೆಯ ಗ್ಯಾಸ್ ಸಮಸ್ಯೆಗೆ ಈ ಬೀಜಗಳ ಬಳಕೆ ಪ್ರಯೋಜನಕಾರಿ. ಒಂದು ಲೋಟ ಹಾಲಿನೊಂದಿಗೆ ಅಥವಾ ಎಳನೀರಿನೊಂದಿಗೆ ಒಂದು ಚಮಚ ತುಳಸಿ ಬೀಜಗಳನ್ನು ಮಿಕ್ಸ್ ಮಾಡಿ ಕುಡಿಯಿರಿ. ಇದು ಹೊಟ್ಟೆ ಉರಿ, ಅಜೀರ್ಣ ಮತ್ತು ಆಮ್ಲೀಯತೆಯಂತಹ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ.

ತುಳಸಿ ಎಲೆಗಳು ಅನೇಕ ರೋಗಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ತ್ವಚೆಯನ್ನು ಸುಂದರಗೊಳಿಸಲು ಸಹ ತುಳಸಿ ಬೀಜಗಳನ್ನು ಬಳಕೆ ಮಾಡಲಾಗುತ್ತದೆ. ಏಕೆಂದರೆ ಇದರಲ್ಲಿ ಪ್ರೋಟೀನ್ ಮತ್ತು ಕಬ್ಬಿಣವು ಹೇರಳವಾಗಿ ಕಂಡುಬರುತ್ತದೆ.

ಇದನ್ನೂ ಓದಿ: ಈ ಇಬ್ಬರು ಆಟಗಾರರ ಮೇಲೆ ಬಾಜಿ ಕಟ್ಟಲಿದೆ RCB: ಎಂಟ್ರಿಕೊಟ್ರೆ ‘ಈ ಸಲ ಕಪ್ ನಮ್ದೆ’

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee ಮಾಧ್ಯಮವು ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News