ನಿರೀಕ್ಷೆಗೆ ತೆರೆ...! ದೇಶದ ನಾಗರಿಕರಿಗೆ ಇಂದು Covishield Vaccine ಸಿಗುವ ಸಾಧ್ಯತೆ

Covishield Vaccine - ಕೊರೊನಾ ವೈರಸ್ ನಿಂದ ರಕ್ಷಣಾ ಪಡೆಯಲು ದೇಶದ ನಾಗರಿಕರು ಕರೋನಾ ಲಸಿಕೆಗಾಗಿ ಕಾಯುತ್ತಿದ್ದಾರೆ. ಹೊಸ ವರ್ಷದ ಪ್ರಾರಂಭದೊಂದಿಗೆ, ಜನರ ಈ ನಿರೀಕ್ಷೆಗೆ ತೆರೆಬೀಳಲಿದೆ.  ತಜ್ಞರ ಸಮಿತಿ ಸಭೆಯಲ್ಲಿ, ಕೋವಿಶೀಲ್ಡ್ ಲಸಿಕೆಗೆ  (Covishield) ಅನುಮೋದನೆ ಸಿಗುವ ಸಾಧ್ಯತೆ ಇದೆ.

Written by - Nitin Tabib | Last Updated : Dec 30, 2020, 04:09 PM IST
  • ಹೊಸ ವರ್ಷದ ಆರಂಭದಲ್ಲಿಯೇ ಭಾರತದ ನಾಗರಿಕರಿಗೆ ಈ ಗಿಫ್ಟ್ ಸಿಗಲಿದೆಯೇ
  • ಭಾರತದಲ್ಲಿ ತುರ್ತು ಬಳಕೆಗೆ ಕೋವಿಶೀಲ್ಡ್ ಲಸಿಕೆಗೆ ಇಂದು ಅನುಮತಿ ಸಿಗುವ ಸಾಧ್ಯತೆ.
  • ವಿಷಯ ತಜ್ಞರ ಸಮಿತಿ (SEC) ಸಭೆಯಲ್ಲಿ ಇಂದು ಈ ಕುರಿತು ನಿರ್ಣಯ ಹೊರಬೀಳುವ ನಿರೀಕ್ಷೆ.
ನಿರೀಕ್ಷೆಗೆ ತೆರೆ...! ದೇಶದ ನಾಗರಿಕರಿಗೆ ಇಂದು Covishield Vaccine ಸಿಗುವ ಸಾಧ್ಯತೆ title=
Covishield Vaccine (File Image)

ನವದೆಹಲಿ: Covishield Vaccine - ಹೊಸ ವರ್ಷದ ಆರಂಭದಲ್ಲಿಯೇ ದೇಶದ ನಾಗರಿಕರಿಗೆ , ಕರೋನಾ ಲಸಿಕೆಯ 'ಉಡುಗೊರೆ' ಸಿಗುವ ಸಾಧ್ಯತೆಗಳು ಹೆಚ್ಚಾಗಿವೆ.  ಕರೋನಾ ವಿರುದ್ಧದ  ಹೋರಾಟದಲ್ಲಿ ಇದು ದೊಡ್ಡ ಯಶಸ್ಸು ಇದಾಗಲಿದೆ. ಮೂಲಗಳ ಪ್ರಕಾರ, 'ಕೋವಿಶೀಲ್ಡ್' ಲಸಿಕೆಗೆ (Covishield) ಇಂದು ಭಾರತದಲ್ಲಿ ಅನುಮೋದನೆ ಸಿಗುವ ಸಾಧ್ಯತೆ ಇದೆ. ಆರಂಭದಲ್ಲಿ, ಈ ಲಸಿಕೆಯನ್ನು ತುರ್ತು ಬಳಕೆಗಾಗಿ ಅನುಮೋದಿಸಲಾಗುವುದು ಎಂದು ಮೂಲಗಳು ಹೇಳಿವೆ.

UK ನೀಡಿದೆ ಅನುಮೋದನೆ
ಕೊರೊನಾ ವ್ಯಾಕ್ಸಿನ್ ಗೆ ಸಂಬಂಧಿಸಿದ ಸಬ್ಜೆಕ್ಟ್ ಎಕ್ಸ್ಪರ್ಟ್ ಕಮಿಟಿ (SEC)ಯ ಸಭೆಯಲ್ಲಿ ಭಾರತದಲ್ಲಿ ಕೊರೊನಾ ವ್ಯಾಕ್ಸಿನ್ ಗೆ ಅನುಮೋದನೆಯ ನಿರ್ಣಯ ಕೈಗೊಳ್ಳಲಾಗುತ್ತಿದೆ. ಏಕೆಂದರೆ ಆಕ್ಸ್ಫರ್ಡ್ ವಿವಿ ಹಾಗೂ ಭಾರತದ ಪುಣೆ ಮೂಲದ ಸಿರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಜಂಟಿಯಾಗಿ ಅಭಿವೃದ್ಧಿಗೊಳಿಸುತ್ತಿರುವ Covishield ವ್ಯಾಕ್ಸಿನ್ ನ ತುರ್ತು ಬಳಕೆಗೆ ಬ್ರಿಟನ್ ಅನುಮೋದನೆ ನೀಡಿದೆ. ಹೀಗಾಗಿ ಭಾರತದಲ್ಲಿಯೂ ಕೂಡ ಈ ವ್ಯಾಕ್ಸಿನ್ ನ ತುರ್ತು ಬಳಕೆಗೆ ಅನುಮೋದನೆ ಸಿಗುವ ಸಾಧ್ಯತೆಗಳು ಇದೀಗ ಹೆಚ್ಚಾಗತೊಡಗಿವೆ.

ಇದನ್ನು ಓದಿ- Oxford-AstraZeneca COVID-19 ಲಸಿಕೆ ಭಾರತದಲ್ಲಿ ಯಾವಾಗ ಸಿಗಲಿದೆ..? ಇಲ್ಲಿದೆ ಮಾಹಿತಿ

4-5 ಕೋಟಿ ಡೋಸ್ ಗಳ ಉತ್ಪಾದನೆ
ಕೋವಿಶೀಲ್ಡ್ ವ್ಯಾಕ್ಸಿನ್ ತಯಾರಿಸಲು ಪುಣೆಯ ಸಿರಮ್ ಇನ್ಸ್ಟಿಟ್ಯೂಟ್((SII)), ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಹಾಗೂ ಅಸ್ಟ್ರಾಜೇನಿಕಾ ಕಂಪನಿಯ ಜೊತೆಗೆ ಒಪ್ಪಂದ ಮಾಡಿಕೊಂಡು ಕೊವಿಡ್-19 ಲಸಿಕೆಯನ್ನು ತಕ್ಷಣ ಭಾರತದಲ್ಲಿ ಪರಿಚಯಿಸುವ ಅಗತ್ಯತೆಯನ್ನು ಪ್ರೇರೇಪಿಸಿತ್ತು. ಪ್ರಸ್ತುತ SII, ಕೋವಿಡ್ -19 ಲಸಿಕೆಯ ತುರ್ತು ಬಳಕೆಗಾಗಿ  DGCI(ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ) ಗೆ ಅರ್ಜಿ ಸಲ್ಲಿಸಿದೆ. ಇತ್ತೀಚೆಗಷ್ಟೇ ಈ ಕುರಿತು ಹೇಳಿಕೆ ನೀಡಿದ್ದ SII ಸಿಇಓ ಅದರ್ ಪೂನಾವಾಲಾ, "ನಾವು ಈಗಾಗಲೇ ಸುಮಾರು 4-5 ಕೋಟಿ ಡೋಸ್ ಲಸಿಕೆಗಳನ್ನು ಉತ್ಪಾದಿಸಿದ್ದೇವೆ. ಆದರೆ, ಲಾಜಿಸ್ಟಿಕ್ ಸಮಸ್ಯೆಯ ಕಾರಣ ಈ ಲಸಿಕೆಯನ್ನು ತಲುಪಿಸುವ ವೇಗ ನಿಧಾನವಾಗಿರುವ ಸಾಧ್ಯತೆ ಇದೆ. ಆದರೆ, ಒಂದೊಮ್ಮೆ ಎಲ್ಲವು ಅಂದುಕೊಂಡಂತೆ ನಡೆದರೆ ಲಸಿಕೆ ತಲುಪಿಸುವ ವೇಗ ಕೂಡ ಹೆಚ್ಚಾಗಲಿದೆ" ಎಂದು ಹೇಳಿದ್ದಾರು.

ಇದನ್ನು ಓದಿ- BIG SUCCESS: ಕೊನೆಗೂ ಈ ಮಾರಕ ಕಾಯಿಲೆಗೆ ಮೊಟ್ಟಮೊದಲ ಸ್ವದೇಶಿ ವ್ಯಾಕ್ಸಿನ್ ಬಿಡುಗಡೆ ಮಾಡಿದ Serum Institute Of India

Pneumosil ವ್ಯಾಕ್ಸಿನ್ ಕೂಡ ಸಿದ್ಧಗೊಂಡಿದೆ
ನಿನ್ನೆಯಷ್ಟೇ ಕಂಪನಿ ಮಕ್ಕಳಲ್ಲೀ ನ್ಯುಮೋನಿಯಾ ಕಾಯಿಲೆಗೆ ನೀಡಲಾಗುವ ಮೊಟ್ಟಮೊದಲ ಹಾಗೂ ಸಂಪೂರ್ಣ ಸ್ವದೇಶಿ ಲಸಿಕೆ  ಲಸಿಕೆ ಬಿಡುಗಡೆ ಮಾಡಿರುವುದು ಇಲ್ಲಿ ಉಲ್ಲೇಖನೀಯ. ಈ ಸಂದರ್ಭದಲ್ಲಿ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಕೂಡ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ್ದ SII CEO ಅದರ್ ಪೂನಾವಾಲಾ, ತಮ್ಮ ಕಂಪನಿ ಅಭಿವೃದ್ಧಿಪಡಿಸುತ್ತಿರುವ  ಕೊರೊನಾ ವ್ಯಾಕ್ಸಿನ್ ಉತ್ಪಾದನೆಯು ಸರ್ಕಾರದಿಂದ ಬರುವ ಒಟ್ಟು ಬೇಡಿಕೆಯನ್ನು ಅವಲಂಭಿಸಿರುತ್ತದೆ ಎಂದಿದ್ದರು. ಮುಂದಿನ ವರ್ಷದ ಮಾರ್ಚ್ ವೇಳೆಗೆ ಲಸಿಕೆಯ ಮಾಸಿಕ ಉತ್ಪಾದನೆಯನ್ನು 100 ಮಿಲಿಯನ್ ಡೋಸ್‌ಗೆ ಹೆಚ್ಚಿಸಲು ಎಸ್‌ಎಸ್‌ಐ ಯೋಜಿಸಿದೆ. ಭಾರತವು ಹೆಚ್ಚಿನ ಉತ್ಪಾದನೆಯನ್ನು ಪಡೆಯಲಿದೆ. ಆದಾಗ್ಯೂ, ಕೊವಾಕ್ಸ್ ಎಂಬ ಜಾಗತಿಕ ಉಪಕ್ರಮದ ಅಡಿಯಲ್ಲಿ ಕೆಲವು ಲಸಿಕೆಗಳನ್ನು ಇತರ ದೇಶಗಳಿಗೆ ನೀಡಲಾಗುವುದು ಎಂದು ಕಂಪನಿ ಸ್ಪಷ್ಟಪಡಿಸಿದೆ.

ಇದನ್ನು ಓದಿ-Corona Vaccine ತುರ್ತು ಬಳಕೆಗಾಗಿ ಅನುಮತಿ ಕೋರಿದ ಮೊದಲ ಭಾರತೀಯ ಕಂಪನಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News