ರೆಟಿನಾದ ಆರೋಗ್ಯ ಮತ್ತು ಕೌಟುಂಬಿಕ ಇತಿಹಾಸದ ನಡುವಿನ ಸಂಬಂಧ ಬಗ್ಗೆ ತಜ್ಞರು ಹೇಳುವುದೇನು?

Written by - Zee Kannada News Desk | Last Updated : Jul 21, 2022, 10:56 PM IST
  • ವಯೋಮಾನ-ಸಂಬಂಧಿತ ಮ್ಯಾಕ್ಯುಲರ್ ಡಿಜೆನರೇಶನ್ ರೋಗಿಯ ಪ್ರಮುಖ ದೃಷ್ಟಿಯ ಮೇಲೆ ಪರಿಣಾಮ ಬೀರುವ ಪ್ರಗತಿಶೀಲ ಕಾಯಿಲೆಯಾಗಿದೆ.
  • AMD ಹೊಂದಿರುವ ಸುಮಾರು 15% ರಿಂದ 20% ರಷ್ಟು ಜನರು ಕನಿಷ್ಠ ಒಬ್ಬ ಪ್ರಥಮ ದರ್ಜೆ (ಹಂತದ) ಸಂಬಂಧಿಯನ್ನು ಹೊಂದಿರುತ್ತಾರೆ.
ರೆಟಿನಾದ ಆರೋಗ್ಯ ಮತ್ತು ಕೌಟುಂಬಿಕ ಇತಿಹಾಸದ ನಡುವಿನ ಸಂಬಂಧ ಬಗ್ಗೆ ತಜ್ಞರು ಹೇಳುವುದೇನು?  title=
ಸಾಂದರ್ಭಿಕ ಚಿತ್ರ

ದುರ್ಬಲ ದೃಷ್ಟಿಯು ಪ್ರಬಲವಾದ ಅಥವಾ ನಿಷ್ಕ್ರಿಯತೆಯ ಲಕ್ಷಣವಲ್ಲ, ಆದರೆ ಇದು ಕುಟುಂಬಗಳಲ್ಲಿ ನಡೆಯುತ್ತದೆ. ಇಂಡಿಯನ್ ಜರ್ನಲ್ ಆಫ್ ಆಫ್ತಮಾಲಜಿ ಯ ಪ್ರಕಾರ, ಪ್ರಪಂಚದಾದ್ಯಂತ 2 ದಶಲಕ್ಷ ಜನರು, ಆನುವಂಶಿಕವಾದ ಅಥವಾ ಆರ್ಜಿತ, ಜೀನ್-ಸಂಬಂಧಿತ ರೆಟಿನಾದ ಕಾಯಿಲೆಗಳಿಂದ ಬಳಲುತ್ತಿದ್ದಾರೆ, ಮತ್ತು ಈ ಪರಿಸ್ಥಿತಿಗಳಿಗೆ ಕಾರಣವೆಂದು ಕಂಡುಬಂದಿರುವ 270 ಕ್ಕೂ ಹೆಚ್ಚು ಜೀನ್‍ಗಳನ್ನು ಗುರುತಿಸಲಾಗಿದೆ. ಕಣ್ಣುಗಳ ಮೇಲೆ ಪರಿಣಾಮ ಬೀರುವ ಮಧುಮೇಹದ ತೊಂದರೆಯಾದ ಡಯಾಬಿಟಿಕ್ ರೆಟಿನೋಪತಿ ಯಂತಹ ಕಾಯಿಲೆಗಳು, ಮತ್ತು ನಿಮ್ಮ ಕೇಂದ್ರ ದೃಷ್ಟಿಯನ್ನು ಮಸುಕುಗೊಳಿಸಬಹುದಾದ ಮತ್ತು ವಯಸ್ಸಿನ ಕಾರಣದಿಂದ ಉಂಟಾಗುವ ವಯೋಮಾನ-ಸಂಬಂಧಿತ ಮ್ಯಾಕ್ಯುಲರ್ ಡಿಜೆನರೇಶನ್ ನಂತಹ ಪ್ರಮುಖ ರೆಟಿನಾದ ಕಾಯಿಲೆಗಳಿಗೆ ಆನುವಂಶಿಕ ಅಂಶಗಳು ಸಂಬಂಧಿಸಿವೆ.

ಇದನ್ನೂ ಓದಿ: ಆಲ್ಕೋಹಾಲ್ ಮಾತ್ರವಲ್ಲ, ನಿಮ್ಮ ಈ ಅಭ್ಯಾಸಗಳು ಲಿವರ್ ಡ್ಯಾಮೇಜ್ ಮಾಡಬಹುದು

ಡಯಾಬಿಟಿಕ್ ರೆಟಿನೋಪತಿ (DR) ಮತ್ತು ಕೌಟುಂಬಿಕ ಇತಿಹಾಸ

ಡಯಾಬಿಟಿಕ್ ರೆಟಿನೋಪತಿ ಎನ್ನುವುದು ರೆಟಿನಾದ ರಕ್ತನಾಳಗಳಿಗೆ ಹಾನಿಯಾಗುವ ಒಂದು ಸ್ಥಿತಿಯಾಗಿದೆ. ಮಧುಮೇಹ ಹೊಂದಿರುವ ರೋಗಿಗಳಲ್ಲಿ DR ನ ಆವರ್ತನ ಮತ್ತು ತೀವ್ರತೆಯು ವೈವಿಧ್ಯಮಯವಾಗಿದೆ. ಅಲ್ಪಾವಧಿಯ ಮಧುಮೇಹ ಮತ್ತು/ಅಥವಾ ಅತ್ಯುತ್ತಮ ಗ್ಲೂಕೋಸ್ ಮಟ್ಟದ ನಿಯಂತ್ರಣದ ಹೊರತಾಗಿಯೂ DR ಉಂಟಾಗುವ ಮಧುಮೇಹ ರೋಗಿಗಳು ಮತ್ತು ದೀರ್ಘಕಾಲದ ಮಧುಮೇಹ ಮತ್ತು/ಅಥವಾ ದೀರ್ಘಾವಧಿಯ ಹೆಚ್ಚಿನ ಗ್ಲೂಕೋಸ್ ಮಟ್ಟದ ನಂತರವೂ DR ಉಂಟಾಗದ  ಮಧುಮೇಹ ರೋಗಿಗಳೂ ಇದ್ದಾರೆ. DR ಬರದೆ ಉಳಿದಿರುವ ಕೆಲವು ವೈವಿಧ್ಯತೆಯನ್ನು ಆನುವಂಶಿಕತೆಯಲ್ಲಿನ ವ್ಯತ್ಯಾಸವು ವಿವರಿಸಬಹುದು. ಭಾರತದಲ್ಲಿ, 73 ದಶಲಕ್ಷಕ್ಕೂ ಹೆಚ್ಚು ಜನರಲ್ಲಿ ಮಧುಮೇಹದ ಪ್ರಭಾವವು ಕಂಡುಬರುತ್ತದೆ ಮತ್ತು ಅಧ್ಯಯನಗಳ ಪ್ರಕಾರ, ಈ ರೋಗಿಗಳಲ್ಲಿ ಆನುವಂಶಿಕ ಅಂಶಗಳಿಂದಾಗಿ DR ಉಂಟಾಗುವ ಅಪಾಯವು 50% ವರೆಗೆ ಇರುತ್ತದೆ.

ಜೆನೆಟಿಕ್ಸ್ ಮತ್ತು ವಯೋಮಾನ-ಸಂಬಂಧಿತ ಮ್ಯಾಕ್ಯುಲರ್ ಡಿಜೆನರೇಶನ್ (AMD)

ವಯೋಮಾನ-ಸಂಬಂಧಿತ ಮ್ಯಾಕ್ಯುಲರ್ ಡಿಜೆನರೇಶನ್ ರೋಗಿಯ ಪ್ರಮುಖ ದೃಷ್ಟಿಯ ಮೇಲೆ ಪರಿಣಾಮ ಬೀರುವ ಪ್ರಗತಿಶೀಲ ಕಾಯಿಲೆಯಾಗಿದೆ. AMD ಹೊಂದಿರುವ ಸುಮಾರು 15% ರಿಂದ 20% ರಷ್ಟು ಜನರು ಕನಿಷ್ಠ ಒಬ್ಬ ಪ್ರಥಮ ದರ್ಜೆ (ಹಂತದ) ಸಂಬಂಧಿಯನ್ನು ಹೊಂದಿರುತ್ತಾರೆ, ಉದಾಹರಣೆಗೆ ಪೋಷಕರು ಅಥವಾ ಈ ಸ್ಥಿತಿಯನ್ನು ಹೊಂದಿರುವ ಒಡಹುಟ್ಟಿದವರು. ಕಳಪೆ ಜೀವನಶೈಲಿ, ಧೂಮಪಾನ, ಅಂತರ್ನಿಹಿತ ವೈದ್ಯಕೀಯ ಪರಿಸ್ಥಿತಿಗಳು ಮತ್ತು ಕೆಟ್ಟ ಆಹಾರ ಪದ್ಧತಿಗಳು ಈ ರೋಗದ ಅಪಾಯವನ್ನು ಉಂಟುಮಾಡುವ ಅಥವಾ ಹೆಚ್ಚಿಸುವ ಕೆಲವು ಪ್ರಮುಖ ಅಂಶಗಳಾಗಿವೆ.AMD ಗೆ ಸಂಬಂಧಿಸಿದ ಸುಮಾರು 30 ಜೀನ್‍ಗಳನ್ನು ಸಂಶೋಧಕರು ಕಂಡುಹಿಡಿದಿದ್ದಾರೆ.

ಇದನ್ನೂ ಓದಿ: ಒಂದು ಚಮಚ ತುಪ್ಪಕ್ಕೆ ಈ ಎರಡು ವಸ್ತುಗಳನ್ನು ಬೆರೆಸಿ ಸೇವಿಸಿದರೆ ಈ ಸಮಸ್ಯೆಗಳಿಗೆ ಸಿಗುವುದು ಮುಕ್ತಿ

ಬೆಂಗಳೂರಿನ ನಾರಾಯಣ ನೇತ್ರಾಲಯ ನೇತ್ರ ಸಂಸ್ಥೆಯ ವಿಟ್ರಿಯೊ-ರೆಟಿನಲ್ ಚಿಕಿತ್ಸೆಗಳ ಮುಖ್ಯಸ್ಥರಾದ ಡಾ. ಚೈತ್ರಾ ಜಯದೇವ್ ಇವರ ಪ್ರಕಾರ, "DR ಮತ್ತು AMD ಒಂದು ಆನುವಂಶಿಕ ಪ್ರವೃತ್ತಿಯನ್ನು ಹೊಂದಿವೆ; ಇದು ಒಬ್ಬರ ಜನಾಂಗ, ಭೌಗೋಳಿಕ ಸ್ಥಳ ಮತ್ತು ಜೀವನಶೈಲಿಯನ್ನು ಅವಲಂಬಿಸಿರುತ್ತದೆ. ರೆಟಿನಾದ ಆನುವಂಶಿಕ ಕಾಯಿಲೆಗಳಿಗೆ ಕಾರಣವಾಗುವ 250 ಕ್ಕೂ ಹೆಚ್ಚು ವಿಭಿನ್ನ ಜೀನ್‍ಗಳಿವೆ. ಒಂದು ಆನುವಂಶಿಕ ಸ್ಥಿತಿಯು ಕುಟುಂಬದಲ್ಲಿ ಇದೆಯೇ ಎಂಬುದನ್ನು ನಿರ್ಧರಿಸಲು ಆರಂಭದಲ್ಲಿ ಸ್ಕ್ರೀನಿಂಗ್ ಟೆಸ್ಟ್ ಅಥವಾ ಸಂಪೂರ್ಣ ಪರೀಕ್ಷೆಯ ಅಗತ್ಯವಿದೆ. ಪೂರ್ವಭಾವಿ ಅಂಶಗಳು ಕಂಡುಬಂದರೆ, ಆರಂಭಿಕ ಪತ್ತೆ ಮತ್ತು ಸಕಾಲಿಕ ಚಿಕಿತ್ಸೆಗಾಗಿ ನಿಯಮಿತ ಅನುಸರಣೆಯ ಅಗತ್ಯವಿದೆ "
ರೆಟಿನಾದ ಆರೋಗ್ಯವನ್ನು ನಿರ್ಲಕ್ಷಿಸುವುದರಿಂದ ತೀವ್ರ ಅಸ್ವಸ್ಥತೆ ಉಂಟಾಗಬಹುದಲ್ಲದೆ, ಇದು ಶಾಶ್ವತ ಕುರುಡುತನಕ್ಕೆ ಕಾರಣವಾಗಬಹುದು. ನಿಮಗೆ ಕಣ್ಣಿನ ಕಾಯಿಲೆಗಳ ಕೌಟುಂಬಿಕ ಇತಿಹಾಸವಿದ್ದರೆ, ನೀವು ನಿಯಮಿತವಾಗಿ ನೇತ್ರತಜ್ಞರನ್ನು ಸಂಪರ್ಕಿಸಿ ಮತ್ತು ಚಿಕಿತ್ಸೆಯನ್ನು ಮುಂದುವರಿಸುವ ಮತ್ತು ಆರೋಗ್ಯಕರ ಜೀವನವನ್ನು ನಡೆಸುವ ಶಿಸ್ತನ್ನು ಪರಿಪಾಲಿಸಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

Trending News