Fact about Pineapple Fruit : ಪ್ರಕೃತಿ ಸೃಷ್ಠಿಸಿರುವ ಪ್ರತಿಯೊಂದು ವಸ್ತುವೂ ವಿಚಿತ್ರವೇ. ಪ್ರತಿಯೊಂದು ವಸ್ತುವಿನಲ್ಲೂ ಒಂದಿಲ್ಲೊಂದು ವಿಶಿಷ್ಟತೆ ಅಡಗಿರುತ್ತದೆ. ನಮ್ಮಸುತ್ತಲೂ ಇರುವ ಎಲ್ಲಾ ವಸ್ತುಗಳು ಕೂಡಾ ಪ್ರಕೃತಿ ವೈಚಿತ್ರ್ಯಕ್ಕೆ ಸಾಕ್ಷಿಯಾಗಿರುತ್ತದೆ. ಆದರೆ ಆ ವಸ್ತುವಿನ ವಿಶಿಷ್ಟತೆ ಏನು ಎನ್ನುವುದು ನಮಗೆ ತಿಳಿದಿರುವುದಿಲ್ಲ ಅಷ್ಟೇ. ಕೆಲವೊಂದು ವಿಷಯಗಳು ತಿಳಿದಾಗ ಹುಬ್ಬೇರಿಸುವಂತಾಗುತ್ತದೆ. ಇಂದು ನಾವು ಅನಾನಸ್ ಅಥವಾ ಫರಂಗಿ ಹಣ್ಣಿನಲ್ಲಿ ಅಡಗಿರುವ ಒಂದು ಸತ್ಯವನ್ನು ನಿಮ್ಮ ಮುಂದೆ ಇಡುತ್ತೇವೆ.
ಅನಾನಸ್ ವಿಶೇಷ ಪೋಷಕಾಂಶವನ್ನು ಹೊಂದಿರುವ ಹಣ್ಣು ಎನ್ನುವುದರಲ್ಲಿ ಎರಡು ಮಾತಿಲ್ಲ. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೂ ಕೆಲವರಿಗೆ ಈ ಹಣ್ಣು ಇಷ್ಟವಾಗುವುದಿಲ್ಲ. ಆದರೆ ಈ ಹಣ್ಣಿನ ಆರೋಗ್ಯ ಪ್ರಯೋಜನಗಳು ಮತ್ತು ಪೋಷಕಾಂಶಗಳ ಬಗ್ಗೆ ತಿಳಿದುಕೊಂಡರೆ ಖಂಡಿತವಾಗಿಯೂ ನೀವು ಈ ಹಣ್ಣನ್ನು ಸೇವಿಸಿಯೇ ಸೇವಿಸುತ್ತೀರಿ.
ಇದನ್ನೂ ಓದಿ : ಈ ಎಲೆಯ ನೀರನ್ನು 10 ನಿಮಿಷಗಳವರೆಗೆ ಕೂದಲಿಗೆ ಹಚ್ಚಿದರೆ ಸಾಕು ಬಿಳಿ ಕೂದಲು ಕಪ್ಪಾಗುವುದು !
ಅನಾನಸ್ ಬಗ್ಗೆ ಸಾಮಾನ್ಯವಾಗಿ ಕೇಳಿಬರುವ ಒಂದು ವಿಷಯವೆಂದರೆ ಈ ಹಣ್ಣು ಮಾನವ ಮಾಂಸವನ್ನು ತಿನ್ನುತ್ತದೆ ಎನ್ನುವುದು. ಇದು ಕೇಳುವುದಕ್ಕೆ ಬಹಳ ವಿಚಿತ್ರ ಎನಿಸಬಹುದು. ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಬೆಸ್ಟ್ ಹಣ್ಣು ಎಂದೇ ಕರೆಯಲಾಗುವ ಈ ಹಣ್ಣಿನ ಬಗ್ಗೆ ಹೊರ ಬಿದ್ದಿರುವ ಮಾಹಿತಿ ನಿಜಕ್ಕೂ ಸತ್ಯ.
ಅನಾನಸ್ ನಿಜವಾಗಿಯೂ ಮಾನವ ಮಾಂಸವನ್ನು ತಿನ್ನುತ್ತದೆಯೇ?:
ಅನಾನಸ್ ಅನ್ನು ತಿಂದಾಗ ಅದು ಪ್ರತಿಯಾಗಿ ನಮ್ಮನ್ನು ತಿನ್ನುತ್ತದೆ ಎಂಬುದು ನಿಜಕ್ಕೂ ವಿಚಿತ್ರವಾಗಿದೆ. ಅನಾನಸ್ ತಿಂದ ತಕ್ಷಣ ನಾಲಿಗೆಯಲ್ಲಿ ವಿಚಿತ್ರವಾದ ಜುಮ್ಮೆನಿಸುವ ಭಾವ, ತುರಿಕೆ ಉಂಟಾಗುತ್ತದೆ. ಅನಾನಸ್ ನಮ್ಮ ಬಾಯಿಯಲ್ಲಿರುವ ಪ್ರೋಟೀನ್ ಅನ್ನು ತಿನ್ನುವುದರಿಂದ ಈ ರೀತಿಯ ಸಂವೇದನೆ ಉಂಟಾಗುತ್ತದೆ ಎನ್ನುವುದು ಅನೇಕ ವರದಿಗಳಲ್ಲಿ ಸ್ಪಷ್ಟವಾಗಿದೆ. ವಾಸ್ತವವಾಗಿ, ಅದರಲ್ಲಿ ಕಂಡುಬರುವ ಬ್ರೋಮೆಲಿನ್ ಎಂಬ ಕಿಣ್ವದ ಕೆಲಸವು ಪ್ರೋಟೀನ್‌ಗಳನ್ನು ಜೀರ್ಣಿಸಿಕೊಳ್ಳುವುದು.
ಇದನ್ನೂ ಓದಿ : ಹಲ್ಲುಗಳ ಮೇಲಿನ ಹಳದಿ ಕಲೆಗಳನ್ನು ಒಂದೇ ಬಳಕೆಯಲ್ಲಿ ನಿವಾರಿಸುತ್ತದೆ ಈ ಒಂದು ವಸ್ತು
ನಮ್ಮ ದೇಹವು ಪ್ರೋಟೀನ್‌ಗಳಿಂದ ಮಾಡಲ್ಪಟ್ಟಿದೆ. ಆದ್ದರಿಂದ ಅನಾನಸ್‌ನಲ್ಲಿರುವ ಬ್ರೋಮೆಲಿನ್ ನಿಮ್ಮ ಪ್ರೋಟೀನ್‌ಗಳನ್ನು ಜೀರ್ಣಿಸಿಕೊಳ್ಳಲು ಪ್ರಯತ್ನಿಸುತ್ತದೆ. ಆದರೆ, ಇದು ಹೊಟ್ಟೆಯಲ್ಲಿರುವ ಆಮ್ಲ ಕಿಣ್ವಗಳನ್ನು ( acid enzyme) ನಾಶಪಡಿಸುತ್ತದೆ. ಅನಾನಸ್ ಹಣ್ಣನ್ನು ಬೆರಳ ತುದಿಗೆ ಪ್ರತಿದಿನ ಉಜ್ಜಿದರೆ ನಮ್ಮ ಬೆರಳಚ್ಚು ಕೂಡಾ ಮಾಯವಾಗುತ್ತದೆ ಎಂದು ಹೇಳುತ್ತಾರೆ. ಈ ಸತ್ಯಗಳು ಕೇಳಲು ತುಂಬಾ ವಿಚಿತ್ರ ಎನಿಸಬಹುದು.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.