ಚಳಿಗಾಲದಲ್ಲಿ ಬೆಲ್ಲದ ಟೀ ಸೇವಿಸಿ ಈ ಪ್ರಯೋಜನಗಳನ್ನು ಪಡೆಯಿರಿ

ಬೆಲ್ಲ ಚಹಾವು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಎದೆಯ ಕಿರಿಕಿರಿಯನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. ಬೆಲ್ಲದಲ್ಲಿ ಕೃತಕ ಸಿಹಿಕಾರಕ ಬಹಳ ಕಡಿಮೆ. ಬೆಲ್ಲದಲ್ಲಿ ಸಕ್ಕರೆಗಿಂತ ಹೆಚ್ಚು ಜೀವಸತ್ವಗಳು ಮತ್ತು ಖನಿಜಗಳಿವೆ.

Last Updated : Nov 14, 2020, 03:49 PM IST
  • ಬೆಲ್ಲದ ಟೀ ಕುಡಿಯುವುದರ ಪ್ರಯೋಜನಗಳು
  • ಬೆಲ್ಲದಲ್ಲಿ ಸಕ್ಕರೆಗಿಂತ ಹೆಚ್ಚು ಜೀವಸತ್ವಗಳು ಮತ್ತು ಖನಿಜಗಳಿವೆ.
  • ಬೆಲ್ಲದಲ್ಲಿ ಕೃತಕ ಸಿಹಿಕಾರಕ ಬಹಳ ಕಡಿಮೆ.
ಚಳಿಗಾಲದಲ್ಲಿ ಬೆಲ್ಲದ ಟೀ ಸೇವಿಸಿ ಈ ಪ್ರಯೋಜನಗಳನ್ನು ಪಡೆಯಿರಿ title=

ಕರೋನಾ ಸಮಯದಲ್ಲಿ ಬೆಲ್ಲದ ಸೇವನೆಯು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಬೆಲ್ಲದ ಚಹಾವು ತೂಕ ನಷ್ಟ ಸೇರಿದಂತೆ ಹಲವು ಸಮಸ್ಯೆಗಳಿಗೆ ರಾಮಬಾಣ ಇದ್ದಂತೆ. ಮನೆಯಲ್ಲಿ ಸುಲಭವಾಗಿ ಬೆಲ್ಲದ ಚಹಾವನ್ನು ಹೇಗೆ ತಯಾರಿಸಬಹುದು ಮತ್ತು ಅದರ ಪ್ರಯೋಜನಗಳನ್ನು ತಿಳಿಯಿರಿ.

ಬೆಲ್ಲದ ಟೀ ತಯಾರಿಸಲು ಬೇಕಾಗಿರುವ ವಸ್ತುಗಳು:-

  • ಮೂರು ಚಮಚ ನುಣ್ಣಗೆ ಪುಡಿಮಾಡಿದ ಬೆಲ್ಲ
  • 2 ಟೀ ಚಮಚ ಚಹಾದ ಎಲೆಗಳು (ಟೀ ಸೊಪ್ಪು)
  • ಅರ್ಧ ಟೀಚಮಚ ಶುಂಠಿ
  • 2 ಏಲಕ್ಕಿ ಮತ್ತು ಒಂದು ಕಪ್ ನೀರಿನೊಂದಿಗೆ ಎರಡು ಕಪ್ ಹಾಲು.

ಈ ರೀತಿ ಚಹಾ ತಯಾರಿಸಿ:
ಪಾತ್ರೆಯಲ್ಲಿ ಮೊದಲಿಗೆ ಒಂದು ಕಪ್ ನೀರು, ಟೀ ಸೊಪ್ಪು, ಶುಂಠಿ, ಏಲಕ್ಕಿ ಹಾಕಿ ಚೆನ್ನಾಗಿ ಕುದಿಸಿ. ಕುದಿಯುವ ಸಮಯದಲ್ಲಿ ಹಾಲು ಬೆರೆಸಿದ ನಂತರ ಇದನ್ನು ಮತ್ತೆ ಕುದಿಸಿ. ಬಳಿಕ ಬೆಲ್ಲ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಹೆಚ್ಚು ಸಮಯ ಕುದಿಸಬೇಡಿ.

ಹಾಲಿಗೆ ಬೆಲ್ಲ ಬೆರೆಸಿ ಕುಡಿದರೆ ಸಿಗುತ್ತೆ ಈ ಲಾಭ!

ಹೊಟ್ಟೆ ಕಡಿಮೆ ಮಾಡಲು ಸಹಾಯಕ:


ಚಳಿಗಾಲದಲ್ಲಿ ಬೆಲ್ಲದ (Jaggery) ಚಹಾ ಕುಡಿಯುವುದರಿಂದ ಹೊಟ್ಟೆಯ ಕೊಬ್ಬನ್ನು ಕರಗಿಸಬಹುದು. ಜೊತೆಗೆ ಉತ್ತಮ ಆರೋಗ್ಯ ನಿಮ್ಮದಾಗುತ್ತದೆ.

ಜೀರ್ಣಾಂಗ ವ್ಯವಸ್ಥೆ:
ಬೆಲ್ಲ ಚಹಾವು (Jaggery Tea) ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಎದೆಯ ಕಿರಿಕಿರಿಯನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. ಬೆಲ್ಲದಲ್ಲಿ ಕೃತಕ ಸಿಹಿಕಾರಕ ಬಹಳ ಕಡಿಮೆ. ಬೆಲ್ಲದಲ್ಲಿ ಸಕ್ಕರೆಗಿಂತ ಹೆಚ್ಚು ಜೀವಸತ್ವಗಳು ಮತ್ತು ಖನಿಜಗಳಿವೆ, ಇದು ಆರೋಗ್ಯಕ್ಕೆ ಪ್ರಯೋಜನಕಾರಿ.

ಮೈಗ್ರೇನ್ ಗೆ ಪರಿಹಾರ: 


ಮೈಗ್ರೇನ್ ಅಥವಾ ತಲೆನೋವು ಇರುವವರು ಹಸುವಿನ ಹಾಲಿನಲ್ಲಿ ಬೆಲ್ಲದ ಚಹಾವನ್ನು ಮಾಡಿ ಕುಡಿಯುವುದರಿಂದ ಆರಾಮ ನೀಡುತ್ತದೆ. 

ಕೆಂಪು ರಕ್ತ ಕಣಗಳ ಹೆಚ್ಚಳ:


ಬೆಲ್ಲವನ್ನು ತಿನ್ನುವುದು ಅಥವಾ ಅದರ ಚಹಾ (Tea) ವನ್ನು ಕುಡಿಯುವುದು ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಪ್ರಯೋಜನಕಾರಿ.

ಮೂಲವ್ಯಾಧಿ ನಿವಾರಣೆಗೆ ಬೆಲ್ಲ ಉತ್ತಮ ಮನೆಮದ್ದು, ಇತರೆ ರೋಗಗಳಿಗೂ ಇದು ರಾಮಬಾಣ

ಆದರೆ ಎಚ್ಚರ ಬೆಲ್ಲವನ್ನು ದೊಡ್ಡ ಪ್ರಮಾಣದಲ್ಲಿ ತಿನ್ನಬಾರದು, ಹೆಚ್ಚು ಬೆಲ್ಲ ಕೂಡ ಹಾನಿಕಾರಕವಾಗಬಹುದು ಎಂಬುದನ್ನು ನೆನಪಿಡಿ.
 

Trending News