ಪ್ರತಿನಿತ್ಯ 30 ಗ್ರಾಂ ಓಟ್ಸ್ ಸೇವಿಸಿ, 7 ದಿನಗಳಲ್ಲಿ ಚಮತ್ಕಾರ ನೋಡಿ!

 ಪ್ರತಿನಿತ್ಯ 30 ರಿಂದ 40 ಗ್ರಾಂ ಓಟ್ಸ್ ತಿನ್ನುವುದರಿಂದ ನಿಮ್ಮ ದೇಹಕ್ಕೆ ಸಾಕಷ್ಟು ಪ್ರಯೋಜನವಿದೆ. ಆ ಉಪಯೋಗಗಳೇನು ಎಂದು ತಿಳಿಯಲು ಮುಂದೆ ಓದಿ...

Last Updated : Jul 13, 2018, 05:16 PM IST
ಪ್ರತಿನಿತ್ಯ 30 ಗ್ರಾಂ ಓಟ್ಸ್ ಸೇವಿಸಿ, 7 ದಿನಗಳಲ್ಲಿ ಚಮತ್ಕಾರ ನೋಡಿ! title=

ನವದೆಹಲಿ: ಎಲ್ಲರೂ ನಿಮ್ಮ ಮನೆಗಳಲ್ಲಿ ಹಿರಿಯರು ಓಟ್ಸ್ ಬಗ್ಗೆ ಹೇಳುವುದನ್ನು ಕೇಳಿರಬಹುದು. ಈ ಹಗುರವಾದ ಓಟ್ಸ್ ಅನ್ನು ದಿನಕ್ಕೆ ಒಂದು ಬಾರಿ ತಿನ್ನುವುದರಿಂದ ಸಾಕಷ್ಟು ಉಪಯೋಗಗಳಿವೆ. ಅಷ್ಟೇ ಏಕೆ, ದೇಹದ ತೂಕ ಇಳಿಸಬೇಕು ಎಂದು ನೀವೇನಾದರೂ ನಿರ್ಧರಿಸಿದ್ದಾರೆ ಅದಕ್ಕೆ ಓಟ್ಸ್ ಹೇಳಿಮಾಡಿಸಿದ ಆಹಾರ. ಹಾಗಂತ ಪ್ರತಿನಿತ್ಯ ಒಂದೇ ಆಹಾರವನ್ನು ಹೇಗಪ್ಪಾ ಅಂತ ಯೋಚನೆ ಮಾಡುತ್ತಿದ್ದರೆ ಅದಕ್ಕೂ ಇಲ್ಲಿ ಪರಿಹಾರವಿದೆ. ಮಾರುಕಟ್ಟೆಯಲ್ಲಿ ಸಾಕಷ್ಟು ಫ್ಲೇವರ್'ಗಳಲ್ಲಿ ಓಟ್ಸ್ ದೊರೆಯುತ್ತದೆ. ನಿಮಗಿಷ್ಟವಾದ ಓಟ್ಸ್ ಫ್ಲೇವರ್ ಆಯ್ಕೆ ಮಾಡಿಕೊಂಡು ಸೇವಿಸಿ. ಪ್ರತಿನಿತ್ಯ 30 ರಿಂದ 40 ಗ್ರಾಂ ಓಟ್ಸ್ ತಿನ್ನುವುದರಿಂದ ನಿಮ್ಮ ದೇಹಕ್ಕೆ ಸಾಕಷ್ಟು ಪ್ರಯೋಜನವಿದೆ. ಆ ಉಪಯೋಗಗಳೇನು ಎಂದು ತಿಳಿಯಲು ಮುಂದೆ ಓದಿ...

1. ಅಧಿಕ ರಕ್ತದೊತ್ತಡ ನಿವಾರಣೆ
ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಓಟ್ಸ್ ಸೇವನೆಯಿಂದ ಬಹಳ ಉಪಯೋಗವಿದೆ. ಪ್ರತಿನಿತ್ಯ ನಿಯಮಿತವಾಗಿ ಓಟ್ಸ್ ತಿನ್ನುವವರು ಈ ಸಮಸ್ಯೆಯಿಂದ ದೂರ ಉಳಿಯುತ್ತಾರೆ. ಇದರಲ್ಲಿ ಫೈಬರ್ ಅಂಶ ಹೆಚ್ಚಾಗಿರುವುದರಿಂದ ಅಧಿಕ ರಕ್ತದೊತ್ತಡ ಸಮಸ್ಯೆ ನಿವಾರಿಸುತ್ತದೆ. 

2. ಕೊಲೆಸ್ಟ್ರಾಲ್ ಮತ್ತು ಹೃದಯ ರೋಗಗಳಿಂದ ಮುಕ್ತಿ
ಓಟ್ಸ್‌ನಲ್ಲಿ ಬೀಟಾ ಗ್ಲೂಕಾನ್ ಎಂಬ ಒಂದು ರೀತಿಯ ಫೈಬರ್ ಇರುವುದರಿಂದ ಇದು ದೇಹದಲ್ಲಿ ಇರುವ ಕೆಟ್ಟ ಕೊಲೆಸ್ಟರಾಲನ್ನು ಕಡಿಮೆ ಮಾಡುತ್ತದೆ. ಓಟ್ಸ್‌ನಲ್ಲಿ ಇರುವ ಲಿನೋಲಿಕ್ ಆಸಿಡ್, ಫೈಬರ್‌ಗಳು ರಕ್ತದಲ್ಲಿ ಇರುವ ಟ್ರೈ ಗ್ಲಿಜರೈಡ್ಸ್, ಕೆಟ್ಟ ಕೊಲೆಸ್ಟರಾಲನ್ನು ಕಡಿಮೆ ಮಾಡಿ, ರಕ್ತನಾಳಗಳನ್ನು ಸ್ವಚ್ಛಗೊಳಿಸುತ್ತವೆ. ಅವುಗಳಲ್ಲಿ ಕೊಬ್ಬು ಸಂಗ್ರಹವಾಗದಂತೆ ನೋಡುತ್ತವೆ. ಹಾಗಾಗಿ ಪ್ರತಿನಿತ್ಯ ಓಟ್ಸ್ ಸೇವಿಸಿ.

3. ಮಲಬದ್ಧತೆ ನಿವಾರಣೆ
ಪ್ರತಿನಿತ್ಯ ಓಟ್ಸ್ ಸೇವಿಸುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ. ಇದರಲ್ಲಿರುವ ಫೈಬರ್ ಅಂಶ ಜೀರ್ಣಕ್ರಿಯೆಯನ್ನು ಸುಗಮಗೊಳಿಸಿ ಮಲಬದ್ಧತೆಯನ್ನು ನಿವಾರಿಸುತ್ತದೆ. ಒತ್ಸ್ನಲ್ಲಿ ಕ್ಯಾಲ್ಷಿಯಂ, ಪೊಟ್ಯಾಷಿಯಂ, ವಿಟಮಿನ್ ಬಿ ಕಾಂಪ್ಲೆಕ್ಸ್ ಮತ್ತು ಮೆಗ್ನಿಶಿಯಂ ಅಂಶ ಯಥೇಚ್ಛವಾಗಿದ್ದು, ಜೀರ್ಣ ಕ್ರಿಯೆಗೆ ಸಹಕಾರಿ.

4. ಕಾಂತಿಯುತ ಚರ್ಮ
ಪ್ರತಿನಿತ್ಯ ಓಟ್ಸ್ ಸೇವನೆಯಿಂದ ದೇಹಕ್ಕಷ್ಟೇ ಅಲ್ಲ, ಚರ್ಮವೂ ಕಾಂತಿಯುತವಾಗುತ್ತದೆ. ಓಟ್ಸ್ ಸೇವನೆಯಿಂದ ಚರ್ಮ ಶುಷ್ಕತೆ ಪಡೆಯುವುದಲ್ಲದೆ, ಚರ್ಮದ ಸುಕ್ಕುಗಳು ಮತ್ತು ತುರಿಕೆಯನ್ನು ಹೋಗಲಾಡಿಸುತ್ತದೆ. ಹಾಲಿನಲ್ಲಿ ಒಂದು ಚಮಚ ಓಟ್ಸ್ ನೆನೆಸಿ ಪೇಸ್ಟ್ ತಯಾರಿಸಿ ಮುಖ ಮತ್ತು ಕೈಗಳಿಗೆ ಹಚ್ಚುತ್ತಾ ಬಂದರೆ, ಚರ್ಮ ಕಾಂತಿಯನ್ನು ಪಡೆಯುತ್ತದೆ. 

5. ದೇಹದ ತೂಕ ಕಡಿಮೆ ಮಾಡುತ್ತದೆ
ನಿತ್ಯ ಓಟ್ಸ್‌ ತಿನ್ನುತ್ತಿದ್ದರೆ ದೇಹದ ಚಯಾಪಚಯ ಕ್ರಿಯೆ ಉತ್ತಮಗೊಳ್ಳುತ್ತದೆ. ಅಧಿಕ ತೂಕ ಕಡಿಮೆಯಾಗುತ್ತದೆ. ಓಟ್ಸ್ ಸ್ವಲ್ಪ ತಿಂದರೂ ಹೊಟ್ಟೆ ತುಂಬಿದ ಭಾವನೆ ಉಂಟಾಗುತ್ತದೆ. ಇದರಿಂದ ಹೆಚ್ಚು ಕ್ಯಾಲರಿಗಳನ್ನು ಕೊಡುವ ಆಹಾರ ತೆಗೆದುಕೊಳ್ಳದಂತಿರುತ್ತಾರೆ. ಆ ಮೂಲಕ ತೂಕ ಕಡಿಮೆಯಾಗುತ್ತಾರೆ.

6. ಒತ್ತಡ ನಿವಾರಿಸುತ್ತದೆ
ಓಟ್ಸ್'ನಲ್ಲಿ ಫೈಬರ್ ಮತ್ತು ಮೆಗ್ನಿಶಿಯಂ ಪ್ರಮಾಣ ಹೆಚ್ಚಾಗಿರುವುದರಿಂದ ಇದು ಮೆದುಳಿನಲ್ಲಿರುವ ಸೆರೋಟೋನಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ.  ಇದನ್ನು ಸೇವಿಸುವುದರಿಂದ ಮಿದುಳು ಶಾಂತವಾಗಿ ಒತ್ತಡ ಕಡಿಮೆಯಾಗುತ್ತದೆ. ಓಟ್ಸ್ ಜೊತೆ ಬ್ಲೂಬೆರಿ ಸಹ ಹಾಕಿ ತಿನ್ನಬಹುದು. ಇದರಲ್ಲಿ ರೋಗ ನಿರೋಧಕ ಅಂಶಗಳು ಮತ್ತು ವಿಟಮಿನ್ ಸಿ ಇರುವುದರಿಂದ ಮಾನಸಿಕ ಒತ್ತಡ ಕಡಿಮೆ ಮಾಡಲು ಸಹಕಾರಿ. 

Trending News