ಅತಿಯಾದ ಮಾವು ಸೇವನೆ ಈ ಸಮಸ್ಯೆಗಳಿಗೆ ಕಾರಣವಾಗಬಹುದು

Side Effects Of Eating Mango : ಮಾವನ್ನು ಹಣ್ಣುಗಳ ರಾಜ ಎಂದು ಕರೆಯಲಾಗುತ್ತದೆ. ಮಾವು ಹಣ್ಣುಗಳ ರಾಜ ಮಾತ್ರವಲ್ಲ, ಅದು ಅನೇಕ ಉತ್ತಮ ಗುಣಗಳ ಭಂಡಾರವೂ ಹೌದು.

Written by - Ranjitha R K | Last Updated : Jul 25, 2021, 03:21 PM IST
  • ಮಾವು ಔಷಧೀಯ ಗುಣಗಳಿಂದ ಕೂಡಿದೆ
  • ಮಾವಿನಹಣ್ಣನ್ನು ತಿನ್ನುವುದರಿಂದ ಮೊಡವೆಗಳು ಮೂಡುತ್ತವೆ
  • ಮಾವಿನಹಣ್ಣಿನಲ್ಲಿ ಸಕ್ಕರೆ ಪ್ರಮಾಣ ಅಧಿಕವಾಗಿರುತ್ತದೆ.
ಅತಿಯಾದ ಮಾವು ಸೇವನೆ ಈ ಸಮಸ್ಯೆಗಳಿಗೆ ಕಾರಣವಾಗಬಹುದು

ನವದೆಹಲಿ :  Side Effects Of Eating Mango : ಮಾವನ್ನು ಹಣ್ಣುಗಳ ರಾಜ ಎಂದು ಕರೆಯಲಾಗುತ್ತದೆ. ಮಾವು ಹಣ್ಣುಗಳ ರಾಜ ಮಾತ್ರವಲ್ಲ, ಅದು ಅನೇಕ ಉತ್ತಮ ಗುಣಗಳ ಭಂಡಾರವೂ ಹೌದು. ಮಾವಿನಹಣ್ಣಿನ ರಸವತ್ತಾದ ರುಚಿಯನ್ನು ಎಲ್ಲರೂ ಇಷ್ಟಪಡುತ್ತಾರೆ. ಮೆಗ್ನೀಸಿಯಮ್, ಪೊಟ್ಯಾಸಿಯಮ್, ಪ್ರೋಟೀನ್, ವಿಟಮಿನ್ ಮತ್ತು ಫೋಲೇಟ್ ನಂತಹ ಅನೇಕ ಪೋಷಕಾಂಶಗಳು ಮಾವಿನಕಾಯಿಯಲ್ಲಿ ಕಂಡುಬರುತ್ತವೆ. ಇವು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ (Benfits of Mango). ಇಷ್ಟು ಮಾತ್ರವಲ್ಲ, ಮಾವಿನ ಹಣ್ಣಿನಲ್ಲಿ ಔಷಧೀಯ ಗುಣಗಳು ಹೇರಳವಾಗಿರುತ್ತದೆ.  ಆದರೆ ಮಾವಿನ ಅತಿಯಾದ ಸೇವನೆಯು ಆರೋಗ್ಯಕ್ಕೂ ಹಾನಿಕಾರಕವು (Side effects of mango) ಹೌದು. ಮಾವಿನಹಣ್ಣು ತಿನ್ನುವುದರಿಂದ ಮೊಡವೆಗಳು ಹೆಚ್ಚಾಗುತ್ತದೆ. ಅತಿಯಾಗಿ ತಿನ್ನುವುದರಿಂದ ತೂಕವೂ ಹೆಚ್ಚಳವಾಗಬಹುದು.

1. ತೂಕ ಹೆಚ್ಚಾಗುವುದು: ಮಾವಿನಹಣ್ಣನ್ನು ಸೀಮಿತ ಪ್ರಮಾಣದಲ್ಲಿ ಸೇವಿಸುವುದರಿಂದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿರುತ್ತದೆ (Benfits of Mango). ಮಾವಿನ ಹಣ್ಣಿನಲ್ಲಿ ನೈಸರ್ಗಿಕ ಸಕ್ಕರೆ ಕಂಡು ಬರುತ್ತದೆ. ಆದರೆ ಇದನ್ನು ಅತಿಯಾಗಿ ಸೇವಿಸಿದರೆ,  ತೂಕ ಹೆಚ್ಚಾಗುವ ಸಾಧ್ಯತೆಯೂ ಇದೆ. 

ಇದನ್ನೂ ಓದಿ : ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲಿಗೆ ಒಂದು ಚಮಚ ಸೊಂಪು ಹಾಕಿ ಕುಡಿದರೆ ಸಿಗಲಿದೆ ಅದ್ಬುತ ಪ್ರಯೋಜನ

2. ಬ್ಲಡ್ ಶುಗರ್ : ಮಾವಿನ ಸಿಹಿ ಮತ್ತು ರಸವತ್ತಾದ ರುಚಿಯಿಂದಾಗಿ, ಅನೇಕ ಬಾರಿ ನಮಗೆ ಗೊತ್ತಿಲ್ಲದಂತೆಯೇ ಮಾವಿನಹಣ್ಣನ್ನು ಅತಿಯಾಗಿ ಸೇವಿಸುತ್ತೇವೆ.  ಆದರೆ, ನೀವು ಮಧು ಮೆಹ ರೋಗದಿಂದ ಬಳಲುತ್ತಿದ್ದರೆ, ಮಾವನ್ನು ಹೆಚ್ಚಿನ ಪ್ರಮಾಣದಲ್ಲಿ  ಸೇವಿಸಬಾರದು. ಮಾವಿನ ಅತಿಯಾದ ಸೇವನೆಯಿಂದ ಸಕ್ಕರೆ ಪ್ರಮಾಣ (Sugar level) ಹೆಚ್ಚಾಗಲು ಕಾರಣವಾಗುತ್ತದೆ. 

3. ಹೊಟ್ಟೆಯ ಸಮಸ್ಯೆಗೆ : ಬೆಳಗಿನ ಉಪಾಹಾರದಲ್ಲಿ ಅಥವಾ ಮಧ್ಯಾಹ್ನ ಭೋಜನದ (Lunch) ಸಮಯದಲ್ಲಿ ಮಾವನ್ನು ತಿನ್ನುವುದು ಪ್ರಯೋಜನಕಾರಿ. ಆದರೆ, ನೀವು ಇದನ್ನು ಸಂಜೆ ಅಥವಾ ರಾತ್ರಿಯಲ್ಲಿ ಮಾವು ತಿಂದರೆ ಜೀರ್ಣಕ್ರಿಯೆಯ (Digestion) ಸಮಸ್ಯೆ  ಎದುರಿಸಬೇಕಾಗುತ್ತದೆ. 

4.ಮೊಡವೆ : ಕೆಲವು ಜನರಿಗೆ ಮಾವು ತಿನ್ನುವುದರಿಂದ ಅಲರ್ಜಿ ಆಗುತ್ತದೆ. ಅಂತಹ ಜನರುಮಾವನ್ನು ಸೇವಿಸಬಾರದು. ಕೆಲವರಿಗೆ   ಮಾವಿನಹಣ್ಣು ಸೇವಿಸುವುದರಿಂದ ಮೊಡವೆ (Pimple) ಸಮಸ್ಯೆಗಳು ಕೂಡಾ ಎದುರಾಗುತ್ತದೆ. 

ಇದನ್ನೂ ಓದಿ : Fruits For Healthy Eyes: ಕಣ್ಣಿನ ಆರೋಗ್ಯಕ್ಕಾಗಿ ನಿಮ್ಮ ಆಹಾರದಲ್ಲಿರಲಿ ಈ ವಸ್ತುಗಳು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News