Egg ಫ್ರೆಶ್ ಇದೆಯಾ ಅಥವಾ ಇಲ್ಲ ಎಂಬುದು ಹೇಗೆ ತಿಳಿದುಕೊಳ್ಳಬೇಕು? ಎಕ್ಸ್ಪೈರ್ ಮೊಟ್ಟೆ ಸೇವನೆಯಿಂದ ದೂರವಿರಿ

Egg Freshness Test: ಮೊಟ್ಟೆ ಸೇವಿಸುವ ಮುನ್ನ, ಅದು ಫ್ರೆಶ್ ಆಗಿದೆಯಾ ಅಥವಾ ಇಲ್ಲ ಎಂಬುದನ್ನು ಪರೀಕ್ಷಿಸಬೇಕು. ಏಕೆಂದರೆ ಹಳೆಯ ಅಥವಾ ಅವಧಿ ಮೀರಿದ ಮೊಟ್ಟೆಗಳನ್ನು ತಿನ್ನುವುದರಿಂದ ಆರೋಗ್ಯಕ್ಕೆ ಹಾನಿ ಉಂಟಾಗಬಹುದು ಮತ್ತು ಅದರಿಂದ ನೀವು ಅನಾರೋಗ್ಯಕ್ಕೆ ಗುರಿಯಾಗಬಹುದು.

Written by - Nitin Tabib | Last Updated : Jun 5, 2022, 03:20 PM IST
  • ಮೊಟ್ಟೆ ಸೇವಿಸುವ ಮುನ್ನ, ಅದು ಫ್ರೆಶ್ ಆಗಿದೆಯಾ ಅಥವಾ ಇಲ್ಲ ಎಂಬುದನ್ನು ಪರೀಕ್ಷಿಸಬೇಕು.
  • ಏಕೆಂದರೆ ಹಳೆಯ ಅಥವಾ ಅವಧಿ ಮೀರಿದ ಮೊಟ್ಟೆಗಳನ್ನು ತಿನ್ನುವುದರಿಂದ ಆರೋಗ್ಯಕ್ಕೆ ಹಾನಿ ಉಂಟಾಗಬಹುದು
  • ಇದರಿಂದ ನೀವು ಅನಾರೋಗ್ಯಕ್ಕೆ ಗುರಿಯಾಗಬಹುದು
Egg ಫ್ರೆಶ್ ಇದೆಯಾ ಅಥವಾ ಇಲ್ಲ ಎಂಬುದು ಹೇಗೆ ತಿಳಿದುಕೊಳ್ಳಬೇಕು? ಎಕ್ಸ್ಪೈರ್ ಮೊಟ್ಟೆ ಸೇವನೆಯಿಂದ ದೂರವಿರಿ title=
Egg Freshness Test

How To Check The Egg: ಬೆಳಗಿನ ಉಪಾಹಾರ ಮತ್ತು ತಿಂಡಿಗಳಲ್ಲಿ ಮೊಟ್ಟೆ ತಿನ್ನುವವರಿಗೆ ಮೊಟ್ಟೆಯಿಂದ ತಯಾರಿಸಿದ ಆಹಾರಗಳು ತುಂಬಾ ಇಷ್ಟವಾಗುತ್ತವೆ. ಆದರೆ ಮೊಟ್ಟೆಯಲ್ಲಿಯೂ ಕೂಡ ಎಕ್ಸ್ಪೈರ್ ಆಗಿರುವ ಮೊಟ್ಟೆ  ಇರುತ್ತವೆ ಎಂಬುದು ಬಹುತೇಕರಿಗೆ ತಿಳಿದಿಲ್ಲ.  ಹೌದು, ಸ್ವಲ್ಪ ಸಮಯದ ನಂತರ ಮೊಟ್ಟೆಯು ಸಹ ತನ್ನ ಅವಧಿ ಮೀರುತ್ತದೆ. ಮೊಟ್ಟೆಯ ಮೇಲೆ ಸಾಮಾನ್ಯವಾಗಿ ಎಕ್ಸ್‌ಪೈರಿ ಡೇಟ್ ಬರೆದಿರುವುದಿಲ್ಲ. ಹೀಗಾಗಿ ಮೊಟ್ಟೆ ತಿನ್ನಲು ಯೋಗ್ಯವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಗುರುತಿಸುವುದು ಹೇಗೆ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಹೀಗಾಗಿ ಅದನ್ನು ಗುರುತಿಸಲು ನಾವು ನಿಮಗೆ ಇಲ್ಲಿ ಸುಲಭವಾದ ಪರೀಕ್ಷೆಯೊಂದನ್ನು ಹೇಳುತ್ತಿದ್ದೇವೆ.

ಬೇಕಾಗುವ ಸಾಮಗ್ರಿಗಳು
>> ಒಂದು ಗಾಜಿನ ಗ್ಲಾಸ್
>> ನೀರು
>> ಮೊಟ್ಟೆ

ತಾಜಾ ಮೊಟ್ಟೆಗಳನ್ನು ಹೇಗೆ ಗುರುತಿಸಬೇಕು?
>> ಗಾಜಿನ ಲೋಟವನ್ನು ನೀರಿನಿಂದ ತುಂಬಿಸಿ ಮತ್ತು ಅದರಲ್ಲಿ ಸಂಪೂರ್ಣ ಮೊಟ್ಟೆಯನ್ನು ಹಾಕಿ. ಮೊಟ್ಟೆಯು ನೀರಿನ ಮೇಲೆ ತೇಲುತ್ತಿದ್ದರೆ, ಅದು ಹಾಳಾಗಿದೆ ಮತ್ತು ಅದನ್ನು ಆಹಾರಕ್ಕಾಗಿ ಬಳಸಬಾರದು ಎಂಬುದನ್ನು ಅರ್ಥಮಾಡಿಕೊಳ್ಳಿ.

>> ಒಂದು ವೇಳೆ ಮೊಟ್ಟೆಯನ್ನು ನೀರಿನಲ್ಲಿ ನೇರವಾಗಿ ನಿಲ್ಲಿಸಿದಾಗ ಮೊಟ್ಟೆಯು ನೇರವಾಗಿ ನಿಲ್ಲುತ್ತಿದ್ದಾರೆ, ಅದು ಹಳೆಯದಾಗಿದೆ ಎಂದರ್ಥ. ಆದರೆ,  ಅದನ್ನು ಆಹಾರಕ್ಕಾಗಿ ಬಳಸಬಹುದು.

>> ಆದರೆ ಮೊಟ್ಟೆಯು ಒಂದು ವೇಳೆ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದರೆ, ಮೊಟ್ಟೆಯು ಸಂಪೂರ್ಣವಾಗಿ ತಾಜಾ ಇದೆ ಎಂಬುದು ಅದರ ಅರ್ಹತ ಮತ್ತು ನಿಮ್ಮ ಆಯ್ಕೆಯ ರುಚಿಕರವಾದ ಭಕ್ಷ್ಯಗಳನ್ನು ಮಾಡುವ ಮೂಲಕ ನೀವು ಅದನ್ನು ಸೇವಿಸಬಹುದು. ಇಂತಹ ಮೊಟ್ಟೆ ಸಂಪೂರ್ಣ ಪೋಷಣೆಯನ್ನು ನೀಡುತ್ತದೆ.

ಹಾಳಾದ ಮೊಟ್ಟೆಗಳನ್ನು ತಿನ್ನುವುದರಿಂದ  ಯಾವ ಸಮಸ್ಯೆಗಳು ಉಂಟಾಗುತ್ತವೆ
ನೀವು ಹೊರಗೆ ಮೊಟ್ಟೆಗಳನ್ನು ತಿನ್ನಲು ಬಯಸಿದರೆ, ಈ ಪರಿಸ್ಥಿತಿಯಲ್ಲಿ ಮೊಟ್ಟೆಯಿಂದ ಮಾಡಿದ ಆಮ್ಲೆಟ್, ಎಗ್ ರೋಲ್ ಅಥವಾ ಇತರ ಭಕ್ಷ್ಯಗಳಲ್ಲಿ ಯಾವ ರೀತಿಯ ಮೊಟ್ಟೆಗಳನ್ನು ಬಳಸಲಾಗಿದೆ ಎಂಬುದು ತಿಳಿಯಲು ಸಾಧ್ಯವಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, 24 ಗಂಟೆಗಳಿಂದ ಮುಂದಿನ 3 ರಿಂದ 4 ದಿನಗಳವರೆಗೆ, ನಿಮ್ಮ ಆರೋಗ್ಯವು ಹದಗೆಡಬಹುದು. ಅವಧಿ ಮೀರಿದ ಮೊಟ್ಟೆಯನ್ನು ತಿಂದ ನಂತರ ಈ ಲಕ್ಷಣಗಳು ದೇಹದಲ್ಲಿ ಕಾಣಿಸಿಕೊಳ್ಳುತ್ತವೆ.

>> ತೀವ್ರ ಹೊಟ್ಟೆ ನೋವು
>> ಕಿಬ್ಬೊಟ್ಟೆಯ ನೋವಿನೊಂದಿಗೆ ಸೆಳೆತ ಸಹ ಸಂಭವಿಸಬಹುದು.
>> ವಾಕರಿಕೆ
>> ವಾಂತಿ ಮತ್ತು ಅತಿಸಾರ
>> ಅತಿಸಾರ ಮತ್ತು ಅಧಿಕ ಜ್ವರ

ಇದನ್ನೂ ಓದಿ-Benefits of Khas: ಲಾವಂಚ ಬೇರಿನ ಜ್ಯೂಸ್ ಅನ್ನು ಎಂದಾದರೂ ಸೇವಿಸಿದ್ದೀರಾ? ಇಲ್ಲಿವೆ ಅದರ ಐದು ಅದ್ಭುತ ಲಾಭಗಳು

ಚಿಕಿತ್ಸೆಯ ವಿಧಾನ
ಒಂದು ವೇಳೆ ಹಾಳಾದ ಮೊಟ್ಟೆ ತಿಂದ ಅನುಮಾನ ನಿಮಗೆ ಬಂದರೆ, ನೀವು ವಿಳಂಬ ಮಾಡಬಾರದು ಮತ್ತು ಮೇಲಿನ ರೋಗಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿದಾಗ ನೀವು ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು. ಇದರಿಂದ ಕಾಯಿಲೆಯನ್ನು ನೀವು ಬೇಗ ನಿಯಂತ್ರಣಕ್ಕೆ ತರಬಹುದು.

ಇದನ್ನೂ ಓದಿ-Diabetes Mellitus: ಸಕ್ಕರೆ ಕಾಯಿಲೆ ಇರುವವರಿಗೆ ಈ ನೀರು ಒಂದು ವರದಾನವೇ ಇದ್ದಂತೆ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News