First aid Mistakes: ಗಾಯಗೊಂಡಾಗ ಅಪ್ಪಿ-ತಪ್ಪಿಯೂ ಕೂಡ ಈ ಮಿಸ್ಟೇಕ್ ಮಾಡಬೇಡಿ, ಪ್ರಾಬ್ಲಮ್ ಹೆಚ್ಚಾಗುತ್ತೆ

First aid Mistakes: ಅನೇಕ ಬಾರಿ ಗಾಯಗೊಂಡಾಗ ಅಥವಾ ಸುಟ್ಟ ಗಾಯಗಳಾದಾಗ ನಾವು ಮಾಡುವ ಕೆಲ ಮಿಸ್ಟೇಕ್ ಗಳಿಂದ ನಮಗೆ ಹಾನಿ ಉಂಟಾಗುತ್ತದೆ.

Written by - Nitin Tabib | Last Updated : Sep 14, 2021, 09:18 PM IST
  • ಸುಟ್ಟ ಗಾಯದ ಮೇಲೆ ಬೆಣ್ಣೆ ಅಥವಾ ಟೂಥ್ ಪೇಸ್ಟ್ ಸವರುವುದು ತಪ್ಪು.
  • ಗಾಯದ ಮೇಲೆ ಉಗುಳುವುದು ಕೂಡ ತಪ್ಪು
  • ಕಾಲು ಉಳುಕಿದಾಗ ಅಥವಾ ಫ್ರ್ಯಾಕ್ಚರ್ ಆದಾಗ ಬಟ್ಟೆಯಿಂದ ಶಾಖ ಕೊಡುವುದು ಕೂಡ ತಪ್ಪು.
First aid Mistakes: ಗಾಯಗೊಂಡಾಗ ಅಪ್ಪಿ-ತಪ್ಪಿಯೂ ಕೂಡ ಈ ಮಿಸ್ಟೇಕ್ ಮಾಡಬೇಡಿ, ಪ್ರಾಬ್ಲಮ್ ಹೆಚ್ಚಾಗುತ್ತೆ title=
First Aid Mistakes (File Photo)

ನವದೆಹಲಿ: First aid Mistakes - ಹಲವು  ಬಾರಿ ನಾವು ಗಾಯಗೊಂಡಾಗ ಅಥವಾ ಸುಟ್ಟು ಕೊಂಡಾಗ ಕೆಲವು ತಪ್ಪುಗಳನ್ನು (First Aid) ಮಾಡುತ್ತೇವೆ ಮತ್ತು ಅದರಿಂದ ನಮ್ಮ ಆರೋಗ್ಯಕ್ಕೆ (Health Tips) ಹಾನಿ ಉಂಟಾಗುತ್ತವೆ. ಹೆಚ್ಚಿನ ಜನರು ಸುಟ್ಟಗಾಯಗಳ ಮೇಲೆ ಐಸ್ ಉಜ್ಜುವುದು ಮತ್ತು ಗಾಯದ ಮೇಲೆ ಉಗುಳುವ ತಪ್ಪು ಮಾಡುತ್ತಾರೆ. ಅದು ಸರಿಯಾದ ಪದ್ಧತಿ ಅಲ್ಲ.

ಮೂಗಿನಿಂದ ರಕ್ತ ಸೋರುವಿಕೆ - ಶರೀರದಲ್ಲಿನ ಅತಿಯಾದ ಉಷ್ಣತೆಯ ಕಾರಣ  ಅಥವಾ ಅಲರ್ಜಿಯಿಂದಾಗಿ (Allergy), ಕೆಲವರಿಗೆ ಮೂಗಿನಿಂದ ರಕ್ತಸ್ರಾವವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಜನರು ತಲೆಯ ಮೇಲೆ ಮಲಗಲು ಸಲಹೆ ನೀಡುತ್ತಾರೆ, ಆದರೆ ವೈದ್ಯರ ಪ್ರಕಾರ, ಇದು ಮೂಗಿನಿಂದ ರಕ್ತಸ್ರಾವವನ್ನು ನಿಲ್ಲಿಸುವುದಿಲ್ಲ, ಅದು ಗಂಟಲಿಗೆ ಹೋಗುತ್ತದೆ. ಕೂಡಲೇ ವೈದ್ಯರ ಸಲಹೆ ಪಡೆಯಿರಿ.

ಗಾಯದ ಮೇಲೆ ಬ್ಯಾಂಡೇಜ್ ಹಚ್ಚುವುದು  - ಗಾಯದ ಮೇಲೆ ತಕ್ಷಣದ ಬ್ಯಾಂಡೇಜ್ ಹಚ್ಚುವುದು ಕೂಡ ಸರಿಯಾದ ಮಾರ್ಗವಲ್ಲ. ಗಾಯವು ಗುಣವಾಗಲು ಇದು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಗಾಯವನ್ನು ಸ್ವಚ್ಛಗೊಳಿಸಿ ಮತ್ತು ಕೆಲವು ಬ್ಯಾಕ್ಟೀರಿಯಾ ವಿರೋಧಿ ಔಷಧವನ್ನು ಅನ್ವಯಿಸಿ. ಇದು ಹೆಚ್ಚಿನ ಪರಿಹಾರವನ್ನು ನೀಡುತ್ತದೆ.

ಸುಟ್ಟ ಗಾಯದ (Burn Injury) ಮೇಲೆ ಐಸ್ ಹಚ್ಚುವುದು - ಅನೇಕ ಬಾರಿ ಜನರು ಸುಟ್ಟ ಗಾಯದ ಕಿರಿಕಿರಿಯಿಂದ ಪರಿಹಾರ ಪಡೆಯಲು ಆ ಸ್ಥಳದಲ್ಲಿ ಐಸ್ ಅನ್ನು ಉಜ್ಜಲು ಪ್ರಾರಂಭಿಸುತ್ತಾರೆ. ಹಾಗೆ ಮಾಡುವುದು ಸಂಪೂರ್ಣವಾಗಿ ತಪ್ಪು. ಇದು ಚರ್ಮದ ಹಾನಿಗೆ ಕಾರಣವಾಗಬಹುದು. ಸುಟ್ಟ ಮೇಲೆ ಬೆಣ್ಣೆ ಅಥವಾ ಟೂತ್ ಪೇಸ್ಟ್ ಹಚ್ಚುವುದನ್ನು ತಪ್ಪಿಸಿ. ಸುಟ್ಟ ಜಾಗಕ್ಕೆ ತಣ್ಣೀರು ಸುರಿಯಿರಿ.

ಕಣ್ಣುಗಳನ್ನು ಉಜ್ಜುವುದು - ಹಲವು ಬಾರಿಗೆ ಕಣ್ಣಿನಲ್ಲಿ ದೂಳಿನ ಕಣಗಳು ಹೋದಾಗ, ಜನರು , ತಮ್ಮ ಕಣ್ಣುಗಳನ್ನು ಉಜ್ಜಲು ಪ್ರಾರಂಭಿಸುತ್ತಾರೆ. ಅದು ತಪ್ಪು ಮಾರ್ಗವಾಗಿದೆ. ಹೀಗೆ ಮಾಡುವುದರಿಂದ ನಿಮ್ಮ ಕಣ್ಣುಗಳು ಹಾನಿಗೊಳಗಾಗಬಹುದು. ನೀರಿನಿಂದ ಕಣ್ಣುಗಳನ್ನು ಚೆನ್ನಾಗಿ ತೊಳೆಯಿರಿ.

ಗಾಯಗೊಂಡ ವ್ಯಕ್ತಿಯನ್ನು ನಡೆಸುವುದು - ಹಲವು ಬಾರಿ ದುರ್ಘಟನೆಯಲ್ಲಿ (Accident) ಗಾಯಗೊಂಡ ವ್ಯಕ್ತಿಯನ್ನು ಸ್ವಲ್ಪ ಹೊತ್ತು ನಡೆದಾಡಲು ಸಲಹೆ ನೀಡಲಾಗುತ್ತದೆ. ಆದರೆ, ಅದು ಸರಿಯಲ್ಲ. ಇದು ಸ್ಪೈನಲ್ ಕಾರ್ಡ್ ಗಾಯಕ್ಕೆ ಕಾರಣವಾಗಬಹುದು.

ಇದನ್ನೂ ಓದಿ-ಮಹಿಳೆಯರು ಈ ಸಮಯದಲ್ಲಿ ಪ್ರತಿದಿನ 1 ಬಾಳೆಹಣ್ಣನ್ನು ತಿಂದರೆ ದೂರವಾಗುತ್ತವೆ ಈ ಸಮಸ್ಯೆಗಳು

ಉಳುಕಿದಾಗ ಕಾಸುವುದು - ಕಾಲು ಉಳುಕಿದಾಗ ಅಥವಾ ಫ್ರ್ಯಾಕ್ಚರ್ ಆದ ಮೇಲೆ ಬಿಸಿ ಬಟ್ಟೆಯಿಂದ ಶಾಖ ಕೊಡಲು ಸೂಚಿಸಲಾಗುತ್ತದೆ. ಇದರಿಂದ ಬಾವು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗುತ್ತದೆ. ವೈದ್ಯರ ಸಲಹೆ ಪಡೆಯಿರಿ.

ಇದನ್ನೂ ಓದಿ-Food For Healthy Eyes : ಕಣ್ಣಿನ ಆರೋಗ್ಯಕ್ಕೆ ನಿಮ್ಮ ಆಹಾರದಲ್ಲಿರಲಿ ಈ ಐದು ವಸ್ತುಗಳು

ಗಾಯದ ಮೇಲೆ ಉಗುಳುವುದು -  ಗಾಯದ ಮೇಲೆ ಉಗುಳು ಹಚ್ಚುವುದು ಕೂಡ ಸರಿಯಲ್ಲ. ಲಾಲಾ ರಸದಲ್ಲಿರುವ ತತ್ವಗಳು ಗಾಯದ ಮೇಲಿನ ಕ್ರಿಮಿಗಳನ್ನು ಕೊಳ್ಳುತ್ತದೆ ಎಂದು ಜನರ ಭಾವನೆಯಾಗಿದೆ. ಆದರೆ, ಇದು ಸರಿಯಲ್ಲ. ಮಾನವರ ಲಾಲಾ ರಸ ಮೊದಲಿನಿಂದಲೇ ಬ್ಯಾಕ್ಟೀರಿಯಾಗಳನ್ನು ಹೊಂದಿರುತ್ತದೆ. ಇದು ನಿಮ್ಮ ಗಾಯವನ್ನು ಇನ್ನಷ್ಟು ಉಲ್ಭಣಿಸಬಹುದು.

ಇದನ್ನೂ ಓದಿ-Mouth Breathing: ನೀವೂ ಮಲಗಿರುವಾಗ ಬಾಯಿಯಿಂದ ಉಸಿರಾಡುತ್ತೀರಾ, ಇಲ್ಲಿವೆ ಅದರ Side Effects

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News