Iron Deficiency Remedy : ದೇಹದಲ್ಲಿ ಕೆಂಪು ರಕ್ತ ಕಣಗಳ ಕೊರತೆಯಿದ್ದರೆ ಈ ಐದು ಆಹಾರಗಳನ್ನು ಸೇವಿಸಿದರೆ ಸಾಕು !

Iron Deficiency  Remedy : ಕಬ್ಬಿಣದ ಕೊರತೆಯನ್ನು ನಿವಾರಿಸಲು ಅನೇಕ ಮಾತುಗಳು, ಸಿರಪ್ ಗಳು ಲಭ್ಯವಿದೆ. ಆದರೆ ಕೆಲವು ಆಹಾರಗಳ ಸಹಾಯದಿಂದ ದೇಹದಲ್ಲಿನ ರಕ್ತದ ಕೊರತೆಯನ್ನು ನೀಗಿಸಬಹುದು. ದೇಹದಲ್ಲಿ ಕೆಂಪು ರಕ್ತ ಕಣಗಳನ್ನು ಹೆಚ್ಚು ಮಾಡುವ ಆಹಾರಗಳ ಬಗ್ಗೆ ಇಲ್ಲಿ  ನೋಡೋಣ.   

Written by - Ranjitha R K | Last Updated : Mar 11, 2024, 03:15 PM IST
  • ಕಬ್ಬಿಣದ ಕೊರತೆ ಎಂದರೆ ಕೆಂಪು ರಕ್ತ ಕಣಗಳ ಪ್ರಮಾಣದಲ್ಲಿ ಇಳಿಕೆ
  • ಕಬ್ಬಿಣದ ಕೊರತೆ ಎದುರಿಸುತ್ತಿದ್ದರೆ, ಬೇರೆ ಬೇರೆ ಸಮಸ್ಯೆಗಳು ಕೂಡಾ ಕಾಡುತ್ತದೆ
  • ಕೆಂಪು ರಕ್ತ ಕಣಗಳನ್ನು ಹೆಚ್ಚು ಮಾಡುವ ಆಹಾರಗಳ ಪಟ್ಟಿ ಇಲ್ಲಿದೆ
Iron Deficiency  Remedy : ದೇಹದಲ್ಲಿ ಕೆಂಪು ರಕ್ತ ಕಣಗಳ ಕೊರತೆಯಿದ್ದರೆ  ಈ ಐದು ಆಹಾರಗಳನ್ನು ಸೇವಿಸಿದರೆ ಸಾಕು ! title=

Iron Deficiency : ದೇಹದಲ್ಲಿ ಕಬ್ಬಿಣದ ಕೊರತೆ ಎಂದರೆ ದೇಹದ ಎಲ್ಲಾ  ಭಾಗಗಳಿಗೆ ಆಮ್ಲಜನಕವನ್ನು ತಲುಪಿಸುವಲ್ಲಿ ನೆರವಾಗುವ ಕೆಂಪು ರಕ್ತ ಕಣಗಳ ಪ್ರಮಾಣದಲ್ಲಿ ಇಳಿಕೆ ಎಂದರ್ಥ. ದೇಹದಲ್ಲಿ ಕಬ್ಬಿಣದ ಕೊರತೆ ಎದುರಿಸುತ್ತಿದ್ದರೆ, ಬೇರೆ ಬೇರೆ ಸಮಸ್ಯೆಗಳು ಕೂಡಾ ಕಾಡಲು ಆರಂಭಿಸುತ್ತದೆ. ಗರ್ಭಿಣಿ ಮತ್ತು ಮುಟ್ಟಿನ ಮಹಿಳೆಯರಲ್ಲಿ ಕಬ್ಬಿಣದ ಕೊರತೆಯ ಅಪಾಯವು ಹೆಚ್ಚಾಗಿ ಕಂಡು ಬರುತ್ತದೆ. 

ಕಬ್ಬಿಣದ ಕೊರತೆಯನ್ನು ನಿವಾರಿಸಲು ಅನೇಕ ಮಾತುಗಳು, ಸಿರಪ್ ಗಳು ಲಭ್ಯವಿದೆ. ಆದರೆ ಕೆಲವು ಆಹಾರಗಳ ಸಹಾಯದಿಂದ ದೇಹದಲ್ಲಿನ ರಕ್ತದ ಕೊರತೆಯನ್ನು ನೀಗಿಸಬಹುದು. ದೇಹದಲ್ಲಿ ಕೆಂಪು ರಕ್ತ ಕಣಗಳನ್ನು ಹೆಚ್ಚು ಮಾಡುವ ಆಹಾರಗಳ ಬಗ್ಗೆ ಇಲ್ಲಿ  ನೋಡೋಣ. 

ಇದನ್ನೂ ಓದಿ : Diabetes Diet ಆಗಿ ಸೇವಿಸಿ ಈ ಸಣ್ಣ ತರಕಾರಿ ! ತಿಂದ ತಕ್ಷಣ ನಾರ್ಮಲ್ ಆಗಿ ಬಿಡುತ್ತದೆ ಬ್ಲಡ್ ಶುಗರ್

ದೇಹದಲ್ಲಿ ಕಬ್ಬಿಣದ ಅಂಶ ಕಡಿಮೆಯಾಗಿದೆ ಎಂದು ಗುರುತಿಸುವುದು ಹೇಗೆ? :
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಪ್ರಕಾರ, ಕಬ್ಬಿಣದ ಕೊರತೆಯ ಲಕ್ಷಣಗಳು ಆಯಾಸ, ತಲೆನೋವು, ಚಡಪಡಿಕೆ, ರೆಸ್ಟ್‌ಲೆಸ್ ಲೆಗ್ಸ್ ಸಿಂಡ್ರೋಮ್, ಹೃದಯ ಸಮಸ್ಯೆಗಳು, ಗರ್ಭಾವಸ್ಥೆಯ ತೊಂದರೆಗಳು, ನಿಧಾನ ಬೆಳವಣಿಗೆಯನ್ನು  ಒಳಗೊಂಡಿರುತ್ತದೆ.

ಸೊಪ್ಪು : 
ಫುಡ್ಸ್ ಡೇಟಾ ಸೆಂಟರ್ ಪ್ರಕಾರ, 100 ಗ್ರಾಂ  ಪಾಲಕ್ ಸೊಪ್ಪಿನಲ್ಲಿ 2.7 ಮಿಗ್ರಾಂ ಕಬ್ಬಿಣಡ ಅಂಶ ಇರುತ್ತದೆ. ಅಷ್ಟು ಮಾತ್ರವಲ್ಲದೆ, ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ. ರಕ್ತಹೀನತೆಯ ಸಮಸ್ಯೆಯಿಂದ ಬಳಲುತ್ತಿರುವವರು ಪಾಲಕ್ ಸೊಪ್ಪು ಸೇವಿಸಬೇಕು.   ಇದರ ಸೇವನೆಯು ತುಂಬಾ ಪ್ರಯೋಜನಕಾರಿಯಾಗಿದ್ದು ರಕ್ತದ ಪ್ರಮಾಣವನ್ನು ಹೆಚ್ಚು ಮಾಡುತ್ತದೆ.  

ಕಡಲೆ ಕಾಳು : 
ಒಂದು ಕಪ್ ಬೇಯಿಸಿದ ಕಡಲೆಯು ಸುಮಾರು 6.6 ಮಿಗ್ರಾಂ ಕಬ್ಬಿಣವನ್ನು ಹೊಂದಿರುತ್ತದೆ. ದೇಹದಲ್ಲಿ ಕಬ್ಬಿಣದ ಅಂಶವನ್ನು ಹೆಚ್ಚಿಸಲು ಕಡಲೆ ಕಾಳು  ಅತ್ಯುತ್ತಮ  ಪರಿಹಾರವಾಗಿದೆ. 

ಇದನ್ನೂ ಓದಿ : High BP Control Tips: ಅಧಿಕ ರಕ್ತದೊತ್ತಡದ ರೋಗಿಗಳಿಗೆ ರಾಮಬಾಣ ಬಿಳಿ ಬಣ್ಣದ ಬೀಜಗಳು!

ಕುಂಬಳಕಾಯಿ ಬೀಜಗಳು : 
28 ಗ್ರಾಂ ಕುಂಬಳಕಾಯಿ ಬೀಜಗಳಲ್ಲಿ 2.5 ಮಿಗ್ರಾಂ ಕಬ್ಬಿಣವಿರುತ್ತದೆ. ಇದಲ್ಲದೆ ವಿಟಮಿನ್ ಕೆ, ಸತು, ಮ್ಯಾಂಗನೀಸ್ ಮತ್ತು ಮೆಗ್ನೀಸಿಯಮ್ ನಿಂದಲೂ ಕುಂಬಳಕಾಯಿ ಬೀಜಗಳು ಸಮೃದ್ಧವಾಗಿದೆ. ಇದು ದೇಹದ ಕಬ್ಬಿಣದ ಕೊರತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. 

ಬ್ರೊಕೊಲಿ : 
1 ಕಪ್ ಬೇಯಿಸಿದ ಬ್ರೊಕೊಲಿ  1 ಮಿಗ್ರಾಂ ಕಬ್ಬಿಣವನ್ನು ಹೊಂದಿರುತ್ತದೆ. ಅಲ್ಲದೆ, ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿರುವ ಇದು ದೇಹವು ಕಬ್ಬಿಣವನ್ನು ಚೆನ್ನಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಇದರ ಸೇವನೆಯು ಕ್ಯಾನ್ಸರ್ ತಡೆಗಟ್ಟುವಲ್ಲಿಯೂ ಪರಿಣಾಮಕಾರಿಯಾಗಿದೆ.  

ಡಾರ್ಕ್ ಚಾಕೊಲೇಟ್ : 
28 ಗ್ರಾಂ ಡಾರ್ಕ್ ಚಾಕೊಲೇಟ್ 3.4 ಮಿಗ್ರಾಂ ಕಬ್ಬಿಣವನ್ನು ಹೊಂದಿರುತ್ತದೆ. ಇದರೊಂದಿಗೆ ಇದನ್ನು ಸೇವಿಸುವುದರಿಂದ ಮೆಗ್ನೀಸಿಯಮ್ ಮತ್ತು ತಾಮ್ರವೂ ಕೂಡಾ ದೇಹಕ್ಕೆ ದೊರೆಯುತ್ತದೆ. ರಕ್ತಹೀನತೆಯನ್ನು ತಡೆಗಟ್ಟಲು ಡಾರ್ಕ್ ಚಾಕೊಲೇಟ್ ಆರೋಗ್ಯಕರ ಮತ್ತು ಟೇಸ್ಟಿ ಆಯ್ಕೆಯಾಗಿದೆ.

(ಸೂಚನೆ : ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee Kannada News ಅದನ್ನು ಅನುಮೋದಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News