ಬೆಂಗಳೂರು : ಮಧುಮೇಹವು (Diabetes) ಎಷ್ಟು ಗಂಭೀರವಾದ ಕಾಯಿಲೆ ಎಂದರೆ, ಯಾರಿಗಾದರೂ ಒಮ್ಮೆ ಬಂದರೆ, ಅದಕ್ಕೆ ಸಂಬಂಧಿಸಿದ ಸಮಸ್ಯೆಗಳು ಇಡೀ ಜೀವನ ಕಾಡುತ್ತವೆ. ಮಧುಮೇಹವಿದ್ದಾಗ ದೇಹದಲ್ಲಿ ಇನ್ಸುಲಿನ್ (Insulin) ಸರಿಯಾದ ಪ್ರಮಾಣದಲ್ಲಿ ಉತ್ಪತ್ತಿಯಾಗುವುದಿಲ್ಲ ಅಥವಾ ದೇಹವು ಅದನ್ನು ಹೆಚ್ಚು ಬಳಸಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಹಲವಾರು ಸಮಸ್ಯೆಗಳು ಎದುರಾಗುತ್ತವೆ.
ಮಧುಮೇಹಕ್ಕೆ 4 ದೊಡ್ಡ ಕಾರಣಗಳು :
ಇನ್ಸುಲಿನ್ ಕೊರತೆಯು ಅನೇಕ ಜೀವಕೋಶಗಳು ಮತ್ತು ಅಂಗಗಳ ಮೇಲೆ ಪರಿಣಾಮ ಬೀರುತ್ತದೆ. ಮಧುಮೇಹದ ಕಾರಣದಿಂದಾಗಿ ಹೃದಯಾಘಾತ (Heart attack), ಕಣ್ಣಿನ ದೌರ್ಬಲ್ಯ ಮತ್ತು ಮೂತ್ರಪಿಂಡದ ಕಾಯಿಲೆ (Kidney problem)ಎದುರಾಗುತ್ತವೆ. ಮಧುಮೇಹಕ್ಕೆ ಕಾರಣವಾಗುವ ನಾಲ್ಕು ಪ್ರಮುಖ ಕಾರಣಗಳು ಇವು :
ಇದನ್ನೂ ಓದಿ : Health Tips: ಕೆಮ್ಮು ಉಸಿರಾಟದ ಸಮಸ್ಯೆ ಇದ್ದರೆ ಎದುರಾಗಲಿದೆ ದೊಡ್ಡ ಗಂಡಾಂತರ..!
1.ಅನುವಂಶಿಕ ಕಾರಣ :
ಪ್ರಪಂಚದಾದ್ಯಂತ ನಡೆಸಿದ ಸಂಶೋಧನೆಯಲ್ಲಿ, ಕುಟುಂಬದಲ್ಲಿ ಯಾರಿಗಾದರೂ ಮಧುಮೇಹ (Diabetes) ಇದ್ದರೆ, ಅದು ನಿಮ್ಮಲ್ಲಿಯೂ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು ಇರುತ್ತದೆ. ಅದಕ್ಕಾಗಿಯೇ ಇದನ್ನು ಅನುವಂಶೀಯ ಕಾಯಿಲೆ ಎಂದು ಕರೆಯುತ್ತಾರೆ.
2. ಅನಾರೋಗ್ಯಕರ ಜೀವನಶೈಲಿ :
ನಿಮ್ಮ ದೇಹವು ಯಾವಾಗಲೂ ಸಕ್ರಿಯವಾಗಿರುವುದು ಬಹಳ ಮುಖ್ಯ. ದೇಹವನ್ನು ಸ್ವಲ್ಪವೂ ದಣಿಸದೆ ಹೋದರೆ, ಗಂಭೀರ ಕಾಯಿಲೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ, ಪ್ರತಿದಿನ ಕನಿಷ್ಠ ಒಂದು ಗಂಟೆಯಾದರೂ ವ್ಯಾಯಾಮ (Exercise)ಮಾಡುವುದು ಅಗತ್ಯವಾಗಿರುತ್ತದೆ.
ಇದನ್ನೂ ಓದಿ : ಸಂಧಿವಾತ ರೋಗಿಗಳು ಮೊಸರು ತಿನ್ನಲೇಬಾರದು.. ಯಾಕೆ ಗೊತ್ತಾ?
3. ಅತಿಯಾಗಿ ಸಿಹಿ ತಿನ್ನುವುದು :
ಕೆಲವು ಜನರು ಹೆಚ್ಚು ಸಿಹಿತಿಂಡಿಗಳನ್ನು ತಿನ್ನಲು ಇಷ್ಟಪಡುತ್ತಾರೆ. ಹೀಗೆ ಅತಿಯಾಗಿ ಸಿಹಿ ಪದಾರ್ಥಗಳನ್ನು ತಿನ್ನುವ ಮೊದಲು ಇದು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ ಎನ್ನುವುದನ್ನು ತಿಳಿದುಕೊಳ್ಳಬೇಕು. ಏಕೆಂದರೆ ಕ್ಯಾಲೊರಿಗಳ ಹೆಚ್ಚಳವು ಮಧುಮೇಹಕ್ಕೆ ಪ್ರಮುಖ ಕಾರಣವಾಗುತ್ತದೆ.
4. ಬೊಜ್ಜು :
ನಿಮ್ಮ ತೂಕವು ನಿರಂತರವಾಗಿ ಹೆಚ್ಚಾಗುತ್ತಿದ್ದರೆ, ಇಂದಿನಿಂದಲೇ ವ್ಯಾಯಾಮವನ್ನು ಪ್ರಾರಂಭಿಸಿ. ಏಕೆಂದರೆ ಬೊಜ್ಜು (fat)ಹೆಚ್ಚಾಗುವುದರಿಂದ ದೇಹದೊಳಗಿನ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು (blood sugar level) ನಿಯಂತ್ರಿಸಲು ಕಷ್ಟವಾಗುತ್ತದೆ. ಹೀಗಾದಾಗ ಕ್ರಮೇಣ ಇದು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ : Virus alert! ಜಗತ್ತನ್ನು ಆತಂಕಕ್ಕೀಡು ಮಾಡಿರುವ ಲಸ್ಸಾ ಜ್ವರದ ಬಗ್ಗೆ ನಿಮಗೆಷ್ಟು ಗೊತ್ತು?
ಈ ಬಗ್ಗೆ ಇರಲಿ ಎಚ್ಚರ :
ನಿಮಗೆ ಮಧುಮೇಹ ಬಾಧಿಸಬಾರದು ಎಂದಾದರೆ ಇಂದೇ ಎಚ್ಚೆತ್ತುಕೊಳ್ಳಿ. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಅನಾರೋಗ್ಯಕರ ಜೀವನಶೈಲಿಯನ್ನು (unhealthy lifestyle) ಬಿಟ್ಟು ಬಿಡಿ. ಆರೋಗ್ಯಕರ ಆಹಾರಕ್ಕೆ ಆದ್ಯತೆ ನೀಡಿ. ಮಧುಮೇಹವನ್ನು ತಪ್ಪಿಸಲು, ದೇಹ ಅಗತ್ಯ ಚಟುವಟಿಕೆಗಳಲ್ಲಿ ತೊಡಗಬೇಕು. ಕ್ಯಾಲೊರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬರ್ನ್ ಮಾಡಬೇಕು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.