ನವದೆಹಲಿ: ಹೆಚ್ಚಾಗಿ ನಾವೆಲ್ಲರು ಸೋಶಿಯಲ್ ಮೀಡಿಯಾಗಳ ಬಗ್ಗೆ ನೆಗಟಿವ್ ಆದ ಪರಿಣಾಮಗಳ ಬಗ್ಗೆ ಓದಿರುತ್ತೇವೆ.ಆದರೆ ಈಗ ನಾವು ನಿಮಗೆ ಹೇಳ ಹೊರಟಿರುವುದು ಅದರಿಂದಾಗುವ ಸದುಪಯೋಗಗಳ ಬಗ್ಗೆ. ಹೌದು ಈಗ ಹೊಸ ಅಧ್ಯಯನಯೊಂದು ಈ ಅಂಶವನ್ನು ಬಹಿರಂಗ ಪಡಿಸಿದೆ.
ಈ ಅಧ್ಯಯನದ ಪ್ರಕಾರ ಸೋಶಿಯಲ್ ಮಿಡಿಯಾಗಳನ್ನು ಬಳಸುವುದರ ಮೂಲಕ ಹಿರಿಯರಲ್ಲಿನ ಖಿನ್ನತೆಯನ್ನು ನಿವಾರಿಸುತ್ತದೆ ಎಂದು ತಿಳಿಸಿದೆ. ಇದನ್ನು ಬಳಸುವುದರ ಮೂಲಕ ಮಾನವನ ಮೇಲಾಗುವ ಋಣಾತ್ಮಕ ಪರಿಣಾಮವನ್ನು ಅದು ಕಡಿಮೆಗೊಳಿಸುತ್ತದೆ ಎಂದು ಈ ಸ್ಟಡಿ ತಿಳಿಸಿದೆ. ಜೆರೋಂಟೊಲಜಿ ನಿಯತಕಾಲಿಕೆಯಲ್ಲಿ ಇದನ್ನು ಪ್ರಕಟಿಸಲಾಗಿದೆ.
ಯುನಿವರ್ಸಿಟಿ ಆಫ್ ಮಿಚಿಗನ್ ನಡೆಸಿದ ಈ ಅಧ್ಯಯನವು ವೃದ್ಯಾಪ್ಯದತ್ತ ಹೊರಳುತ್ತಿರುವ ಸಮಾಜದಲ್ಲಿ ಹೆಚ್ಚಾಗಿ ಸಾಮಾಜಿಕ ಏಕಾಂತತೆ ಮತ್ತು ಒಂಟಿತನವು ಯೋಗಕ್ಷೇಮದ ಪ್ರಮುಖ ನಿರ್ಣಾಯಕ ಅಂಶಗಳಾಗಿವೆ. ಆದ್ದರಿಂದ ಇದು ಅಂತವರ ಮೇಲೆ ಸಕಾರಾತ್ಮಕ ಪರಿಣಾಮವನ್ನು ಉಂಟು ಮಾಡುತ್ತದೆ ಎಂದು ಲೇಖಕ ಶಾನನ್ ಆಂಗ್ ಹೇಳಿದ್ದಾರೆ.ನಮ್ಮ ಫಲಿತಾಂಶಗಳು ಪ್ರಾಯಶಃ ಇತರ ರೀತಿಯ ಪರಿಸ್ಥಿತಿಗಳಿಗೆ ವಿಸ್ತರಿಸಬಹುದು ಉದಾಹರಣೆಗೆ, ದೀರ್ಘಕಾಲದ ಅನಾರೋಗ್ಯಗಳು, ಕ್ರಿಯಾತ್ಮಕ ಮಿತಿಗಳು ಎಂದು ಆಂಗ್ ಹೇಳಿದ್ದಾರೆ.
ಆದಾಗ್ಯೂ, ವೃದ್ದರು ಬಳಸುವ ಸಾಮಾಜಿಕ ಮಾಧ್ಯಮದ ಪ್ರಕಾರಗಳ ನಡುವೆ ಈ ಡೇಟಾವನ್ನು ತಿಳಿಸಿಲ್ಲ. ಸಾಮಾನ್ಯವಾಗಿ ಬಿಲ್ಗಳನ್ನು ಪಾವತಿಸುವ ಅಥವಾ ದಿನಸಿಗಳಿಗೆ ಶಾಪಿಂಗ್ ಮಾಡುವಂತಹ ವಿವಿಧ ಆನ್ಲೈನ್ ಬಳಕೆಗಳನ್ನು ಇದರಲ್ಲಿ ಸೇರಿಸಲಾಗಿದೆ.ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಸಾಧ್ಯತೆಯಿಲ್ಲದ ಹಿರಿಯರಿಗೆ ಮುಖತಃ ಸಂಭಾಷಣೆಗಳು ಮಾನಸಿಕ ಪ್ರಯೋಜನಗಳನ್ನು ನೀಡುತ್ತದೆ ಎಂದು ಅಧ್ಯಯನ ತಿಳಿಸಿದೆ.