ನವದೆಹಲಿ: ನೀರನ್ನು ಸ್ವಚ್ಛಗೊಳಿಸಲು ಹಾಗೂ ಬ್ಯಾಕ್ಟೀರಿಯಾದಿಂದ ರಕ್ಷಿಸಲು ಪಟಕವನ್ನು ಬಳಸಲಾಗುತ್ತದೆ. ಆದರೆ ಇದನ್ನು ಆರೋಗ್ಯ, ಸೌಂದರ್ಯ ಮತ್ತು ಇತರೆ ಪ್ರಯೋಜನೆಗಳನ್ನು ಪಡೆಯಲೂ ಸಹ ಬಳಸಬಹುದಾಗಿದೆ.
ಸುಕ್ಕು ನಿವಾರಕ
ಸುಕ್ಕುಗಳನ್ನು ತೊಡೆದುಹಾಕಲು, ಒಂದು ಸಣ್ಣ ತುಂಡು ಪಟಕವನ್ನು ಒದ್ದೆ ಮಾಡಿ, ಅದನ್ನು ನಿಮ್ಮ ಮುಖದ ಮೇಲೆ ನಿಧಾನವಾಗಿ ಉಜ್ಜಿಕೊಳ್ಳಿ. ಸ್ವಲ್ಪ ಸಮಯದ ನಂತರ ರೋಸ್ ವಾಟರ್ ನಿಂದ ಮುಖ ತೊಳೆಯಿರಿ. ಅದರ ನಂತರ ಮಾಯಿಶ್ಚರೈಸರ್ ಬಳಸಿ. ಕೆಲವು ದಿನಗಳ ನಂತರ, ಚರ್ಮದ ಸುಕ್ಕುಗಳು ಕಣ್ಮರೆಯಾಗುವುದನ್ನು ನೀವು ಗಮನಿಸಬಹುದು.
ತಲೆಯಲ್ಲಿನ ಶುಷ್ಕತೆ ನಿವಾರಕ
ತಲೆಯಲ್ಲಿ ಉಂಟಾಗುವ ಶುಷ್ಕತೆಯ ನಿವಾರಣೆಗೆ ಶಾಂಪೂ ಜೊತೆ ಚಿಟಿಕೆ ಪಟಕ ಮತ್ತು ಉಪ್ಪನ್ನು ಸೇರಿಸಿ ನಿಮ್ಮ ತಲೆಯನ್ನು ತೊಳೆಯಿರಿ. ಇದು ತಲೆಯಿಂದ ಶುಷ್ಕತೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ತಲೆಯ ಚರ್ಮದಲ್ಲಿ ತೇವಾಂಶದ ಕೊರತೆಯಿಂದಾಗಿ ಕೂದಲಿಗೆ ಶುಷ್ಕತೆ ಉಂಟಾಗುತ್ತದೆ.
ಹಿಮ್ಮಡಿ ಒಡೆತ ನಿವಾರಕ
ಖಾಲಿ ಬಟ್ಟಲಿಗೆ ಪಟಕವನ್ನು ಹಾಕಿ ಅದನ್ನು ನೊರೆ ಬರುವವರೆಗೆ ಕಾಯಿಸಿ. ನಂತರ ಅದು ತಣ್ಣಗಾದ ಬಳಿಕ ಅದಕ್ಕೆ ತೆಂಗಿನ ಎಣ್ಣೆಯನ್ನು ಬೆರೆಸಿ ಒಡೆದ ಹಿಮ್ಮಡಿಗೆ ಹಚ್ಚಿ. ಇದರಿಂದ ನಿಮಗೆ ಆರಾಮ ಸಿಗುತ್ತದೆ.
ಅತಿಯಾದ ಬೆವರು ಬರುತ್ತಿದ್ದರೆ ಪಟಕ ಬಳಸಿ
ಅತಿಯಾಗಿ ಬೆವರುವ ಜನರಿಗೆ ಪಾತಕದ ಬಳಕೆ ಸೂಕ್ತ ಎಂದು ಹೇಳಲಾಗುತ್ತದೆ. ಈ ಜನರು ಸ್ನಾನದ ವೇಳೆ ಬಕೆಟ್ ನೀರಿನಲ್ಲಿ ಪಾತಕವನ್ನು ಬೆರೆಸಿ ಆ ನೀರಿನಿಂದ ಸ್ನಾನ ಮಾಡಬೇಕು.
ಮೂಗಿನಲ್ಲಿ ರಕ್ತದ ನಾಳ ಒಡೆದಾಗ
ಮೂಗಿನಲ್ಲಿ ರಕ್ತನಾಳ ಒಡೆದು ಮೂಗಿನಿಂದ ರಕ್ತ ಸೋರುತ್ತಿರುವ ವೇಳೆ ಪಾತಕವನ್ನು ನೀರಿನಲ್ಲಿ ಬೆರೆಸಿ ಅದನ್ನು ಹನಿ ಹನಿಯಾಗಿ ಮೂಗಿನಲ್ಲಿ ಹಾಕಿ. ಇದರಿಂದ ರಕ್ತಶ್ರಾವ ನಿಲ್ಲುತ್ತದೆ.
ತುರಿಕೆ ನಿವಾರಕ
ತುರಿಕೆ ನಿವಾರಣೆಗಾಗಿಯೂ ಕೂಡ ಪಟಕವನ್ನುಬಳಸುತ್ತಾರೆ. ಇದಕ್ಕಾಗಿ ಪಾತಕವನ್ನು ಸುಟ್ಟು ಅದರ ಬೂದಿ ತಯಾರಿಸಿ. ಬಳಿಕ ಅದಕ್ಕೆ ಮೊಟ್ಟೆಯ ಬಿಳಿ ಭಾಗ ಬೆರೆಸಿ, ಅದರಿಂದ ಮಸಾಜ್ ಮಾಡಿ. ಇದರಿಂದ ಎಲ್ಲ ರೀತಿಯ ತುರಿಕೆ ನಿವಾರಣೆಯಾಗುತ್ತದೆ.
ಕೆಮ್ಮು ನಿವಾರಕ
ನಿತ್ಯ ಒಂದು ಗ್ಲಾಸ್ ನೀರಿಗೆ ಪಟಕವನ್ನು ಬೆರೆಸಿ ಬೆಳಗ್ಗೆ ಮತ್ತು ಸಂಜೆಯ ಹೊತ್ತು ಸೇವಿಸಿದರೆ ಕೆಮ್ಮಿನ ಸಮಸ್ಯೆ ನಿವಾರಣೆಯಾಗುತ್ತದೆ. ಅಷ್ಟೇ ಅಲ್ಲ ದಮ್ಮು ಅಥವಾ ಅಸ್ತಮಾ ನಿವಾರಣೆಯಲ್ಲಿಯೂ ಕೂಡ ಈ ಉಪಾಯ ಲಾಭಕಾರಿ ಎನ್ನಲಾಗಿದೆ.
ಗಾಯ ನಿವಾರಕ
ಪಟಕವನ್ನು ಬಿಸಿ ನೀರಿನಲ್ಲಿ ಬೆರೆಸಿ ಆ ನೀರಿನಿಂದ ದಿನದಲ್ಲಿ ಎರಡು ಬಾರಿ ಗಾಯವನ್ನು ತೊಳೆಯಿರಿ. ಇದರಿಂದ ಗಾಯ ಬೇಗ ನಿವಾರಣೆಯಾಗುತ್ತದೆ.