ವಿಟಮಿನ್ ಡಿ ಕೊರತೆಯನ್ನು ನೀಗಿಸುವುದು ಹೇಗೆ?

ವಿಟಮಿನ್ ಡಿ ಕೊರತೆ:  ನಮ್ಮ ದೇಹಕ್ಕೆ ವಿಟಮಿನ್ ಡಿ ಬಹಳ ಮುಖ್ಯ. ದೇಹದಲ್ಲಿ ವಿಟಮಿನ್ ಡಿ ಕೊರತೆಯು ರೋಗ ನಿರೋಧಕ ಶಕ್ತಿಯನ್ನು ಕುಂದಿಸುತ್ತದೆ, ಮಾತ್ರವಲ್ಲ ಹಲವು ಕಾಯಿಲೆಗಳಿಗೆ ಗುರಿ ಮಾಡುತ್ತದೆ. ಹಾಗಾಗಿ, ದೇಹದಲ್ಲಿ ವಿಟಮಿನ್ ಡಿ ಕೊರತೆ ಆಗದಂತೆ ನಿಗಾವಹಿಸುವುದು ಬಹಳ ಮುಖ್ಯ.

Written by - Yashaswini V | Last Updated : Jul 29, 2022, 10:34 AM IST
  • ಸೂರ್ಯನ ಬೆಳಕು ನಮ್ಮ ದೇಹದಲ್ಲಿನ ಈ ನಿರ್ದಿಷ್ಟ ಪೋಷಕಾಂಶದ ಕೊರತೆಯನ್ನು ಪೂರೈಸುತ್ತದೆ.
  • ಸೂರ್ಯನನ್ನು ವಿಟಮಿನ್ ಡಿ ಯ ಅತ್ಯುತ್ತಮ ಮೂಲ
  • ವಿಟಮಿನ್ ಡಿ ಕೊರತೆಯು ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ.
ವಿಟಮಿನ್ ಡಿ ಕೊರತೆಯನ್ನು ನೀಗಿಸುವುದು ಹೇಗೆ? title=
Vitamin D Deficiency

ವಿಟಮಿನ್ ಡಿ ಕೊರತೆ:  ನಾವು ಆರೋಗ್ಯವಾಗಿರಲು ಪೋಷಕಾಂಶಗಳು ಬಹಳ ಮುಖ್ಯ. ದೇಹದಲ್ಲಿ ಪೋಷಕಾಂಶಗಳ ಕೊರತೆ ಉಂಟಾದರೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಕಂಡು ಬರುತ್ತವೆ. ಅದರಲ್ಲೂ ನಮ್ಮ ದೇಹಕ್ಕೆ ವಿಟಮಿನ್ ಡಿ ಬಹಳ ಮುಖ್ಯ. ದೇಹದಲ್ಲಿ ವಿಟಮಿನ್ ಡಿ ಕೊರತೆಯು ರೋಗ ನಿರೋಧಕ ಶಕ್ತಿಯನ್ನು ಕುಂದಿಸುತ್ತದೆ, ಮಾತ್ರವಲ್ಲ ಹಲವು ಕಾಯಿಲೆಗಳಿಗೆ ಗುರಿ ಮಾಡುತ್ತದೆ. ಹಾಗಾಗಿ, ದೇಹದಲ್ಲಿ ವಿಟಮಿನ್ ಡಿ ಕೊರತೆ ಆಗದಂತೆ ನಿಗಾವಹಿಸುವುದು ಅತ್ಯಗತ್ಯ. 

'ವಿಟಮಿನ್ ಡಿ' ಕೊರತೆಯಿಂದ ಉಂಟಾಗುವ ಹಾನಿ :
* 'ವಿಟಮಿನ್ ಡಿ' ಕೊರತೆಯಿಂದ ನಮ್ಮ ದೇಹದ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. 
* ಇದು ಮೂಳೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. 
* ಮೂಳೆಗಳು ದುರ್ಬಲಗೊಳ್ಳುವುದರಿಂದ ಮೂಳೆ ಮುರಿತದ ಅಪಾಯವೂ ಹೆಚ್ಚಾಗುತ್ತದೆ. 

ಇದನ್ನೂ ಓದಿ- ಡಬಲ್ ಚಿನ್ ಸಮಸ್ಯೆಯಿಂದ ಪರಿಹಾರ ಪಡೆಯಲು ಫೇಶಿಯಲ್ ಯೋಗ ಪ್ರಯತ್ನಿಸಿ

ವಿಟಮಿನ್ ಡಿ ಕೊರತೆಗೆ ಪರಿಹಾರ:
ಸೂರ್ಯ ವಿಟಮಿನ್ ಡಿ ಯ ಅತ್ಯುತ್ತಮ ಮೂಲ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಸೂರ್ಯನ ಬೆಳಕು ನಮ್ಮ ದೇಹದಲ್ಲಿನ ಈ ನಿರ್ದಿಷ್ಟ ಪೋಷಕಾಂಶದ ಕೊರತೆಯನ್ನು ಪೂರೈಸುತ್ತದೆ. ಆಹಾರ ತಜ್ಞರ ಪ್ರಕಾರ  ನಮ್ಮ ದೇಹಕ್ಕೆ ಪ್ರತಿದಿನ 600 UI ವಿಟಮಿನ್ ಡಿ ಅಗತ್ಯವಿದೆ.  ನಿರ್ದಿಷ್ಟ ಸಮಯದಲ್ಲಿ ಬಿಸಿಲಿನಲ್ಲಿ ಕುಳಿತುಕೊಳ್ಳುವುದಲ್ಲದೆ, ಕೆಲವು ಆಹಾರಗಳ ಮೂಲಕವೂ ಈ ಪೋಷಕಾಂಶವನ್ನು ಪಡೆಯಬಹುದು. 

ಇದನ್ನೂ ಓದಿ- ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಪರಿಹಾರ ಪಡೆಯಲು ನೈಸರ್ಗಿಕ ವಿಧಾನಗಳಿವು

ವಿಟಮಿನ್ ಡಿ ಪಡೆಯುವ ವಿಧಾನಗಳು:
>> ಪ್ರತಿದಿನ ನೀವು ಕನಿಷ್ಟ ಅರ್ಧ ಗಂಟೆ ಸೂರ್ಯನ ಬೆಳಕಿಗೆ ಕೂರುವುದು.. ಇದರಿಂದ ದೇಹದ ಹೆಚ್ಚಿನ ಭಾಗವು ಸೂರ್ಯನ ಬೆಳಕನ್ನು ಪಡೆಯುತ್ತದೆ ಮತ್ತು ವಿಟಮಿನ್ ಡಿ ಕೊರತೆ ಉಂಟಾಗುವುದಿಲ್ಲ.
>> ನೀವು ಮಾಂಸಾಹಾರಿಗಳಾಗಿದ್ದರೆ, ಮೊಟ್ಟೆಯ ಹಳದಿ ಲೋಳೆ ಸಾಲ್ಮನ್ ಮತ್ತು ಟ್ಯೂನ ಮೀನುಗಳನ್ನು ಆಹಾರದಲ್ಲಿ ಸೇರಿಸಿ.
>> ಸಸ್ಯಾಹಾರಿಗಳು ದೈನಂದಿನ ಆಹಾರದಲ್ಲಿ ಹಸುವಿನ ಹಾಲು, ಕಿತ್ತಳೆ ರಸ, ಧಾನ್ಯಗಳು ಮತ್ತು ಅಣಬೆಗಳ ಸಲಾಡ್ ಅನ್ನು ಸೇವಿಸುವುದರಿಂದಲೂ ಈ ಪೋಷಕಾಂಶವನ್ನು ಪಡೆಯಬಹುದು. 
>> ಸಸ್ಯಾಹಾರಿಗಳಿಗೆ ಆಹಾರದ ಆಯ್ಕೆಗಳು ತುಂಬಾ ಕಡಿಮೆ. ಅವರು ಬಾದಾಮಿ ಹಾಲು ಮತ್ತು ಸೋಯಾ ಹಾಲು ಸೇವಿಸಬಹುದು.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News