Dark Circle: ಡಾರ್ಕ್ ಸರ್ಕಲ್ ನಿಮ್ಮ ಸೌಂದರ್ಯವನ್ನು ಮರೆಮಾಡುತ್ತಿದೆಯೇ? ಈ ಮನೆಮದ್ದುಗಳನ್ನು ಟ್ರೈ ಮಾಡಿ

Dark Circle: ಕಣ್ಣಿನ ಸುತ್ತ ಕಾಣುವ ಡಾರ್ಕ್ ಸರ್ಕಲ್ ನಿಂದ ನಿಮ್ಮ ಸೌಂದರ್ಯ ಕೆಡುತ್ತಿದ್ದರೆ ಮಾರುಕಟ್ಟೆಯಲ್ಲಿ ಸಿಗುವ ಬಗೆ ಬಗೆಯ ಕ್ರೀಂ ಬಳಸುವ ಮುನ್ನ ನಿಮ್ಮ ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳನ್ನು ಬಳಸಿ ನೋಡಿ. ಇವು ನಿಮಗೆ ಈ ಸಮಸ್ಯೆಯಿಂದ ಪರಿಹಾರ ನೀಡಬಹುದು.

Written by - Yashaswini V | Last Updated : Feb 8, 2022, 10:50 AM IST
  • ಡಾರ್ಕ್ ಸರ್ಕಲ್ ಸಮಸ್ಯೆ ನಿಮ್ಮನ್ನು ಕಾಡುತ್ತಿದೆಯೇ?
  • ಈ ಮನೆಮದ್ದುಗಳು ನಿಮಗೆ ಪರಿಹಾರ ನೀಡಬಹುದು
  • ಈ ಸಿಂಪಲ್ ಮನೆಮದ್ದುಗಳು ಡಾರ್ಕ್ ಸರ್ಕಲ್ ಸಮಸ್ಯೆಯಿಂದ ಹೊರಬರಲು ಸಹಕಾರಿ
Dark Circle: ಡಾರ್ಕ್ ಸರ್ಕಲ್ ನಿಮ್ಮ ಸೌಂದರ್ಯವನ್ನು ಮರೆಮಾಡುತ್ತಿದೆಯೇ? ಈ ಮನೆಮದ್ದುಗಳನ್ನು ಟ್ರೈ ಮಾಡಿ title=
Dark Circle Treatment

Dark Circle: ಹೆಚ್ಚಿನ ಜನರು ಕಣ್ಣಿನ ಸುತ್ತ ಕಾಣಿಸಿಕೊಳ್ಳುವ ಕಪ್ಪು ವರ್ತುಲಗಳು ಅಂದರೆ ಡಾರ್ಕ್ ಸರ್ಕಲ್ ನಿಂದಾಗಿ ತೊಂದರೆಗೆ ಒಳಗಾಗುತ್ತಾರೆ. ಒತ್ತಡ, ನಿದ್ರೆಯ ಕೊರತೆ, ಹಾರ್ಮೋನ್ ಬದಲಾವಣೆ, ಜೀವನಶೈಲಿ ಬದಲಾವಣೆ, ಅನುವಂಶಿಕತೆ ಹೀಗೆ ಡಾರ್ಕ್ ಸರ್ಕಲ್‌ಗೆ ಹಲವು ಕಾರಣಗಳಿವೆ. ಆದರೆ ಡಾರ್ಕ್ ಸರ್ಕಲ್ ಸಮಸ್ಯೆ ಹೆಚ್ಚಾಗುವ ಮೊದಲು ಅದನ್ನು ಪರಿಹರಿಸುವುದು ಅವಶ್ಯಕ. ಕಣ್ಣಿನ ಸುತ್ತ ಕಾಣುವ ಡಾರ್ಕ್ ಸರ್ಕಲ್ ನಿಂದ ನಿಮ್ಮ ಸೌಂದರ್ಯ ಕೆಡುತ್ತಿದ್ದರೆ ಮಾರುಕಟ್ಟೆಯಲ್ಲಿ ಸಿಗುವ ಬಗೆ ಬಗೆಯ ಕ್ರೀಂ ಬಳಸುವ ಮುನ್ನ ನಿಮ್ಮ ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳನ್ನು ಬಳಸಿ ನೋಡಿ. ಇವು ನಿಮಗೆ ಈ ಸಮಸ್ಯೆಯಿಂದ ಪರಿಹಾರ ನೀಡಬಹುದು.

ಡಾರ್ಕ್ ಸರ್ಕಲ್ ಸಮಸ್ಯೆಯಿಂದ ಹೊರಬರಲು ಸಹಕಾರಿಯಾಗಲಿವೆ ಈ ಮನೆಮದ್ದುಗಳು:
ನೀವು ಡಾರ್ಕ್ ಸರ್ಕಲ್ ಅನ್ನು ಸಮಸ್ಯೆಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ, ಅದು ನಿಮ್ಮ ಮುಖದ ಸೌಂದರ್ಯವನ್ನು ಹಾಳು ಮಾಡುತ್ತದೆ. ರಾಸಾಯನಿಕ ಆಧಾರಿತ ಔಷಧದಿಂದ ಇದನ್ನು ಶೀಘ್ರವಾಗಿ ಗುಣಪಡಿಸಬಹುದು. ಆದರೆ ಚರ್ಮವು ತುಂಬಾ ಸೂಕ್ಷ್ಮವಾಗಿರುತ್ತದೆ, ಆದ್ದರಿಂದ ಮನೆಮದ್ದುಗಳ ಮೂಲಕ ನಿಮ್ಮ ಮುಖ ಮತ್ತು ಕಣ್ಣುಗಳ ಬಳಿ ಇರುವ ಕಪ್ಪು ಕಲೆಗಳನ್ನು ನಿವಾರಿಸಬಹುದು. ಇದಕ್ಕಾಗಿ 6 ​​ಮನೆಮದ್ದುಗಳನ್ನು ಅಳವಡಿಸಿಕೊಳ್ಳಬಹುದು.

1. ಟೊಮೆಟೊ:
ಕಪ್ಪು ವರ್ತುಲಗಳಿಂದ ಅಂದರೆ ಡಾರ್ಕ್ ಸರ್ಕಲ್ (Remedies to get rid from Dark Circle) ನಿಂದ ಮುಕ್ತಿ ಪಡೆಯುವಲ್ಲಿ ಟೊಮೇಟೊ ರಾಮಬಾಣದಂತೆ ಕೆಲಸ ಮಾಡುತ್ತದೆ. ಇದು ಚರ್ಮವನ್ನು ಮೃದುವಾಗಿಯೂ ಮಾಡುತ್ತದೆ. ಒಂದು ಚಮಚ ಟೊಮೇಟೊ ರಸಕ್ಕೆ ಒಂದು ಚಮಚ ನಿಂಬೆರಸ ಬೆರೆಸಿ ಕಣ್ಣುಗಳ ಬಳಿ ಇರುವ ಕಪ್ಪು ಕಲೆಗಳ ಮೇಲೆ ಹಚ್ಚಿ 10 ನಿಮಿಷ ಬಿಟ್ಟು ನಂತರ ಸಾಮಾನ್ಯ ನೀರಿನಿಂದ ತೊಳೆಯಿರಿ. ಇದನ್ನು ದಿನಕ್ಕೆ ಎರಡು ಬಾರಿ ಮಾಡಿ. ಇದಲ್ಲದೆ, ನೀವು ಪ್ರತಿದಿನ ಟೊಮೆಟೊ ಮತ್ತು ನಿಂಬೆ ರಸವನ್ನು ಬೆರೆಸಿ ಕುಡಿಯಬಹುದು, ಇದು ಡಾರ್ಕ್ ಸರ್ಕಲ್ ಸಮಸ್ಯೆ ನಿವಾರಿಸುವಲ್ಲಿ ಸಹಾಯ ಮಾಡುತ್ತದೆ.

ಇದನ್ನೂ ಓದಿ- Skin Care: ಹಸಿ ಹಾಲನ್ನು ಮುಖಕ್ಕೆ ಹಚ್ಚುವುದರಿಂದ ಸಿಗುತ್ತವೆ ಅನೇಕ ಪ್ರಯೋಜನ

2. ಆಲೂಗಡ್ಡೆ:
ಹಸಿ ಆಲೂಗಡ್ಡೆಯನ್ನು ಪುಡಿಮಾಡಿ ರಸವನ್ನು ತೆಗೆಯಿರಿ. ರಸವನ್ನು ಹತ್ತಿ ಬಟ್ಟೆಯಲ್ಲಿ ಅದ್ದಿ ಕಣ್ಣುಗಳನ್ನು ಮುಚ್ಚಿ ಡಾರ್ಕ್ ಸರ್ಕಲ್ (Dark Circle) ಮೇಲೆ ಲೇಪಿಸಬೇಕು. ಆಲೂಗೆಡ್ಡೆ ರಸದಲ್ಲಿ ನೆನೆಸಿದ ಬಟ್ಟೆಯಿಂದ ಕಣ್ಣುಗಳನ್ನು ಹೊರತುಪಡಿಸಿ ಇಡೀ ಡಾರ್ಕ್ ಸರ್ಕಲ್ ಇರುವ ಜಾಗದಲ್ಲಿ ಹಚ್ಚಿ ಮತ್ತು 10 ನಿಮಿಷಗಳ ಕಾಲ ಬಿಡಿ. ಅದರ ನಂತರ ತಣ್ಣೀರಿನಿಂದ ಮುಖ ತೊಳೆಯಿರಿ.

3. ಕೋಲ್ಡ್ ಟೀ ಬ್ಯಾಗ್‌ಗಳು:
ತಣ್ಣನೆಯ ಟೀ ಬ್ಯಾಗ್‌ಗಳು ಕಣ್ಣಿನ ಕೆಳಗಿರುವ ಕಪ್ಪು ವರ್ತುಲಗಳನ್ನು ನಿವಾರಿಸುತ್ತದೆ. ಟೀ ಬ್ಯಾಗ್ ಅನ್ನು ನೀರಿನಲ್ಲಿ ನೆನೆಸಿ ಫ್ರಿಜ್ ನಲ್ಲಿ ಸ್ವಲ್ಪ ಹೊತ್ತು ತಣ್ಣಗಾಗಲು ಬಿಡಿ. ಅದರ ನಂತರ ಕಣ್ಣುಗಳನ್ನು ಮುಚ್ಚಿ ಮತ್ತು ಆ ಟೀ ಬ್ಯಾಗ್ ಅನ್ನು ಡಾರ್ಕ್ ಸರ್ಕಲ್ ಮೇಲೆ ಇರಿಸಿ. ಇದನ್ನು ನಿಯಮಿತವಾಗಿ ಮಾಡಿ. ಇದರ ಉತ್ತಮ ಫಲಿತಾಂಶ ಕೆಲವೇ ದಿನಗಳಲ್ಲಿ ಗೋಚರಿಸುತ್ತದೆ.

4. ತಣ್ಣನೆಯ ಹಾಲು:
ತಣ್ಣನೆಯ ಹಾಲು ಕೂಡ ಡಾರ್ಕ್ ಸರ್ಕಲ್ ನಿವಾರಿಸುತ್ತದೆ. ಇದು ಕಣ್ಣುಗಳು ಮತ್ತು ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ. ತಣ್ಣನೆಯ ಹಾಲನ್ನು ಹತ್ತಿ ಬಟ್ಟೆಯಲ್ಲಿ ನೆನೆಸಿ ಮತ್ತು ಕಣ್ಣಿನ ಡಾರ್ಕ್ ಸರ್ಕಲ್ ಮೇಲೆ ಇರಿಸಿ. ಇದನ್ನು ನಿಯಮಿತವಾಗಿ ಮಾಡುವುದರಿಂದ ಪ್ರಯೋಜನವಾಗುತ್ತದೆ.

ಇದನ್ನೂ ಓದಿ- Weight Loss: ತೂಕ ಇಳಿಸಲು ದಕ್ಷಿಣ ಭಾರತದ ಆಹಾರ ಅತ್ಯುತ್ತಮ ಆಯ್ಕೆ

5. ಕಿತ್ತಳೆ ರಸ:
ಕಿತ್ತಳೆ ರಸದಿಂದಲೂ ಸಹ ಡಾರ್ಕ್ ಸರ್ಕಲ್ ಗಳನ್ನು ನಿವಾರಿಸಬಹುದು. ಕಿತ್ತಳೆ ರಸ ಮತ್ತು ಗ್ಲಿಸರಿನ್‌ನ ಕೆಲವು ಹನಿಗಳನ್ನು ಅನ್ವಯಿಸುವುದರಿಂದ, ಡಾರ್ಕ್ ಸರ್ಕಲ್ ಕ್ರಮೇಣ ನಿವಾರಣೆಯಾಗುತ್ತವೆ. ಇದು ತ್ವಚೆಗೆ ಹೊಳಪನ್ನೂ ತರುತ್ತದೆ. 

6.ಯೋಗ/ಧ್ಯಾನ:
ಒತ್ತಡ, ನಿದ್ರೆಯ ಕೊರತೆ, ಹಾರ್ಮೋನ್ ಬದಲಾವಣೆ, ಜೀವನಶೈಲಿ ಬದಲಾವಣೆಯಿಂದ ಡಾರ್ಕ್ ಸರ್ಕಲ್ ಉಂಟಾಗುತ್ತದೆ. ಯೋಗ ಮತ್ತು ಧ್ಯಾನ ಕೂಡ ಡಾರ್ಕ್ ಸರ್ಕಲ್ ಗಳನ್ನು ಹೋಗಲಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಉತ್ತಮ ಆರೋಗ್ಯಕ್ಕೂ ಸಹಕಾರಿಯಾಗಲಿದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News