Liver transplantation: ಲಿವರ್ ಕಸಿ ಮಾಡಿದ ನಂತರ ಒಬ್ಬ ವ್ಯಕ್ತಿಯು ಎಷ್ಟು ದಿನ ಬದುಕಬಹುದು..?

Liver transplant: ಯಕೃತ್ತಿನ ಸಂಬಂಧಿತ ಕಾಯಿಲೆಗಳ ಹೆಚ್ಚುತ್ತಿರುವ ಪ್ರಕರಣಗಳು ನಿಜಕ್ಕೂ ಕಳವಳಕಾರಿ ವಿಷಯವಾಗಿದೆ. ಜನರು ಲಿವರ್‌ ಕಸಿ ಸಹಾಯವನ್ನು ತೆಗೆದುಕೊಳ್ಳಲು ಇದು ಕಾರಣವಾಗಿದೆ. ಲಿವರ್‌ ಕಸಿಗೆ ಸಂಬಂಧಿಸಿದ ಕೆಲವು ಪ್ರಮುಖ ವಿಷಯಗಳ ಬಗ್ಗೆ ನೀವು ತಿಳಿದಿರಬೇಕು.

Written by - Puttaraj K Alur | Last Updated : Nov 30, 2024, 05:29 PM IST
  • ಲಿವರ್‌ನ ಕಸಿಯ ನಂತರ ರೋಗಿಯು 10-30 ವರ್ಷಗಳವರೆಗೆ ಸಾಮಾನ್ಯ ಜೀವನ ನಡೆಸಬಹುದು
  • ಯಕೃತ್ತಿನ ಕಸಿ ಮಾಡುವ ಜೀವಿತಾವಧಿಯು ಅನೇಕ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ
  • ಯಕೃತ್ತಿನ ಕಸಿ ನಂತರ ಆರೋಗ್ಯಕರ ಜೀವನಶೈಲಿ ಮತ್ತು ಸಮತೋಲಿತ ಆಹಾರ ಯೋಜನೆ ಅನುಸರಿಸಬೇಕು
Liver transplantation: ಲಿವರ್ ಕಸಿ ಮಾಡಿದ ನಂತರ ಒಬ್ಬ ವ್ಯಕ್ತಿಯು ಎಷ್ಟು ದಿನ ಬದುಕಬಹುದು..? title=
ಯಕೃತ್ತಿನ ಕಸಿಯ ಸರಾಸರಿ ಜೀವಿತಾವಧಿ

Liver transplantation: ಯಾವುದೇ ವ್ಯಕ್ತಿಯ ಲಿವರ್ ಅಥವಾ ಯಕೃತ್ತು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ಅಥವಾ ಲಿವರ್ ತೀವ್ರವಾಗಿ ಹಾನಿಗೊಳಗಾದಾಗ, ಆರೋಗ್ಯ ತಜ್ಞರು ಸಾಮಾನ್ಯವಾಗಿ ಯಕೃತ್ತು ಕಸಿ ಮಾಡಲು ಶಿಫಾರಸು ಮಾಡುತ್ತಾರೆ. ಆದರೆ ಲಿವರ್ ಕಸಿ ಮಾಡಿದ ನಂತರ ಎಷ್ಟು ವರ್ಷ ಬದುಕಬಹುದು ಎಂದು ನಿಮಗೆ ತಿಳಿದಿದೆಯೇ? Columbiasurgery.orgನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಯಕೃತ್ತಿನ ಕಸಿ ಶಸ್ತ್ರಚಿಕಿತ್ಸೆಯನ್ನು ಸರಿಯಾಗಿ ನಡೆಸಿದರೆ, ರೋಗಿಗಳು ಮೂರರಿಂದ ಆರು ತಿಂಗಳೊಳಗೆ ತಮ್ಮ ದೈನಂದಿನ ದಿನಚರಿಗೆ ಮರಳಬಹುದಂತೆ.

ಲಿವರ್ ಟ್ರಾನ್ಸ್‌ಪ್ಲಾಂಟ್‌ನ ಜೀವಿತಾವಧಿ ನಿರೀಕ್ಷೆ

ಲಿವರ್‌ನ ಕಸಿಯ ನಂತರ ರೋಗಿಯು 10 ವರ್ಷದಿಂದ 30 ವರ್ಷಗಳವರೆಗೆ ಸುಲಭವಾಗಿ ಸಾಮಾನ್ಯ ಜೀವನವನ್ನು ನಡೆಸಬಹುದು. ಯಕೃತ್ತಿನ ಕಸಿ ಮಾಡುವ ಜೀವಿತಾವಧಿಯು ಅನೇಕ ಅಂಶಗಳ ಮೇಲೆ ಅವಲಂಬಿತವಾಗಿದೆ. ಇದಲ್ಲದೆ ಯಕೃತ್ತಿನ ಕಸಿ ನಂತರ ನೀವು ಆರೋಗ್ಯಕರ ಜೀವನಶೈಲಿ ಮತ್ತು ಸಮತೋಲಿತ ಆಹಾರ ಯೋಜನೆಯನ್ನು ಅನುಸರಿಸಬೇಕು, ಇದರಿಂದ ನಿಮ್ಮ ಆರೋಗ್ಯವನ್ನು ಬಲಪಡಿಸಬಹುದು.

ಇದನ್ನೂ ಓದಿ: ಕರಿಮೆಣಸಿನ ಪುಡಿಯನ್ನು ಜೇನುತುಪ್ಪದಲ್ಲಿ ಬೆರೆಸಿ ತಿಂದರೆ ಈ ರೋಗಗಳು ತಕ್ಷಣ ನಿವಾರಣೆಯಾಗುತ್ತವೆ..!

ಚೇತರಿಸಿಕೊಳ್ಳಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ?

ಯಕೃತ್ತಿನ ಕಸಿ ನಂತರ ಮೂರರಿಂದ ಆರು ತಿಂಗಳುಗಳು ತುಂಬಾ ಸವಾಲಾಗಿರಬಹುದು. ಯಕೃತ್ತಿನ ಕಸಿ ಶಸ್ತ್ರಚಿಕಿತ್ಸೆಯ ನಂತರ, ನೀವು ಕೆಲವು ತಿಂಗಳುಗಳವರೆಗೆ ನಿಮ್ಮ ವೈದ್ಯರನ್ನು ಭೇಟಿ ಮಾಡುತ್ತಿರಬೇಕು ಮತ್ತು ಅವರ ಸಲಹೆಯನ್ನು ಅನುಸರಿಸುವಲ್ಲಿ ಯಾವುದೇ ರೀತಿ ಅಸಡ್ಡೆ ಮಾಡಬಾರದು. ಆದಾಗ್ಯೂ ಚೇತರಿಕೆಯ ಸಮಯವು ವೈಯಕ್ತಿಕ ರೋಗಿಯ ಆರೋಗ್ಯ ಸ್ಥಿತಿಯನ್ನು ಅವಲಂಬಿಸಿರುತ್ತದೆ.

ಗಮನಿಸಬೇಕಾದ ವಿಷಯ

ಯಕೃತ್ತಿನ ಕಸಿ ಶಸ್ತ್ರಚಿಕಿತ್ಸೆಗಾಗಿ ಹೆಚ್ಚಿನ ರೋಗಿಗಳು 6 ರಿಂದ 10 ದಿನಗಳವರೆಗೆ ಆಸ್ಪತ್ರೆಯಲ್ಲಿರಬಹುದು. ಇದರ ನಂತರ ನಿಮ್ಮ ಆರೋಗ್ಯವು ಸಮಸ್ಯೆಗಳನ್ನು ಎದುರಿಸದಂತೆ ವೈದ್ಯರು ನೀಡಿದ ಔಷಧಿಗಳನ್ನು ನೀವು ಕಟ್ಟುನಿಟ್ಟಾಗಿ ಅನುಸರಿಸಬೇಕು. ಯಕೃತ್ತಿನ ಕಸಿ ಮಾಡಿದ ನಂತರ ಕೆಲವು ಯಕೃತ್ತು ಸಂಬಂಧಿತ ಕಾಯಿಲೆಗಳು ಮತ್ತೆ ಹೊಸ ಯಕೃತ್ತಿನ ಮೇಲೆ ದಾಳಿ ಮಾಡಬಹುದು. ಹೀಗಾಗಿ ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. 

ಇದನ್ನೂ ಓದಿ: Health Tips: ಯಾವ ಸಮಯದಲ್ಲಿ ಒಣದ್ರಾಕ್ಷಿ ನೀರನ್ನು ಕುಡಿಯುವುದು ಹೆಚ್ಚು ಪ್ರಯೋಜನಕಾರಿ..?

(ಗಮನಿಸಿರಿ: ಈ ಲೇಖನವು ಸಾಮಾನ್ಯ ಮಾಹಿತಿಗಾಗಿ, ದಯವಿಟ್ಟು ಯಾವುದೇ ಪರಿಹಾರವನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸಿ. Zee Kannada News ಇದನ್ನು ದೃಢಪಡಿಸಿರಿ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News