ಸೇಬು ಹಣ್ಣನ್ನು ಸಿಪ್ಪೆಯೊಂದಿಗೆ ತಿನ್ನಬೇಕಾ ಅಥವಾ ಇಲ್ಲದೆಯೇ ತಿನ್ನಬೇಕೇ..? ಉತ್ತರ ಇಲ್ಲಿದೆ

Apple peel health benefits : ಸೇಬುಗಳು ನಮ್ಮ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂದು ಎಲ್ಲರಿಗೂ ತಿಳಿದಿದೆ. ಸೇಬು ತಿನ್ನುವುದರಿಂದ ರೋಗವನ್ನು ತಡೆಯಬಹುದು ಎಂದು ಬಾಲ್ಯದಿಂದಲೂ ಹಿರಿಯರು ಹೇಳುತ್ತಿದ್ದರು. ಆದರೆ ಸೇಬಿನ ಸಿಪ್ಪೆ ಸುಲಿದು ತಿನ್ನುವವರೇ ಹೆಚ್ಚಾಗಿದ್ದಾರೆ.. ಅಂದ್ರೆ ಸೇಬು ಸಿಪ್ಪೆ ಆರೋಗ್ಯಕ್ಕೆ ಒಳ್ಳೆಯದಲ್ಲವೇ.. ಇಲ್ಲಿದೆ ನೋಡಿ ಉತ್ತರ..

Written by - Krishna N K | Last Updated : Jun 30, 2023, 12:04 AM IST
  • ಸೇಬುಗಳು ನಮ್ಮ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂದು ಎಲ್ಲರಿಗೂ ತಿಳಿದಿದೆ.
  • ಇಂದು ಅನೇಕ ಜನರು ಸೇಬು ಸಿಪ್ಪೆ ತೆಗೆದು ಸೇವನೆ ಮಾಡುತ್ತಿದ್ದಾರೆ.
  • ಹಾಗಿದ್ರೆ, ಸಿಪ್ಪೆ ತೆಗೆದು ಸೇಬು ತಿನ್ನುವುದರಿಂದ ಆರೋಗ್ಯಕ್ಕೆ ನಷ್ಟವೋ.. ಲಾಭವೋ.. ತಿಳಿಯಿರಿ..
ಸೇಬು ಹಣ್ಣನ್ನು ಸಿಪ್ಪೆಯೊಂದಿಗೆ ತಿನ್ನಬೇಕಾ ಅಥವಾ ಇಲ್ಲದೆಯೇ ತಿನ್ನಬೇಕೇ..? ಉತ್ತರ ಇಲ್ಲಿದೆ title=

Apple peel health : ಸೇಬುಗಳು ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿ, ಆದರೆ ಸಿಪ್ಪೆಯೊಂದಿಗೆ ಸೇಬುಗಳನ್ನು ಸೇವಿಸಿ.. ಇದರ ಸಿಪ್ಪೆಯು ಹಲವಾರು ಪ್ರಯೋಜನಗಳನ್ನು ಹೊಂದಿದೆ. ಸದ್ಯ ನಾವು ನಿಮಗೆ ಸೇಬಿನ ಸಿಪ್ಪೆಯಿಂದ ಯಾವ ರೋಗವನ್ನು ತಡೆಯಬಹುದು, ಎಷ್ಟೇಲ್ಲಾ ಆರೋಗ್ಯ ರಹಸ್ಯಗಳಿವೆ ಎಂಬುವುದನ್ನು ತಿಳಿಯೋಣ ಬನ್ನಿ.

ಫೈಬರ್ ಭರಿತ ಸೇಬಿನ ಸಿಪ್ಪೆ : ಸಿಪ್ಪೆ ಸುಲಿಯದ ಸೇಬುನಲ್ಲಿ 4.4 ಗ್ರಾಂ ಫೈಬರ್ ಇರುತ್ತದೆ, ಆದರೆ ಸಿಪ್ಪೆಯನ್ನು ತೆಗೆದರೆ, ಫೈಬರ್ 2.1 ಗ್ರಾಂಗೆ ಇಳಿಯುತ್ತದೆ, ಅರ್ಧಕ್ಕಿಂತ ಕಡಿಮೆ. ಹಾಗಾಗಿ ಸೇಬಿನ ಸಿಪ್ಪೆ ಸುಲಿಯದೇ, ಸೇವಿಸುವುದು ಬಹಳ ಮುಖ್ಯ.. ಇದರಿಂದ ದೇಹಕ್ಕೆ ಅಗತ್ಯವಾದ ನಾರಿನಂಶ ದೊರೆಯುತ್ತದೆ ಮತ್ತು ಮಲಬದ್ಧತೆಯಂತಹ ಕಾಯಿಲೆಗಳನ್ನು ದೂರವಾಗುತ್ತವೆ.

ಇದನ್ನೂ ಓದಿ: ಮದುವೆ ನಂತರ ಪುರುಷರು ಈ ಆಹಾರಗಳನ್ನು ಸೇವಿಸಬೇಕಂತೆ!

ವಿಟಮಿನ್‌ಗಳ ಉಗ್ರಾಣ ಸೇಬು : ಸೇಬು ಹಣ್ಣು 8.4 ಮಿಗ್ರಾಂ ವಿಟಮಿನ್ ಸಿ ಮತ್ತು 98 ಐಯು ವಿಟಮಿನ್ ಎ ಅನ್ನು ಹೊಂದಿರುತ್ತದೆ. ಆದರೆ ನೀವು ಸಿಪ್ಪೆ ತೆಗೆದು ಹಾಕಿದರೆ, ಕೇವಲ 6 ಮಿಲಿಗ್ರಾಂ ವಿಟಮಿನ್ ಸಿ ಮತ್ತು 61 ಐಯು ವಿಟಮಿನ್ ಎ ಉಳಿಯುತ್ತದೆ.. ಇದರಿಂದ ಸಿಪ್ಪೆ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಅಂತ ನೀವು ಅರ್ಥಮಾಡಿಕೊಳ್ಳಬಹುದು.

ಆಪಲ್ ಸಿಪ್ಪೆಗಳು ಕಣ್ಣುಗಳಿಗೆ ಪ್ರಯೋಜನಕಾರಿಯಾಗಿದೆ : ಸೇಬುಗಳಲ್ಲಿ ವಿಟಮಿನ್ ಎ ಸಮೃದ್ಧವಾಗಿದೆ, ಇದು ಕಣ್ಣುಗಳನ್ನು ಆರೋಗ್ಯವಾಗಿಡುತ್ತದೆ. ಕಣ್ಣಿನ ಪೊರೆ ಅಂದರೆ ಗ್ಲುಕೋಮಾದ ಅಪಾಯದಿಂದ ರಕ್ಷಿಸುತ್ತದೆ. ಪ್ರತಿದಿನ ಸೇಬನ್ನು ತಿನ್ನುವುದು ಬಹಳ ಮುಖ್ಯ ಆದರೆ ಸಿಪ್ಪೆಯೊಂದಿಗೆ ತಿನ್ನಿ.

ಇದನ್ನೂ ಓದಿ: ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ನಿಮ್ಮ ಆಹಾರ ಈ ರೀತಿ ಇರಲಿ

ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ : ಆಪಲ್ ಸಿಪ್ಪೆಯಲ್ಲಿ ಆಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿವೆ, ಇದು ಕ್ಯಾನ್ಸರ್ ವಿರುದ್ಧ ರಕ್ಷಿಸಲು ಸಹಾಯ ಮಾಡುತ್ತದೆ. ನ್ಯೂಟ್ರಿಷನ್ ಮತ್ತು ಕ್ಯಾನ್ಸರ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಸೇಬಿನ ಸಿಪ್ಪೆಯಲ್ಲಿರುವ ಉತ್ಕರ್ಷಣ ನಿರೋಧಕಗಳು ಸ್ತನ ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್ ಮತ್ತು ಕರುಳಿನ ಕ್ಯಾನ್ಸರ್‌ನಂತಹ ಹಲವಾರು ರೀತಿಯ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.

ಆಪಲ್ ಸಿಪ್ಪೆಯಲ್ಲಿ ಉರ್ಸೋಲಿಕ್ ಆಮ್ಲವಿದೆ, ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಬೊಜ್ಜು ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಕ್ಯಾಲೊರಿಗಳನ್ನು ಬರ್ನ್ ಮಾಡಲು ಮತ್ತು ಬೊಜ್ಜು ಹಾಗೂ ತೂಕ ನಷ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಕಿಸ್‌ ಮಾಡುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲ ಲಾಭವಿದೆ ಗೊತ್ತಾ?

ಈ ಕಾರಣಕ್ಕಾಗಿಯೇ ಸೇಬಿನ ಸಿಪ್ಪೆ ಸುಲಿಯುತ್ತಾರೆ : ಸದ್ಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಸೇಬುಗಳ ಅಂದ ಹೆಚ್ಚಿಸುವ ದೃಷ್ಟಿಯಿಂಧ ರಾಸಾಯನಿಕ ಲೇಪನ ಮಾಡುತ್ತಾರೆ. ಇದು ಆರೋಗ್ಯಕ್ಕೆ ತುಂಬಾ ಅಪಾಯಕಾರಿ. ಈ ಲೇಪನವನ್ನು ತೆಗೆದುಹಾಕಲು ಅನೇಕ ಜನರು ಸೇಬುಗಳನ್ನು ಸಿಪ್ಪೆ ತೆಗೆಯುತ್ತಾರೆ. ಆದರೆ ಸೇಬನ್ನು ಬಿಸಿನೀರಿನಿಂದ ಚೆನ್ನಾಗಿ ಶುಚಿಗೊಳಿಸಿದರೆ ರಾಸಾಯನಿಕ ಲೇಪನ ನಿವಾರಣೆಯಾಗುತ್ತದೆ. ನಂತರ ಯಾವುದೇ ಭಯವಿಲ್ಲದೆ ಸಿಪ್ಪೆಯೊಂದಿಗೆ ಸೇಬನ್ನು ತಿನ್ನಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News