Health Tips: ಮದುವೆ ನಂತರ ಪುರುಷರು ಈ ಆಹಾರಗಳನ್ನು ಸೇವಿಸಬೇಕಂತೆ!

Foods For Married Man: ಮದುವೆ ಬಳಿಕ ಪುರುಷರು ನಿಯಮಿತವಾಗಿ ಬಾಳೆಹಣ್ಣು ಸೇವಿಸಬೇಕು. ಬಾಳೆಹಣ್ಣಿನಲ್ಲಿ ಕ್ಯಾಲ್ಸಿಯಂ, ಪೊಟಾಶಿಯಂ ಮತ್ತು ವಿಟಮಿನ್ B6 ಇದೆ. ಈ ಹಣ್ಣಿನಲ್ಲಿರುವ ಕೆಲ ಪೋಷಕಾಂಶಗಳು ಪ್ರೀತಿಯ ಹಾರ್ಮೋನ್ ಬಿಡುಗಡೆಗೆ ನೆರವಾಗಿ, ಉತ್ತಮ ಲೈಂಗಿಕ ಪ್ರದರ್ಶನಕ್ಕೆ ಕಾರಣವಾಗುತ್ತದೆ.

Written by - Puttaraj K Alur | Last Updated : Jun 29, 2023, 08:28 PM IST
  • ಮದುವೆ ಬಳಿಕ ಪುರುಷು ಉತ್ತಮ ಆಹಾರ ಸೇವಿಸುವ ಪದ್ಧತಿಯನ್ನು ರೂಢಿಸಿಕೊಳ್ಳಬೇಕು
  • ಮದುವೆ ಬಳಿಕ ಪುರುಷರು ಕ್ಯಾಲ್ಸಿಯಂ, ಪೊಟಾಶಿಯಂ ಮತ್ತು ವಿಟಮಿನ್ B6 ಇರುವ ಬಾಳೆಹಣ್ಣು ಸೇವಿಸಬೇಕು
  • ಬೆಳ್ಳುಳ್ಳಿಯು ಹೃದಯದ ಆರೋಗ್ಯ ಜೊತೆಗೆ ದೇಹದಲ್ಲಿರುವ ವಿಷಕಾರಿ ಅಂಶವನ್ನು ಹೊರಗೆ ಹಾಕುತ್ತದೆ
Health Tips: ಮದುವೆ ನಂತರ ಪುರುಷರು ಈ ಆಹಾರಗಳನ್ನು ಸೇವಿಸಬೇಕಂತೆ!   title=
ವಿವಾಹಿತರು ಈ ಆಹಾರ ಸೇವಿಸಬೇಕು

ನವದೆಹಲಿ: ಮದುವೆ ಬಳಿಕ ಪುರುಷು ಉತ್ತಮ ಆಹಾರ ಸೇವಿಸುವ ಪದ್ಧತಿಯನ್ನು ರೂಢಿಸಿಕೊಳ್ಳಬೇಕು. ಇದರಿಂದ ಅವರ ದಾಂಪತ್ಯ ಜೀವನ ಸುಖಕರವಾಗಿರುತ್ತದೆ. ಪ್ರತಿದಿನ ಒಂದೇ ರೀತಿಯ ಆಹಾರ ಸೇವಿಸಿದ್ರೆ ದೇಹಕ್ಕೆ ಬೇಕಾಗು ವಿವಿಧ ಪೋಷಕಾಂಶಗಳು ಸಿಗುವುದಿಲ್ಲ. ಆರೋಗ್ಯಕರ ಆಹಾರ ಸೇವಿಸಿದ್ರೆ ಯಾವುದೇ ರೋಗಗಳು ಕಾಡುವುದಿಲ್ಲ. ಹೀಗಾಗಿ ಪುರುಷರು ಮದುವೆಯಾದ ಬಳಿಕ ಪೋಷಕಾಂಶಯುಕ್ತ ಆಹಾರ ಸೇವಿಸಬೇಕು. ಹಾಗಾದ್ರೆ ಮದುವೆ ಬಳಿಕ ಪುರುಷರು ಯಾವ ಆಹಾರ ಸೇವಿಸಬೇಕು ಅನ್ನೋದರ ಮಾಹಿತಿ ಇಲ್ಲಿದೆ ನೋಡಿ.  

ಬಾಳೆಹಣ್ಣು: ಮದುವೆ ಬಳಿಕ ಪುರುಷರು ನಿಯಮಿತವಾಗಿ ಬಾಳೆಹಣ್ಣು ಸೇವಿಸಬೇಕು. ಬಾಳೆಹಣ್ಣಿನಲ್ಲಿ ಕ್ಯಾಲ್ಸಿಯಂ, ಪೊಟಾಶಿಯಂ ಮತ್ತು ವಿಟಮಿನ್ ಬಿ6 ಇದೆ. ಈ ಹಣ್ಣಿನಲ್ಲಿರುವ ಕೆಲ ಪೋಷಕಾಂಶಗಳು ಪ್ರೀತಿಯ ಹಾರ್ಮೋನ್ ಬಿಡುಗಡೆಗೆ ನೆರವಾಗಿ, ಉತ್ತಮ ಲೈಂಗಿಕ ಪ್ರದರ್ಶನಕ್ಕೆ ಕಾರಣವಾಗುತ್ತದೆ.

ಚಾಕಲೇಟ್: ಮದುವೆ ಬಳಿಕ ಪುರುಷರು ಹೆಚ್ಚಾಗಿ ಡಾರ್ಕ್ ಚಾಕಲೇಟ್ ಸೇವನೆ ಮಾಡಬೇಕು. ಚಾಕಲೇಟ್ ಮನಸ್ಥಿತಿ ಬದಲಾಗುವುದನ್ನು ನಿಯಂತ್ರಿಸುತ್ತದೆ. ಇದು ಸಂತೋಷದ ಹಾರ್ಮೋನ್ ಬಿಡುಗಡೆ ಮಾಡುತ್ತದೆ. ಚಾಕಲೇಟ್‍ನಲ್ಲಿ ಫೀನಿಲೆಥೈಲಮೈನ್ ಅಂಶವಿದ್ದು, ಡೊಪಮೈನ್ ಹಾರ್ಮೋನ್ ಬಿಡುಗಡೆಗೆ ಇದು ನೆರವಾಗುತ್ತದೆ. ಅಷ್ಟೇ ಅಲ್ಲ ಇದು ಲೈಂಗಿಕಾಸಕ್ತಿಯನ್ನು ವೃದ್ಧಿಸುತ್ತದೆ.

ಇದನ್ನೂ ಓದಿ: Kissing Benefits: ಕಿಸ್‌ ಮಾಡುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲ ಲಾಭವಿದೆ ಗೊತ್ತಾ?

ಬೆಳ್ಳುಳ್ಳಿ: ಬೆಳ್ಳುಳ್ಳಿಯು ಹೃದಯದ ಆರೋಗ್ಯ ಜೊತೆಗೆ ದೇಹದಲ್ಲಿರುವ ವಿಷಕಾರಿ ಅಂಶವನ್ನು ಹೊರಗೆ ಹಾಕುತ್ತದೆ. ಬೆಳ್ಳುಳ್ಳಿಯು ದೇಹದ ಎಲ್ಲಾ ಅಂಗಾಂಗಳಿಗೆ ರಕ್ತ ಸಂಚಾರವನ್ನು ಸುಗಮಗೊಳಿಸುತ್ತದೆ. ಬೆಳ್ಳುಳ್ಳಿಯಲ್ಲಿರುವ ಆಲಿಸಿನ್ ಅಂಶವು ಲೈಂಗಿಕ ಜೀವನಕ್ಕೆ ಸಹಕಾರಿ

ಬಸಳೆ ಸೊಪ್ಪು: ಮದುವೆ ಬಳಿಕ ಉತ್ತಮ ಲೈಂಗಿಕ ಚಟುವಟಿಕೆಗೆ ನೀವು ಬಸಳೆ ಸೊಪ್ಪು ಸೇವಿಸುವುದು ಉತ್ತಮ. ಬಸಳೆ ವಯಾಗ್ರದಂತೆ ಕೆಲಸ ಮಾಡುತ್ತದೆ. ಈ ತರಕಾರಿಯಲ್ಲಿ ಹಲವು ಪೋಷಕಾಂಶಗಳಿದ್ದು, ದೇಹದ ಅಂಗಾಂಗಗಳಿಗೆ ರಕ್ತ ಸಂಚಾರವನ್ನು ಸುಗಮಗೊಳಿಸುತ್ತದೆ.  

ಕೆಂಪು ಮಾಂಸ: ವಿವಾಹಿತರು ನಿಯಮಿತವಾಗಿ ಕೆಂಪು ಮಾಂಸ ಸೇವಿಸುತ್ತಿದ್ದರೆ ಲೈಂಗಿಕ ಶಕ್ತಿ ವೃದ್ಧಿಸುತ್ತದೆ. ಕೆಂಪು ಮಾಂಸದಲ್ಲಿ ಲೈಂಗಿಕ ಚಟುವಟಿಕೆಗೆ ಬೇಕಾದ ಎಲ್-ಕಾರ್ನಿಟೈನ್ ಎನ್ನುವ ಅಂಶವಿದ್ದು, ಇದು ದೇಹದಲ್ಲಿ ಟೆಸ್ಟೋಸ್ಟೆರಾನ್ ಮಟ್ಟವನ್ನು ಹೆಚ್ಚಿಸುತ್ತದೆ.

ಟೊಮೇಟೊ: ಟೊಮೇಟೊದಲ್ಲಿರುವ ಹಲವಾರು ಪೋಷಕಾಂಶಗಳು ಉತ್ತಮ ಆರೋಗ್ಯಕ್ಕೆ ಸಹಕಾರಿ. ಇದರಲ್ಲಿರುವ ಲೈಕೊಪೆನೆ ಅಂಶವು ಕೊಲೊರೆಕ್ಟಲ್ ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್, ಹೃದಯದ ಸಮಸ್ಯೆ ನಿವಾರಿಸುವುದು ಮತ್ತು ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ.

ಇದನ್ನೂ ಓದಿ: Health Tips: ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ನಿಮ್ಮ ಆಹಾರ ಈ ರೀತಿ ಇರಲಿ

ಧಾನ್ಯಗಳು: ಧಾನ್ಯಗಳಲ್ಲಿ ಹೆಚ್ಚಿನ ಮಟ್ಟದ ವಿಟಮಿನ್‍ಗಳು, ಖನಿಜಾಂಶಗಳು ಮತ್ತು ನಾರಿನಾಂಶಗಳಿವೆ. ಓಟ್ಸ್, ಕಂದು ಅಕ್ಕಿಯಲ್ಲಿ ವಿಟಮಿನ್ ಬಿ ಇದೆ. ಇದು ದೇಹದ ಆರೋಗ್ಯಕ್ಕೆ ಉತ್ತಮ ಮತ್ತು ಖಿನ್ನತೆಯನ್ನು ದೂರ ಮಾಡುತ್ತದೆ. ಫಾಲಟೆ ಅಂಶವು ವೀರ್ಯದ ಆರೋಗ್ಯವನ್ನು ಕಾಪಾಡುವುದು ಮತ್ತು ಬಯೋಟಿನ್ ಕೂದಲು ಉದುರುವಿಕೆ ತಡೆಯುವುದು ಎಂದು ಹೇಳಲಾಗುತ್ತದೆ.

ಇವುಗಳ ಜೊತೆಗೆ ಮದುವೆಯಾದ ಪುರುಷರು ಉತ್ತಮ ಲೈಂಗಿಕ ಜೀವನಕ್ಕೆ ಸಹಕಾರಿಯಾಗುವ ಬ್ರಾಕೋಲಿ, ಒಮೆಗಾ-3 ಕೊಬ್ಬಿನಾಮ್ಲ ಹೊಂದಿರುವ ಸಾಲ್ಮನ್ ಫಿಶ್, ಹಲವಾರು ರೋಗಗಳಿಂದ ಮುಕ್ತಿ ನೀಡುವ ನೆರಳೆ ಹಣ್ಣು, ಉನ್ನತ ಮಟ್ಟದ ಪ್ರೋಟೀನ್ ಹೊಂದಿರುವ ಮೊಟ್ಟೆ ಮತ್ತು ಉನ್ನತ ಮಟ್ಟದ ವಿಟಮಿನ್‍ಗಳು, ಆಂಡಿಆಕ್ಸಿಡೆಂಟ್‍ಗಳು ಮತ್ತು ಖನಿಜಾಂಶಗಳನ್ನು ಹೊಂದಿರುವ ದಾಳಿಂಬೆ ಜ್ಯೂಸ್ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News