Home remedies for lice: ತಲೆಯಲ್ಲಿ ಆಗಾಗ ತುರಿಕೆ ಬರುವುದು ಕೇವಲ ಬೆವರು ಮತ್ತು ತಲೆಹೊಟ್ಟಿನ ಲಕ್ಷಣವಲ್ಲ. ಕೆಲವೊಮ್ಮೆ, ಹೇನು ಕೂಡ ಆಗಿರಬಹುದು. ಒಂದು ವೇಳೆ ಕೂದಲಿನಲ್ಲಿ ಹೇನಿದ್ದರೆ, ಅದು ನೇರವಾಗಿ ಕೂದಲಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಇದನ್ನೂ ಓದಿ: 300 ವರುಷಗಳ ಇತಿಹಾಸ ಹೊಂದಿದೆ ತಿರುಪತಿ ಲಡ್ಡು! ಈ ಪ್ರಸಾದದ ಹಿನ್ನೆಲೆ ಏನು?
ಇದು ನೆತ್ತಿಯಲ್ಲಿ ತುರಿಕೆಗೆ ಕಾರಣವಾಗುವುದು ಮಾತ್ರವಲ್ಲದೆ ಕ್ರಮೇಣ ಕೂದಲು ಕೂಡ ನಾಶವಾಗಲು ಪ್ರಾರಂಭಿಸುತ್ತದೆ. ಅಷ್ಟೇ ಅಲ್ಲ, ಕೆಲವೊಮ್ಮೆ ಇವುಗಳಿಂದಾಗಿ ನಾವು ಇತರರ ಮುಂದೆ ಮುಜುಗರಕ್ಕೆ ಒಳಗಾಗಬೇಕಾಗುತ್ತದೆ. ಇನ್ನು ನಿಯಮಿತ ಶಾಂಪೂ ಮತ್ತು ಕಂಡಿಷನರ್ ಕೂದಲಿನಿಂದ ಹೇನುಗಳನ್ನು ತೆಗೆದುಹಾಕಲು ಕೆಲಸ ಮಾಡುವುದಿಲ್ಲ. ಆದ್ದರಿಂದ ಕೆಲವು ಮನೆಮದ್ದುಗಳ ಸಹಾಯವನ್ನು ತೆಗೆದುಕೊಳ್ಳಬಹುದು.
ಹೇನುಗಳು ಒಂದು ವಿಧದ ಪರಾವಲಂಬಿಯಾಗಿದ್ದು, ಇದು ಮಾನವನ ರಕ್ತದಲ್ಲಿ ಬದುಕುಳಿಯುತ್ತದೆ. ಇದು ಶಾಲೆಗೆ ಹೋಗುವ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಸುಲಭವಾಗಿ ಹರಡುತ್ತದೆ. ಒಬ್ಬ ವ್ಯಕ್ತಿಯ ಕೂದಲಿನಲ್ಲಿ ಹೇನುಗಳಿದ್ದರೆ, ಅವರು ವೈಯಕ್ತಿಕ ಸಂಪರ್ಕದ ಮೂಲಕ ಇನ್ನೊಬ್ಬ ವ್ಯಕ್ತಿಯ ತಲೆಗೆ ಹರಡಬಹುದು. ಇದು ರಾತ್ರಿಯಲ್ಲಿ ಹಲವಾರು ಮೊಟ್ಟೆಗಳನ್ನು (ನಿಟ್ಸ್) ಉತ್ಪಾದಿಸುತ್ತದೆ.
ಬೇವು: ಇನ್ನು ಒಂದು ವೇಳೆ ಮಿತಿಮೀರಿ ತಲೆಯಲ್ಲಿ ಹೇನು ಆಗಿದ್ದರೆ, ಒಂದು ಕಪ್ ಬೇವಿನ ಎಲೆಗಳನ್ನು ಕುದಿಸಿ ಪೇಸ್ಟ್ ಮಾಡಿ ಹಚ್ಚಿ. 2 ಗಂಟೆಗಳ ಕಾಲ ಬಿಡಿ. ನಂತರ ಅದನ್ನು ಬೆಚ್ಚಗಿನ ನೀರಿನಿಂದ ಚೆನ್ನಾಗಿ ತೊಳೆಯಿರಿ. ಬೇವಿನಲ್ಲಿ ಒಂದು ರೀತಿಯ ಕೀಟನಾಶಕ ಕಂಡುಬರುತ್ತದೆ. ಇದು ನೆತ್ತಿಯ ಮೇಲೆ ಹೇನುಗಳ ಸಂತಾನೋತ್ಪತ್ತಿ ಮಾಡುವುದನ್ನು ತಡೆಯುತ್ತದೆ.
ಆಲಿವ್ ಎಣ್ಣೆ: ಆಲಿವ್ ಎಣ್ಣೆಯು ಹೇನುಗಳನ್ನು ಉಸಿರುಗಟ್ಟಿಸುವಂತೆ ಮಾಡುವ ಶಕ್ತಿ ಹೊಂದಿದೆ. ರಾತ್ರಿಯಿಡೀ ಕೂದಲಿಗೆ ಹಚ್ಚಬೇಕು. ಕೂದಲಿಗೆ ಎಣ್ಣೆ ಹಚ್ಚಿ ಶವರ್ ಕ್ಯಾಪ್ ಧರಿಸುವುದರಿಂದ ಗಂಟೆಗಳ ಕಾಲ ಅವುಗಳಿಗೆ ಉಸಿರಾಡಲು ಸಾಧ್ಯವಾಗುವುದಿಲ್ಲ. ಕೊನೆಗೆ ಸಾಯುತ್ತವೆ. ಮರುದಿನ ಬಾಚಣಿಗೆ ಸಹಾಯದಿಂದ ತೆಗೆದು ಹಾಕಿ.
ಇದನ್ನೂ ಓದಿ: ನೌಕೆ, ಸೇನೆ, ವಾಯುಪಡೆಯ ಕಮಾಂಡರ್‌ಗಳಾದ ಬೆಸ್ಟ್ ಫ್ರೆಂಡ್ಸ್: ಮೂವರು ಸ್ನೇಹಿತರ ಕೈಸೇರಿದ ಸೇನಾಪಡೆ
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.