ನವ ದೆಹಲಿ: ಹೈಪರ್ ಆಕ್ಟಿವಿಟಿ ಅಥವಾ ಗಮನದ ಕೊರತೆ ಮತ್ತು ಅತಿಯಾದ ಚಟುವಟಿಕೆಯನ್ನು ಎಡಿಎಚ್ಡಿ ಎಂದು ಕರೆಯಲಾಗುತ್ತದೆ. ಭಾರತದಲ್ಲಿ ಎಡಿಎಚ್ಡಿ ಸಮಸ್ಯೆಯು ಸರಿಸುಮಾರು 1.6 ಪ್ರತಿಶತದಿಂದ 12.2 ಪ್ರತಿಶತದಷ್ಟು ಮಕ್ಕಳಲ್ಲಿ ಕಂಡುಬರುತ್ತದೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ.
ಮನೆಗಳಲ್ಲಿ ಉದ್ವೇಗದ ವಾತಾವರಣ ಮತ್ತು ಉನ್ನತ ಶಿಕ್ಷಣಕ್ಕಾಗಿ ಒತ್ತು ನೀಡುವ ಪ್ರವೃತ್ತಿ ಇರುವಂತಹ ಕುಟುಂಬಗಳಲ್ಲಿ ಎಡಿಎಚ್ಡಿ ಸಮಸ್ಯೆಯು ಇನ್ನಷ್ಟು ಹದಗೆಡುವ ಸಾಧ್ಯತೆ ಇದೇ. ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ (ಐಎಂಎ) ಪ್ರಕಾರ, ಎಡಿಎಚ್ಡಿ ಸಮಸ್ಯೆಯು ಬಹುತೇಕ ಪೂರ್ವ-ಶಾಲಾ ಅಥವಾ ಕೆಜಿ ವರ್ಗಗಳ ಮಕ್ಕಳಲ್ಲಿ ಕಂಡು ಬರುತ್ತದೆ. ಕೆಲವು ವೇಳೆ ಹದಿಹರೆಯದ ಆರಂಭದ ವಯಸ್ಸಿನ ಮಕ್ಕಳಲ್ಲಿಯೂ ಈ ಸಮಸ್ಯೆ ಕಂಡು ಬರುವ ಸಾಧ್ಯತೆ ಇದೆ.
ಐಎಂಎ ಅಧ್ಯಕ್ಷ ಡಾ.ಕೆ.ಕೆ.ಅಗರ್ವಾಲ್ ಅವರು, "ಎಡಿಎಚ್ಡಿ ಸಮಸ್ಯೆ ಹೊಂದಿರುವ ಮಕ್ಕಳು ತುಂಬಾ ಸಕ್ರಿಯವಾಗಿ ಅಥವಾ ಇನ್ನಿತರ ನಡವಳಿಕೆಗಳನ್ನು ಹೆಚ್ಚಾಗಿ ಪ್ರದರ್ಶಿಸುತ್ತಾರೆ. ಅಂತಹ ಮಕ್ಕಳ ಹಾರೈಕೆ ತುಂಬಾ ಕಷ್ಟ. ಅಂತೆಯೇ ಅವರನ್ನು ಶಾಲೆಯಲ್ಲಿ ಹೊಂದಿಕೊಳ್ಳುವಂತೆ ಮಾಡುವುದು ಮತ್ತು ಕಲಿಸುವುದೂ ಸಹ ಕಷ್ಟದ ವಿಷಯ. ಇಲ್ಲಿ ಯಾರೊಬ್ಬರೂ ಮೋಸ ಮಾಡುತ್ತಿಲ್ಲ. ಆದರೆ ಆರಂಭದಲ್ಲಿ ಈ ಸ್ಥಿತಿಯನ್ನು ನಿಯಂತ್ರಿಸದಿದ್ದರೆ ನಂತರದಲ್ಲಿ ಸಮಸ್ಯೆ ಹೆಚ್ಚಾಗಬಹುದು" ಎಂದು ಹೇಳಿದ್ದಾರೆ.
ಎಡಿಎಚ್ಡಿ ಸಮಸ್ಯೆಗೆ ಯಾವುದೇ ಚಿಕಿತ್ಸೆ ಇಲ್ಲದಿದ್ದರೂ, ಚಿಕಿತ್ಸೆಯ ಲಕ್ಷಣಗಳನ್ನು ಕಡಿಮೆ ಮಾಡುವ ಮತ್ತು ಮಕ್ಕಳ ಕಾರ್ಯನಿರ್ವಹಣೆಯನ್ನು ಉತ್ತಮಗೊಳಿಸಲು ಮಾರ್ಗಗಳಿವೆ ಎಂದು ಡಾ.ಕೆ.ಕೆ.ಅಗರ್ವಾಲ್ ತಿಳಿಸಿದ್ದಾರೆ.
ಸಾಮಾನ್ಯವಾಗಿ ಎಡಿಎಚ್ಡಿ ಲಕ್ಷಣಗಳನ್ನು ಶಿಕ್ಷಣ ಅಥವಾ ತರಬೇತಿ ನೀಡುವ ಮೂಲಕ ಅದರ ಸಮಸ್ಯೆಯನ್ನು ಕಡಿಮೆಮಾಡಬಹುದು. "ಶಿಕ್ಷಣ, ಬೆಂಬಲ ಮತ್ತು ಸೃಜನಶೀಲತೆ ಅಂತಹ ಮಕ್ಕಳಲ್ಲಿ ಈ ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ಬಹಳ ಸಹಾಯಕವಾಗಬಹುದು" ಎಂದು ಡಾ.ಕೆ.ಕೆ. ಅಗರ್ವಾಲ್ ಹೇಳಿದರು.
ಎಡಿಎಚ್ಡಿ ಸಮಸ್ಯೆಯುಳ್ಳ ಮಕ್ಕಳನ್ನು ನಿರ್ವಹಿಸಲು ಕ್ರಮಗಳು:
* ನಿಯಮಿತವಾಗಿ ಹೊಂದಿಸುವುದು: ಸ್ಪಷ್ಟ ಮಿತಿಗಳನ್ನು ಹೊಂದಿಸಿ, ಅದರಿಂದ ಯಾವ ರೀತಿಯ ವರ್ತನೆಯನ್ನು ನಿರೀಕ್ಷಿಸಲಾಗಿದೆ ಎಂದು ಎಲ್ಲರಿಗೂ ತಿಳಿದಿರುತ್ತದೆ.
* ಪ್ರಶಸ್ತಿಗಳು ಮತ್ತು ಪ್ರತಿಫಲಗಳು : ಉತ್ತಮ ಕೆಲಸಕ್ಕೆ ಪ್ರಶಂಸೆ ಅಥವಾ ಪ್ರತಿಫಲವನ್ನು ನೀಡುವುದರಿಂದ ನಡವಳಿಕೆಯನ್ನು ಧನಾತ್ಮಕವಾಗಿ ಬಲಪಡಿಸುತ್ತದೆ. ಉತ್ತಮ ನಡವಳಿಕೆಯನ್ನು ಹೆಚ್ಚಿಸಲು ನೀವು ಅಂಕಗಳನ್ನು ಅಥವಾ ನಕ್ಷತ್ರ ವ್ಯವಸ್ಥೆಗಳನ್ನು ಬಳಸಲು ಪ್ರಯತ್ನಿಸಬಹುದು.
* ಎಚ್ಚರಿಕೆಯ ಚಿಹ್ನೆಗಳನ್ನು ಗಮನಿಸಿ: ಮಗುವು ತನ್ನ ಸ್ವಭಾವವನ್ನು ಕಳೆದುಕೊಳ್ಳುತ್ತಿದ್ದಾನೆ ಎಂದು ಕಂಡುಬಂದರೆ, ನಂತರ ಅದರ ಗಮನವನ್ನು ಕೇಳಿ ಇನ್ನಿತರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ.
* ಸ್ನೇಹಿತರನ್ನು ಆಮಂತ್ರಿಸಿ: ಇದು ಮಗುವಿಗೆ ಭೇಟಿ ನೀಡಲು ಸುಲಭವಾಗುತ್ತದೆ. ಆದರೆ ಮಗುವು ತನ್ನ ಮೇಲೆ ನಿಯಂತ್ರಣವನ್ನು ಕಳೆದುಕೊಳ್ಳುವುದಿಲ್ಲ ಎಂದು ಖಚಿತಪಡಿಸಿಕೊಳ್ಳಿ.
* ನಿದ್ರೆ ಸುಧಾರಿಸಿ: ನಿಮ್ಮ ಮಗುವಿಗೆ ಉತ್ತಮ ನಿದ್ರೆ ನೀಡಿ.
ಜೊತೆಗೆ ಇಂತಹ ಮಕ್ಕಳಿಗೆ ಯಾವುದೇ ಕೆಲಸವನ್ನೂ ಬಲವಂತವಾಗಿ ಮಾಡಿಸುವ ಬದಲಿಗೆ, ಮಗುವೇ ಪ್ರೀತಿಯಿಂದ ಕೆಲಸವನ್ನು ಮಾಡುವಂತೆ ಉತ್ತೇಜಿಸಿ.