close

News WrapGet Handpicked Stories from our editors directly to your mailbox

ನೀವೂ ಬೆಳಗಿನ ಉಪಹಾರ ನಿರ್ಲಕ್ಷಿಸುವಿರೇ? ಹಾಗಿದ್ದರೆ ಎಚ್ಚರ!

ಪ್ರತಿದಿನ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದಿರುವುದು ಹಲವು ರೋಗಗಳಿಗೆ ನಾವೇ ಆಹ್ವಾನ ನೀಡಿದಂತೆ. ಇದಲ್ಲದೆ ನಮ್ಮ ಜೀವನ ಶೈಲಿ ಕೂಡ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.

Updated: Jun 3, 2019 , 01:08 PM IST
ನೀವೂ ಬೆಳಗಿನ ಉಪಹಾರ ನಿರ್ಲಕ್ಷಿಸುವಿರೇ? ಹಾಗಿದ್ದರೆ ಎಚ್ಚರ!

ನೀವೂ ಕೂಡ ಬೆಳಗ್ಗೆ ಬೇಗ ತಿಂಡಿ ಸೇವಿಸುವುದಿಲ್ಲವೇ? ರಾತ್ರಿ ಊಟ ಕೂಡ ತಡವಾಗಿ ಮಾಡ್ತೀರ? ಇದಲ್ಲದೆ, ನೀವು ಪ್ರತಿದಿನ ಈ ಜೀವನಶೈಲಿಯನ್ನು ಅನುಸರಿಸಿದರೆ ಎಚ್ಚರ, ನೀವೂ ಕೂಡ ಹಲವು ಗಂಭೀರ ಕಾಯಿಲೆಗಳಿಗೆ ತುತ್ತಾಗಬಹುದು. ಏಕೆಂದರೆ, ಪ್ರತಿದಿನ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದಿದ್ದರೆ ದೇಹ ತೀವ್ರವಾಗಿ ಹಾನಿಗೊಳಗಾಗುತ್ತದೆ. ಮುಖ್ಯವಾಗಿ ಬೆಳಗಿನ ಉಪಹಾರ ನಿರ್ಲಕ್ಷಿಸಿದರೆ ಅದು ನಿಮ್ಮ ಹೃದಯಕ್ಕೂ ತೊಂದರೆ ಉಂಟುಮಾಡಬಹುದು.

ಈ ರೀತಿಯ ಅನಾರೋಗ್ಯಕರ ಜೀವನಶೈಲಿ ಪಾಲಿಸುವ ಜನರಿಗೆ  ಅಕಾಲಿಕ ಮರಣದ ಸಾಧ್ಯತೆ ನಾಲ್ಕರಿಂದ ಐದು ಪಟ್ಟು ಹೆಚ್ಚುತ್ತದೆ. ಅಲ್ಲದೆ, ಹೃದಯಾಘಾತದ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ಇತ್ತೀಚಿನ ಸಂಶೋಧನೆಯೊಂದು ವರದಿ ಮಾಡಿದೆ. ಸಂಶೋಧನೆಯಿಂದ ಹೊರಹೊಮ್ಮಿರುವ ಮಾಹಿತಿ ಪ್ರಕಾರ, "ಆಹಾರವನ್ನು ನಿರ್ಲಕ್ಷಿಸುವುದು ಮಾತ್ರವಲ್ಲ, ಸರಿಯಾದ ಸಮಯಕ್ಕೆ ಆಹಾರ ಸೇವಿಸದಿರುವುದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟುಮಾಡುತ್ತದೆ. ವಿಶೇಷವಾಗಿ ಹೃದಯಕ್ಕೆ ಸಂಬಂಧಿಸಿದ ಹಲವು ರೋಗಗಳಿಗೆ ಇದು ದಾರಿಯಾಗುತ್ತದೆ" ಎನ್ನಲಾಗಿದೆ.

ಹೃದಯಾಘಾತದಿಂದ ಬಳಲುತ್ತಿರುವ 113 ಮಂದಿ ಮೇಲೆ ಈ ಸಂಶೋಧನೆ ನಡೆಸಲಾಗಿದೆ. ಇವರೆಲ್ಲರೂ ಸರಾಸರಿ 60 ವರ್ಷ ವಯೋಮಾನದವರು. ಇವರಲ್ಲಿ 73% ಪುರುಷರಿದ್ದರು. ಇವರಲ್ಲಿ ಬೆಳಗಿನ ಉಪಹಾರ ಸೇವಿಸದವರು ಶೇ. 58 ರಷ್ಟು ಇದ್ದರು, ಶೇ. 51ರಷ್ಟು ಮಂದಿ ರಾತ್ರಿ ಭೋಜನ ತಡವಾಗಿ ಸೇವಿಸುತ್ತಿದ್ದವರು. ಶೇಕಡಾ 48 ರಷ್ಟು ಜನರು ಎರಡೂ ವಿಧದ ಆಹಾರ ಪದ್ಧತಿಗಳನ್ನು ಅನುಸರಿಸುತ್ತಿದ್ದರು ಎನ್ನಲಾಗಿದೆ.

ಆಹಾರ ಸೇವನೆ ಅಭ್ಯಾಸವನ್ನು ಸುಧಾರಿಸಲು ಮತ್ತು ರಾತ್ರಿ ಊಟದ ಸಮಯ ಹಾಗೂ ಮಲಗುವ ಸಮಯಕ್ಕೂ ನಡುವೆ ಕನಿಷ್ಠ 2 ಗಂಟೆಗಳ ಅಂತರವಿರಬೇಕು ಎಂದು ವೈದ್ಯರು ಶಿಫಾರಸು ಮಾಡುತ್ತಾರೆ. ಸಂಶೋಧನಾ ತಂಡದ ಪ್ರಕಾರ, "ಉತ್ತಮ ಉಪಹಾರವು ಹೆಚ್ಚಿನ ಹಾಲು ಉತ್ಪನ್ನಗಳನ್ನು (ಕೊಬ್ಬು ಮುಕ್ತ ಅಥವಾ ಕಡಿಮೆ ಕೊಬ್ಬಿನ ಹಾಲು, ಮೊಸರು ಮತ್ತು ಚೀಸ್), ಕಾರ್ಬೋಹೈಡ್ರೇಟ್ (ಗೋಧಿ ರೊಟ್ಟಿ, ಬೇಯಿಸಿದ ಬ್ರೆಡ್, ಧಾನ್ಯಗಳು) ಮತ್ತು ಹಣ್ಣುಗಳನ್ನು ಒಳಗೊಂಡಿರಬೇಕು.