ಈ ಆರು ಲಕ್ಷಣಗಳಿದ್ದರೆ.. ನಿಮ್ಮ ಹೃದಯ ದುರ್ಬಲವಾಗಿದೆ ಎಂದರ್ಥ..!

ಹೃದಯವು ನಮ್ಮ ದೇಹದ ಅತ್ಯಂತ ಪ್ರಮುಖವಾದ.. ಸೂಕ್ಷ್ಮ ಅಂಗಗಳಲ್ಲಿ ಒಂದು. ಇದನ್ನು ನಿರ್ಲಕ್ಷಿಸಿದರೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಇತ್ತೀಚಿಗೆ ಹೃದಯಾಘಾತವು ಒಂದು ದೊಡ್ಡ ಸಮಸ್ಯೆಯಾಗಿದೆ. ಪ್ರಸ್ತುತ ಯುವಜನರಲ್ಲಿ ಹೃದಯಾಘಾತದ ಪ್ರಮಾಣ ಹೆಚ್ಚುತ್ತಿದೆ. ಹೃದಯಾಘಾತದ ಲಕ್ಷಣಗಳು ನಮಗೆ ಗೊತ್ತಿಲ್ಲದೆ ಬರುತ್ತವೆ... ನೀವು ಯಾವುದೇ ನೋವು, ಹಾಗು ರೋಗಲಕ್ಷಣಗಳನ್ನು ಅನುಭವಿಸಿದರೆ, ಜಾಗರೂಕರಾಗಿರಬೇಕು. ಹೆಚ್ಚಿನ ಮಾಹಿತಿ ಇಲ್ಲಿದೆ..

Written by - Krishna N K | Last Updated : Sep 2, 2024, 09:24 PM IST
    • ಹೃದಯವು ನಮ್ಮ ದೇಹದ ಅತ್ಯಂತ ಪ್ರಮುಖವಾದ..
    • ಇದನ್ನು ನಿರ್ಲಕ್ಷಿಸಿದರೆ ಹಲವು ಸಮಸ್ಯೆಗಳು ಎದುರಾಗುತ್ತವೆ.
    • ಇತ್ತೀಚಿಗೆ ಹೃದಯಾಘಾತವು ಒಂದು ದೊಡ್ಡ ಸಮಸ್ಯೆಯಾಗಿದೆ.
ಈ ಆರು ಲಕ್ಷಣಗಳಿದ್ದರೆ.. ನಿಮ್ಮ ಹೃದಯ ದುರ್ಬಲವಾಗಿದೆ ಎಂದರ್ಥ..! title=

Heart health tips in Kannada : ಹೃದಯವು ನಮ್ಮ ದೇಹದ ಅತ್ಯಂತ ಪ್ರಮುಖವಾದ.. ಸೂಕ್ಷ್ಮ ಅಂಗಗಳಲ್ಲಿ ಒಂದು. ಇದನ್ನು ನಿರ್ಲಕ್ಷಿಸಿದರೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಇತ್ತೀಚಿಗೆ ಹೃದಯಾಘಾತವು ಒಂದು ದೊಡ್ಡ ಸಮಸ್ಯೆಯಾಗಿದೆ. ಪ್ರಸ್ತುತ ಯುವಜನರಲ್ಲಿ ಹೃದಯಾಘಾತದ ಪ್ರಮಾಣ ಹೆಚ್ಚುತ್ತಿದೆ. ಹೃದಯಾಘಾತದ ಲಕ್ಷಣಗಳು ನಮಗೆ ಗೊತ್ತಿಲ್ಲದೆ ಬರುತ್ತವೆ... ನೀವು ಯಾವುದೇ ನೋವು, ಹಾಗು ರೋಗಲಕ್ಷಣಗಳನ್ನು ಅನುಭವಿಸಿದರೆ, ಜಾಗರೂಕರಾಗಿರಬೇಕು. ಹೆಚ್ಚಿನ ಮಾಹಿತಿ ಇಲ್ಲಿದೆ..

ಎದೆ ನೋವು: ಮಯೋಕ್ಲಿನಿ ಪ್ರಕಾರ, ಎದೆ ನೋವು ಸಾಮಾನ್ಯವಾಗಿ ಆಮ್ಲೀಯತೆ ಅಥವಾ ಗ್ಯಾಸ್ಟ್ರೀಕ್‌ನಿಂದ ಬರುತ್ತದೆ.. ಆದರೂ ತೀವ್ರವಾದ ಎದೆ ನೋವು ಅಥವಾ ಎದೆ ಭಾರ ಅಂತ ಅನಿಸಿದರೆ ಇದು ಹೃದ್ರೋಗದ ಸಂಕೇತವಾಗಿರಬಹುದು... ಇವುಗಳನ್ನು ಎಂದಿಗೂ ನಿರ್ಲಕ್ಷಿಸಬಾರದು.

ಇದನ್ನೂ ಓದಿ:ಸೋಂಪಿನ ನೀರಿಗೆ ಈ ಪುಡಿಯನ್ನು ಒಂದು ಚಿಟಕಿ ಹಾಕಿ ಕುಡಿಯಿರಿ! ಬ್ಲಡ್ ಶುಗರ್ ನಾರ್ಮಲ್ ಆಗುವುದು!ಪಥ್ಯ, ಔಷಧಿ ಎಲ್ಲಾ ಮರೆತುಬಿಡಿ !

ಉಸಿರಾಟದ ತೊಂದರೆ: ಕೆಲವು ದೈಹಿಕ ಚಟುವಟಿಕೆಯನ್ನು ಮಾಡುವಾಗ ಉಸಿರಾಟದ ತೊಂದರೆಯು ಹೃದಯದ ಸಮಸ್ಯೆಯ ಸಂಕೇತವಾಗಿದೆ. ರಾತ್ರಿ ಹೊತ್ತು ಉಸಿರಾಟದ ತೊಂದರೆ ಮತ್ತು ನಿದ್ರೆಯ ಕೊರತೆಯ ಲಕ್ಷಣವಾಗಿರಬಹುದು.

ಎಡಿಮಾ: ನಿಮ್ಮ ಹೃದಯವು ಸರಿಯಾಗಿ ಪಂಪ್ ಮಾಡಲು ಸಾಧ್ಯವಾಗದಿದ್ದಾಗ, ದ್ರವಗಳು ದೇಹವನ್ನು ತುಂಬುತ್ತವೆ. ಆಗ ಊತ ಮತ್ತು ನೋವು ಕಾಣಿಸಿಕೊಳ್ಳುತ್ತದೆ. ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ. ಏಕೆಂದರೆ ಇದು ದುರ್ಬಲ ಹೃದಯವನ್ನು ಸೂಚಿಸುತ್ತದೆ.

ಹಠಾತ್ ತೂಕ ಹೆಚ್ಚಾಗುವುದು: ನೀವು ಇದ್ದಕ್ಕಿದ್ದಂತೆ ತೂಕವನ್ನು ಹೆಚ್ಚಿಸಿದರೆ, ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಅಧಿಕ ತೂಕವು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ:ಪ್ರೆಶರ್ ಕುಕ್ಕರ್‌ ಅಡುಗೆ ಮಾಡುವುದು ಒಳ್ಳೆಯದಾ.. ಕೆಟ್ಟದ್ದಾ..? ಈ  ಆಹಾರಗಳನ್ನಂತೂ ಅದರಲ್ಲಿ ಬೇಯಿಸಬೇಡಿ.. ದೇಹಕ್ಕೆ ಹಾನಿ..!

ಆಯಾಸ: ಒಂದು ಸಣ್ಣ ವ್ಯಾಯಾಮದ ನಂತರ ನೀವು ಆಯಾಸ ಅಥವಾ ಉಸಿರಾಟದ ತೊಂದರೆ ಅನುಭವಿಸಿದರೆ, ನಿಮ್ಮ ಹೃದಯವು ಸಾಕಷ್ಟು ರಕ್ತವನ್ನು ಪಂಪ್ ಮಾಡುತ್ತಿಲ್ಲ ಅಂತ ಅರ್ಥ. ಇದು ಹೃದ್ರೋಗದ ಅಪಾಯವನ್ನೂ ಹೆಚ್ಚಿಸುತ್ತದೆ.

ಅತಿಯಾದ ಬೆವರುವಿಕೆ: ನೀವು ಅತಿಯಾಗಿ ಬೆವರುತ್ತಿದ್ದರೆ, ಇದು ಹೃದಯ ಸಮಸ್ಯೆಯ ಸಂಕೇತವಾಗಿರಬಹುದು. ವಿಶೇಷವಾಗಿ ಎದೆ ನೋವು ಮತ್ತು ಉಸಿರಾಟದ ತೊಂದರೆ.. ಬಹುಷಃ ಇದು ಹೃದಯಾಘಾತದ ಸಂಕೇತವಾಗಿರಬಹುದು.. ಯಾವುದಕ್ಕೂ ವೈದ್ಯರನ್ನು ಸಂಪರ್ಕಿಸಿ.. ಅಲಕ್ಷ್ಯ ಮಾಡಬೇಡಿ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News