ಸ್ನಾನ ಮಾಡುವಾಗ ಮೂತ್ರ ವಿಸರ್ಜನೆ ಮಾಡ್ತೀರಾ..? ಎಚ್ಚರಿಕೆ.. ಈ ರೋಗಗಳು ಬರುವ ಸಾಧ್ಯತೆ ಇದೆ

Shower health tips : ಸ್ನಾನ ಮಾಡುವಾಗ ಮೂತ್ರ ವಿಸರ್ಜನೆ ಮಾಡುವ ಅಭ್ಯಾಸ ಅನೇಕರಿಗೆ ಇರುತ್ತದೆ. ಅನೇಕ ಜನರು ಸ್ನಾನ ಮಾಡಲು ಪ್ರಾರಂಭಿಸಿದ ತಕ್ಷಣ ಮೂತ್ರ ವಿಸರ್ಜನೆಯನ್ನು ಮಾಡುತ್ತಾರೆ.. ಸ್ನಾನ ಮಾಡುವಾಗ ಮೂತ್ರ ವಿಸರ್ಜಿಸುವುದು ಹಾನಿಕಾರಕವಲ್ಲ ಎಂದು ಹಲವರು ಭಾವಿಸುತ್ತಾರೆ. ಆದರೆ ಅದು ತಪ್ಪು. ಹೆಚ್ಚಿನ ಮಾಹಿತಿ ಈ ಕೆಳಗಿದೆ ಓದಿ..

Written by - Krishna N K | Last Updated : Oct 17, 2024, 08:25 PM IST
    • ಸ್ನಾನ ಮಾಡುವಾಗ ಕೆಲವರು ಮೂರ್ತ ವಿಸರ್ಜನೆ ಮಾಡುತ್ತಾರೆ.
    • ಸ್ನಾನ ಮಾಡಲು ಪ್ರಾರಂಭಿಸಿದ ತಕ್ಷಣ ಮೂತ್ರ ವಿಸರ್ಜನೆಯನ್ನು ಮಾಡುತ್ತಾರೆ..
    • ಮೂತ್ರ ವಿಸರ್ಜಿಸುವುದು ಹಾನಿಕಾರಕವಲ್ಲ ಎಂದು ಹಲವರು ಭಾವಿಸುತ್ತಾರೆ.
ಸ್ನಾನ ಮಾಡುವಾಗ ಮೂತ್ರ ವಿಸರ್ಜನೆ ಮಾಡ್ತೀರಾ..? ಎಚ್ಚರಿಕೆ.. ಈ ರೋಗಗಳು ಬರುವ ಸಾಧ್ಯತೆ ಇದೆ title=

Health tips  in Kannada : ವರದಿಯೊಂದರ ಪ್ರಕಾರ ಸ್ನಾನ ಮಾಡುವಾಗ ದೇಹದ ಮೇಲೆ ನೀರು ಸುರಿದಾಗ ದೇಹದಲ್ಲಿನ ನರಮಂಡಲವು ಪ್ರಚೋದನೆಯಾಗುತ್ತದೆ. ಇದು ದೇಹದಲ್ಲಿ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ಮತ್ತು ಬಿಪಿಯನ್ನು ಸಾಮಾನ್ಯಗೊಳಿಸಲು ಮೂತ್ರಪಿಂಡಗಳು ದ್ರವವನ್ನು ಫಿಲ್ಟರ್ ಮಾಡಲು ಕಾರಣವಾಗುತ್ತದೆ. ಈ ಸಂಪೂರ್ಣ ಪ್ರಕ್ರಿಯೆಯನ್ನು ಇಮ್ಮರ್ಶನ್ ಡ್ಯೂರೆಸಿಸ್ ಎಂದು ಕರೆಯಲಾಗುತ್ತದೆ. 

ಈ ಸಮಯದಲ್ಲಿ ಮೂತ್ರಕೋಶವು ವೇಗವಾಗಿ ತುಂಬುತ್ತದೆ. ಪರಿಣಾಮವಾಗಿ, ಮೂತ್ರ ವಿಸರ್ಜನೆಯ ಬರುತ್ತದೆ.. ಮತ್ತೊಂದು ಅಧ್ಯಯನದ ಪ್ರಕಾರ, ಹರಿಯುವ ನೀರಿನ ಶಬ್ದ ಕೇಳಿದಾಗ ಮೂತ್ರ ವಿಸರ್ಜನೆ ಮಾಡಲು ದೇಹ ಬಯಸುತ್ತದೆ ಎಂದು ಹೇಳಲಾಗುತ್ತದೆ.. 

ಇದನ್ನೂ ಓದಿ:ನಮ್ಮ ದೇಹಕ್ಕೆ ವಿಟಮಿನ್ ಬಿ 12 ಯಾಕೆ ಬೇಕು? ಅದು ಇಲ್ಲದೆ ಏನಾಗುತ್ತೆ ಗೊತ್ತಾ?

ಕೆಲವು ಅಧ್ಯಯನಗಳ ಪ್ರಕಾರ, ಸ್ನಾನ ಮಾಡುವಾಗ ಮೂತ್ರ ವಿಸರ್ಜನೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹೀಗೆ ಮಾಡುವುದರಿಂದ ಹಲವಾರು ರೀತಿಯ ಸೋಂಕುಗಳು ಬರಬಹುದು. ವಿಶೇಷವಾಗಿ ಸಾರ್ವಜನಿಕ ಸ್ನಾನಗೃಹಗಳಲ್ಲಿ. ಮೂತ್ರವು ಅನೇಕ ರೀತಿಯ ಬ್ಯಾಕ್ಟೀರಿಯಾಗಳು ಮತ್ತು ಇತರ ಹಾನಿಕಾರಕ ಪದಾರ್ಥಗಳನ್ನು ಹೊಂದಿರುತ್ತದೆ, ಅದು ಚರ್ಮದೊಂದಿಗೆ ನೇರ ಸಂಪರ್ಕಕ್ಕೆ ಬರುತ್ತದೆ.

ಮೂತ್ರನಾಳದ ಸೋಂಕಿನಿಂದ ಬಳಲುತ್ತಿರುವ ವ್ಯಕ್ತಿಯು ಸ್ನಾನ ಮಾಡುವಾಗ ಮೂತ್ರ ವಿಸರ್ಜನೆ ಮಾಡುವ ಮೂಲಕ ಸೋಂಕನ್ನು ಉಲ್ಬಣಗೊಳಿಸಬಹುದು. ಅದರಲ್ಲೂ ಮಹಿಳೆಯರ ಮೂತ್ರನಾಳ ಚಿಕ್ಕದಾಗಿದ್ದು ಬ್ಯಾಕ್ಟೀರಿಯಾಗಳು ಮೂತ್ರಕೋಶವನ್ನು ಪ್ರವೇಶಿಸುವುದು ಸುಲಭ. ಮಹಿಳೆಯರು ಸ್ನಾನ ಮಾಡುವಾಗ ಮೂತ್ರ ವಿಸರ್ಜಿಸುವುದನ್ನು ತಪ್ಪಿಸಬೇಕು.

ಇದನ್ನೂ ಓದಿ:ಆರೋಗ್ಯಕರ ರೀತಿಯಲ್ಲಿ ಬಹುಬೇಗನೇ ತೂಕವನ್ನು ಕಳೆದುಕೊಳ್ಳಲು ಈ ಹಣ್ಣುಗಳನ್ನು ತಿನ್ನಿ..!

ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯವಾಗಿದೆ. ಇದು ಎಲ್ಲರಿಗೂ ಸಮಾನವಾಗಿ ಅನ್ವಯಿಸದಿರಬಹುದು. ಫಲಿತಾಂಶಗಳು ವ್ಯಕ್ತಿಯ ಆರೋಗ್ಯವನ್ನು ಅವಲಂಬಿಸಿರುತ್ತದೆ. ಇದನ್ನು ಗಣನೆಗೆ ತೆಗೆದುಕೊಳ್ಳುವ ಮೊದಲು.. ಸಂಬಂಧಿತ ತಜ್ಞರಿಂದ ಸಲಹೆ ಪಡೆಯಿರಿ.. ಯಾವುದೇ ಅಡ್ಡ ಪರಿಣಾಮಗಳಿಗೆ Zee Kannada News ಜವಾಬ್ದಾರಿಯಾಗಿರುವುದಿಲ್ಲ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News