Turkish Religious Leader Adnan Oktar Jailed: ಜಗತ್ತಿನಲ್ಲಿ ಕೆಲ ಜನರು ನಡೆಸುವ ಶೋಷಣೆಗಳು ಸಾಮಾನ್ಯ ಜನರ ಕಲ್ಪನೆಯನ್ನೇ ಮೀರುತ್ತವೆ. ಅನೇಕ ಬಾರಿ ಅವರು ನಡೆಸುವ ತಮ್ಮ ಶೋಷಣೆಯಿಂದ ಸಿಲುಕಿಹಾಕಿಕೊಂಡು ನಂತರ ಕಂಬಿಗಳ ಹಿಂದೆ ತಲುಪುತ್ತಾರೆ. ಇಂತಹ ಜನರಲ್ಲಿ ಟರ್ಕಿಯ ಧಾರ್ಮಿಕ ಗುರು ಕೂಡ ಓರ್ವರಾಗಿದ್ದಾರೆ, ಅವರಿಗೆ ಅಲ್ಲಿನ ನ್ಯಾಯಾಲಯವು 8658 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಈ ಶಿಕ್ಷೆಯು ಸಾಕಷ್ಟು ಐತಿಹಾಸಿಕವಾಗಿದೆ ಮತ್ತು ಈ ಧಾರ್ಮಿಕ ಮುಖಂಡ ತನ್ನ ಜೀವನದುದ್ದಕ್ಕೂ ಜೈಲಿನಲ್ಲಿ ಕಾಲ ಕಳೆಯಬೇಕಾದ ಪ್ರಸಂಗ ಎದುರಾಗಿದೆ.
ಅದ್ನಾನ್ ಗೆ 8658 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ
ವಾಸ್ತವದಲ್ಲಿ, ಟರ್ಕಿಯಲ್ಲಿ ದೂರದರ್ಶನದಲ್ಲಿ ಇಸ್ಲಾಂಗೆ ಸಂಬಂಧಿಸಿದ ಧರ್ಮೋಪದೇಶಗಳನ್ನು ನೀಡುವ ಈ ಧಾರ್ಮಿಕ ಮುಖಂಡನ ಹೆಸರು ಅದ್ನಾನ್ ಒಕ್ಟರ್. ಅಂತರಾಷ್ಟ್ರೀಯ ಮಾಧ್ಯಮ ವರದಿಗಳ ಪ್ರಕಾರ, ಇಸ್ತಾನ್‌ಬುಲ್ ನ್ಯಾಯಾಲಯವು ಅದ್ನಾನ್ ಒಕ್ಟರ್‌ಗೆ 8658 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಭಯೋತ್ಪಾದಕ ಸಂಘಟನೆಯನ್ನು ನಡೆಸುವುದು, ಲೈಂಗಿಕ ಶೋಷಣೆ, ಅಪ್ರಾಪ್ತರ ಮೇಲೆ ಅತ್ಯಾಚಾರ, ಬ್ಲ್ಯಾಕ್‌ಮೇಲ್, ಮನಿ ಲಾಂಡರಿಂಗ್ ಮತ್ತು ಬೇಹುಗಾರಿಕೆಗಾಗಿ ಆತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಇದು ಇತಿಹಾಸದಲ್ಲಿಯೇ ಸುದೀರ್ಘವಾದ ಶಿಕ್ಷೆಗಳಲ್ಲಿ ಒಂದಾಗಿದೆ.
ಟಿವಿಯಲ್ಲಿ ಇಸ್ಲಾಮಿಕ್ ಬೋಧನೆ
ವರದಿಗಳ ಪ್ರಕಾರ, ಈ ದಿನಗಳಲ್ಲಿ ಅವರು ಆನ್‌ಲೈನ್ ಟಿವಿ ಚಾನೆಲ್‌ನಲ್ಲಿ ಇಸ್ಲಾಮಿಕ್ ಧರ್ಮೋಪದೇಶಗಳನ್ನು ನೀಡುತ್ತಿದ್ದರು. ಅದ್ನಾನ್ ಮತ್ತು ಅವರ ಸಹಚರರ ವಿರುದ್ಧ ಮೊದಲ ತೀರ್ಪು ಜನವರಿ 2021 ರಲ್ಲಿ ಪ್ರಕಟಗೊಂಡಿತ್ತು, ಆದರೆ ಉನ್ನತ ನ್ಯಾಯಾಲಯವು ಅದನ್ನು ತಿರಸ್ಕರಿಸಿತ್ತು. ಸೆಪ್ಟೆಂಬರ್‌ನಲ್ಲಿ, ಅದ್ನಾನ್ ಮತ್ತು ಅವರ ಸಹಚರರ ವಿರುದ್ಧದ ಈ ದೋಷಾರೋಪಣೆ ಪಟ್ಟಿಯನ್ನು ಪುನಃ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಇದರಲ್ಲಿ ಆತ ಸಶಸ್ತ್ರ ಸಂಘಟನೆಯನ್ನು ನಡೆಸುತ್ತಿದ್ದಾನೆ ಮತ್ತು ಅನೇಕ ಜನರ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ-Video: ಪಾಕಿಸ್ತಾನದಲ್ಲಿ 19 ವರ್ಷದ ಯುವತಿಯನ್ನು ಮದುವೆಯಾದ 70 ವರ್ಷದ ವೃದ್ದ..!
ಬಿಕಿನಿ ಬಾಲೆಯರಿಂದ ಸುತ್ತುವರೆದಿರುತ್ತಾನಂತೆ
ಪ್ರಸ್ತುತ ಉನ್ನತ ನ್ಯಾಯಾಲಯದ ಶಿಕ್ಷೆ ಪ್ರಕಟವಾಗಿದೆ. ಅವರ ಧರ್ಮೋಪದೇಶಗಳಲ್ಲಿ, ಅದ್ನಾನ್ ಸಂಪ್ರದಾಯ ಮತ್ತು ಸಾಂಪ್ರದಾಯಿಕ ವಿಚಾರಗಳ ಬಗ್ಗೆ ಮಾತನಾಡುತ್ತಿದ್ದ, ಆದರೆ ಆತನ ಸುತ್ತಲೂ ಬಿಕಿನಿ ಬಾಲೆಯರ ದಂಡೆ ಇರುತ್ತಿತ್ತು ಎನ್ನಲಾಗಿದೆ. ಅವನ ಸುತ್ತಲೂ ತುಂಡುಡುಗೆ ಧರಿಸಿದ ಮತ್ತು ಬಿಕಿನಿ ತೊಟ್ಟ ಹುಡುಗಿಯರು ಇರುತ್ತಿದ್ದರು ಹಾಗೂ ಆತ ಅವರನ್ನು ಕಿಟೆನ್ಸ್ ಅಂದರೆ 'ಬೆಕ್ಕಿನಮರಿಗಳು' ಎಂದು ಕರೆಯುತ್ತಿದ್ದನು ಎನ್ನಲಾಗಿದೆ. 66 ವರ್ಷದ ಅದ್ನಾನ್ ಸ್ವತಃ ಮಾಡರ್ನ್ ಡ್ರೆಸ್ ಧರಿಸುತ್ತಿದ್ದ. ಆತ ಆಗಾಗ್ಗೆ ಪಾರ್ಟಿಗಳನ್ನು ನಡೆಸುತ್ತಿದ್ದರು ಮತ್ತು ತಮ್ಮ ಕಾರ್ಯಕ್ರಮಗಳಿಗೆ ಭಾರತ ಮತ್ತು ವಿದೇಶದ ಸೆಲೆಬ್ರಿಟಿಗಳನ್ನು ಆಹ್ವಾನಿಸುತ್ತಿದ್ದ ಎಂದು ಹೇಳಲಾಗಿದೆ.
ಇದನ್ನೂ ಓದಿ-Viral Video: ಹೆಬ್ಬಾವನ್ನು ಸೆರೆಹಿಡಿಯಲು ಚಿಕನ್ ಆಮೀಷ, ಮುಂದೇನಾಯ್ತು? ವಿಡಿಯೋ ನೋಡಿ
ದಾಳಿಯಲ್ಲಿ 69 ಸಾವಿರ ಗರ್ಭನಿರೋಧಕ ಮಾತ್ರೆಗಳು ಜಪ್ತಿ
ಅಚ್ಚರಿ ಎಂದರೆ ತನಗೆ ಸುಮಾರು 1000 ಗೆಳತಿಯರಿದ್ದಾರೆ ಎಂದು ಅದ್ನಾನ್ ನ್ಯಾಯಾಧೀಶರ ಮುಂದೆ ಹೇಳಿದ್ದಾನಂತೆ. ವಿಚಾರಣೆಯ ಸಮಯದಲ್ಲಿ, ಅದ್ನಾನ್ ಅನೇಕ ರಹಸ್ಯಗಳನ್ನು ಮತ್ತು ಭೀಕರ ಲೈಂಗಿಕ ಅಪರಾಧಗಳನ್ನು ಬಹಿರಂಗಪಡಿಸಿದ್ದಾನೆ ಎನ್ನಲಾಗಿದೆ. ಕೆಲವು ವರ್ಷಗಳ ಹಿಂದೆ, ಅದ್ನಾನ್ ಹಲವಾರು ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ್ದಾನೆ ಮತ್ತು ಗರ್ಭನಿರೋಧಕ ಔಷಧಿಗಳನ್ನು ಸೇವಿಸುವಂತೆ ಒತ್ತಾಯಿಸಿದ್ದಾನೆ ಎಂದು ಕೆಲವು ಮಹಿಳೆಯರು ಆರೋಪಿಸಿದ್ದರು. ಒಮ್ಮೆ ದಾಳಿ ನಡೆಸಿದಾಗ ಅದ್ನಾನ್ ಮನೆಯಿಂದ 69 ಸಾವಿರ ಗರ್ಭನಿರೋಧಕ ಮಾತ್ರೆಗಳು ಪತ್ತೆಯಾಗಿದ್ದವು. ಅದೇನೇ ಇರಲಿ ಪ್ರಸ್ತುತ ಅದ್ನಾನ್ ಪುನಃ ದೀರ್ಘಾವಧಿಗೆ ಕಂಬಿ ಹಿಂದೆ ಹೋಗಿದ್ದಾನೆ ಎಂಬ ಸಂಗತಿ ಮಾತ್ರ ನಿಜ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.