Smart Watch: ದೇಹವನ್ನು ಅನಾರೋಗ್ಯಕ್ಕೆ ಒಳಪಡಿಸುತ್ತಿವೆ ಫಿಟ್‌ನೆಸ್ ಗ್ಯಾಜೆಟ್‌ಗಳು!

Smart Watch: ನಮ್ಮಲ್ಲಿ ಅನೇಕರು ತಮ್ಮ ಫಿಟ್‌ನೆಸ್ ಬಗ್ಗೆ ನಿಗಾ ಇಡಲು ಮಣಿಕಟ್ಟಿನ ಮೇಲೆ ಸ್ಮಾರ್ಟ್ ವಾಚ್‌ಗಳನ್ನು ಧರಿಸುತ್ತಾರೆ. ಆದರೆ, ಯಾವುದೇ ಗ್ಯಾಜೆಟ್ ಇಲ್ಲದೆಯೇ ನೀವು ಆರೋಗ್ಯವಾಗಿರಲು ಮತ್ತು ಸಂತೋಷವಾಗಿರಲು ಸಾಧ್ಯವಾಗುವ ಅನನ್ಯ ಮಾರ್ಗವನ್ನು ನಾವು ನಿಮಗೆ ತಿಳಿಸುತ್ತೇವೆ.

Written by - Zee Kannada News Desk | Last Updated : Dec 30, 2021, 02:11 PM IST
  • ಸ್ಮಾರ್ಟ್ ವಾಚ್ ಧರಿಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ
  • ಗ್ಯಾಜೆಟ್‌ಗಳು ವ್ಯಕ್ತಿಯನ್ನು ಒತ್ತಡಕ್ಕೆ ಒಳಪಡಿಸುತ್ತವೆ
  • ನಿಮ್ಮನ್ನು ಫಿಟ್ ಆಗಿಟ್ಟುಕೊಳ್ಳಲು, 4 ವಿಷಯಗಳ ಬಗ್ಗೆ ಕಾಳಜಿ ವಹಿಸುವುದು ಮುಖ್ಯ
Smart Watch: ದೇಹವನ್ನು ಅನಾರೋಗ್ಯಕ್ಕೆ ಒಳಪಡಿಸುತ್ತಿವೆ ಫಿಟ್‌ನೆಸ್ ಗ್ಯಾಜೆಟ್‌ಗಳು!  title=
Know the disadvantages of wearing a smart watch (Representational Image)

Smart Watch: ನಮ್ಮಲ್ಲಿ ಅನೇಕರು ಸ್ಮಾರ್ಟ್ ವಾಚ್ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ. ಮಣಿಕಟ್ಟಿನ ಮೇಲೆ ಸ್ಮಾರ್ಟ್ ವಾಚ್‌ಗಳನ್ನು ಧರಿಸಲಾಗುತ್ತದೆ.  ನಮ್ಮ ದೇಹದ ಬಗ್ಗೆ ನಿಗಾ ವಹಿಸುವ ಈ ಸ್ಮಾರ್ಟ್ ವಾಚ್‌ಗಳು ನಿಜವಾಗಿಯೂ ನಮ್ಮ ಆರೋಗ್ಯಕ್ಕೆ ಒಳ್ಳೆಯದೇ ಎಂಬ ಬಗ್ಗೆ ಎಂದಾದರೂ ಯೋಚಿಸಿದ್ದೀರಾ?  ಈ ಕೈ ಗಡಿಯಾರಗಳು ನಾವು ಎಷ್ಟು ಹೆಜ್ಜೆ ಇಟ್ಟಿದ್ದೇವೆ ಎಂಬುದರಿಂದ ಹಿಡಿದು, ಹಾರ್ಟ್ ಬೀಟ್ , ರಕ್ತದೊತ್ತಡ, ತಾಲೀಮು ಎಲ್ಲವನ್ನೂ ಅಳೆಯುತ್ತವೆ. 

ನಮ್ಮ ಪ್ರತಿ ಹೆಜ್ಜೆಯನ್ನೂ ಟ್ರ್ಯಾಕ್ ಮಾಡುವ ಈ ಸ್ಮಾರ್ಟ್ ವಾಚ್‌ಗಳು ನಮ್ಮ ಆರೋಗ್ಯಕ್ಕೆ ಅನುಕೂಲಕರವಾಗುವ ಬದಲು ನಮ್ಮ ಅನಾರೋಗ್ಯಕ್ಕೆ ಕಾರಣವಾಗುತ್ತದೆ.  ಏಕೆಂದರೆ, ಫಿಟ್‌ನೆಸ್ ಅನ್ನು ಲೆಕ್ಕ ಹಾಕಲು ನೀವು ದಿನವಿಡೀ ಈ ಸ್ಮಾರ್ಟ್ ವಾಚ್‌ಗಳನ್ನು (Smart Watches) ಬಳಸಬಹುದು. ಹೀಗಿರುವಾಗ ಪ್ರತಿ ಕ್ಷಣವೂ ನೀವು ನಿರಂತರವಾಗಿ ಯಾವುದಾದರೂ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುತ್ತಿರುವಂತೆ ಅನಿಸುತ್ತದೆ.  ಜೀವನದಲ್ಲಿ ಒಂದಲ್ಲಾ ಒಂದು ಕಾರಣಕ್ಕೆ ಮೊದಲೇ ಒತ್ತಡ ಇದ್ದೇ ಇರುತ್ತದೆ. ಇದರೊಂದಿಗೆ ಈ ಸ್ಮಾರ್ಟ್ ವಾಚ್‌ಗಳು ನಿಮ್ಮ ಒತ್ತಡವನ್ನು ಹೆಚ್ಚಿಸುತ್ತವೆ. ಆದರೆ, ಯಾವುದೇ ಗ್ಯಾಜೆಟ್ ಇಲ್ಲದೆಯೇ ನೀವು ಆರೋಗ್ಯವಾಗಿರಲು ಮತ್ತು ಸಂತೋಷವಾಗಿರಲು ಸಾಧ್ಯವಾಗುವ ಅನನ್ಯ ಮಾರ್ಗವನ್ನು ನಾವು ನಿಮಗೆ ತಿಳಿಸುತ್ತೇವೆ.

ಈ ಸಮಸ್ಯೆಗೆ ಪರಿಹಾರವೇನು?
>> ಯಾವುದೇ ಫಿಟ್‌ನೆಸ್ ಗ್ಯಾಜೆಟ್‌ಗಳು (Fitness Gadgets) ನಿಮ್ಮನ್ನು ಆರೋಗ್ಯವಾಗಿರಿಸಲು ಸಾಧ್ಯವಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. ಇದು ನಿಮ್ಮ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಬಹುದು, ಆದರೆ ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳಲು ಈ ಗ್ಯಾಜೆಟ್‌ಗಳಿಗೆ ನೀವು ಅವಕಾಶ ನೀಡಿದರೆ, ನೀವು ಎಂದಿಗೂ ಆರೋಗ್ಯವಾಗಿರಲು ಸಾಧ್ಯವಿಲ್ಲ.

>> ನಾವು ಅರ್ಥಮಾಡಿಕೊಳ್ಳಬೇಕಾದ ಎರಡನೆಯ ವಿಷಯವೆಂದರೆ ಅಂತಹ ಗ್ಯಾಜೆಟ್‌ಗಳನ್ನು 24/7 ಅಂದರೆ 24 ಗಂಟೆಗಳು ಮತ್ತು ವಾರದ ಏಳು ದಿನ ಬಳಸಬೇಡಿ.

>> ನೀವು ಬಯಸಿದರೆ, ನೀವು ವ್ಯಾಯಾಮ ಮಾಡುವಾಗ ಮಾತ್ರ ಈ ಸ್ಮಾರ್ಟ್ ವಾಚ್‌ಗಳು (Smart Watches) ಅಥವಾ ಬ್ಯಾಂಡ್‌ಗಳನ್ನು ಧರಿಸಬಹುದು.

>> ಕೂಲ್ ಆಗಿ ಕಾಣಲು ಈ ಸ್ಮಾರ್ಟ್ ವಾಚ್‌ಗಳನ್ನು ಧರಿಸಬೇಡಿ

>> ಒಂದು ದಿನದಲ್ಲಿ ನೀವು ಎಷ್ಟು ವರ್ಕೌಟ್ ಮಾಡಬೇಕು, ಎಷ್ಟು ಕಿಲೋಮೀಟರ್ ಓಡಬೇಕು ಎಂಬುದನ್ನು ಈ ಗ್ಯಾಜೆಟ್‌ಗಳ ಮೂಲಕ  ನಿರ್ಧರಿಸುವ ಬದಲಿಗೆ ವೈದ್ಯರನ್ನು ಸಂಪರ್ಕಿಸಿ.  

ಇದನ್ನೂ ಓದಿ- Cardamom Benefits: ಏಲಕ್ಕಿಯನ್ನು ಈ ರೀತಿ ಸೇವಿಸುವುದರಿಂದ ಸಿಗುತ್ತೆ ಹೆಚ್ಚು ಪ್ರಯೋಜನ

ಈ 4 ಅಂಶಗಳು ದೇಹವನ್ನು ಆರೋಗ್ಯಕರವಾಗಿಸುತ್ತವೆ:
ನೀವು ಎಷ್ಟು ಸಂತೋಷವಾಗಿರುತ್ತೀರಿ ಎಂಬುದು ನಿಮ್ಮ ಆರೋಗ್ಯದ ಮೇಲೆ ಅವಲಂಬಿತವಾಗಿರುತ್ತದೆ. ನಿಮ್ಮ ಆರೋಗ್ಯವು ಉತ್ತಮವಾಗಿದ್ದರೆ ನೀವು ಹೆಚ್ಚು ಸಂತೋಷವನ್ನು ಅನುಭವಿಸುವಿರಿ ಮತ್ತು ನಿಮ್ಮ ಆರೋಗ್ಯವು ಕೆಟ್ಟದಾಗಿದ್ದರೆ ನೀವು ಅತೃಪ್ತಿ ಹೊಂದುತ್ತೀರಿ. ಈಗ ಆರೋಗ್ಯಕರ ದೇಹವು 4 ವಸ್ತುಗಳಿಂದ ಮಾಡಲ್ಪಟ್ಟಿದೆ. ಅದಕ್ಕಾಗಿ ನಿತ್ಯ ಉತ್ತಮ ಮತ್ತು ಪೌಷ್ಟಿಕ ಆಹಾರವನ್ನು ಸೇವಿಸಿ, ಪ್ರತಿದಿನ ವ್ಯಾಯಾಮ ಮಾಡಿ, ಸಾಕಷ್ಟು ನಿದ್ದೆ ಮಾಡಿ ಮತ್ತು ಬಿಡುವಿನ ಸಮಯವನ್ನು ಅಂದರೆ ವಿರಾಮ ಸಮಯವನ್ನು ಬಳಸಿ. 

ಇಂದಿನ ಯುಗದಲ್ಲಿ, ಯಾರಾದರೂ ತಮ್ಮ ಸಂಬಂಧಿಕರನ್ನು ಭೇಟಿಯಾಗಲು ಬಿಡುವಿನ ವೇಳೆಯನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಿದರೆ ಅಥವಾ ಅವರು ಯಾರೊಂದಿಗಾದರೂ ಮೊಬೈಲ್ ಫೋನ್‌ನಲ್ಲಿ (Mobile Phones) ದೀರ್ಘಕಾಲ ಮಾತನಾಡಿದರೆ ಇದನ್ನು ತಪ್ಪಾಗಿ ಅರ್ಥೈಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಇಂಥವರಿಗೆಲ್ಲ ಒಂದು ಪದ ಬಳಕೆಯಲ್ಲಿದೆ. ಅಂದರೆ, ಈ ವ್ಯಕ್ತಿಯು ಖಾಲಿಯಾಗಿದ್ದಾನೆ, ಅವನಿಗೆ ಮಾಡಲು ಏನೂ ಕೆಲಸ ಇಲ್ಲ ಮತ್ತು ಇತರ ಜನರ ಸಮಯವನ್ನು ವ್ಯರ್ಥ ಮಾಡುತ್ತಾನೆ ಎಂದು ಹಲವರು ಮಾತನಾಡುವುದನ್ನು ನಾವು-ನೀವೆಲ್ಲಾ ಸಾಮಾನ್ಯವಾಗಿ ಕೇಳಿಯೇ ಇರುತ್ತೇವೆ. ಹಲವು ಬಾರಿ ಕೆಲವರ ಬಗ್ಗೆ ಸ್ವತಃ ನಾವೇ ಈ ಮಾತುಗಳನ್ನು ಆಡಿರುತ್ತೇವೆ. ಆದರೆ ವಾಸ್ತವವೆಂದರೆ ನಿಮಗೆ ಈ ಉಚಿತ ಸಮಯವಿಲ್ಲದಿದ್ದರೆ ನಿಮ್ಮ ಜೀವನವು ಎಂದಿಗೂ ಸಂತೋಷದಿಂದ ತುಂಬಲು ಸಾಧ್ಯವಿಲ್ಲ.

ಇದನ್ನೂ ಓದಿ-  ಬಿಸಿ ನೀರಿನಿಂದ ಸ್ನಾನ ಮಾಡಿದರೆ ತಪ್ಪಿದಲ್ಲಿ ಈ 5 ಸಮಸ್ಯೆಗಳು!

ಬಿಡುವಿನ ವೇಳೆಯಲ್ಲಿ ಉತ್ತಮ ಆರೋಗ್ಯ ದೊರೆಯುತ್ತದೆ:
ನಮ್ಮ ಹಿರಿಯರ ಕಾಲದಲ್ಲಿ ಜನರು ಈ ವಿರಾಮದ ಮಹತ್ವವನ್ನು ಅರ್ಥಮಾಡಿಕೊಂಡಿದ್ದರು. ಮೊದಲೆಲ್ಲಾ ಹಳ್ಳಿಗಳಲ್ಲಿ ಜನರು ಅರಳಿಕಟ್ಟೆಯ ಮೇಲೆ ಕುಳಿತು ಗಂಟೆಗಟ್ಟಲೆ ಮಾತನಾಡುತ್ತಿದ್ದರು. ಇದರ ಹಿಂದೆ ಯಾವುದೇ ಅಜೆಂಡಾ ಆಗಲಿ, ಉದ್ದೇಶವಾಗಲಿ ಇರುತ್ತಿರಲಿಲ್ಲ. ಆದರೆ ಇಂದಿನ ದಿನಗಳಲ್ಲಿ ಜನರಿಗೆ ಇದಕ್ಕೆ ಸಮಯವಿಲ್ಲ. ಯಾರಿಗಾದರೂ ಫೋನ್ ಮಾಡಿದಾಗ ಸಾಮಾನ್ಯವಾಗಿ ಎದುರಿನಿಂದ ಬರುವ ಧ್ವನಿ "ಏನು ಕೆಲಸ ಹೇಳಿ"! ಇಂದಿನ ಯುಗದಲ್ಲಿ, ಯಾವುದೇ ಉದ್ದೇಶವಿಲ್ಲದೆ ಪರಸ್ಪರರು ಮಾತನಾಡುವುದು ತುಂಬಾ ವಿರಳ ಮತ್ತು ಇದರಿಂದಾಗಿ ಜನರು ಒತ್ತಡದಿಂದ ಸುತ್ತುವರೆದಿದ್ದಾರೆ. ಇದರ ಜೊತೆಗೆ ಫಿಟ್ ಆಗಿರಲು ಅಂತಹ ಗ್ಯಾಜೆಟ್‌ಗಳ ಮೇಲೆ ಅವಲಂಬಿತರಾಗಿರುತ್ತಾರೆ. ಆದರೆ, ಒತ್ತಡ ಮುಕ್ತ ಜೀವನಕ್ಕಾಗಿ  ನಿಮ್ಮ ಜೀವನದ ಉಚಿತ ಸಮಯದಲ್ಲಿ ಯಾವುದೇ ಅಜೆಂಡಾ ಇಲ್ಲದೆ ನಿಮ್ಮ ಸ್ನೇಹಿತರು ಮತ್ತು ಪ್ರೀತಿಪಾತ್ರರೊಂದಿಗೆ ಮಾತನಾಡಿ. ಏಕೆಂದರೆ ಈ ಸಮಯವು ನಿಮಗೆ ಉತ್ತಮ ಆರೋಗ್ಯ ಮತ್ತು ಜೀವನದ ಭರವಸೆಯನ್ನು ನೀಡುತ್ತದೆ. ಇದರೊಂದಿಗೆ ನಮ್ಮ ಮುಂದಿನ ಪೀಳಿಗೆಗೂ ಕೇವಲ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳ ಮೇಲೆ ಅವಲಂಬಿತರಾಗಿರುವ ಬದಲು ಪುಸ್ತಕಗಳನ್ನು ಓದುವ, ಬಂಧು-ಬಳಗದವರೊಂದಿಗೆ, ಸ್ನೇಹಿತರೊಂದಿಗೆ ಪ್ರೀತಿ -ವಿಶ್ವಾಸದಿಂದ ಬದುಕುವ, ಸ್ನೇಹ-ಸಂಬಂಧಗಳಿಗೆ ಬೆಲೆ ಕೊಡುವ ಅಭ್ಯಾಸವನ್ನು ಮತ್ತು ಅದರ ಮಹತ್ವವನ್ನು ತಿಳಿಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News