Monsoon Effects On Diabetes : ಸುಡು ಬಿಸಿಲು, ಬಿಸಿಲಿನ ತಾಪ ಮುಗಿದು ಮಳೆಗಾಲ ಬಂತೆಂದರೆ ಎಲ್ಲರೂ ಖುಷಿಯಿಂದ ಕುಣಿದು ಕುಪ್ಪಳಿಸುತ್ತಾರೆ ನಿಜ. ಬೇಸಿಗೆಯ ನಂತರ ಇದ್ದಕ್ಕಿದ್ದಂತೆ ಮಳೆಯಲ್ಲಿ ಒದ್ದೆಯಾಗುವುದು ಆರೋಗ್ಯಕ್ಕೆ ಸ್ವಲ್ಪ ಹಾನಿಕಾರಕವಾಗಿರುತ್ತದೆ. ವಿಶೇಷವಾಗಿ ಈಗಾಗಲೇ ಯಾವುದೇ ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿರುವ ಜನರಿಗೆ ಇದು ಮತ್ತೂ ಅಪಾಯಕಾರಿ. ಮಧುಮೇಹ ರೋಗದಲ್ಲಿ ರೋಗಿಯ ರೋಗ ನಿರೋಧಕ ಶಕ್ತಿ ದುರ್ಬಲವಾಗಿರುತ್ತದೆ. ಹಾಗಾಗಿ ಮಧುಮೇಹದ ಜೊತೆಗೆ ವಿವಿಧ ಕಾಯಿಲೆಗಳ ಅಪಾಯ ಕೂಡಾ ಹೆಚ್ಚಾಗಿರುತ್ತದೆ.
ಮಧುಮೇಹದಲ್ಲಿ ಹೊಟ್ಟೆಯ ತೊಂದರೆಗಳು :
ರಕ್ತದಲ್ಲಿನ ಸಕ್ಕರೆ ಹೆಚ್ಚಾದಾಗ, ಗ್ಯಾಸ್ಟ್ರೋಪರೆಸಿಸ್ ಸಮಸ್ಯೆ ಉಂಟಾಗುತ್ತದೆ. ಇದು ಆಹಾರವನ್ನು ಜೀರ್ಣಿಸಿಕೊಳ್ಳುವ ಪ್ರಕ್ರಿಯೆಯ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಮಳೆಗಾಲದಲ್ಲಿ ಹೊರಗಿನಿಂದ ಬರುವ ನೀರು, ತರಕಾರಿಗಳು ಮತ್ತು ಇತರ ಆಹಾರ ಪದಾರ್ಥಗಳು ಸಾಮಾನ್ಯವಾಗಿ ಕಲುಷಿತಗೊಳ್ಳುತ್ತವೆ. ಇದರಿಂದಾಗಿ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು ಉಂಟಾಗುತ್ತವೆ ಮತ್ತು ದುರ್ಬಲ ಜೀರ್ಣಕ್ರಿಯೆಯಿಂದ ಮಧುಮೇಹ ರೋಗಿಗಳು ಹೆಚ್ಚು ಅಪಾಯಕ್ಕೆ ಒಳಗಾಗುತ್ತಾರೆ.
ಇದನ್ನೂ ಓದಿ : ವಯಸ್ಸಾದಂತೆ ಕೈ, ದೇಹ ದುರ್ಬಲಗೊಳ್ಳುತ್ತಿದೆಯೇ? ಸ್ನಾಯುವಿನ ಆರೋಗ್ಯಕ್ಕೆ ಇಲ್ಲಿದೆ ತಜ್ಞರ ಸಲಹೆ
2. ಕಿವಿ ಸೋಂಕು :
ಮಳೆ ಬಂತೆಂದರೆ ಸಾಕು ಮಧುಮೇಹ ರೋಗಿಗಳ ರೋಗನಿರೋಧಕ ಶಕ್ತಿಯ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ವಿಶೇಷವಾಗಿ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗುತ್ತದೆ. ಮಳೆಗಾಲದಲ್ಲಿ ಕೊಳಕು ನೀರು ಕಿವಿಗೆ ಸೇರುವುದರಿಂದ ಅಥವಾ ವಾತಾವರಣದಲ್ಲಿನ ತೇವಾಂಶದಿಂದಾಗಿ, ಕಿವಿ ಸೋಂಕಿನ ಅಪಾಯವು ಗಮನಾರ್ಹವಾಗಿ ಹೆಚ್ಚಾಗುತ್ತದೆ.
3. ಮಧುಮೇಹದಲ್ಲಿ ಕಣ್ಣಿನ ಕಾಯಿಲೆ :
ಮಳೆಗಾಲದಲ್ಲಿ ಕಿವಿಯ ಸೋಂಕಿನ ಅಪಾಯವು ಹೇಗೆ ಹೆಚ್ಚಾಗುತ್ತದೆಯೋ ಅದೇ ರೀತಿ ಕಣ್ಣಿನ ಸೋಂಕು, ಊತ ಅಥವಾ ಕೆಂಪಾಗುವಿಕೆಯ ಅಪಾಯವೂ ಹೆಚ್ಚಾಗುತ್ತದೆ. ವಿಶೇಷವಾಗಿ ಮಧುಮೇಹ ರೋಗಿಗಳು ಸಾಮಾನ್ಯವಾಗಿ ಕಣ್ಣುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿರುತ್ತಾರೆ ಮತ್ತು ದುರ್ಬಲ ರೋಗನಿರೋಧಕ ಶಕ್ತಿಯಿಂದಾಗಿ, ಮಳೆಗಾಲದಲ್ಲಿ ಇದರ ಅಪಾಯವು ಮತ್ತಷ್ಟು ಹೆಚ್ಚಾಗುತ್ತದೆ.
ಇದನ್ನೂ ಓದಿ : ಔಷಧಿಗಳ ಅಗತ್ಯವಿಲ್ಲ, ಈ ಮನೆಮದ್ದುಗಳಿಂದ ಗಂಟಲು ನೋವಿಗೆ ಸಿಗುತ್ತೆ ಸುಲಭ ಪರಿಹಾರ
4. ಮಧುಮೇಹದಲ್ಲಿ ಸೊಳ್ಳೆ ರೋಗ :
ಮಳೆಗಾಲದಲ್ಲಿ ಸೊಳ್ಳೆ ಕಾಟ ಅತಿಯಾಗಿ ಕಾಡುತ್ತದೆ. ಇದರಿಂದಾಗಿ ಡೆಂಗ್ಯೂ, ಮಲೇರಿಯಾ ಮತ್ತು ಚಿಕೂನ್‌ಗುನ್ಯಾದಂತಹ ರೋಗಗಳಿಗೆ ತುತ್ತಾಗುವ ಅಪಾಯವು ವೇಗವಾಗಿ ಹೆಚ್ಚಾಗುತ್ತದೆ. ಮಧುಮೇಹ ಹೊಂದಿರುವ ರೋಗಿಗಳಲ್ಲಿ, ಅದರ ಅಪಾಯವು ಇನ್ನೂ ಹೆಚ್ಚು ವೇಗವಾಗಿರುತ್ತದೆ. ಏಕೆಂದರೆ ಈ ಸೊಳ್ಳೆ-ಹರಡುವ ರೋಗಗಳು ಕೆಲವು ರೀತಿಯ ಸೋಂಕುಗಳಾಗಿರುತ್ತವೆ.
5. ಮಧುಮೇಹದಲ್ಲಿ ಫಂಗಲ್ ಸೋಂಕು :
ಮಳೆಗಾಲದಲ್ಲಿ, ಚರ್ಮದ ಕೆಲವು ಭಾಗಗಳ ಮೇಲೆ ತೇವಾಂಶ ದೀರ್ಘಕಾಲ ಉಳಿಯುತ್ತವೆ. ಇದರಿಂದಾಗಿ ಶಿಲೀಂಧ್ರವು ವೇಗವಾಗಿ ಬೆಳೆಯಲು ಪ್ರಾರಂಭಿಸುತ್ತದೆ. ಸಾಮಾನ್ಯ ಆರೋಗ್ಯವಂತ ವ್ಯಕ್ತಿಗಿಂತ ದುರ್ಬಲ ರೋಗನಿರೋಧಕ ಶಕ್ತಿಯಿಂದಾಗಿ ಮಧುಮೇಹ ರೋಗಿಗಳು ಶಿಲೀಂಧ್ರಗಳ ಸೋಂಕಿನ ಅಪಾಯವನ್ನು ಹೊಂದಿರುತ್ತಾರೆ.
ಇದನ್ನೂ ಓದಿ : ಮಳೆಗಾಲದಲ್ಲಿ ಕೂದಲಿಗೆ ವಿಶೇಷ ಕಾಳಜಿ ಅವಶ್ಯಕ..! ಇಲ್ಲಿವೆ ಟಿಪ್ಸ್.. ತಪ್ಪದೆ ಓದಿ
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ. )
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=38l6m8543Vk
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.