ಮಳೆಗಾಲದಲ್ಲಿ ಕೂದಲಿಗೆ ವಿಶೇಷ ಕಾಳಜಿ ಅವಶ್ಯಕ..! ಇಲ್ಲಿವೆ ಟಿಪ್ಸ್‌.. ತಪ್ಪದೆ ಓದಿ

Hair care in Mansoon : ಮಳೆಗಾಲದಲ್ಲಿ ಕೂದಲ ರಕ್ಷಣೆಗೆ ಶಾಂಪೂ ಮತ್ತು ಕಂಡೀಷನರ್‌ನಲ್ಲಿ ಕೆಮಿಕಲ್ ಇರದಂತೆ ಎಚ್ಚರ ವಹಿಸಬೇಕು. ಇಲ್ಲವಾದಲ್ಲಿ ನಿಮ್ಮ ಕೂದಲಿಗೆ ನಾವು ನೀಡುವ ಕಾಳಜಿ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಎಚ್ಚರಿಕೆಯಿಂದ ಸುರಕ್ಷತಾ ಸಲಹೆಗಳನ್ನು ಪಾಲಿಸಿ.

Written by - Krishna N K | Last Updated : Jul 5, 2023, 07:54 PM IST
ಮಳೆಗಾಲದಲ್ಲಿ ಕೂದಲಿಗೆ ವಿಶೇಷ ಕಾಳಜಿ ಅವಶ್ಯಕ..! ಇಲ್ಲಿವೆ ಟಿಪ್ಸ್‌.. ತಪ್ಪದೆ ಓದಿ title=

Mansoon Hair care : ಮಳೆಗಾಲ ಎಂದರೆ ರೋಗಗಳು ಬೇಗನೆ ಹಿಡಿಯುವ ಕಾಲ. ಅದೇನೆಂದರೆ, ಕೆಲವರಿಗೆ ಸ್ವಲ್ಪ ಮಳೆ ಬಂದರೆ ಸಾಕು ಜ್ವರ, ನೆಗಡಿ, ಕೆಮ್ಮು, ಗಂಟಲು ಬೇನೆ, ತಲೆನೋವು ಹೀಗೆ ಹಲವು ಕಾಯಿಲೆಗಳು ಬರಬಹುದು. ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು, ಅಲ್ಲದೆ ಕೂದಲಿನ ಸಂರಕ್ಷಣೆಯೂ ಸಹ ಮಾಡಬೇಕು.  

ಮಳೆಗಾಲದಲ್ಲಿ ಆರೋಗ್ಯಕ್ಕೆ ನೀಡುವ ಗಮನದಂತೆಯೇ ಕೂದಲಿಗೆ ಹೆಚ್ಚಿನ ಗಮನ ಮತ್ತು ಕಾಳಜಿಯ ಅಗತ್ಯವಿರುತ್ತದೆ. ಅಂದರೆ ಮಳೆಗಾಲದಲ್ಲಿ ಕೂದಲಿನ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅತ್ಯಗತ್ಯ. ಮಾನ್ಸೂನಲ್ಲಿ ಕೂದಲು ತುಂಬಾ ಒರಟಾಗುತ್ತದೆ. ಇದು ಕೂದಲಿನ ತೇವಾಂಶ ಮತ್ತು ಸ್ವಭಾವವನ್ನು ಅವಲಂಬಿಸಿರುತ್ತದೆ. ಗುಂಗುರು ಕೂದಲಿಗೆ ಹೆಚ್ಚಿನ ಕಾಳಜಿ ಬೇಕಾಗುತ್ತದೆ. ಈ ರೀತಿಯ ಕೂದಲಿಗೆ ಪ್ರತಿ ಬಾರಿ ತೊಳೆಯುವಾಗ ಕಂಡೀಷನಿಂಗ್ ಅಗತ್ಯವಿರುತ್ತದೆ.

ಇದನ್ನೂ ಓದಿ: ಹಸೆಮಣೆ ಏರುವ ಹೊತ್ತಿನಲ್ಲಿ ಹಾಟ್‌ ಫೋಟೋಸ್‌ ಹಂಚಿಕೊಂಡ ಹರ್ಷಿಕಾ..! ಫೋಟೋಸ್‌ ನೋಡಿ

ಆದರೆ, ಕೂದಲ ರಕ್ಷಣೆಗೆ ನಾವು ಬಳಸುವ ಶಾಂಪೂ ಮತ್ತು ಕಂಡೀಶನರ್‌ನಲ್ಲಿ ರಾಸಾಯನಿಕಗಳು ಇರದಂತೆ ಎಚ್ಚರ ವಹಿಸಬೇಕು. ಇಲ್ಲವಾದಲ್ಲಿ ನಮ್ಮ ಕೂದಲಿಗೆ ನಾವು ನೀಡುವ ಕಾಳಜಿ ವ್ಯತಿರಿಕ್ತ ಪರಿಣಾಮ ಬೀರುತ್ತದೆ. 

ಮಾನ್ಸೂನ್ ಸಮಯದಲ್ಲಿ ಕೂದಲಿನ ಆರೈಕೆಗಾಗಿ ಈ ಕೆಳಗಿನ ಅಂಶಗಳನ್ನು ನೆನಪಿನಲ್ಲಿಡಿ

  • ನೀವು ಮಳೆಗಾಲದಲ್ಲಿ ನಿಯಮಿತವಾಗಿ ನಿಮ್ಮ ಕೂದಲನ್ನು ತೊಳೆಯುವುದನ್ನು ತಪ್ಪಿಸಬೇಕು, ಪರ್ಯಾಯ ದಿನಗಳಲ್ಲಿ ನಿಮ್ಮ ಕೂದಲನ್ನು ತೊಳೆಯಿರಿ ಮತ್ತು ಸೂಕ್ತವಾದ ಕಂಡೀಷನರ್ ಅನ್ನು ಬಳಸಿ.  
  • ಡ್ರೈಯರ್ ಅನ್ನು ಬಳಸದೆಯೇ ನಿಮ್ಮ ಕೂದಲನ್ನು ನೈಸರ್ಗಿಕವಾಗಿ ಒಣಗಿಸಿ ಮತ್ತು ನಿಮ್ಮ ಕೂದಲನ್ನು ಬಾಚಲು ಅಗಲವಾದ ಹಲ್ಲಿನ, ಸ್ವಚ್ಛವಾದ ಬಾಚಣಿಗೆಯನ್ನು ಮಾತ್ರ ಬಳಸಿ. 
  • ನಿಮ್ಮ ಕೂದಲು ಮಳೆ ನೀರಿನಿಂದ ಒದ್ದೆಯಾಗಿದ್ದರೆ ಖಂಡಿತವಾಗಿ ಶಾಂಪೂ ಬಳಸಿ ತೊಳೆಯಿರಿ. ಏಕೆಂದರೆ ಮಳೆ ನೀರು ಕೂದಲಿನ ಆರೋಗ್ಯಕ್ಕೆ ಒಳ್ಳೆಯದಲ್ಲ. 
  • ಸ್ಯಾಟಿನ್ ದಿಂಬನ್ನು ಮಳೆಗಾಲದಲ್ಲಿ ವಿಶೇಷವಾಗಿ ಮಲಗುವಾಗ ಬಳಸಬಹುದು. ತುಂಬಾ ಒರಟಾಗಿರುವ ದಿಂಬನ್ನು ಬಳಸುವುದರಿಂದ ಕೂದಲು ತುಂಡಾಗುತ್ತವೆ. 

 ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News