Date Benefits : ದಿನನಿತ್ಯ ಖರ್ಜೂರ ತಿನ್ನುವುದರಿಂದ ಪುರುಷರಿಗಿದೆ ಈ 5 ಪ್ರಯೋಜನಗಳು!

ಖರ್ಜೂರದ ನಿಯಮಿತ ಸೇವನೆಯು ವೀರ್ಯಾಣು ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗುತ್ತದೆ. ನೀವು ಯಾವ ರೀತಿಯಲ್ಲಿ ತಿನ್ನಬಹುದು ಎಂದು ತಿಳಿಯಿರಿ-

Written by - Channabasava A Kashinakunti | Last Updated : Jan 29, 2022, 09:20 AM IST
  • ಖರ್ಜೂರ ಸೇವನೆಯಿಂದ ಮೂಳೆಗಳು ಬಲಗೊಳ್ಳುತ್ತವೆ.
  • ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
  • ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸುವಲ್ಲಿಯೂ ಇದು ಸಹಕಾರಿ.
Date Benefits : ದಿನನಿತ್ಯ ಖರ್ಜೂರ ತಿನ್ನುವುದರಿಂದ ಪುರುಷರಿಗಿದೆ ಈ 5 ಪ್ರಯೋಜನಗಳು! title=

ನವದೆಹಲಿ : ಪೋಷಕಾಂಶಗಳಿಂದ ಕೂಡಿದ ಖರ್ಜೂರದ ಸೇವನೆಯು ಪುರುಷರಿಗೆ ತುಂಬಾ ಪ್ರಯೋಜನಕಾರಿ. ಖರ್ಜೂರದಲ್ಲಿ ಕ್ಯಾಲೋರಿಗಳು, ಕಾರ್ಬೋಹೈಡ್ರೇಟ್‌ಗಳು, ಫೈಬರ್, ಪ್ರೋಟೀನ್, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ತಾಮ್ರಗಳು ಸಮೃದ್ಧವಾಗಿವೆ. ಇದಲ್ಲದೆ, ಕಬ್ಬಿಣ ಮತ್ತು ಜೀವಸತ್ವಗಳು ಸಹ ಇದರಲ್ಲಿ ಕಂಡುಬರುತ್ತವೆ. ಇದರ ಸೇವನೆಯಿಂದ ದೈಹಿಕ ಶಕ್ತಿ ಹೆಚ್ಚುತ್ತದೆ ಮತ್ತು ದೌರ್ಬಲ್ಯ ದೂರವಾಗುತ್ತದೆ. ಖರ್ಜೂರದ ನಿಯಮಿತ ಸೇವನೆಯು ವೀರ್ಯಾಣು ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗುತ್ತದೆ. ನೀವು ಯಾವ ರೀತಿಯಲ್ಲಿ ತಿನ್ನಬಹುದು ಎಂದು ತಿಳಿಯಿರಿ-

ಈ ರೀತಿ ಸೇವಿಸಿ

ರಾತ್ರಿ ಹಾಲಿನೊಂದಿಗೆ ಖರ್ಜೂರ(Date)ವನ್ನು ಸೇವಿಸಿ. ಇದನ್ನು ಹಾಲಿನಲ್ಲಿ ಕುದಿಸಿ ಕೂಡ ಕುಡಿಯಬಹುದು. ಇದಲ್ಲದೆ, ಖರ್ಜೂರವನ್ನು ರಾತ್ರಿ ನೀರಿನಲ್ಲಿ ನೆನೆಸಿ ಮತ್ತು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಇನ್ನೊಂದು ಮಾರ್ಗವಾಗಿದೆ. ಖರ್ಜೂರವನ್ನು ಫ್ರೂಟ್ ಸಲಾಡ್ ನಲ್ಲಿ ಬೆರೆಸಿ ತಿನ್ನಬಹುದು. ಸಂಜೆ ತಿಂಡಿಯಾಗಿ ಸೇವಿಸುವುದರಿಂದಲೂ ಪ್ರಯೋಜನವಾಗುತ್ತದೆ.

ಇದನ್ನೂ ಓದಿ : Tulsi For Hair Health: ಕೂದಲುದುರುವಿಕೆಯಿಂದ ನೀವೂ ತೊಂದರೆಗೊಳಗಾಗಿರುವಿರಾ? ತುಳಸಿ ಹೇರ್ ಮಾಸ್ಕ್ ಟ್ರೈ ಮಾಡಿ ನೋಡಿ

ಖರ್ಜೂರ ತಿನ್ನುವ ಪ್ರಯೋಜನಗಳು

ಜೀರ್ಣಕ್ರಿಯೆಗೆ ಖರ್ಜೂರ ಸಹಕಾರಿ 

ಖರ್ಜೂರದ ಸೇವನೆಯಿಂದ ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ. ಖರ್ಜೂರದಲ್ಲಿ ಫೈಬರ್ ಹೇರಳವಾಗಿ ಕಂಡುಬರುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸುತ್ತದೆ.

ಮೆದುಳಿನ ಆರೋಗ್ಯಕ್ಕೆ ತುಂಬಾ ಸಹಕಾರಿ

ಖರ್ಜೂರ(Date Benefits)ದ ಸೇವನೆಯು ಮೆದುಳಿನ ಆರೋಗ್ಯಕ್ಕೂ ಪ್ರಯೋಜನಕಾರಿ. ವಿಟಮಿನ್ ಬಿ ಮತ್ತು ಕೋಲೀನ್ ಇದರಲ್ಲಿ ಕಂಡುಬರುತ್ತದೆ, ಇದು ಮೆಮೊರಿ ಮತ್ತು ಕಲಿಕೆಯ ಸಾಮರ್ಥ್ಯವನ್ನು ಉತ್ತೇಜಿಸುತ್ತದೆ. ಇದರ ನಿಯಮಿತ ಸೇವನೆಯು ಆಲ್ಝೈಮರ್ನಂತಹ ನ್ಯೂರೋ ಡಿಜೆನೆರೆಟಿವ್ ಕಾಯಿಲೆಗಳ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ.

ವೀರ್ಯ ಸಂಖ್ಯೆಯನ್ನು ಹೆಚ್ಚಿಸಿತ್ತದೆ

ಖರ್ಜೂರವು ಪುರುಷರಲ್ಲಿ ವೀರ್ಯಾಣು ಮತ್ತು ವೀರ್ಯದ ಗುಣಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಎಸ್ಟ್ರಾಡಿಯೋಲ್ ಮತ್ತು ಫ್ಲೇವನಾಯ್ಡ್‌ಗಳಂತಹ ಪೋಷಕಾಂಶಗಳನ್ನು ಹೊಂದಿರುತ್ತದೆ, ಇದು ವೀರ್ಯಾಣು ಸಂಖ್ಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಮೂಳೆಗಳು ಬಲಗೊಳಿಸುತ್ತದೆ

ಖರ್ಜೂರದಲ್ಲಿ ಕ್ಯಾಲ್ಸಿಯಂ, ಪೊಟ್ಯಾಸಿಯಮ್, ರಂಜಕ ಮತ್ತು ಮೆಗ್ನೀಷಿಯಂನಂತಹ ಪೋಷಕಾಂಶಗಳಿವೆ. ಇದರ ಸೇವನೆಯು ಮೂಳೆ(Bones)ಗಳನ್ನು ಬಲಪಡಿಸುತ್ತದೆ ಮತ್ತು ಆಸ್ಟಿಯೊಪೊರೋಸಿಸ್ ಅಪಾಯವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ : ಡಯಾಬಿಟಿಸ್ ರೋಗಿಗಳು ಬೆಲ್ಲ ತಿನ್ನಬಹುದೇ? ತಜ್ಞರು ಏನು ಹೇಳುತ್ತಾರೆ ಗೊತ್ತಾ ?

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಿ

ಖರ್ಜೂರದ ಗ್ಲೈಸೆಮಿಕ್ ಸೂಚ್ಯಂಕವು ತುಂಬಾ ಕಡಿಮೆಯಾಗಿದೆ. ಇದರ ಸೇವನೆಯು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮಧುಮೇಹ ರೋಗಿಗಳಲ್ಲಿ ಇದರ ಸೇವನೆಯು ಇನ್ಸುಲಿನ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಖರ್ಜೂರ(Date)ದಲ್ಲಿ ಕಬ್ಬಿಣಾಂಶ, ವಿಟಮಿನ್ ಸಿ ಮತ್ತು ವಿಟಮಿನ್ ಡಿ ಸಮೃದ್ಧವಾಗಿದೆ. ಇದರ ಸೇವನೆಯು ಚರ್ಮ ಮತ್ತು ಕೂದಲಿಗೆ ಪ್ರಯೋಜನಕಾರಿಯಾಗಿದೆ. ಇದು ರಕ್ತ ಪರಿಚಲನೆಯನ್ನು ಉತ್ತಮವಾಗಿಡುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News