Side Effects of Eating Curd in Monsoon: ಸಾಮಾನ್ಯವಾಗಿ ಮೊಸರಿನ ಸೇವನೆ ಎಲ್ಲರಿಗೂ ಕೂಡ ಆರೋಗ್ಯಕ್ಕೆ ಹಿತಕಾರಿಯಾಗಿದೆ. ಮೊಸರನ್ನು ಆಹಾರದಲ್ಲಿ ಸೇರಿಸುವುದರಿಂದ ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯಾಗುವುದಿಲ್ಲ. ಮೂಳೆಗಳು ಮತ್ತು ಹಲ್ಲುಗಳನ್ನು ಬಲಿಷ್ಠವಾಗುತ್ತವೆ. ಇದಲ್ಲದೆ, ಜೀರ್ಣಾಂಗ ವ್ಯವಸ್ಥೆ, ಕೂದಲು ಮತ್ತು ಚರ್ಮದ ಆರೋಗ್ಯಕ್ಕೂ ಕೂಡ ಇದು ಹಿತಕಾರಿಯಾಗಿದೆ. ಇದರಲ್ಲಿನ ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಸಾಂಕ್ರಾಮಿಕ ರೋಗಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ, ಇದು ಪ್ರೋಬಯಾಟಿಕ್ ಆಗಿ ಕಾರ್ಯನಿರ್ವಹಿಸುತ್ತದೆ, ಇದು ಕರುಳಿನಲ್ಲಿ ವಾಸಿಸುವ ಉತ್ತಮ ಬ್ಯಾಕ್ಟೀರಿಯಾವನ್ನು ಪ್ರಚೋದಿಸುತ್ತದೆ ಮತ್ತು ಅದರ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಆದರೆ ಕೆಲವು ಋತುಗಳಲ್ಲಿ ಮತ್ತು ಕೆಲವು ಸಂದರ್ಭಗಳಲ್ಲಿ ಮೊಸರು ಸೇವಿಸುವುದನ್ನು ನಿಷೇಧಿಸಲಾಗಿದೆ. ಮಳೆಗಾಲದಲ್ಲಿ ಮೊಸರು ಸೇವಿಸಬೇಕೋ ಬೇಡವೋ? ತಿಳಿದುಕೊಳ್ಳೋಣ ಬನ್ನಿ
ಬೇಸಿಗೆಯಲ್ಲಿ ಮೊಸರಿನೊಂದಿಗೆ ಸಕ್ಕರೆ ಬೆರೆಸಿ ತಿನ್ನುವುದರಿಂದ ಹೊಟ್ಟೆಯ ಆರೋಗ್ಯಕರವಾಗಿರುತ್ತದೆ. ಬೇಸಿಗೆಯಲ್ಲಿ ಇದನ್ನು ಸೇವಿಸುವುದರಿಂದ ದೇಹ ತಂಪಾಗಿರುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಕೆಲ ಜನರು ಮಳೆಗಾಲದಲ್ಲಿ ಮೊಸರನ್ನು ಸೇವಿಸುವುದನ್ನು ನಿಲ್ಲಿಸುತ್ತಿದ್ದಾರೆ. ಅಂದರೆ, ನಿಯಮಿತವಾಗಿ ಮೊಸರು ಸೇವಿಸುವವರು ಮಳೆಗಾಲದಲ್ಲಿ ಮೊಸರು ತಿನ್ನುವುದನ್ನು ತಪ್ಪಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ, ಮಳೆಗಾಲದಲ್ಲಿ ಮೊಸರು ಸೇವಿಸುವುದು ನಿಜವಾಗಿಯೂ ಹಾನಿಕಾರಕವೇ ಎಂದು ತಿಳಿದುಕೊಳ್ಳುವುದು ಅಗತ್ಯವಾಗುತ್ತದೆ.
ಆಯುರ್ವೇದ ಏನು ಹೇಳುತ್ತದೆ
ಆಯುರ್ವೇದದ ಪ್ರಕಾರ ಮಳೆಗಾಲದಲ್ಲಿ ಮೊಸರು ಸೇವನೆ ಒಳ್ಳೆಯದಲ್ಲ. ಮಳೆಗಾಲದಲ್ಲಿ ಡೈರಿ ಉತ್ಪನ್ನಗಳಲ್ಲಿ ಬ್ಯಾಕ್ಟೀರಿಯಾಗಳು ಹೆಚ್ಚಾಗಿ ಬೆಳೆಯುವುದರಿಂದ, ಮಳೆಗಾಲದಲ್ಲಿ ಅತಿಯಾದ ಮೊಸರು ಸೇವನೆಯು ಆರೋಗ್ಯವನ್ನು ಹಾಳುಮಾಡುತ್ತದೆ. ಹೀಗಾಗಿ ಮೊಸರು ತಿನ್ನಲು ಬೇಸಿಗೆಯ ಋತುವನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ.
>> ಮಳೆಗಾಲದಲ್ಲಿ ಬೆಳಗ್ಗೆ ಅಥವಾ ರಾತ್ರಿ ಹೆಚ್ಚು ಮೊಸರು ಸೇವಿಸುವುದರಿಂದ ನೆಗಡಿ, ಕೆಮ್ಮು, ಗಂಟಲು ನೋವಿನ ಸಮಸ್ಯೆ ಎದುರಾಗುತ್ತದೆ. ಎದೆಯಲ್ಲಿ ಕಫ ಹೆಚ್ಚಾಗುವುದರಿಂದ ಉಸಿರಾಟದ ತೊಂದರೆ ಉಂಟಾಗುತ್ತದೆ.
>> ಮಳೆಗಾಲದ ದಿನಗಳಲ್ಲಿ ಹೆಚ್ಚು ಮೊಸರು ತಿನ್ನುವುದರಿಂದ ದೇಹದಲ್ಲಿ ನೋವು ಉಂಟಾಗುತ್ತದೆ. ದೇಹದಲ್ಲಿ ನಿರಂತರ ನೋವು ಹಾಗೂ ಜ್ವರ ಇರುವಂತೆ ಭಾಸವಾಗುತ್ತದೆ.
>> ಕೀಲು ನೋವಿನಂತಹ ಮೂಳೆ ಸಮಸ್ಯೆಯಿಂದ ಬಳಲುತ್ತಿರುವವರು ಮಳೆಗಾಲದಲ್ಲಿ ಮೊಸರು ಸೇವನೆಯನ್ನು ಸ್ವಲ್ಪ ಕಡಿಮೆ ಮಾಡಬೇಕು. ಮೊಸರಿನ ಗುಣಧರ್ಮ ತಣ್ಣಗಿರುವುದರಿಂದ ಮೊಸರಿನ ಸೇವನೆಯನ್ನು ಕಡಿಮೆ ಮಾಡಿ.
>> ಮಳೆಗಾಲದಲ್ಲಿನ ತೇವಾಂಶದಿಂದಾಗಿ ಹೆಚ್ಚು ಜಿಗುಟಾದ ಅನುಭವವಾಗುತ್ತದೆ. ಇದರೊಂದಿಗೆ, ಅನೇಕ ರೀತಿಯ ಬ್ಯಾಕ್ಟೀರಿಯಾಗಳು ಬೆಳೆಯುವ ಭಯವೂ ಇದೆ, ಇದು ಸೋಂಕಿಗೆ ಕಾರಣವಾಗಬಹುದು. ಮೊಸರು ತಿನ್ನಬೇಕೆಂದಿದ್ದರೆ ಫ್ರೆಶ್ ಆಗಿ ತಿನ್ನಿ, ಫ್ರಿಡ್ಜ್ ನಲ್ಲಿ ಹೆಚ್ಚು ಹೊತ್ತು ಇಟ್ಟು ಸೇವಿಸಬೇಡಿ ಅಥವಾ ಹೊಟ್ಟೆಯಲ್ಲಿ ಇನ್ ಫೆಕ್ಷನ್ ಆಗುವ ಸಾಧ್ಯತೆ ಇರುತ್ತದೆ.
ಇದನ್ನೂ ಓದಿ-ಎಚ್ಚರ! ಈ ಸಣ್ಣ ತಪ್ಪು ಆಸಿಡಿಟಿಗೆ ಕಾರಣವಾಗಬಹುದು..
ಮೊಸರು ಸೇವನೆಯ ಆರೋಗ್ಯಕರ ಪ್ರಯೋಜನಗಳು ಇಂತಿವೆ
>> ಮೊಸರು ತಿನ್ನುವುದರಿಂದ ಮೂಳೆಗಳು ಮತ್ತು ಹಲ್ಲುಗಳು ಬಲಿಷ್ಠವಾಗುತ್ತವೆ.
>> ಹೊಟ್ಟೆಯ ಆರೋಗ್ಯ, ಜೀರ್ಣ ಶಕ್ತಿ ಇದರಿಂದ ಹೆಚ್ಚಾಗುತ್ತದೆ.
>> ಮೊಸರನ್ನು ಕೂದಲಿಗೆ ಹಚ್ಚುವುದರಿಂದ ತಲೆಹೊಟ್ಟು ಸಮಸ್ಯೆ ನಿವಾರಣೆಯಾಗುತ್ತದೆ.
>> ಮೊಸರನ್ನು ತ್ವಚೆಯ ಮೇಲೆ ಹಚ್ಚುವುದರಿಂದ ತ್ವಚೆಯು ಆರೋಗ್ಯಕರವಾಗಿರುತ್ತದೆ. ಟ್ಯಾನಿಂಗ್ ಸಮಸ್ಯೆಯನ್ನು ಇದು ನಿವಾರಿಸುತ್ತದೆ.
>> ಮೊಸರು ಒಂದು ಪ್ರೋಬಯಾಟಿಕ್ ಆಹಾರವಾಗಿದೆ. ಇದರಲ್ಲಿ ಸೂಕ್ಷ್ಮಜೀವಿಗಳಿರುವ ಕಾರಣ ಇದು ಆರೋಗ್ಯಕ್ಕೆ ಹಿತಕಾರಿಯಾಗಿದೆ. ಪ್ರೋಬಯಾಟಿಕ್‌ಗಳು ಸೋಂಕನ್ನು ತಡೆಯುತ್ತದೆ. ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ.
ಇದನ್ನೂ ಓದಿ-Skin Care Tips: ಮುಖದ ಕಾಂತಿ ಹೆಚ್ಚಿಸಲು ಈ ಫೇಸ್‌ಪ್ಯಾಕ್ ಒಮ್ಮೆ ಬಳಸಿ ನೋಡಿ!
(ಹಕ್ಕುತ್ಯಾಗ-ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.