ಒಂದು ಚಮಚ ಜೇನು ತುಪ್ಪದೊಂದಿಗೆ ಇದನ್ನು ಬೆರಸಿ ಸೇವಿಸಿ..ಅಸಹನೀಯ ಗಂಟಲು ನೋವಿನಿಂದ 2 ನಿಮಿಷದಲ್ಲೆ ಮುಕ್ತಿ ಸಿಗುತ್ತದೆ..!

ಮಳೆ ಕಾಲು ಶುರುವಾಗಿದೆ, ಹವಾಮಾನ ಬದಲಾವಣೆಯ ಕಾರಣದಿಂದಾಗಿ ಜನರು ಜ್ವರ ನೆಗಡಿ ಹಾಗೂ ಶೀತದಂತಹ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲರೂ ಬಳಲುತ್ತಿರುವ ಸಾಮಾನ್ಯ ಸಮಸ್ಯೆ ಎಂದರೆ ಅದು, ಗಂಟಲು ನೋವು. ಗಂಟಲು ನೋವಿನಿಂದ ನಿಮಗೆ ಕಿರಿ ಕಿರಿ ಉಂಟಾಗುತ್ತದೆ. ಆದರೆ, ಈ ಗಂಟಲು ನೋವಿಗೆ ತಕ್ಷಣ ಪರಿಹಾರ ಕೊಡುವಂತಹ ಪದಾರ್ಥ ಯಾವುದು ಎನ್ನು ಹುಡುಕಾಟದಲ್ಲಿ ಇದ್ದೀರಾ..? ಹಾಗಾದರೆ ಈ ಸ್ಟೋರಿ ಓದಿ...

Written by - Zee Kannada News Desk | Last Updated : Oct 22, 2024, 12:26 PM IST
  • ಮಳೆ ಕಾಲು ಶುರುವಾಗಿದೆ, ಹವಾಮಾನ ಬದಲಾವಣೆಯ ಕಾರಣದಿಂದಾಗಿ ಜನರು ಜ್ವರ ನೆಗಡಿ ಹಾಗೂ ಶೀತದಂತಹ ಸಮಸ್ಯೆಗಳಿಗೆ ತುತ್ತಾಗುತ್ತಾರೆ.
  • ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲರೂ ಬಳಲುತ್ತಿರುವ ಸಾಮಾನ್ಯ ಸಮಸ್ಯೆ ಎಂದರೆ ಅದು, ಗಂಟಲು ನೋವು.
  • ಗಂಟಲು ನೋವಿನಿಂದ, ಮಾತನಾಡಲು, ತಿನ್ನಲು ಮತ್ತು ಮಲಗಲು ಕಷ್ಟವಾಗುತ್ತದೆ. ಕೆಲವೊಮ್ಮೆ ಎಂಜಲು ನುಂಗಲು ಕೂಡ ಕಷ್ಟವಾಗಿ ಹೋಗುತ್ತದೆ.
ಒಂದು ಚಮಚ ಜೇನು ತುಪ್ಪದೊಂದಿಗೆ ಇದನ್ನು ಬೆರಸಿ ಸೇವಿಸಿ..ಅಸಹನೀಯ ಗಂಟಲು ನೋವಿನಿಂದ 2 ನಿಮಿಷದಲ್ಲೆ ಮುಕ್ತಿ ಸಿಗುತ್ತದೆ..! title=

Honey and ginger: ಮಳೆ ಕಾಲು ಶುರುವಾಗಿದೆ, ಹವಾಮಾನ ಬದಲಾವಣೆಯ ಕಾರಣದಿಂದಾಗಿ ಜನರು ಜ್ವರ ನೆಗಡಿ ಹಾಗೂ ಶೀತದಂತಹ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲರೂ ಬಳಲುತ್ತಿರುವ ಸಾಮಾನ್ಯ ಸಮಸ್ಯೆ ಎಂದರೆ ಅದು, ಗಂಟಲು ನೋವು. ಗಂಟಲು ನೋವಿನಿಂದ ನಿಮಗೆ ಕಿರಿ ಕಿರಿ ಉಂಟಾಗುತ್ತದೆ. ಆದರೆ, ಈ ಗಂಟಲು ನೋವಿಗೆ ತಕ್ಷಣ ಪರಿಹಾರ ಕೊಡುವಂತಹ ಪದಾರ್ಥ ಯಾವುದು ಎನ್ನು ಹುಡುಕಾಟದಲ್ಲಿ ಇದ್ದೀರಾ..? ಹಾಗಾದರೆ ಈ ಸ್ಟೋರಿ ಓದಿ...

ಗಂಟಲು ನೋವಿನಿಂದ, ಮಾತನಾಡಲು, ತಿನ್ನಲು ಮತ್ತು ಮಲಗಲು ಕಷ್ಟವಾಗುತ್ತದೆ. ಕೆಲವೊಮ್ಮೆ ಎಂಜಲು ನುಂಗಲು ಕೂಡ ಕಷ್ಟವಾಗಿ ಹೋಗುತ್ತದೆ. ಗಂಟಲು ನೋವು ಅನೇಕ  ಕಾರಣಗಳಿಂದ ಉಂಟಾಗಬಹುದು. 

ವೈರಲ್ ಸೋಂಕುಗಳು, ಬ್ಯಾಕ್ಟೀರಿಯಾಗಳು, ಅಲರ್ಜಿಗಳು ಅಥವಾ ಹೆಚ್ಚು ಮಾತನಾಡುವುದರಿಂದ ಕೂಡ ಗಂಟಲು ನೋವು ಉಂಟಾಗಬಹುದು. ಈ ಸಮಸ್ಯೆಗೆ ಯಾವುದೇ ನಿರ್ದಿಷ್ಟವಾದ ಔಷಧಿ ಇಲ್ಲವಾದರೂ, ಈ ಸಮಸ್ಯೆ ಕಾಲ ಕ್ರಮೇಣ ವಾಸಿಯಾಗುತ್ತದೆ. ಆದರೆ, ಈ ಸಮಸ್ಯೆಯಿಂದ ತಕ್ಷನವೇ ಪರಿಹಾರ ಪಡೆಯಬೇಕೆಂದರೆ, ಅದಕ್ಕೆ ಕೆಲವೊಂದು ಮನೆಮದ್ದುಗಳಿವೆ. 

ಗಂಟಲು ನೋವನ್ನು ತ್ವರಿತವಾಗಿ ಕಡಿಮೆ ಮಾಡಬಲ್ಲ ಸರಳ ಸಲಹೆಗಳು:ಗಂಟಲು ನೋವಿಗೆ ಉಪ್ಪು ನೀರು ಅತ್ಯಂತ ಪರಿಣಾಮಕಾರಿ ಮನೆಮದ್ದುಗಳಲ್ಲಿ ಒಂದಾಗಿದೆ. ವಾಸ್ತವವಾಗಿ ಈ ನೀರು ಗಂಟಲಿನಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಮತ್ತು ಬ್ಯಾಕ್ಟೀರಿಯಾವನ್ನು ಕೊಲ್ಲಲು ಸಹಾಯ ಮಾಡುತ್ತದೆ.  ಒಂದು ಲೋಟ ಬಿಸಿ ನೀರಿನಲ್ಲಿ ಅರ್ಧ ಚಮಚ ಉಪ್ಪನ್ನು ಬೆರೆಸಿ, ಬಾಯಿಗೆ ಹಾಕಿ ಮುಕ್ಕಳಿಸಿ. ಈ ರೀತಿ ನಿಯಮಿತವಾಗಿ ಮಾಡುವುದರಿಂದ ನಿಮ್ಮ ಗಂಟಲು ನೋವು ಬೇಗನೆ ವಾಸಿಯಾಗುತ್ತದೆ.

ಗಂಟಲು ನೋವಿನ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ, ಇದರ ಶುಷ್ಕತೆ ಮತ್ತು ನೋವನ್ನು ನಿವಾರಿಸಲು ಬೆಚ್ಚಗಿನ ಪಾನೀಯಗಳನ್ನು ಕುಡಿಯಿರಿ. ಇದಕ್ಕಾಗಿ ನೀವು ಹರ್ಬಲ್‌ ಟೀ ಮಾಡಿ ಕುಡಿಯಬಹುದು. ಅಥವಾ ಬಿಸಿ ನೀರಿನೊಂದಿಗೆ ಒಂದು ಚಮಚ ಜೇನುತುಪ್ಪವಾನ್ನು ಬೆರೆಸಿ ಸೇವಿಸಬಹುದು. 

ಗಂಟಲು ನೋವನ್ನು ಕಡಿಮೆ ಮಾಡಲು, ನೀವು ಮೊದಲು ಗಂಟಲನ್ನು ಒಣಗದಂತೆ ಕಾಪಾಡಿಕೊಳ್ಳಬೇಕು. ಗಂಟಲು ಒಣಗಿದಂತೆ ಬಾಸವಾದರೆ, ಒಂದು ಪಾತ್ರೆಯಲ್ಲಿ ನೀರು ಹಾಕಿ ಅದಕ್ಕೆ ಶೂಠಿಯನ್ನು ಸೇರಿಸಿ ಕುದಿಸಿ ಅದನ್ನು ಶೋಧಿಸಿ ನಂತರ ಕುಡಿಯಿರಿ. ಇದರಿಂದ ನಿಮ್ಮ ಗಂಟಲು ಒಣಗದೆ ತೇವಾಂಶವನ್ನು ಕಾಪಾಡಿಕಳ್ಳುವುದರಿಂದ, ನಿಮಗೆ ಗಂಟಲು ನೋವಿನಿಂದ ಮುಕ್ತಿ ಸಿಗುತ್ತದೆ. 

ಶುಂಠಿಯು ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ. ಆದ್ದರಿಂದ ಇದು ಹುಣ್ಣನ್ನು ಗುಣಪಡಿಸಲು ಖಂಡಿತವಾಗಿಯೂ ಸಹಾಯ ಮಾಡುತ್ತದೆ. ಇದಕ್ಕಾಗಿ ನೀವು ಶುಂಠಿ ಚಹಾ ಅಥವಾ ಶುಂಠಿ ರಸವನ್ನು ಕುಡಿಯಬಹುದು. ಅದೇ ರೀತಿ ಜೇನುತುಪ್ಪವು ಬ್ಯಾಕ್ಟೀರಿಯಾ ವಿರೋಧಿ ಗುಣವನ್ನು ಹೊಂದಿದೆ ಮತ್ತು ಗಂಟಲು ನೋವನ್ನು ಸಹ ಗುಣಪಡಿಸುತ್ತದೆ ಇದಕ್ಕಾಗಿ ನೀವು ಬಿಸಿನೀರಿನೊಂದಿಗೆ ಜೇನುತುಪ್ಪವನ್ನು ಬೆರೆಸಿ ಕುಡಿಯಬಹುದು ಅಥವಾ ತುಳಸಿ ಎಲೆಗಳನ್ನು ಕುದಿಸಿ ಜೇನುತುಪ್ಪದೊಂದಿಗೆ ಸೇವಿಸಿದರೆ ಗಂಟಲು ನೋವು ಶೀಘ್ರವಾಗಿ ಗುಣವಾಗುತ್ತದೆ.

ನೋಯುತ್ತಿರುವ ಗಂಟಲು ಗುಣಪಡಿಸಲು ದೇಹಕ್ಕೆ ಸಾಕಷ್ಟು ವಿಶ್ರಾಂತಿ ನೀಡುವುದು ಬಹಳ ಮುಖ್ಯ. ಇದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಮತ್ತು ಗಂಟಲು ನೋವನ್ನು ತ್ವರಿತವಾಗಿ ಗುಣಪಡಿಸುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News