ನವದೆಹಲಿ : ರಾಗಿಯ ಸೇವನೆಯು ಆರೋಗ್ಯಕ್ಕೆ ತುಂಬಾ (Ragi Benefits)ಪ್ರಯೋಜನಕಾರಿ. ರಾಗಿಯನ್ನು ಭಾರತದ ವಿವಿಧ ರಾಜ್ಯಗಳಲ್ಲಿ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ರಾಗಿಯಲ್ಲಿ ಕ್ಯಾಲ್ಸಿಯಂ, ಫೈಬರ್, ಖನಿಜಗಳು ಮತ್ತು ಪ್ರೋಟೀನ್ ಕಂಡುಬರುತ್ತದೆ. ಮಧುಮೇಹ, ಅಧಿಕ ರಕ್ತದೊತ್ತಡ, ಆಸ್ಟಿಯೊಪೊರೋಸಿಸ್ ಮತ್ತು ಸ್ಥೂಲಕಾಯದಂತಹ ಸಮಸ್ಯೆಗಳ ವಿರುದ್ಧ ಹೋರಾಡಲು ರಾಗಿ ತುಂಬಾ ಪ್ರಯೋಜನಕಾರಿ ಎಂದು ಸಾಬೀತಾಗಿದೆ. ತೂಕವನ್ನು ಕಡಿಮೆ (Weight loss) ಮಾಡಲು ಬಯಸುವವರು ನಿತ್ಯ ರಾಗಿಯನ್ನು ಸೇವಿಸಿದರೆ ಬಹಳ ಪ್ರಯೋಜನಕಾರಿಯಾಗಲಿದೆ. ಈ ಪಾನೀಯವು ಹೊಟ್ಟೆಗೆ ತುಂಬಾ ಪ್ರಯೋಜನಕಾರಿ. ರಾಗಿಯನ್ನು ಯಾವ ರೀತಿ ಸೇವಿಸಬಹುದು? ರಾಗಿ ಶೇಕ್ ಮಾಡಿ ಕುಡಿದರೆ ರುಚಿಯು ಹೆಚ್ಚು, ಆರೋಗ್ಯಕ್ಕೂ ಒಳ್ಳೆಯದು.
ತೂಕ ನಷ್ಟದಲ್ಲಿ ರಾಗಿ ಶೇಕ್ ಹೇಗೆ ಪ್ರಯೋಜನಕಾರಿ?
ಹಸಿವನ್ನು ನಿಯಂತ್ರಿಸುತ್ತದೆ : ರಾಗಿ ಶೇಕ್ ಕುಡಿಯುವುದರಿಂದ, ದಿನವಿಡೀ ಹೊಟ್ಟೆ ತುಂಬಿರುತ್ತದೆ. ಇದನ್ನು ಕುಡಿಯುವುದರಿಂದ ಬೇಗನೆ ಹಸಿವಾಗುವುದಿಲ್ಲ. ಹಾಗಾಗಿ ಅನಗತ್ಯ ಆಹಾರ (food) ಸೇವನೆಯಿಂದ ತಪ್ಪಿಸಿಕೊಳ್ಳಬಹುದು.
ಇದನ್ನೂ ಓದಿ : Amla For Diabetes: ಡಯಾಬಿಟಿಸ್ ರೋಗಿಗಳಿಗೆ ನೆಲ್ಲಿಕಾಯಿ ಸೇವನೆಯಿಂದ ಸಿಗಲಿದೆ ಈ ಪ್ರಯೋಜನಗಳು
ಚಯಾಪಚಯವನ್ನು ಚುರುಕುಗೊಳಿಸುತ್ತದೆ : ತೂಕ ನಷ್ಟಕ್ಕೆ (Weight loss) ನಿಮ್ಮ ಚಯಾಪಚಯವು ಚುರುಕಾಗಿರುವುದು ಬಹಳ ಮುಖ್ಯ. ಮುಖ್ಯ. ಚಯಾಪಚಯ ಸರಿಯಾಗಿದ್ದರೆ, ಜೀರ್ಣಕ್ರಿಯೆ (Digestion) ಸರಿಯಾಗಿ ಆಗುತ್ತದೆ. ಇದಕ್ಕೆ ರಾಗಿ ಶೇಕ್ ತುಂಬಾ ಸಹಕಾರಿ. ರಾಗಿಯಲ್ಲಿ ಫೈಬರ್ ಅಧಿಕ ಪ್ರಮಾಣದಲ್ಲಿ ಇರುತ್ತದೆ. ಫೈಬರ್ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.
ಹೊಟ್ಟೆಯನ್ನು ಸರಿಯಾಗಿ ಇಡುತ್ತದೆ : ರಾಗಿಯಲ್ಲಿರುವ ಫೈಬರ್ ಆಹಾರವನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ರಾಗಿ ನಿಮ್ಮ ದೇಹದಲ್ಲಿ ಆಹಾರದ ಚಲನೆಯನ್ನು ಸುಧಾರಿಸುತ್ತದೆ. ಇದು ಮೊದಲಿಗೆ ಕರುಳಿನ ಮೂಲಕ ಆಹಾರದ ಚಲನೆಯನ್ನು ಸುಗಮಗೊಳಿಸುತ್ತದೆ ಮತ್ತು ತ್ಯಾಜ್ಯ ವಿಸರ್ಜನೆಗಾಗಿ ದೇಹದಲ್ಲಿ ನೀರನ್ನು ಉಳಿಸಿಕೊಳ್ಳುತ್ತದೆ. ಈ ರೀತಿಯಾಗಿ, ಇದು ಆಹಾರವನ್ನು ಜೀರ್ಣಿಸಿಕೊಳ್ಳುವ ಮತ್ತು ತ್ಯಾಜ್ಯವನ್ನು ತೆಗೆಯುವ ಪ್ರಕ್ರಿಯೆಯನ್ನು ಸುಗಮವಾಗಿರಿಸುತ್ತದೆ.
ಹಾಗಿದ್ದರೆ ರಾಗಿ ಶೇಕ್ ಮಾಡುವುದು ಹೇಗೆ ?
ರಾಗಿ ಶೇಕ್ ಮಾಡಲು ಬೇಕಾಗುವ ಪದಾರ್ಥಗಳು :
-2 ಚಮಚ ರಾಗಿ ಹಿಟ್ಟು-
-1 ಕಪ್ ಹಾಲು (Milk)
-2 ಟೀಸ್ಪೂನ್ ಏಲಕ್ಕಿ ಪುಡಿ
-ಡ್ರೈ ಫ್ರುಟ್ಸ್
-1 ಚಮಚ ತುರಿದ ಬಾದಾಮಿ
-ಜೇನು ತುಪ್ಪ (Honey)
ಇದನ್ನೂ ಓದಿ :Food To Increase Blood: ದೇಹದಲ್ಲಿ ರಕ್ತದ ಪ್ರಮಾಣವನ್ನು ಹೆಚ್ಚಿಸಲು ತಪ್ಪದೇ ಸೇವಿಸಿ ಈ ವಸ್ತುಗಳನ್ನು
ರಾಗಿ ಶೇಕ್ ವಿಧಾನ :
ಬಾಣಲೆಯಲ್ಲಿ 1 ಕಪ್ ಹಾಲು ಹಾಕಿ ಮತ್ತು ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಹಾಲು ಕುದಿಯಲು ಪ್ರಾರಂಭಿಸಿದಾಗ, ಉರಿಯನ್ನು ಕಡಿಮೆ ಮಾಡಿ. ಈಗ ಈ ಹಾಲಿಗೆ ಏಲಕ್ಕಿ ಪುಡಿಯೊಂದಿಗೆ ರಾಗಿ ಹಿಟ್ಟು, ತುರಿದ ಬಾದಾಮಿಯನ್ನು ಸೇರಿಸಿ. ಈಗ ಅದನ್ನು ನಿರಂತರವಾಗಿ ಕಲಕುತ್ತಾ ಇರಿ, ಗಂಟಾಗಲು ಬಿಡಬೇಡಿ. ನಂತರ ಗ್ಯಾಸ್ ಆಫ್ ಮಾಡಿ. ರಾಗಿ ಶೇಕ್ ಹಾಕಿರುವ ಎಲ್ಲಾ ಲೋಟಗಳಲ್ಲಿ ಜೇನುತುಪ್ಪವನ್ನು ಮಿಶ್ರಣ ಮಾಡಿ. ಇಷ್ಟಾದ ಮೇಲೆ ಡ್ರೈ ಫ್ರುಟ್ಸ್ ಗಳಿಂದ ಅಲಂಕರಿಸಿ..
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ