ಸೌದೆ ಒಲೆಯಲ್ಲಿ ಅಡುಗೆ ಮಾಡಿದ್ರೆ ಹೃದಯಕ್ಕೇ ಅಪಾಯ!

ಸೌದೆ ಅಥವಾ ಕಲ್ಲಿದ್ದಲಿನ ಓಲೆ ಬಳಸಿ ಅಡುಗೆ ಮಾಡುವವರು ಕೂಡಲೇ ವಿದ್ಯುಚ್ಛಕ್ತಿ ಅಥವಾ ಗ್ಯಾಸ್ ಒಲೆಯನ್ನು ಬಳಸುವಂತೆ ಬ್ರಿಟನ್ನಿನ ಆಕ್ಸ್'ಫರ್ಡ್ ವಿಶ್ವವಿದ್ಯಾಲಯದ ಡೆರಿಕ್ ಬೆನೆಟ್ ಹೇಳಿದ್ದಾರೆ.

Updated: Sep 1, 2018 , 07:21 PM IST
ಸೌದೆ ಒಲೆಯಲ್ಲಿ ಅಡುಗೆ ಮಾಡಿದ್ರೆ ಹೃದಯಕ್ಕೇ ಅಪಾಯ!

ಲಂಡನ್: ದೀರ್ಘಕಾಲದಿಂದ ಸೌದೆ, ಮರಮುಟ್ಟುಗಳನ್ನು ಬಳಸಿ ಒಲೆಯಲ್ಲಿ ಅಡುಗೆ ಮಾಡುವುದರಿಂದ ಹೃದ್ರೋಗ ಸಮಸ್ಯೆಯಿಂದ ಸಾಯುವ ಸಾಧ್ಯತೆಗಳು ಹೆಚ್ಚಾಗುತ್ತದೆ ಎಂದು ಇತ್ತೀಚಿನ ಅಧ್ಯಯನವೊಂದು ಹೇಳಿದೆ.

ಅಡುಗೆ ಮಾಡಲು ಸೌದೆ ಅಥವಾ ಕಲ್ಲಿದ್ದಲಿನ ಒಲೆಗಳನ್ನು ದೀರ್ಘಕಾಲದವರೆಗೆ ಬಲಿಸಿದವರಲ್ಲಿ ಬಹಳ ಬೇಗ ಹೃದಯ ಸಂಬಂಧಿ ಮತ್ತು ರಕ್ತನಾಳ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಂಡು ಸಾವಿನ ಅಪಾಯ ಹೆಚ್ಚಾಗಿರುವುದು ಅಧ್ಯಯನದಿಂದ ಕಂಡು ಬಂದಿದೆ. ಹಾಗಾಗಿ ಸೌದೆ ಅಥವಾ ಕಲ್ಲಿದ್ದಲಿನ ಓಲೆ ಬಳಸಿ ಅಡುಗೆ ಮಾಡುವವರು ಕೂಡಲೇ ವಿದ್ಯುಚ್ಛಕ್ತಿ ಅಥವಾ ಗ್ಯಾಸ್ ಒಲೆಯನ್ನು ಬಳಸುವಂತೆ ಬ್ರಿಟನ್ನಿನ ಆಕ್ಸ್'ಫರ್ಡ್ ವಿಶ್ವವಿದ್ಯಾಲಯದ ಡೆರಿಕ್ ಬೆನೆಟ್ ಹೇಳಿದ್ದಾರೆ.

ಕಲ್ಲಿದ್ದಲು, ಸೌದೆ ಒಲೆಗಳನ್ನು ಬಳಸಿ ಅಡುಗೆ ಮಾಡುವುದರಿಂದ ವಾಯುಮಾಲಿನ್ಯ ಉಂಟಾಗುವುದಲ್ಲದೆ ಹೃದಯ ಸಂಬಂಧಿ ಸಮಸ್ಯೆಗಳಿಂದ ಸಾವಿನ ಅಪಾಯವೂ ಹೆಚ್ಚಾಗುತ್ತದೆ ಎಂದು ಅಧ್ಯಯನ ಹೇಳಿದೆ. ಆದಾಗ್ಯೂ, ಇದಕ್ಕೆ ಹೆಚ್ಚು ಆಧಾರಗಳಿಲ್ಲ. ಆದರೂ ಇತ್ತೀಚಿನ ಅಧ್ಯಯನಗಳು ಘನ ಇಂಧನ ಬಳಸಿ ಅಡುಗೆ ಮಾಡುವುದು ಮತ್ತು ಹೃದಯ ಸಮಸ್ಯೆ ನಡುವಿನ ಸಂಬಂಧವನ್ನು ತಿಳಿಸಿವೆ. 2004 ರಿಂದ 2008ರ ನಡುವೆ 30 ವರ್ಷದಿಂದ 79ವರ್ಷ ವಯಸ್ಸಿನವರನ್ನು ಒಳಗೊಂಡಂತೆ ಚೀನಾದ 10 ಪ್ರದೇಶಗಳ 3,41,730 ಜನರನ್ನು ಅಧ್ಯಯನಕ್ಕೆ ಒಳಪಡಿಸಿ ವರದಿ ತಯಾರಿಸಲಾಗಿದೆ ಎಂದು ಅಧ್ಯಯನ ವರದಿ ತಿಳಿಸಿದೆ.