ಕಲ್ಲಂಗಡಿಯನ್ನು ಫ್ರಿಡ್ಜ್‌ನಲ್ಲಿಟ್ಟು ತಿನ್ನುವುದರ ಅಡ್ಡಪರಿಣಾಮಗಳು: ಭಾರತದ ಕೆಲವು ರಾಜ್ಯಗಳು ವರುಣನ ಅಬ್ಬರಕ್ಕೆ ತತ್ತರಿಸಿದ್ದರೆ, ಇನ್ನೂ ಕೆಲವು ರಾಜ್ಯಗಳಲ್ಲಿ ಸುಡುವ ಬಿಸಿಲಿನ ಬೇಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಭಾರತದ ಹಲವು ರಾಜ್ಯಗಳಲ್ಲಿ ದೈನಂದಿನ ತಾಪಮಾನವು 45 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚುತ್ತಿದೆ. ಸುಡುವ ಬಿಸಿಲು ಮತ್ತು ಬೆವರಿನ ಸ್ಥಿತಿಯಲ್ಲಿ ಜನರು ತಮ್ಮನ್ನು ಹೈಡ್ರೀಕರಿಸಲು ತಾಜಾ ಮತ್ತು ರಸಭರಿತವಾದ ಹಣ್ಣುಗಳನ್ನು ಸೇವಿಸುತ್ತಾರೆ. ಅವುಗಳಲ್ಲಿ ಕಲ್ಲಂಗಡಿ ಬಹಳ ಜನಪ್ರಿಯವಾಗಿದೆ. ಏಕೆಂದರೆ ಕಲ್ಲಂಗಡಿ ಹಣ್ಣು 90 ಪ್ರತಿಶತಕ್ಕಿಂತ ಹೆಚ್ಚು ನೀರನ್ನು ಹೊಂದಿರುತ್ತದೆ. ಆದರೆ, ಆದರೆ, ಕೆಲವರು ಇದನ್ನು ಫ್ರಿಡ್ಜ್‌ನಲ್ಲಿ ಇಟ್ಟು ಬಳಿಕ ಸೇವಿಸುತ್ತಾರೆ. ಇದರಿಂದ ನಿಮ್ಮ ಆರೋಗ್ಯಕ್ಕೆ ಲಾಭದ ಬದಲು ಆಗುವ ನಷ್ಟವೇ ಅಧಿಕ ಎಂದು ನಿಮಗೆ ತಿಳಿದಿದೆಯೇ?
ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್‌ನಲ್ಲಿ ಏಕೆ ಇಡಲಾಗುತ್ತದೆ?
ವಾಸ್ತವವಾಗಿ, ಕಲ್ಲಂಗಡಿ ಗಾತ್ರದಲ್ಲಿ ದೊಡ್ಡದಾದ ಹಣ್ಣು. ಇದು ಆರೋಗ್ಯಕ್ಕೆ ಪ್ರಯೋಜನಕಾರಿ ಎಂಬುದರಲ್ಲಿ ಸಂದೇಹವಿಲ್ಲ. ಜೊತೆಗೆ, ಇತರ ಹಣ್ಣುಗಳಿಗೆ ಹೋಲಿಸಿದರೆ ಕಲ್ಲಂಗಡಿ ಹಣ್ಣಿನ ಬೆಲೆಯೂ ಕಡಿಮೆ. ಆದರೆ, ಇದು ಗಾತ್ರದಲ್ಲಿ ದೊಡ್ಡದಾಗಿರುವುದರಿಂದ ಒಮ್ಮೆಗೆ ಪೂರ್ತಿಯಾಗಿ ತಿಂದು ಮುಗಿಸಲು ಕಷ್ಟವಾಗುತ್ತದೆ. ಆದ್ದರಿಂದ ಕಲ್ಲಂಗಡಿ ಹಣ್ಣನ್ನು ದೀರ್ಘಕಾಲ ತಾಜಾವಾಗಿರಲು ಅದನ್ನು ಫ್ರಿಡ್ಜ್‌ನಲ್ಲಿ ಇಡಲಾಗುತ್ತದೆ. ಆದರೆ ಕಲ್ಲಂಗಡಿ ಅದನ್ನು ಕತ್ತರಿಸಿ ಇಡುವುದು ಮತ್ತು ಅದನ್ನು ರೆಫ್ರಿಜರೇಟರ್‌ನಲ್ಲಿ ಇಟ್ಟು ಬಳಿಕ ತಿನ್ನುವುದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕವೆಂದು ಸಾಬೀತುಪಡಿಸಬಹುದು.
ಇದನ್ನೂ ಓದಿ- Watermelon Seeds: ಪುರುಷರಿಗೆ ಪ್ರಯೋಜನಕಾರಿ ಕಲ್ಲಂಗಡಿ ಬೀಜಗಳು!
ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್‌ನಲ್ಲಿ ದೀರ್ಘಕಾಲ ಇಡುವುದರಿಂದ ಆಗುವ ಅನಾನುಕೂಲಗಳು ಏನು?
ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್‌ನಲ್ಲಿ ಇಡುವುದರಿಂದ ಅದರಲ್ಲಿರುವ ವಿಟಮಿನ್ ಎ, ವಿಟಮಿನ್ ಸಿ, ಲೈಕೋಪೀನ್ ಮತ್ತು ಸಿಟ್ರುಲಿನ್‌ನಂತಹ ಪ್ರಮುಖ ಪೋಷಕಾಂಶಗಳ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಅದನ್ನು ಕತ್ತರಿಸಿ ರೆಫ್ರಿಜರೇಟರ್ನಲ್ಲಿ ಇರಿಸಿದರೆ, ಅದು ಸೋಂಕು ಉಂಟುಮಾಡಬಹುದು. ಮಾತ್ರವಲ್ಲ, ಹಲವು ಬಾರಿ ತುಂಬಾ ದಿನಗಳವರೆಗೆ ಕತ್ತರಿಸಿದ ಕಲ್ಲಂಗಡಿಯನ್ನು ಫ್ರಿಡ್ಜ್‌ನಲ್ಲಿ ಇಡುವುದರಿಂದ ಇದು ವಿಷಕಾರಿ ಆಗಿ ಪರಿವರ್ತಿತವಾಗಬಹುದು. ಇದರಿಂದ ಪ್ರಾಣಾಪಾಯ ಇಲ್ಲವಾದರೂ, ಆರೋಗ್ಯ ಸಂಬಂಧಿಸಿದ ಹಲವು ಸಮಸ್ಯೆಗಳು ನಿಮ್ಮನ್ನು ಕಾಡಬಹುದು.. ಆದ್ದರಿಂದ ಕಲ್ಲಂಗಡಿ ಹಣ್ಣನ್ನು ತಾಜಾವಾಗಿ ತಿನ್ನುವುದು ಉತ್ತಮ ಎಂದು ವೈದ್ಯರು ಸಲಹೆ ನೀಡುತ್ತಾರೆ.
ಕಲ್ಲಂಗಡಿಯನ್ನು ಫ್ರಿಜ್‌ನಲ್ಲಿ ಎಷ್ಟು ದಿನ ಇಡಬಹುದು?
ವಾಸ್ತವವಾಗಿ, ಕಲ್ಲಂಗಡಿ ಫ್ರಿಜ್‌ನಲ್ಲಿ ಇಡಬೇಕಾಗಿಲ್ಲ ಏಕೆಂದರೆ ಅದರ ಸಿಪ್ಪೆ ದಪ್ಪವಾಗಿರುತ್ತದೆ, ಇದರಿಂದಾಗಿ ಈ ಹಣ್ಣು ಬೇಗನೆ ಹಾಳಾಗುವುದಿಲ್ಲ. ನೀವು ಕಲ್ಲಂಗಡಿಯನ್ನು ರೆಫ್ರಿಜರೇಟರ್ನಲ್ಲಿ ಇಡಬೇಕಾದರೆ, ಅದನ್ನು ಕತ್ತರಿಸದೆಯೇ ಇರಿಸಿ ಮತ್ತು ನೀವು ಸುಮಾರು 20 ದಿನಗಳವರೆಗೆ ಇದನ್ನು ಫ್ರಿಜ್‌ನಲ್ಲಿ ಇಡಬಹುದು.
ಇದನ್ನೂ ಓದಿ- Watermelon Benefits: ನೀರಿನ ಕೊರತೆಯಷ್ಟೇ ಅಲ್ಲ ಈ ಕಾಯಿಲೆಗಳಿಗೂ ಪರಿಹಾರ ನೀಡುತ್ತೆ ಕಲ್ಲಂಗಡಿ
ಫ್ರಿಜ್‌ನಲ್ಲಿಟ್ಟ ಕಲ್ಲಂಗಡಿ ಸೇವನೆಯಿಂದ ಆಗುವ ಅನಾನುಕೂಲಗಳೇನು?
>> ಫ್ರಿಜ್‌ನಲ್ಲಿಟ್ಟ ಕಲ್ಲಂಗಡಿ ತಿನ್ನುವುದರಿಂದ ಹಣ್ಣಿನ ಪೌಷ್ಟಿಕಾಂಶದ ಮೌಲ್ಯ ಕಡಿಮೆಯಾಗುತ್ತದೆ.
>> ತಣ್ಣನೆಯ ಕಲ್ಲಂಗಡಿ ಹೋಳು ಫುಡ್ ಪಾಯಿಸನಿಂಗ್ ಸಮಸ್ಯೆಯನ್ನು ಉಂಟುಮಾಡಬಹುದು.
>> ಕಲ್ಲಂಗಡಿಯಲ್ಲಿರುವ ಬ್ಯಾಕ್ಟೀರಿಯಾವು ಕರುಳಿಗೆ ಹಾನಿ ಮಾಡುತ್ತದೆ.
>> ಫ್ರಿಜ್‌ನಲ್ಲಿಟ್ಟ ಕಲ್ಲಂಗಡಿ ಹಣ್ಣನ್ನು ಸೇವಿಸುವುದರಿಂದ ಉದರ ಸಂಬಂಧಿತ ಸಮಸ್ಯೆಗಳು ನಿಮ್ಮನ್ನು ಬಾಧಿಸಬಹುದು.Aadhaar Card
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.