ಹೋಟೆಲ್ ಗೆ ಹೋದರೆ ತಪ್ಪಿಯೂ ತಂದೂರಿ ರೋಟಿ ಆರ್ಡರ್ ಮಾಡದಿರಿ, ಇದರ ನಿಜ ಬಣ್ಣ ತಿಳಿದರೆ ಮತ್ತೆ ತಿರುಗಿಯೂ ನೋಡುವುದಿಲ್ಲ

ತಂದೂರಿ ರೋಟಿಯನ್ನು ಚಪ್ಪರಿಸಿಕೊಂಡು ತಿನ್ನುವ ಅನೇಕ ಮಂದಿ ನಮ್ಮ ನಡುವೆ ಇದ್ದಾರೆ. ಯಾಕಂದರೆ ಅದರ ರುಚಿಯೇ ಅಂಥದ್ದು.

Written by - Ranjitha R K | Last Updated : Aug 31, 2021, 06:48 PM IST
  • ಎದುರುಗಡೆ ತಂದೂರಿ ರೋಟಿ ಇದ್ದರಂತೂ ಹಸಿವು ಕೂಡಾ ಹೆಚ್ಚುತ್ತದೆ.
  • ಈ ರೋಟಿಯನ್ನು ತಂದೂರಿಯಲ್ಲಿ ಬೇಯಿಸಲಾಗುತ್ತದೆ.
  • ರುಚಿ ಎಂದುಕೊಂಡು ಇದನ್ನು ಚಪ್ಪರಿಸುವ ಮೊದಲು ನಿಜಾಂಶ ತಿಳಿಯಿರಿ
ಹೋಟೆಲ್ ಗೆ ಹೋದರೆ ತಪ್ಪಿಯೂ ತಂದೂರಿ ರೋಟಿ ಆರ್ಡರ್ ಮಾಡದಿರಿ,  ಇದರ ನಿಜ ಬಣ್ಣ ತಿಳಿದರೆ ಮತ್ತೆ ತಿರುಗಿಯೂ ನೋಡುವುದಿಲ್ಲ  title=
Side effectsof tandoori roti (file photo)

ನವದೆಹಲಿ : ತರಕಾರಿ ಏನೇ ಇರಲಿ, ತಟ್ಟೆಯಲ್ಲಿ ತಂದೂರಿ ರೋಟಿ (tandoori roti) ಇದ್ದರೆ ಅದರ ರುಚಿ ಡಬಲ್ ಆಗುತ್ತದೆ. ಎದುರುಗಡೆ ತಂದೂರಿ ರೋಟಿ ಇದ್ದರಂತೂ ಹಸಿವು ಕೂಡಾ ಹೆಚ್ಚುತ್ತದೆ. ಇನ್ನು ಸಾಮಾನ್ಯವಾಗಿ ಜನರು ಊಟಕ್ಕೆ ಹೋಟೆಲ್ ಗೆ ಹೋದರೆ  ತಂದೂರಿ ರೋಟಿ ಆರ್ಡರ್  ಮಾಡುವವರ ಸಂಖ್ಯೆ ಬಹಳಷ್ಟಿರುತ್ತದೆ. ತಂದೂರಿ ರೋಟಿಯನ್ನು ಚಪ್ಪರಿಸಿಕೊಂಡು ತಿನ್ನುವ ಅನೇಕ ಮಂದಿ ನಮ್ಮ ನಡುವೆ ಇದ್ದಾರೆ. ಯಾಕಂದರೆ ಅದರ ರುಚಿಯೇ ಅಂಥದ್ದು.  ಈ ರೋಟಿಯನ್ನು  ತಂದೂರಿಯಲ್ಲಿ ಬೇಯಿಸಲಾಗುತ್ತದೆ. ಹಾಗಾಗಿ ಇದರಲ್ಲಿ ಇದ್ದಲಿನ ವಾಸನೆ ಕೂಡ ತಣ್ಣಗೆ ಇರುತ್ತದೆ. ರುಚಿ ಎಂದುಕೊಂಡು ಇದನ್ನು ಚಪ್ಪರಿಸುವ ಮೊದಲು, ಇದು ನಮ್ಮ ಆರೋಗ್ಯಕ್ಕೆ (Side effectsof tandoori roti) ಕೂಡಾ ಸಹಕಾರಿಯೇ ಎನ್ನುವುದನ್ನು ತಿಳಿದುಕೊಳ್ಳಬೇಕು. ಹಾಗಿದ್ದರೆ ತಂದೂರಿ ರೋಟಿಯ ವಾಸ್ತವದ ಬಗ್ಗೆ ನೋಡೋಣ.  

ತಂದೂರಿ ರೊಟ್ಟಿ ತಯಾರಿಸುವುದು ಹೇಗೆ ಗೊತ್ತಿದೆಯಾ ?
ತಂದೂರಿ ರೊಟ್ಟಿಗಳನ್ನು (tandoori roti) ತಯಾರಿಸಲು ಮೈದಾ ಬಳಸಲಾಗುತ್ತದೆ. ಹೌದು ತಂದೂರಿ ರೋಟಿಯನ್ನು ಗೋಧಿಯಿಂದಲ್ಲಾ ಮೈದಾದಿಂದ  ತಯಾರಿಸಲಾಗುತ್ತದೆ. ಮೈದಾ ಸೇವನೆ (Side effects of maida) ಆರೋಗ್ಯಕ್ಕೆ ಒಂಚೂರು ಒಳ್ಳೆಯದಲ್ಲ. ಮೈದಾ ಸೇವನೆಯಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಒಂದು ತಂದೂರಿ ರೋಟಿಯಲ್ಲಿ 110 ರಿಂದ 150 ಕ್ಯಾಲೋರಿಗಳಿರುತ್ತವೆ.

ಇದನ್ನೂ ಓದಿ : Benefits Of Green Leaves: ಆರೋಗ್ಯಕ್ಕೆ ವರದಾನವಾಗಿದೆ ಮೆಂತ್ಯೆ, ಪಾಲಕ್ ಸೇರಿದಂತೆ ಈ 5 ಸೊಪ್ಪುಗಳು

ತಂದೂರಿ ರೋಟಿಯಿಂದ ಉಂಟಾಗುವ ಸಮಸ್ಯೆಗಳು :
ಶುಗರ್  ಸಮಸ್ಯೆ : 
ಮೈದಾವನ್ನು ತಂದೂರಿ ರೋಟಿಯಲ್ಲಿ ಬಳಸುವುದರಿಂದ ಇದು ದೇಹದಲ್ಲಿ ಸಕ್ಕರೆಯ ಮಟ್ಟವನ್ನು (Sugar level)  ಹೆಚ್ಚಿಸುತ್ತದೆ. ಇದು ಹೆಚ್ಚಿನ ಗ್ಲೈಸೆಮಿಕ್ ಇಂಡೆಕ್ಸ್ ಅನ್ನು ಕೂಡಾ ಹೊಂದಿದೆ.  ಈ ಕಾರಣದಿಂದಾಗಿ ತಂದೂರಿ ರೋಟಿಯನ್ನು ತಿಂದರೆ  ಮಧುಮೇಹದ (Diabetic) ಅಪಾಯ ಕೂಡಾ ಹೆಚ್ಚುತ್ತದೆ. 

ಹೃದ್ರೋಗದ ಅಪಾಯ :
ತಂದೂರಿ ರೋಟಿಯಲ್ಲಿ ಮೈದಾ ಇರುವುದರಿಂದ, ಇದು ಹೃದಯ ರೋಗಗಳ (heart disease)  ಅಪಾಯವನ್ನು ಹೆಚ್ಚಿಸುತ್ತದೆ. ಒಂದು ವೇಳೆ ನಿಮಗೆ  ತಂದೂರಿ ರೋಟಿ ತಿನ್ನಲೇ ಬೇಕೆಂದಿದ್ದರೆ, ಗೋಧಿಯಿಂದ ಮಾಡಿದ ತಂದೂರಿ ರೋಟಿ ಸೇವಿಸಬಹುದು. ಆದರೆ ನೆನಪಿರಲಿ, ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಗೋಧಿ ಹಿಟ್ಟಿನಿಂದ ತಯಾರಿಸಿದ ತಂದೂರಿ ರೋಟಿ ಸಿಗುವುದು ಬಹಳ ವಿರಳ. ಹೋಟೆಲ್ ಗಳಲ್ಲಿ ಮೈದಾ ಬಳಸಿದ  ತಂದೂರಿ ರೊಟ್ಟಿಯೇ ಹೆಚ್ಚು. 

ಇದನ್ನೂ ಓದಿ : Eyebrow Threading Pain Tips: ಐಬ್ರೋ ಥ್ರೆಡಿಂಗ್ ವೇಳೆ ನಿಮಗೂ ಈ ರೀತಿಯ ತೊಂದರೆಯಾಗುತ್ತಿದೆಯೇ? ಈ ಟಿಪ್ಸ್ ಟ್ರೈ ಮಾಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News