Eyebrow Threading Pain Tips: ಐಬ್ರೋ ಥ್ರೆಡಿಂಗ್ ವೇಳೆ ನಿಮಗೂ ಈ ರೀತಿಯ ತೊಂದರೆಯಾಗುತ್ತಿದೆಯೇ? ಈ ಟಿಪ್ಸ್ ಟ್ರೈ ಮಾಡಿ

Eyebrow Threading Pain Tips: ಐಬ್ರೋ ಥ್ರೆಡಿಂಗ್ ವೇಳೆ ನೀವು ಸಹ ಅಸಹನೀಯ ನೋವನ್ನು ಅನುಭವಿಸುತ್ತೀರಾ? ಹಾಗಿದ್ದರೆ ಈ ಲೇಖನದಲ್ಲಿ ನೀಡಿರುವ ಕೆಲವು ಸಿಂಪಲ್ ಸಲಹೆಗಳನ್ನು ಪ್ರಯತ್ನಿಸಿ ನೋವಿನಿಂದ ಪರಿಹಾರ ಪಡೆಯಿರಿ.

Written by - Yashaswini V | Last Updated : Aug 31, 2021, 02:01 PM IST
  • ಹುಬ್ಬುಗಳನ್ನು ಥ್ರೆಡ್ ಮಾಡುವಾಗ ಮಹಿಳೆಯರು ಹೆಚ್ಚಾಗಿ ಅಸಹನೀಯ ನೋವನ್ನು ಎದುರಿಸುತ್ತಾರೆ
  • ಈ ಅಸಹನೀಯ ನೋವನ್ನು ತಪ್ಪಿಸಲು, ಅನೇಕ ಮಹಿಳೆಯರು ಐಬ್ರೋ ಮಾಡಿಸುವುದನ್ನೇ ತಪ್ಪಿಸುತ್ತಾರೆ
  • ಆದರೆ ಐಬ್ರೋ ಥ್ರೆಡಿಂಗ್ ಮಾಡಿಸುವ ವೇಳೆ ಕೆಲವು ಉಪಾಯಗಳನ್ನು ಕೈಗೊಳ್ಳುವ ಮೂಲಕ ನೀವು ನೋವಿನಿಂದ ಪರಿಹಾರ ಪಡೆಯಬಹುದು.
Eyebrow Threading Pain Tips: ಐಬ್ರೋ ಥ್ರೆಡಿಂಗ್ ವೇಳೆ ನಿಮಗೂ ಈ ರೀತಿಯ ತೊಂದರೆಯಾಗುತ್ತಿದೆಯೇ? ಈ ಟಿಪ್ಸ್ ಟ್ರೈ ಮಾಡಿ title=
Eyebrow Threading Tips

Eyebrow Threading Pain Tips: ಹೆಣ್ಣಿಗೆ ಕಣ್ಣೆ ತಾನೇ ಅಂದಾ... ಎಂಬಂತೆ ಹೆಣ್ಣಿನ ಮುಖದಲ್ಲಿ ಆಕರ್ಷಣೆಯ ಕೇಂದ್ರ ಎಂದರೆ ಆಕೆಯ ಕಣ್ಣು. ಆದರೆ ಹುಬ್ಬುಗಳ ಕೂದಲುಗಳನ್ನು ಎಂದರೆ ಐಬ್ರೋವನ್ನು ಅಚ್ಚುಕಟ್ಟಾಗಿ ಇರಿಸದಿದ್ದರೆ ನಿಮ್ಮ ಸೌಂದರ್ಯ ಮರೆಯಾಗುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಹುಬ್ಬು ಥ್ರೆಡ್ಡಿಂಗ್ ಕನಿಷ್ಠ ನೋವನ್ನು ಉಂಟುಮಾಡಬಹುದು. ಒಳ್ಳೆಯ ಸುದ್ದಿ ಎಂದರೆ ನೋವು ತಾತ್ಕಾಲಿಕವಾಗಿರುತ್ತದೆ. ಅಲ್ಲದೆ, ಒಬ್ಬ ವ್ಯಕ್ತಿಯು ಅನುಭವಿಸಬಹುದಾದ ನೋವಿನ ಮಟ್ಟವು ಅವರ ಚರ್ಮದ ಸೂಕ್ಷ್ಮತೆಯನ್ನು ಅವಲಂಬಿಸಿರುತ್ತದೆ, ಜೊತೆಗೆ ಅವರ ಚರ್ಮದ ಪ್ರಸ್ತುತ ಸ್ಥಿತಿಯನ್ನು ಅವಲಂಬಿಸಿರುತ್ತದೆ. 

ಹುಬ್ಬುಗಳನ್ನು ಥ್ರೆಡ್ (Eyebrow Threading) ಮಾಡುವಾಗ ಮಹಿಳೆಯರು ಹೆಚ್ಚಾಗಿ ಅಸಹನೀಯ ನೋವನ್ನು ಎದುರಿಸುತ್ತಾರೆ. ಈ ಅಸಹನೀಯ ನೋವನ್ನು ತಪ್ಪಿಸಲು, ಅನೇಕ ಮಹಿಳೆಯರು ಐಬ್ರೋ ಮಾಡಿಸುವುದನ್ನೇ ತಪ್ಪಿಸುತ್ತಾರೆ. ಆದರೆ ಐಬ್ರೋ ಥ್ರೆಡಿಂಗ್ ಮಾಡಿಸುವ ವೇಳೆ ಕೆಲವು ಉಪಾಯಗಳನ್ನು ಕೈಗೊಳ್ಳುವ ಮೂಲಕ ನೀವು ನೋವಿನಿಂದ ಪರಿಹಾರ ಪಡೆಯಬಹುದು. 

ಇದನ್ನೂ ಓದಿ- Benefits Of Green Leaves: ಆರೋಗ್ಯಕ್ಕೆ ವರದಾನವಾಗಿದೆ ಮೆಂತ್ಯೆ, ಪಾಲಕ್ ಸೇರಿದಂತೆ ಈ 5 ಸೊಪ್ಪುಗಳು

ಐಸ್ ಕ್ಯೂಬ್‌ಗಳನ್ನು ಉಜ್ಜಿ- ನೀವು ಐಬ್ರೋಜ್‌ನಲ್ಲಿ ಥ್ರೆಡಿಂಗ್ ಮಾಡುವ ಮೊದಲು ಹುಬ್ಬುಗಳ ಹತ್ತಿರದ ಭಾಗದಲ್ಲಿ ಐಸ್ ಕ್ಯೂಬ್‌ಗಳನ್ನು (Ice Cube) ಉಜ್ಜಿ ಅಥವಾ ತಣ್ಣೀರಿನಿಂದ ಮುಖವನ್ನು ಚೆನ್ನಾಗಿ ತೊಳೆಯಿರಿ. ಇದು ನಿಮ್ಮ ನೋವನ್ನು ಕಡಿಮೆ ಮಾಡುತ್ತದೆ.

ಚೂಯಿಂಗ್ ಗಮ್ ಅಗಿಯುವುದು - ನೀವು ಹುಬ್ಬು ಥ್ರೆಡ್ಡಿಂಗ್ ನೋವು ತಪ್ಪಿಸಲು ಚೂಯಿಂಗ್ ಗಮ್ ಅಗಿಯುವುದು ಕೂಡ ಒಂದು ಪರಿಹಾರವಾಗಿದೆ. ಇದು ನೋವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ- Stretch Marks Removal: ಸ್ಟ್ರೆಚ್ ಮಾರ್ಕ್ಸ್ ತೆಗೆಯಲು ಬಹಳ ಸಹಕಾರಿ ಈ 4 ವಸ್ತುಗಳು

ಅಲೋ ವೆರಾ ಜೆಲ್- ಥ್ರೆಡ್ ಮಾಡಿದ ನಂತರವೂ, ನೀವು ಹುಬ್ಬಿನ ಸುತ್ತ-ಮುತ್ತ ಕಿರಿಕಿರಿಯನ್ನು ಹೊಂದಿದ್ದರೆ, ನಂತರ ಅದನ್ನು ಶಾಂತಗೊಳಿಸಲು ಸ್ವಲ್ಪ ಅಲೋವೆರಾ ಜೆಲ್ ಅನ್ನು ಅನ್ವಯಿಸಿ.

ಟಾಲ್ಕಂ ಪೌಡರ್ - ನೀವು ಥ್ರೆಡ್ಡಿಂಗ್ ನೋವು ತಪ್ಪಿಸಲು ಬಯಸಿದರೆ, ಥ್ರೆಡಿಂಗ್ ಮಾಡುವ ಮೊದಲು ಹುಬ್ಬು ಪ್ರದೇಶದಲ್ಲಿ ಚೆನ್ನಾಗಿ ಟಾಲ್ಕಂ ಪೌಡರ್ ಅನ್ವಯಿಸಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News