ಹೀಟ್ ಸ್ಟ್ರೋಕ್ ನಿಂದ ಉಂಟಾಗುವ ತಲೆನೋವಿಗೆ ಇಲ್ಲಿದೆ ಮನೆಮದ್ದು !

Home remedies for heat stroke headache :ಸೂರ್ಯನ ಶಾಖ ಹೆಚ್ಚಾಗುತ್ತಿದ್ದಂತೆಯೇ ಕೆಲವರಿಗೆ ತೀವ್ರ ತಲೆನೋವಿನ ಸಮಸ್ಯೆ ಕಾಡುತ್ತದೆ. ಮನೆ ಮದ್ದುಗಳನ್ನು ಅನುಸರಿಸುವ ಮೂಲಕ ಈ ತಲೆನೋವಿಗೆ ಸುಲಭ  ಪರಿಹಾರ ಕಂಡುಕೊಳ್ಳಬಹುದು.   

Written by - Ranjitha R K | Last Updated : Apr 18, 2023, 02:24 PM IST
  • ಬಿಸಿಲು ಹೆಚ್ಚಾಗುತ್ತಿದ್ದಂತೆಯೇ ತಲೆನೋವಿನ ಸಮಸ್ಯೆ ಬಾಧಿಸುತ್ತದೆ.
  • ಹೀಟ್ ಸ್ಟ್ರೋಕ್ ಸಂಭವಿಸುವ ಅಪಾಯವಿರುತ್ತದೆ.
  • ಬಿಸಿಲಿನಿಂದ ಉಂಟಾಗುವ ತಲೆನೋವಿಗೆ ಮನೆಮದ್ದು
ಹೀಟ್ ಸ್ಟ್ರೋಕ್ ನಿಂದ ಉಂಟಾಗುವ ತಲೆನೋವಿಗೆ ಇಲ್ಲಿದೆ ಮನೆಮದ್ದು ! title=

Home remedies for heat stroke headache : ಬೇಸಿಗೆಯ ತಾಪ ಹೆಚ್ಚುತ್ತಿದೆ. ಬಿಸಿಲ ಝಳ ಹೆಚ್ಚಾಗುತ್ತಿದ್ದಂತೆಯೇ ಕೆಲವರಿಗೆ ತೀವ್ರ ತಲೆನೋವಿನ ಸಮಸ್ಯೆ ಬಾಧಿಸುತ್ತದೆ. ಸೂರ್ಯನ ಶಾಖ ಹೆಚ್ಚಾದಂತೆ ನಮ್ಮ ಆರೋಗ್ಯಕ್ಕೆ ಅನುಗುಣವಾಗಿ ನಿರ್ಜಲೀಕರಣ ಮತ್ತು ಹೀಟ್ ಸ್ಟ್ರೋಕ್ ಸಂಭವಿಸುವ ಅಪಾಯವಿರುತ್ತದೆ. ನೀವು ಕೂಡಾ ಇಂಥಹ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಮನೆಯಲ್ಲೇ ಇರುವ ವಸ್ತುಗಳಿಂದ ಪರಿಹಾರ ಕಂಡುಕೊಳ್ಳಬಹುದು. 

ಬಿಸಿಲಿನಿಂದ ಉಂಟಾಗುವ  ತಲೆನೋವಿಗೆ ಮನೆಮದ್ದು: 
 ಪಾಲಕ್ : 
ಸೂರ್ಯನ ಬಿಸಿಲಿನ ಕಾರಣದಿಂದ ತಲೆದೋರುವ ತಲೆನೋವಿಗೆ  ಮೆಗ್ನೀಸಿಯಮ್ ಸಮೃದ್ಧವಾಗಿರುವ ಆಹಾರವನ್ನು ಸೇವಿಸಬೇಕು. ಇದಕ್ಕಾಗಿ ಪಾಲಕ್ ಸೊಪ್ಪಿನಂತಹ ಹಸಿರು ತರಕಾರಿಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಿ. ಒಂದು ಕಪ್ ಪಾಲಕ್ ಸೊಪ್ಪಿನಲ್ಲಿ ಸುಮಾರು 23 ಮಿಲಿಗ್ರಾಂ ಮೆಗ್ನೀಸಿಯಮ್ ಇರುತ್ತದೆ. ಮೆಗ್ನೀಸಿಯಮ್ ಸೇವನೆಯಿಂದ ದೇಹದ ರಕ್ತದಲ್ಲಿನ ಸಕ್ಕರೆ ಮಟ್ಟವೂ ನಿಯಂತ್ರಣದಲ್ಲಿರುತ್ತದೆ. ಮೈಗ್ರೇನ್‌ನಿಂದ ಬಳಲುತ್ತಿರುವವರಿಗೂ  ಮೆಗ್ನೀಸಿಯಮ್  ಅಧಿಕವಾಗಿರುವ ಆಹಾರವನ್ನು ಸೇವಿಸುವಂತೆ ವೈದ್ಯರು ಸಲಹೆ ನೀಡುತ್ತಾರೆ.

ಇದನ್ನೂ ಓದಿ :Gooseberry Health Benefits: ನೆಲ್ಲಿಕಾಯಿ ಎನ್ನುತ್ತಿದ್ದಂತೆಯೇ ಬಾಯಲ್ಲಿ ನೀರು ಬಂತೆ.. ಸಿಹಿ,ಕಹಿ,ಹುಳಿ ಹೊಂದಿರುವ ಈ ಕಾಯಿ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ!

ಕಲ್ಲಂಗಡಿ ಹಣ್ಣು : 
ಬೇಸಿಗೆಯಲ್ಲಿ ಹಲವು ಬಾರಿ ನಿರ್ಜಲೀಕರಣದ ಕಾರಣ ತಲೆನೋವಿನ ಸಮಸ್ಯೆ ಕಾಡಬಹುದು. ಈ ಸಂದರ್ಭದಲ್ಲಿ ಕಲ್ಲಂಗಡಿ ಜ್ಯೂಸ್ ಕುಡಿಯುವುದು ಪ್ರಯೋಜನಕಾರಿಯಾಗಿರಲಿದೆ. ಕಲ್ಲಂಗಡಿ ಹಣ್ಣಿನಲ್ಲಿ  92 ಪ್ರತಿಶತದಷ್ಟು ನೀರು ಇರುತ್ತದೆ. ಈ ಕಾರಣದಿಂದಾಗಿ ದೇಹ ಡಿ ಹೈಡ್ರೆಟ್ ಆಗದಂತೆ ನೋಡಿಕೊಳ್ಳುತ್ತದೆ. ಅಲ್ಲದೆ ಕಲ್ಲಂಗಡಿಯಲ್ಲಿ ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ನಂಥಹ ಅಗತ್ಯವಾದ ಪೋಷಕಾಂಶಗಳು ಕಂಡು ಬರುತ್ತದೆ. ಇದು ತಲೆನೋವನ್ನು ಗುಣಪಡಿಸಲು ಸಹಾಯ ಮಾಡುತ್ತದೆ. 

ಮೊಸರು :
ಬಿಸಿಲು ಮತ್ತು ಶಾಖದಿಂದ ಉಂಟಾಗುವ ತಲೆನೋವನ್ನು ನಿವಾರಿಸಲು ಮೊಸರನ್ನು ಸೇವಿಸಬಹುದು. ಮೊಸರಿನಲ್ಲಿರುವ ರಿಬೋಫ್ಲಾವಿನ್ ಮತ್ತು ಕ್ಯಾಲ್ಸಿಯಂ ತಲೆನೋವು ನಿವಾರಿಸಲು ಸಹಾಯ ಮಾಡುತ್ತದೆ. ಬೇಸಿಗೆಯಲ್ಲಿ ಹಾಲು, ಮೊಸರು, ಮಜ್ಜಿಗೆ ಮುಂತಾದವುಗಳನ್ನು ಆಹಾರದಲ್ಲಿ ಸೇರಿಸಿಕೊಂಡರೆ ಅನೇಕ ರೀತಿಯ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. 

ಇದನ್ನೂ ಓದಿ :Health Tips: ಆಗಾಗ ಕಾಡುವ ಎದೆಯುರಿ ನಿರ್ಲಕ್ಷಿಸಬೇಡಿ.. ಇದೇ ದೊಡ್ಡ ರೋಗಕ್ಕೆ ಕಾರಣವಾದೀತು!

ತೆಂಗಿನೆಣ್ಣೆ : 
ಬೇಸಿಗೆಯಲ್ಲಿ ಕಾಡುವ ತಲೆನೋವನ್ನು ಹೋಗಲಾಡಿಸಲು ತೆಂಗಿನ ಎಣ್ಣೆಯಿಂದ ಮಸಾಜ್ ಮಾಡಿ. ಹೀಗೆ ಮಾಡುವುದರಿಂದ ತಲೆನೋವಿನಿಂದ ಪರಿಹಾರ ಸಿಗುತ್ತದೆ ಮಾತ್ರವಲ್ಲದೆ ನೆತ್ತಿ ತಂಪಾಗಿಯೂ ಇರುತ್ತದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News