Health Tips: ಆಗಾಗ ಕಾಡುವ ಎದೆಯುರಿ ನಿರ್ಲಕ್ಷಿಸಬೇಡಿ.. ಇದೇ ದೊಡ್ಡ ರೋಗಕ್ಕೆ ಕಾರಣವಾದೀತು!

Heartburn: ಎದೆಯುರಿ ಸಮಸ್ಯೆ ಬಹುತೇಕ ಜನರಲ್ಲಿ ಕಂಡುಬರುತ್ತದೆ. ಇದಕ್ಕೆ ಬೇರೆ ಬೇರೆ ಕಾರಣಗಳಿರಬಹುದು. ಆದರೆ ಪದೆ ಪದೇ ಎದೆಯುರಿ ಕಾಣಿಸಿಕೊಂಡರೆ ವೈದ್ಯರನ್ನು ಸಂಪರ್ಕಿಸುವುದು ಅಗತ್ಯವಾಗಿರುತ್ತದೆ. ಇದು ಮುಂಬರುವ ದೊಡ್ಡ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ. 

Written by - Chetana Devarmani | Last Updated : Apr 18, 2023, 08:01 AM IST
  • ಎದೆಯುರಿ ಸಮಸ್ಯೆ ಬಹುತೇಕ ಜನರನ್ನುಕಾಡುತ್ತದೆ
  • ಆಗಾಗ ಕಾಡುವ ಎದೆಯುರಿ ಬಗ್ಗೆ ನಿರ್ಲಕ್ಷ ಬೇಡ
  • ಇದೇ ದೊಡ್ಡ ರೋಗಕ್ಕೆ ಕಾರಣವಾದೀತು!
Health Tips: ಆಗಾಗ ಕಾಡುವ ಎದೆಯುರಿ ನಿರ್ಲಕ್ಷಿಸಬೇಡಿ.. ಇದೇ ದೊಡ್ಡ ರೋಗಕ್ಕೆ ಕಾರಣವಾದೀತು!  title=
Heartburn

Heartburn Causes: ಎದೆಯುರಿ ಸಮಸ್ಯೆ ಬಹುತೇಕ ಜನರಲ್ಲಿ ಕಂಡುಬರುತ್ತದೆ. ಆದರೆ ಪದೇ ಪದೇ ಈ ರೀತಿಯ ಸಮಸ್ಯೆಯು ನಿಮಗೆ ಹಾನಿಕಾರಕವಾಗಿದೆ. ಮತ್ತೊಂದೆಡೆ, ನೀವು ಮತ್ತೆ ಮತ್ತೆ ಈ ರೀತಿಯ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಅದನ್ನು ನಿರ್ಲಕ್ಷಿಸಬೇಡಿ. ಪದೇ ಪದೇ ಎದೆಯುರಿ ಬರಲು ಇನ್ನೂ ಹಲವು ಕಾರಣಗಳಿರಬಹುದು.

ಪದೇ ಪದೇ ಎದೆಯುರಿ ಬರಲು ಕಾರಣ: 

ಕೆಟ್ಟ ಆಹಾರ: ನೀವು ಮಸಾಲೆಯುಕ್ತ ಆಹಾರವನ್ನು ಸೇವಿಸಿದರೆ ಈ ರೀತಿಯ ಸಮಸ್ಯೆಯು ಸಾಮಾನ್ಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಎದೆಯುರಿ ಬಂದಕೂಡಲೇ ಮಸಾಲಾ ಹೆಚ್ಚಾಗಿರುವ ಆಹಾರಗಳಿಂದ ದೂರವಿರಿ. ಪಿಜ್ಜಾ, ಬರ್ಗರ್ ಅಥವಾ ಸಿಹಿ, ತಂಪು ಪಾನೀಯಗಳನ್ನು ಸೇವಿಸಿದರೂ ಕೆಲವೊಮ್ಮೆ ಎದೆಉರಿ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಮನೆಯ ಉತ್ತಮ ಆಹಾರ ಸೇವನೆ ಮುಖ್ಯ.

ಇದನ್ನೂ ಓದಿ: Diabetes: ಪ್ರತಿದಿನ ಈ ತರಕಾರಿ ರಸ ಕುಡಿದರೆ 9 ದಿನದಲ್ಲಿ ಮಾಯವಾಗುತ್ತೆ ಮಧುಮೇಹ!

ಧೂಮಪಾನ: ಹೆಚ್ಚು ಧೂಮಪಾನ ಮಾಡುವ ಜನರು, ಎದೆಯುರಿ ಅನುಭವಿಸಬಹುದು. ಸಿಗರೇಟ್ ಹೊಗೆ ನಿಮ್ಮ ಎದೆಯ ಮೇಲೆ ಪರಿಣಾಮ ಬೀರಬಹುದು, ಇದರಿಂದಾಗಿ ಎದೆಯಲ್ಲಿ ಉರಿಯುವ ಸಂವೇದನೆ ಮತ್ತು ನೋವು ಕಾಣಿಸಬಹುದು.

ಅತಿಯಾದ ಒತ್ತಡ: ಒತ್ತಡದಿಂದಾಗಿ ಎದೆಯುರಿ ಬರಬಹುದು. ಒತ್ತಡದಿಂದಾಗಿ ಪ್ಯಾನಿಕ್ ಅಟ್ಯಾಕ್‌ನ ಅಪಾಯವೂ ಹೆಚ್ಚಾಗಿರುತ್ತದೆ. ಇದು ಹೃದಯಾಘಾತಕ್ಕೆ ಕಾರಣವಾಗಬಹುದು. ನೀವು ಎದೆ ನೋವು ಮತ್ತು ಸುಡುವ ಸಂವೇದನೆಯ ಅನುಭವಿಸುತ್ತಿದ್ದರೆ ಒತ್ತಡ ನಿವಾರಿಸಿಕೊಳ್ಳಿ. 

ಇದನ್ನೂ ಓದಿ: Healthy Drink: ಬೇಸಿಗೆಯಲ್ಲಿ ಪ್ರತಿದಿನ ನಿಂಬೆ ನೀರು ಕುಡಿಯುವುದರ ಲಾಭ ತಿಳಿದರೆ ಶಾಕ್‌ ಆಗ್ತೀರಾ! 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ಜೀ ಕನ್ನಡ ನ್ಯೂಸ್‌ ಪುಷ್ಠಿಕರಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News