Night Sweats Causes : ದೈಹಿಕವಾಗಿ ಕೆಲವನ್ನು ಮಾಡುವಾಗ ಬೆವರು ಬರುವುದು ಸಾಮಾನ್ಯ. ಅಲ್ಲದೆ, ಬಿರು ಬಿಸಿಲಿನಲ್ಲಿ ನಡೆಯುವಾಗ ಮತ್ತು ವಿಪರೀತ ಸೆಕೆ ಆದಾರ ಬೆವರುತ್ತೇವೆ. ಅದರೆ ಕೆಲವರು ಸುಮನ್ನೆ ಮಲಗಿಕೊಂಡಿರುವಾಗ ಬೆವರುತ್ತಾರೆ. ಇದಕ್ಕೆ ಪ್ರತ್ಯೇಕವಾದ ಕಾರಣಗಳೂ ಸಹ ಇವೆ.. ಬನ್ನಿ ಅವುಗಳು ಯಾವುವು ಅಂತ ತಿಳಿಯೋಣ..
ಮನೆಯಲ್ಲಿ ವಿದ್ಯುತ್ ಕಡಿತಗೊಂಡರೆ, ಫ್ಯಾನ್, ಎಸಿ ಇಲ್ಲದಿದ್ದರೆ ಬಿಸಿಲಿನಲ್ಲಿ ಹೊರಗೆ ಹೋದಾಗ ಧಾರಾಕಾರವಾಗಿ ಬೆವರುತ್ತೇವೆ. ಆದರೆ, ಕೆಲವು ಮಾರಣಾಂತಿಕ ಕಾಯಿಲೆಗಳಿದ್ದರೆ, ರಾತ್ರಿಯಲ್ಲಿಯೂ ವಿಪರೀತ ಬೆವರುವಿಕೆ ಆಗುತ್ತವೆ. ಈ ಮೂಲಕ ದೇಹದಲ್ಲಿನ ಬದಲಾವಣೆಗಳು ಬೆವರಿನ ರೂಪದಲ್ಲಿ ಹೊರಬರುತ್ತವೆ.
ಇದನ್ನೂ ಓದಿ: ಈ ಒಂದು ಎಲೆ ಸಾಕು.. ಮಧುಮೇಹ ಸಮಸ್ಯೆಯಿಂದ ಮುಕ್ತಿ ಸಿಗುವುದು!
ಅಲ್ಲದೆ, ಜೀವನಶೈಲಿ ಕೆಟ್ಟದ್ದಾಗಿದ್ದರೆ, ರಾತ್ರಿ ಮಲಗುವಾಗ ಬೆವರು ಬರುತ್ತದೆ. ಇದಕ್ಕೆ ವಿಶೇಷ ಗಮನ ಬೇಕು. ಸರಿಯಾದ ಸಮಯದಲ್ಲಿ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು. ಇಲ್ಲದಿದ್ದರೆ ಗಂಭೀರ ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ. ಇನ್ನು ಮುಟ್ಟಿನ ನಂತರ ಮಹಿಳೆಯರು ರಾತ್ರಿಯಲ್ಲಿ ವಿಪರೀತವಾಗಿ ಬೆವರು ಮಾಡುತ್ತಾರೆ. ನಮ್ಮ ದೇಹದಲ್ಲಿನ ಅಸಹಜ ಹಾರ್ಮೋನುಗಳ ಬದಲಾವಣೆಯಿಂದ ಇದು ಸಂಭವಿಸುತ್ತದೆ. ರಕ್ತದಲ್ಲಿನ ಸಕ್ಕರೆಯ ಮಟ್ಟವು ಕಡಿಮೆಯಾದರೂ ಸಹ, ರಾತ್ರಿಯಲ್ಲಿ ಬೆವರುವಿಕೆ ಸಂಭವಿಸಬಹುದು.
ರಾತ್ರಿ ಬೆವರುವಿಕೆಗೆ ಟಿಬಿ ಸಹ ಕಾರಣವಾಗಬಹುದು. ಟಿಬಿ ಕಾಯಿಲೆ ಶ್ವಾಸಕೋಶದ ಮೇಲೂ ಸಾಕಷ್ಟು ಪರಿಣಾಮ ಬೀರುತ್ತದೆ. ಅದಕ್ಕಾಗಿಯೇ ಈ ರೋಗ ಪೀಡಿತರು ರಾತ್ರಿಯಲ್ಲಿ ಹೆಚ್ಚು ಬೆವರುತ್ತಾರೆ. ಕೆಲವರಿಗೆ ಹೃದ್ರೋಗ ಸಮಸ್ಯೆಗಳಿದ್ದರೆ ಈ ರೀತಿ ಬೆವರುತ್ತಾರೆ. ಅದಕ್ಕಾಗಿ ಆದಷ್ಟು ಶೀರ್ಘವೇ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಇದನ್ನೂ ಓದಿ:ಪ್ರತಿದಿನ ಮೆಂತ್ಯ ನೀರು ಕುಡಿಯುವುದರಿಂದ ಏನಾಗುತ್ತೆ ಗೊತ್ತಾ?
ರಾತ್ರಿಯಲ್ಲಿ ಹೆಚ್ಚು ಬೆವರುವುದು ಕ್ಯಾನ್ಸರ್ನ ಲಕ್ಷಣಗಳಲ್ಲಿಯೂ ಒಂದು. ಮಲಗಿರುವಾಗ ಕಾಣಿಸಿಕೊಳ್ಳುವ ಈ ರೋಗಲಕ್ಷಣಗಳನ್ನು ಅಪಾಯಕಾರಿ ರೋಗ ಲಕ್ಷಣಗಳೆಂದು ಪರಿಗಣಿಸಲಾಗುತ್ತದೆ. ಯಾವುದೇ ರೋಗಲಕ್ಷಣಗಳು 15 ದಿನಗಳಿಗಿಂತ ಹೆಚ್ಚು ಕಾಲ ಮುಂದುವರಿದರೆ, ತಕ್ಷಣವೇ ವೈದ್ಯಕೀಯ ಸಲಹೆಯನ್ನು ಪಡೆಯುವುದು ಉತ್ತಮ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.