Trending: ಇಬ್ಬರು ಕಂದಮ್ಮಗಳ ಈ ತಾಯಿಗೆ ಯೋನಿಯೂ ಎರಡು, ಗರ್ಭಾಶಯವೂ ಎರಡು! ಪ್ರಕೃತಿ ವೈಚಿತ್ರ್ಯಕ್ಕೊಂದು ಸಾಕ್ಷಿ

Woman has two vaginas and uteruses: ಆಸ್ಟ್ರೇಲಿಯಾದ ಕ್ವೀನ್ಸ್‌’ಲ್ಯಾಂಡ್‌’ನ 31 ವರ್ಷ ವಯಸ್ಸಿನ ಎವೆಲಿನ್ ಮಿಲ್ಲರ್ ಎಂಬಾಕೆಗೆ ಎರಡು ಯೋನಿ, ಎರಡು ಗರ್ಭಾಶಯ ಇದೆ. 2011 ರಲ್ಲಿ ಗರ್ಭಾಶಯದ ಡಿಡೆಲ್ಫಿಸ್ ಬಗ್ಗೆ ಆಕೆಯ ಅರಿವಿಗೆ ಬಂತು. ಯುಟೆರಸ್ ಡಿಡೆಲ್ಫಿಸ್ ಎಂದರೆ ಎರಡು ಗರ್ಭಾಶಯ ಮತ್ತು ಎರಡು ಯೋನಿ ಇರುವುದು,

Written by - Bhavishya Shetty | Last Updated : Apr 13, 2023, 05:26 PM IST
    • ವಿಚಿತ್ರವೆಂದರೆ ಈ ತಾಯಿಗೆ ಯೋನಿಯೂ ಎರಡು, ಗರ್ಭಾಶಯವೂ ಎರಡು
    • 31 ವರ್ಷ ವಯಸ್ಸಿನ ಎವೆಲಿನ್ ಮಿಲ್ಲರ್ ಎಂಬಾಕೆಗೆ ಎರಡು ಯೋನಿ, ಎರಡು ಗರ್ಭಾಶಯ ಇದೆ.
    • 2011 ರಲ್ಲಿ ಗರ್ಭಾಶಯದ ಡಿಡೆಲ್ಫಿಸ್ ಬಗ್ಗೆ ಆಕೆಯ ಅರಿವಿಗೆ ಬಂತು
Trending: ಇಬ್ಬರು ಕಂದಮ್ಮಗಳ ಈ ತಾಯಿಗೆ ಯೋನಿಯೂ ಎರಡು, ಗರ್ಭಾಶಯವೂ ಎರಡು! ಪ್ರಕೃತಿ ವೈಚಿತ್ರ್ಯಕ್ಕೊಂದು ಸಾಕ್ಷಿ title=
woman with two vaginas

Woman has two vaginas and uteruses: ಪ್ರತೀ ದಿನ ಬೆಳಗಾದರೆ ಸಾಕು ಒಂದಿಲ್ಲೊಂದು ವಿಚಿತ್ರಗಳು ಪ್ರಪಂಚದಲ್ಲಿ ಸಂಭವಿಸುತ್ತಲೇ ಇರುತ್ತವೆ. ಇದಕ್ಕೆ ಸಂಬಂಧಿಸಿದ ಸುದ್ದಿಗಳು, ವಿಡಿಯೋ-ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಇದೀಗ ಅಂತಹದ್ದೇ ಒಂದು ಅಪರೂಪದ ಘಟನೆಯೊಂದರ ಬಗ್ಗೆ ಮಾತನಾಡಲಿದ್ದೇವೆ. ಇಲ್ಲೊಬ್ಬ ಮಹಿಳೆಗೆ ಇಬ್ಬರು ಮಕ್ಕಳು. ಆದರೆ ವಿಚಿತ್ರವೆಂದರೆ ಈ ತಾಯಿಗೆ ಯೋನಿಯೂ ಎರಡು, ಗರ್ಭಾಶಯವೂ ಎರಡು.

ಆಸ್ಟ್ರೇಲಿಯಾದ ಕ್ವೀನ್ಸ್‌’ಲ್ಯಾಂಡ್‌’ನ 31 ವರ್ಷ ವಯಸ್ಸಿನ ಎವೆಲಿನ್ ಮಿಲ್ಲರ್ ಎಂಬಾಕೆಗೆ ಎರಡು ಯೋನಿ, ಎರಡು ಗರ್ಭಾಶಯ ಇದೆ. 2011 ರಲ್ಲಿ ಗರ್ಭಾಶಯದ ಡಿಡೆಲ್ಫಿಸ್ ಬಗ್ಗೆ ಆಕೆಯ ಅರಿವಿಗೆ ಬಂತು. ಯುಟೆರಸ್ ಡಿಡೆಲ್ಫಿಸ್ ಎಂದರೆ ಎರಡು ಗರ್ಭಾಶಯ ಮತ್ತು ಎರಡು ಯೋನಿ ಇರುವುದು,

ಇದನ್ನೂ ಓದಿ: IPLನಲ್ಲಿ ಒಂದೇ ಒಂದು ಪಂದ್ಯವನ್ನಾಡದೆ 2 ಬಾರಿ ಚಾಂಪಿಯನ್ ಆದ ಆಟಗಾರನೀತ! ಹೆಸರು ಕೇಳಿದ್ರೆ ಶಾಕ್ ಆಗ್ತೀರ

ಯುಕೆ ಸುದ್ದಿ ಮಾಧ್ಯಮದ ಪ್ರಕಾರ, ಹದಿಹರೆಯವಳಾಗಿದ್ದಾಗ ಎವೆಲಿನ್’ಗೆ ಕೊಂಚ ಆರೋಗ್ಯದಲ್ಲಿ ಏರುಪೇರಾಗಿತ್ತು. ಈ ಹಿನ್ನೆಲೆಯಲ್ಲಿ ತಪಾಸಣೆ ನಡೆಸಿದಾಗ ಸತ್ಯಾಂಶ ಬಯಲಿಗೆ ಬಂದಿದೆ. ಆದರೆ ಈ ಪರಿಸ್ಥಿತಿಯ ನಡುವೆಯೂ ಎವೆಲಿನ್ ಎರಡು ಮುದ್ದಾದ ಮಗುವಿಗೆ ಜನ್ಮ ನೀಡಿದ್ದಾರೆ.

ಯುಟೆರಸ್ ಡಿಡೆಲ್ಫಿಸ್ ಎಂಬುದು ಅಪರೂಪದ ಜನ್ಮಜಾತ ಅಸಹಜತೆ (rare congenital abnormality). ಇದು ಹುಟ್ಟಿನಿಂದಲೇ ಬಂದಿರುವಂತಹದ್ದು. ಅಂಗಾಂಶದ ತೆಳುವಾದ ಅಂಶವು ಯೋನಿಯ ಉದ್ದಕ್ಕೂ ಚಲಿಸುತ್ತದೆ. ಹೀಗಾದಾಗ ಎರಡು ಭಾಗಗಳಾಗಿ ಪ್ರತ್ಯೇಕವಾಗುತ್ತದೆ. ಇನ್ನು ಗರ್ಭಾಶಯದ ಡಿಡೆಲ್ಫಿಸ್ ಯಾವುದೇ ರೋಗಲಕ್ಷಣಗಳನ್ನು ಉಂಟುಮಾಡುವುದಿಲ್ಲ.

ಯುಟೆರಸ್ ಡಿಡೆಲ್ಫಿಸ್ ಇದೆ ಎಂದು ತಿಳಿದ ಸಂದರ್ಭದಲ್ಲಿ ಗರ್ಭಪಾತವಾಗುವ ಸಾಧ್ಯತೆ ಹೆಚ್ಚಿದೆ ಎಂದು ಎವೆಲಿನ್’ಗೆ ವೈದ್ಯರು ತಿಳಿಸಿದ್ದರಂತೆ. ಆದರೆ ಈಗೆ ಅದೃಷ್ಟಶಾಲೆ ಎನ್ನಬಹುದು. ಎವೆಲಿನ್ ಮತ್ತು ಅವಳ ಪತಿ ಟಾಮ್ ಇಬ್ಬರು ಆರೋಗ್ಯವಂತ ಇಬ್ಬರು ಮಕ್ಕಳನ್ನು ಪಡೆದಿದ್ದಾರೆ.

ಈ ಬಗ್ಗೆ ಮಾತನಾಡಿದ ಎವೆಲಿನ್, “"ನನ್ನ ಗರ್ಭಾವಸ್ಥೆಯ ಸಮಯ ತುಂಬಾ ಅಹಿತಕರವಾಗಿತ್ತಯ. ನನ್ನ ಬಲಭಾಗದ ಗರ್ಭಾಶಯದಲ್ಲಿ ನಾನು ಗರ್ಭಿಣಿಯಾಗಿದ್ದ ಕಾರಣ ನನ್ನ ಬಲಭಾಗಕ್ಕೆ ಮೇಲಿತ್ತು, ಅಂದರೆ ಮಗು ಎಂದಿಗೂ ಮಧ್ಯದಲ್ಲಿ ಕುಳಿತುಕೊಂಡಿರಲಿಲ್ಲ. ಇದರ ಪರಿಣಾಮ ತೀವ್ರ ಬೆನ್ನುನೋವು ಕಾಣಿಸಿಕೊಳ್ಳುತ್ತಿತ್ತು” ಎಂದು ಮಿರರ್ ಯುಕೆಗೆ ಎವೆಲಿನ್ ಹೇಳಿದ್ದಾರೆ.

"ಡೆಲಿವರಿ ಬಳಿಕವೂ ಅನೇಕ ಸಮಸ್ಯೆಗಳು ಕಾಣಿಸಿಕೊಂಡವು. ನನ್ನ ಎರಡೂ ಶಿಶುಗಳು ತುಂಬಾ ಕಡಿಮೆ ತೂಕ ಹೊಂದಿದ್ದರು. ತೀವ್ರ ನಿಗಾದಲ್ಲಿ ತಿಂಗಳುಗಳ ಕಾಲ ಇಡಬೇಕಾಗಿತ್ತು. ಅದೃಷ್ಟವಶಾತ್, ಇಬ್ಬರು ಮಕ್ಕಳು ಕೂಡ ಇಂದು ಸಂತೋಷದಿಂದ ಆರೋಗ್ಯವಾಗಿದ್ದಾರೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Kubera Blessing: ಈ ರಾಶಿಗಳ ಮೇಲೆ ಕುಬೇರನ ವಿಶೇಷ ಕೃಪೆ: ವರ್ಷಪೂರ್ತಿ ಯಶಸ್ಸು-ಹಣದ ಹೊಳೆಯೇ ಹರಿಸಲಿದ್ದಾನೆ ಧನದೇವ

ಹಿಂದಿನ ಎರಡು ಸಿ-ಸೆಕ್ಷನ್ ಹೆರಿಗೆಗಳ ಕಾರಣದಿಂದಾಗಿ ಆಕೆಯ ವೈದ್ಯರು ಇನ್ನು ಮುಂದೆ ಗರ್ಭಾವಸ್ಥೆಯಲ್ಲಿ ತನ್ನ ಬಲ ಯೋನಿಯನ್ನು ಬಳಸಲಾಗುವುದಿಲ್ಲ. ಲೈಂಗಿಕ ಸಮಯದಲ್ಲಿ ಜಾಗರೂಕರಾಗಿರಬೇಕು ಎಂದು ಎಚ್ಚರಿಸಿದ್ದಾರೆ. ತನ್ನ ಎಡ ಯೋನಿಯನ್ನು ಬಳಸಿ ಮಗುವಿಗೆ ಪ್ರಯತ್ನಿಸಲು ಸಲಹೆ ನೀಡಿದ್ದಾರೆ ಎಂದು ಎವೆಲಿನ್ ಹಂಚಿಕೊಂಡಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News