ಗೊರಕೆ ಸಮಸ್ಯೆಗೆ ಚಿಟಿಕೆಯಲ್ಲಿ ಪರಿಹಾರ ನೀಡುವುದು ಒಗ್ಗರಣೆ ಡಬ್ಬಿಯಲ್ಲಿರುವ ಈ ಪುಡಿ: ರಾತ್ರಿ ಮಲಗುವ ಮುನ್ನ ನೀರಿನಲ್ಲಿ ಬೆರೆಸಿ ಕುಡಿದರೆ ಸಾಕು

home remedies for snoring: ಗೊರಕೆಯನ್ನುಯ ಸಾಮಾನ್ಯ ವಿಷಯವೆಂದು ಪರಿಗಣಿಸಬಾರದು ಮತ್ತು ತಕ್ಷಣ ವೈದ್ಯರಿಂದ ಪರೀಕ್ಷಿಸಬೇಕು. ಇದಕ್ಕೂ ಮೊದಲು, ಕೆಲವು ಮನೆಮದ್ದುಗಳ ಸಹಾಯದಿಂದ ಈ ಸಮಸ್ಯೆಯನ್ನು ಕಡಿಮೆ ಮಾಡಲು ಪ್ರಯತ್ನಿಸಬಹುದು.  

Written by - Bhavishya Shetty | Last Updated : Dec 2, 2024, 07:12 PM IST
    • ಗೊರಕೆಯನ್ನು ಸಾಮಾನ್ಯ ವಿಷಯವೆಂದು ಪರಿಗಣಿಸಬಾರದು
    • ಮನೆಮದ್ದುಗಳ ಸಹಾಯದಿಂದ ಈ ಸಮಸ್ಯೆಯನ್ನು ಕಡಿಮೆ ಮಾಡಲು ಪ್ರಯತ್ನಿಸಬಹುದು
    • ಗೊರಕೆಯ ಸಮಸ್ಯೆಯ ಹಿಂದೆ ಹಲವು ಕಾರಣಗಳಿವೆ
ಗೊರಕೆ ಸಮಸ್ಯೆಗೆ ಚಿಟಿಕೆಯಲ್ಲಿ ಪರಿಹಾರ ನೀಡುವುದು ಒಗ್ಗರಣೆ ಡಬ್ಬಿಯಲ್ಲಿರುವ ಈ ಪುಡಿ: ರಾತ್ರಿ ಮಲಗುವ ಮುನ್ನ ನೀರಿನಲ್ಲಿ ಬೆರೆಸಿ ಕುಡಿದರೆ ಸಾಕು title=
Snoring problem

Snoring Home Remedies: ರಾತ್ರಿ ಮಲಗುವಾಗ ಗೊರಕೆಯ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗುತ್ತಿದ್ದು, ಈಗ ಅದನ್ನು ಸಮಸ್ಯೆಯಾಗಿ ಪರಿಗಣಿಸಲಾಗುವುದಿಲ್ಲ. ಗೊರಕೆ ಹೊಡೆಯುವವನಿಗೆ ಆರೋಗ್ಯದ ಸಮಸ್ಯೆ ಅನಿಸದಿದ್ದರೂ ಸುತ್ತ ಮಲಗುವವರ ನಿದ್ದೆ ಕೆಡುತ್ತದೆ. ನಿಮ್ಮ ಮನೆಯಲ್ಲಿ ಯಾರಾದರೂ ಗೊರಕೆ ಹೊಡೆಯುತ್ತಿದ್ದರೆ, ಇಲ್ಲಿ ಕೆಲವೊಂದು ಪರಿಹಾರಗಳನ್ನು ತಿಳಿಸಲಾಗಿದೆ. ಅವುಗಳನ್ನು ಪ್ರಯತ್ನಿಸಬಹುದು

ಇದನ್ನೂ ಓದಿ: ಬಿಗ್‌ಬಾಸ್‌ ಶಾಕಿಂಗ್‌ ಟ್ವಿಸ್ಟ್..‌ ದೊಡ್ಮನೆಯಿಂದ ಐಶ್ವರ್ಯ ಸಿಂಧೋಗಿ ಔಟ್?!

ಗೊರಕೆಯನ್ನುಯ ಸಾಮಾನ್ಯ ವಿಷಯವೆಂದು ಪರಿಗಣಿಸಬಾರದು ಮತ್ತು ತಕ್ಷಣ ವೈದ್ಯರಿಂದ ಪರೀಕ್ಷಿಸಬೇಕು. ಇದಕ್ಕೂ ಮೊದಲು, ಕೆಲವು ಮನೆಮದ್ದುಗಳ ಸಹಾಯದಿಂದ ಈ ಸಮಸ್ಯೆಯನ್ನು ಕಡಿಮೆ ಮಾಡಲು ಪ್ರಯತ್ನಿಸಬಹುದು.

ಗೊರಕೆಯ ಸಮಸ್ಯೆಯ ಹಿಂದೆ ಹಲವು ಕಾರಣಗಳಿವೆ. ಇದರ ಆರಂಭಿಕ ಕಾರಣಗಳೆಂದರೆ ಬೊಜ್ಜು, ಮೂಗು ಮತ್ತು ಗಂಟಲಿನ ಸ್ನಾಯುಗಳು ದುರ್ಬಲಗೊಳ್ಳುವುದು, ಶೀತ, ಧೂಮಪಾನ, ಉಸಿರಾಟದ ತೊಂದರೆಗಳು, ಶ್ವಾಸಕೋಶದಲ್ಲಿ ಸರಿಯಾದ ಆಮ್ಲಜನಕದ ಕೊರತೆ ಮತ್ತು ಸೈನಸ್ ಸಮಸ್ಯೆಗಳು.

ಪುದೀನಾ: ಉಗುರುಬೆಚ್ಚಗಿನ ನೀರಿಗೆ ಪುದೀನಾ ಎಣ್ಣೆಯನ್ನು ಸೇರಿಸಿ ಬಾಯಿ ಮುಕ್ಕಳಿಸಿದರೆ ಕೆಲವೇ ದಿನಗಳಲ್ಲಿ ಗೊರಕೆಯ ಸಮಸ್ಯೆ ದೂರವಾಗುತ್ತದೆ. ಇದಲ್ಲದೇ ಪುದೀನಾ ಸೊಪ್ಪನ್ನು ಉಗುರುಬೆಚ್ಚಗಿನ ನೀರಿನಲ್ಲಿ ಕುದಿಸಿ ಕುಡಿದರೆ ಗೊರಕೆಯ ಸಮಸ್ಯೆಯೂ ಕ್ರಮೇಣ ದೂರವಾಗುತ್ತದೆ.

ದಾಲ್ಚಿನ್ನಿ: ಒಂದು ಲೋಟ ಉಗುರುಬೆಚ್ಚಗಿನ ನೀರನ್ನು ತೆಗೆದುಕೊಂಡು ಅದರಲ್ಲಿ ಎರಡರಿಂದ ಮೂರು ಚಮಚ ದಾಲ್ಚಿನ್ನಿ ಪುಡಿಯನ್ನು ಸೇರಿಸಿ. ಈಗ ಅದನ್ನು ಕುಡಿಯಿರಿ. ಇದನ್ನು ಕೆಲವು ದಿನಗಳವರೆಗೆ ನಿರಂತರವಾಗಿ ಮಾಡಿದರೆ ವ್ಯತ್ಯಾಸವನ್ನು ಅನುಭವಿಸುವಿರಿ.

ಬೆಳ್ಳುಳ್ಳಿ: ರಾತ್ರಿ ಮಲಗುವ ಮೊದಲು ಒಂದು ಎಸಳು ಬೆಳ್ಳುಳ್ಳಿಯನ್ನು ಉಗುರುಬೆಚ್ಚಗಿನ ನೀರಿನ ಜೊತೆ ಸೇರಿಸಿ ನುಂಗಿ. ಗೊರಕೆಯಿಂದ ಮುಕ್ತಿ ಸಿಗುತ್ತದೆ.

ಆಲಿವ್ ಎಣ್ಣೆ: ಆಲಿವ್ ಎಣ್ಣೆಯನ್ನು ಮೂಗಿಗೆ ಹಾಕುವುದರಿಂದ ಉಸಿರಾಟದ ತೊಂದರೆ ನಿವಾರಣೆಯಾಗುತ್ತದೆ. ಪ್ರತಿ ರಾತ್ರಿ ಮಲಗುವ ಮೊದಲು, ಕೆಲವು ಹನಿ ಆಲಿವ್ ಎಣ್ಣೆಯನ್ನು ಮೂಗಿಗೆ ಹಾಕಬೇಕು. ಇದರೊಂದಿಗೆ ಗೊರಕೆಯ ಸಮಸ್ಯೆಯೂ ಕ್ರಮೇಣ ದೂರವಾಗುತ್ತದೆ.

ತುಪ್ಪ: ದೇಸಿ ತುಪ್ಪದ ಮೂಲಕವೂ ಗೊರಕೆಯ ಸಮಸ್ಯೆಯನ್ನು ಹೋಗಲಾಡಿಸಬಹುದು. ಇದಕ್ಕಾಗಿ ಮೊದಲು ದೇಸಿ ತುಪ್ಪವನ್ನು ಸ್ವಲ್ಪ ಬಿಸಿ ಮಾಡಬೇಕು. ಇದಾದ ನಂತರ ಮೂಗಿಗೆ ತುಪ್ಪದ ಕೆಲವು ಹನಿಗಳನ್ನು ಹಾಕಿದರೆ ಗೊರಕೆಯ ಸಮಸ್ಯೆ ನಿವಾರಣೆಯಾಗುತ್ತದೆ.

ಅರಿಶಿನ: ಅರಿಶಿನ ಉಸಿರಾಟವನ್ನು ಸುಲಭಗೊಳಿಸುತ್ತದೆ. ಪ್ರತಿ ರಾತ್ರಿ ಮಲಗುವ ಮುನ್ನ ಬಿಸಿ ಹಾಲಿನಲ್ಲಿ ಅಥವಾ ನೀರಿನಲ್ಲಿ ಒಂದು ಚಮಚ ಅರಿಶಿನವನ್ನು ಬೆರೆಸಿ ಕುಡಿಯಿರಿ

ಇದನ್ನೂ ಓದಿ: ಈ ಹಣ್ಣು ಎಲ್ಲಿ ಸಿಕ್ಕರೂ ಬಿಡಬೇಡಿ... ಯಾಕಂದ್ರೆ ಶುಗರ್‌ ಇರುವವರಿಗೆ ಈ ಹಣ್ಣು ಅಮೃತಕ್ಕಿಂತ ಹೆಚ್ಚೇ...! ಕಾಯಿಯಾಗಿದ್ರೂ ಪರ್ವಾಗಿಲ್ಲ

ಸೂಚನೆ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇವುಗಳನ್ನು ದೃಢೀಕರಿಸುವುದಿಲ್ಲ. ಅವುಗಳನ್ನು ಕಾರ್ಯಗತಗೊಳಿಸುವ ಮೊದಲು ಸಂಬಂಧಪಟ್ಟ ತಜ್ಞರನ್ನು ಸಂಪರ್ಕಿಸಿ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News